Breaking News

Monthly Archives: ಆಗಷ್ಟ್ 2024

ವಿಜಯೇಂದ್ರ ಹಗರಣದ ತನಿಖೆಗೆ ಯತ್ನಾಳ ಪಾದಯಾತ್ರೆ ನಡೆಸಲಿ:ಎಂ.ಬಿ.ಪಾಟೀಲ ವ್ಯಂಗ್ಯ

ವಿಜಯಪುರ: ಬಿಜೆಪಿ ಪಕ್ಷದ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಮತ್ತೊಂದು ಪಾದಯಾತ್ರೆ ನಡೆಸಲಿದ್ದಾರಂತೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನೀಡಿರುವ ಭ್ರಷ್ಟಾಚಾರದ ಪಟ್ಟಿ ಇರಿಸಿಕೊಂಡು ಯತ್ನಾಳ್ ಪಾದಯಾತ್ರೆ ನಡೆಸಲಿ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಕುಟುಕಿದ್ದಾರೆ.   ಭಾನುವಾರ (ಆ.11) ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ವಿಜಯೇಂದ್ರ, ಬಿಎಸ್ವೈ ಒಂದು ಬಣ, ಅಶೋಕ್ ಬಣ, ಅಶ್ವತ್ಥನಾರಾಯಣ ಬಣ, ರಮೇಶ ಜಾರಕಿಹೊಳಿ, ಯತ್ನಾಳ ಬಣ, ಬಿ.ಎಲ್. ಸಂತೋಷ …

Read More »

ಬೆಂಗಳೂರಿನ ಕಾಫಿ ಶಾಪ್ ವಾಶ್ ರೂಂನಲ್ಲಿ ಮೊಬೈಲ್ ಇಟ್ಟು ವೀಡಿಯೋ ರೆಕಾರ್ಡ್

ಬೆಂಗಳೂರು: ಬೆಂಗಳೂರಿನ ಪ್ರಸಿದ್ಧ ಕಾಫಿ ಔಟ್ ಲೆಟ್ ನ ಕಸದ ಬುಟ್ಟಿಯೊಳಗೆ ಸುಮಾರು ಎರಡು ಗಂಟೆಗಳ ಕಾಲ ವೀಡಿಯೊ ರೆಕಾರ್ಡಿಂಗ್ ಮಾಡಿದಂತ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ. ಈ ಸಂಬಂಧ ಕೆಫೆ ಸಿಬ್ಬಂದಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಹಾನಗರದ ಬಿಇಎಲ್ ರಸ್ತೆಯಲ್ಲಿರುವ ಥರ್ಡ್ ವೇವ್ ಕಾಫಿ ಔಟ್ ಲೆಟ್ ನಲ್ಲಿ ಈ ಘಟನೆ ನಡೆದಿದ್ದು, ಮಹಿಳಾ ಶೌಚಾಲಯದಲ್ಲಿ ಫೋನ್ ಅಡಗಿಸಿಟ್ಟಿದ್ದಾರೆ ಎಂದು ಉದ್ಯೋಗಿಯೊಬ್ಬರು ಆರೋಪಿಸಿದ್ದಾರೆ. ‘ಗ್ಯಾಂಗ್ಸ್ ಆಫ್ ಸಿನಿಪುರ್’ ಎಂಬ …

Read More »

ರೆಸಾರ್ಟ್‌ ನಲ್ಲಿ ಸಭೆ ನಡೆಸಿದ ಜಾರಕಿಹೊಳಿ, ಯತ್ನಾಳ್‌, ಸಿಂಹ,ಜೊಲ್ಲೆ,

ಬೆಳಗಾವಿ: ಬಿಜೆಪಿ ಪಾದಯಾತ್ರೆ ಮುಗಿದ ಬೆನ್ನಲ್ಲೇ ಪಕ್ಷದಲ್ಲಿ ಮತ್ತೆ ಬಂಡಾಯ ಚಟುವಟಿಕೆಗಳು ಆರಂಭವಾಗಿದೆ. ಬೆಳಗಾವಿ ಹೊರವಲಯದ ಖಾಸಗಿ ರೆಸಾರ್ಟ್ ನಲ್ಲಿ ಪ್ರಭಾವಿ ನಾಯಕರಾದ ರಮೇಶ್ ಜಾರಕಿಹೊಳಿ (Ramesh jarkiholi) ಮತ್ತು ಬಸನಗೌಡ ಪಾಟೀಲ ಯತ್ನಾಳ (Basanagouda Patil Yatnal) ನೇತೃತ್ವದಲ್ಲಿ ಬಿಜೆಪಿ ಅತೃಪ್ತ ಶಾಸಕರು ಹಾಗೂ ನಾಯಕರ ಸಭೆ ನಡೆಸುತ್ತಿದ್ದಾರೆ.   ಜಾರಕಿಹೊಳಿ, ಯತ್ನಾಳ್ ಗೆ ಹಲವ ಮುಖಂಡರು ಸಾಥ್ ನೀಡಿದ್ದಾರೆ. ಪ್ರತಾಪ್ ಸಿಂಹ, ಕುಮಾರ್ ಬಂಗಾರಪ್ಪ, ಅಣ್ಣಸಾಹೆಬ್ ಜೊಲ್ಲೆ, …

Read More »

ಕರ್ನಾಟಕದಲ್ಲಿ ‘ಭೂ ಕುಸಿತ ತಡೆ’ಗೆ ಶೀಘ್ರವೇ ‘ಹೊಸ ನೀತಿ’ ಜಾರಿ

ಬೆಂಗಳೂರು: ಕೇರಳದ ವಯನಾಡಿನಲ್ಲಿ ಉಂಟಾದಂತ ಭೂ ಕುಸಿತದ ನಂತ್ರ, ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಕರ್ನಾಟಕದಲ್ಲಿ ಭೂ ಕುರಿತ ತಡೆಗೆ ಶೀಘ್ರವೇ ಹೊಸ ನೀತಿ ಜಾರಿಗೆ ತರಲು ನಿರ್ಧರಿಸಿದೆ. ಈ ಕುರಿತಂತೆ ಮಾಹಿತಿ ನೀಡಿರುವಂತ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು, ಘಟ್ಟ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಭೂ ಕುಸಿತದ ಪರಿಣಾಮಗಳನ್ನು ತಗ್ಗಿಸುವ ಸಂಬಂಧ ಅಭಿವೃದ್ಧಿ ಕೇಂದ್ರಿತ ಚಟುವಟಿಕೆ ನಿಯಂತ್ರಿಸುವ ನೀತಿಯೊಂದನ್ನು ರೂಪಿಸಲಾಗುತ್ತಿದೆ, ಗುಡ್ಡಗಳನ್ನು ಕಡಿದು ನಿರ್ಮಾಣ ಚಟುವಟಿಕೆ ಕೈಗೊಳ್ಳುವುದು ಸೇರಿ ಹಲವು ಅವೈಜ್ಞಾನಿಕ …

Read More »

6.92 ಕೋಟಿ ವೆಚ್ಚದಲ್ಲಿ ವಾಣಿಜ್ಯ ಮಳಿಗೆ: ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ‘ಮೂಡಲಗಿ ಪಟ್ಟಣದಲ್ಲಿ ಪುರಸಭೆಯಿಂದ ₹6.92 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾದ ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಾಗುವುದು’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಇಲ್ಲಿನ ಪುರಸಭೆಗೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಐಡಿಎಸ್‌ಎಂಟಿ ಯೋಜನೆ ಅಡಿಯಲ್ಲಿ ಮಳಿಗೆಯನ್ನು ನಿರ್ಮಿಸಲಿದ್ದು, ಇದು ಬಹು ಮಹಡಿ ಕಟ್ಟಡವನ್ನು ಹೊಂದಿರಲಿದೆ. ನೆಲ ಮಾಳಿಗೆಯಲ್ಲಿ (ಬೆಸ್ ಮೆಂಟ್) ವಾಹನಗಳ ಪಾರ್ಕಿಂಗ್, ನೆಲ ಮಹಡಿಯಲ್ಲಿ 51 ಮತ್ತು ಮೊದಲ ಮಹಡಿಯಲ್ಲಿ 17 ಅಂಗಡಿಗಳು ಸೇರಿದಂತೆ …

Read More »

6 ವರ್ಷಗಳಾದರೂ ನಿರ್ಮಾಣಗೊಳ್ಳದ ಸೇತುವೆ: ಗಡಿಯಲ್ಲಿ ದೋಣಿ ನಂಬಿ ಬದುಕು

ಜುಗೂಳ(ಬೆಳಗಾವಿ ಜಿಲ್ಲೆ): ‘ಪ್ರವಾಹದಾಗ ಕೃಷ್ಣಾ ನದಿ ಉಕ್ಕಿ ಹರಿತಿರ್ತೇತಿ. ನೀರಿನ ಸೆಳವಿಗೆ ಸಿಕ್ಕು, ಒಮ್ಮಿಂದೊಮ್ಮೆ ದೋಣಿ ಅಲುಗಾಡಿದಂಗ್‌ ಆಗ್ತೇತಿ. ಒಂದು ವೇಳೆ ದೋಣಿ ಪಲ್ಟಿ ಆದ್ರ, ಗಂಡ್ಮಕ್ಳು ಹೆಂಗೋ ಈಜ್ಕೊಂತ ದಡ ಸೇರ್ತಿವಿ. ಆದ್ರ ಹೆಣ್ಮಕ್ಳು ಮತ್ತು ವಯಸ್ಸಾದಾವ್ರ ಇದ್ರ, ಅವರ ಕತಿ ಏನ್ರೀ…’   ಕಾಗವಾಡ ತಾಲ್ಲೂಕಿನ ಜುಗೂಳ ಗ್ರಾಮಸ್ಥ ದಯಾನಂದ ಮಿಣಚೆ ಅವರು ಸಂಕಷ್ಟ ತೋಡಿಕೊಂಡಿದ್ದು ಹೀಗೆ. ಜುಗೂಳ ಮತ್ತು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಖಿದ್ರಾಪುರ ಅಕ್ಕಪಕ್ಕದಲ್ಲಿವೆ. ಒಂದು …

Read More »

ಅಂಗನವಾಡಿಗೆ ಸ್ನಾತಕೋತ್ತರ ಪದವೀಧರರು: ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು15 ಮಂದಿ ನೇಮಕ

ಬೆಳಗಾವಿ: ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಈ ವರ್ಷ 197 ಕಾರ್ಯಕರ್ತೆಯರು ನೇಮಕಗೊಂಡಿದ್ದಾರೆ. ಅವರಲ್ಲಿ 15 ಮಂದಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. 50 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಬೆಳಗಾವಿ ಜಿಲ್ಲೆಯಲ್ಲಿ 5,656 ಅಂಗನವಾಡಿ ಕೇಂದ್ರಗಳಿವೆ. 1,200ಕ್ಕೂ ಅಧಿಕ ಕೇಂದ್ರಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿದ್ಧತೆ ನಡೆಸಿದೆ. ಜಿಲ್ಲೆಯಲ್ಲಿ 283 ಅಂಗನವಾಡಿ ಕಾರ್ಯಕರ್ತೆಯರ ನೇಮಕಕ್ಕೆ 2023ರ ಜೂನ್‌ನಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. …

Read More »

ಲಾರಿ ಡಿಕ್ಕಿ: ಆಟೊ ಚಾಲಕ ಸ್ಥಳದಲ್ಲೇ ಸಾವು

ಬೆಳಗಾವಿ: ಯಡಿಯೂರಪ್ಪ ಮಾರ್ಗಕ್ಕೆ ಹೊಂದಿಕೊಂಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಿಗ್ಗೆ ಗೂಡ್ಸ್‌ ಆಟೊ ಹಾಗೂ ಲಾರಿ ಮಧ್ಯೆ ಡಿಕ್ಕಿ ಸಂಭವಿಸಿ, ಆಟೊ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಗ್ರಾಮದ ಅಮಿನ್ ಯರಗಟ್ಟಿ (45) ಮೃತ ವ್ಯಕ್ತಿ.   ಆಟೊದಲ್ಲಿ ತರಕಾರಿ ತುಂಬಿಕೊಂಡು ಬೆಳಗಾವಿ ನಗರಕ್ಕೆ ಬರುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕೆಳಗಡೆ ಬಿದ್ದ ಆಟೊ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದರು. ಲಾರಿ ಕೂಡ ರಸ್ತೆ ಪಕ್ಕಕ್ಕೆ …

Read More »

ಸಂಚಾರಿ ಕುರಿಗಾಹಿಗಳಿಗೆ ಬೇಕು ಸೌಕರ್ಯ

ರಾಯಬಾಗ: ರಾಜ್ಯದಲ್ಲಿ ಕುರುಬ ಸಮಾಜದ ಸಂಖ್ಯೆ 60 ಲಕ್ಷಕ್ಕೂ ಅಧಿಕವಿದೆ. ಸುಮಾರು 18 ಲಕ್ಷಕ್ಕೂ ಅಧಿಕ ಸಂಚಾರಿ ಕುರಿಗಾಹಿಗಳಿದ್ದಾರೆ. ಒಟ್ಟಾರೆ ಜನಸಂಖ್ಯೆಯ ಶೇ 30ರಷ್ಟು ಮಂದಿ ಸಂಚಾರಿ ಕುರಿಗಾಹಿಗಳೇ ಇದ್ದಾರೆ. ಆದರೆ, ಈ ಸಮಾಜಕ್ಕೆ ಸಲ್ಲಬೇಕಾದ ಕನಿಷ್ಠ ಸೌಕರ್ಯಗಳು ಇನ್ನೂ ಸಿಕ್ಕಿಲ್ಲ. ಆದಿವಾಸಿ ಬುಡಕಟ್ಟು ಸಂಸ್ಕತಿಯನ್ನೇ ಜೀವಾಳವಾಗಿಸಿಕೊಂಡು ಕುರಿ ಸಾಕಾಣಿಕೆ, ಕಂಬಳಿ ನೇಕಾರಿಕೆ ಮೂಲಕ ಜೀವನ ಸಾಗಿಸುತ್ತಿರುವ ಹಾಲುಮತ ಕುರುಬರು ಇನ್ನೂ ಸಂಕಷ್ಟದಲ್ಲಿದ್ದಾರೆ. ಸಂಚಾರಿ ಕುರುಬರಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಘೋಷಿಸಿದೆ. …

Read More »

ಚಿಕ್ಕೋಡಿಯಲ್ಲಿ ಮತ್ತೇ ಪ್ರವಾಹ ಭೀತಿ!

ಚಿಕ್ಕೋಡಿ: ಮಹಾ ಮಳೆಯಿಂದ ಚಿಕ್ಕೋಡಿ ಉಪ ವಿಭಾಗದಲ್ಲಿ ಕೃಷ್ಣಾ ,ಉಪ ನದಿಗಳು ಭೋರ್ಗರೆಯುತ್ತಿವೆ. ಮಹಾರಾಷ್ಟ್ರದಲ್ಲಿ ಕೃಷ್ಣಾ ಹಾಗೂ ನದಿಗಳಿಗೆ ನಿರ್ಮಿಸಿದ ಅಣೆಕಟ್ಟೆಗಳು ಭಾಗಶಃ ಭರ್ತಿಯಾಗಿವೆ. ವಾಯುಭಾರ ಕುಸಿತದಿಂದ ಭಾರೀ ಮಳೆ ಬೀಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮತ್ತೆ ಮಳೆಯಾದಲ್ಲಿ ಉಪ ವಿಭಾಗದ ನದಿ ತೀರದ ಗ್ರಾಮಗಳ ಪರಿಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಲಿದೆ. ಮಹಾರಾಷ್ಟ್ರದ ಕೊಂಕಣದಲ್ಲಿ ಕೃಷ್ಣಾ ಹಾಗೂ ಉಪನದಿಗಳ ಜಲಾನಯನ ಪ್ರದೇಶದಲ್ಲಿ ಕಳೆದೊಂದು ತಿಂಗಳಿನಿಂದ ಮಳೆ ಬೀಳುತ್ತಿದೆ. ಚಿಕ್ಕೋಡಿ …

Read More »