Breaking News

Monthly Archives: ಆಗಷ್ಟ್ 2024

ಏಕಾಂಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸಿಎಂ‌ ಸಿದ್ದರಾಮಯ್ಯನವರ ಅಭಿಮಾನಿ‌

ಯಾದಗಿರಿ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡಿದ ಕಾರಣಕ್ಕೆ ಯಾದಗಿರಿ ನಗರದಲ್ಲಿ‌ ಸಿದ್ದರಾಮಯ್ಯನವರ ಅಭಿಮಾನಿಯೊಬ್ಬ‌ ಏಕಾಂಗಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾನೆ ನಗರದ ಸುಭಾಷ್ಚಂದ್ರ ಬೋಸ್ ವೃತ್ತದ ಬಳಿ ಸಿದ್ದರಾಮಯ್ಯನವರ ಅಭಿಮಾನಿ‌ ರಾಜಕುಮಾರ ಎಂಬಾತ ಏಕಾಂಗಿ ಉಪವಾಸ ಸತ್ಯಾಗ್ರಹ ಕುಳಿತಿದ್ದಾನೆ.   ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ನಡೆಯನ್ನು ಖಂಡಿಸಿ ಸತ್ಯಾಗ್ರಹ ಕೈಗೊಂಡಿದ್ದು, ಬಿಜೆಪಿ ಹಾಗೂ‌ ಜೆಡಿಎಸ್ ನಾಯಕರು ರಾಜಭವನವನ್ನು ದುರುಪಯೋಗಿಸಿಕೊಂಡು ರಾಜ್ಯ ಮುಖ್ಯಮಂತ್ರಿಗಳ …

Read More »

ಜೈಲಿನಿಂದ ತಪ್ಪಿಸಿಕೊಂಡಿದ್ದ ಖೈದಿ 14 ವರ್ಷದ ಬಳಿಕ ಮತ್ತೆ ಬಂಧನ !

ಕೊಪ್ಪಳ: ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣವೊಂದರಲ್ಲಿ ಕೊಪ್ಪಳ ಜಿಲ್ಲಾ ಕಾರಾಗೃಹದ ಬಂಧಿಯಾಗಿ 2010 ರಲ್ಲಿ ಜೈಲಿನಿಂದ ತಪ್ಪಿಸಿಕೊಂಡಿದ್ದ ಇಲಕಲ್ ಮೂಲದ ನಿವಾಸಿ ಮಾರ್ಕಂಡಯ್ಯ ತಿಮ್ಮಣ್ಣ ಪಲಮಾರಿ ಎಂಬ ಖೈದಿಯನ್ನು ಜಿಲ್ಲಾ ಪೊಲೀಸರು ಬರೊಬ್ಬರಿ 14 ವರ್ಷಗಳ ಬಳಿಕ ಬಂಧಿಸಿ ಮತ್ತೆ ಜೈಲಿಗಟ್ಟಿದ್ದಾರೆ.   ವಿಚಾರಣಾ ಖೈದಿ ಮಾರ್ಕಂಡಯ್ಯ ತಿಮ್ಮಣ್ಣ ಪಲಮಾರಿ ಇಲಕಲ್ ನಿವಾಸಿಯಾಗಿದ್ದ. ಗಂಗಾವತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈತನ ವಿರುದ್ದ 2009ರಲ್ಲಿ ಕೇಸ್ ದಾಖಲಾಗಿತ್ತು. ಈತನನ್ನು ಕೊಪ್ಪಳ …

Read More »

ಕೆರಾಡಿ ಸರ್ಕಾರಿ ಪ್ರಾಥಮಿಕ ಶಾಲೆಗೆ “ಕಾಂತಾರ’ ಕಳೆ!

ಕುಂದಾಪುರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಮೂಲಕ ಕನ್ನಡ ಶಾಲೆಗಳ ಉಳಿವಿನ ಬಗ್ಗೆ ಜಾಗೃತಿಯ ಸಂಚಲನ ಸೃಷ್ಟಿಸಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರು ತಾನು ಕಲಿತ ಕೆರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನೇ ದತ್ತು ಪಡೆದು ಅದಕ್ಕೆ ಹೊಸ ಕಳೆ ನೀಡಿದ್ದಾರೆ.   ಕಾಂತಾರ ಚಿತ್ರದ ನಟನೆಗಾಗಿ ಶ್ರೇಷ್ಠ ನಟ ಪ್ರಶಸ್ತಿ ಪಡೆದಿರುವ ಅವರು ಕಳೆದ ಸ್ವಾತಂತ್ರ್ಯೋತ್ಸವ ದಿನದಂದೂ ಶಾಲೆಗೆ ಭೇಟಿ ನೀಡಿದ್ದರು. …

Read More »

ಹುಬ್ಬಳ್ಳಿ | ರಕ್ಷಾಬಂಧನ: ರಂಗಿನ ರಾಖಿ ಮೆರುಗು

ಹುಬ್ಬಳ್ಳಿ: ಅಯೋಧ್ಯೆಯ ಶ್ರೀರಾಮ ಮಂದಿರ, ಕೊಳಲು ಉದುವ ಕೃಷ್ಣ, ಗಣಪ, ಕಣ್ಣು ಕುಕ್ಕುವ ಸ್ಟೋನ್‌ಗಳು, ರುದ್ರಾಕ್ಷಿ, ನವಿಲುಗರಿ, ಮುತ್ತಿನಲ್ಲಿ ಪೋಣಿಸಿದ ರಾಖಿಗಳು ಮಾರುಕಟ್ಟೆಯಲ್ಲಿ ಅಂದ ಹೆಚ್ಚಿಸಿಕೊಂಡಿವೆ. ಸರಳ, ಸುಂದರ ಹಾಗೂ ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟ್ರಾಗ್ರಾಮ, ವಾಟ್ಸ್‌ಆಯಪ್‌, ಫೇಸ್ಬುಕ್‌ ಚಿಹ್ನೆ ಇರುವ ರಾಖಿಗಳು ಆಕರ್ಷಿಸುತ್ತಿವೆ.   ಹುಬ್ಬಳ್ಳಿಯ ದುರ್ಗದಬೈಲ್‌, ಜನತಾ ಬಜಾರ್‌ ಮತ್ತು ಹಳೇಹುಬ್ಬಳ್ಳಿ ಮಾರುಕಟ್ಟೆಗಳಲ್ಲಿ ತರಹೇವಾರಿ ರಾಖಿಗಳು ಮಾರಾಟಕ್ಕಿದ್ದು, ಮಹಿಳೆಯರು, ಸಹೋದರಿಯರು ತಮ್ಮ ನೆಚ್ಚಿನ ಸಹೋದರರಿಗೆ ರಾಖಿ ಖರೀದಿಸುವ ದೃಶ್ಯ ಕಂಡಿತು. …

Read More »

ರಾಜ್ಯ ಸರ್ಕಾರದಿಂದ ರೈತರಿಗೆ `ಬೋರ್ವೆಲ್’ ಕೊರೆಸಲು 4 ಲಕ್ಷ ಸಬ್ಸಿಡಿ : ಅರ್ಜಿ ಸಲ್ಲಿಸಲು ಆಗಸ್ಟ್ 31 ಲಾಸ್ಟ್ ಡೇಟ್

ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಸಿಹಿಸುದ್ದಿ ನೀಡಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗಂಗಾಕಲ್ಯಾಣ ನೀರಾವರಿ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಗಳ ವ್ಯಾಪ್ತಿಗೆ ಒಳಪಡುವ ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ …

Read More »

ಕಾರವಾರ: ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಸಿದ್ಧತೆ

ಕಾರವಾರ: ಸರ್ಕಾರಿ ಭೂಮಿ ಇದ್ದರೂ ಒತ್ತುವರಿಯಾಗುತ್ತಿರುವ ಪರಿಣಾಮ ಸರ್ಕಾರದ ಯೋಜನೆಗಳಿಗೆ ಜಾಗ ಸಿಗುವುದು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒತ್ತುವರಿ ತೆರವಿಗೆ ವೇಗ ನೀಡಲು ಕಂದಾಯ ಇಲಾಖೆ ಮುಂದಾಗಿದ್ದು, ಜಿಲ್ಲೆಯಲ್ಲಿ ಸರ್ವೆ ಕಾರ್ಯ ಚುರುಕುಗೊಂಡಿದೆ. ಒತ್ತುವರಿಯಾಗಿರುವ ಸರ್ಕಾರಿ ಭೂಮಿಯ ಮಾಹಿತಿ ಕ್ರೂಢೀಕರಣಕ್ಕೆ ‘ಲ್ಯಾಂಡ್ ಬೀಟ್’ ಎಂಬ ಮೊಬೈಲ್ ಆಯಪ್‍ನ್ನು ಆರು ತಿಂಗಳ ಹಿಂದಷ್ಟೆ ಇಲಾಖೆ ಪರಿಚಯಿಸಿದೆ. ಅದರ ಮೂಲಕ ಒತ್ತುವರಿಯಾಗಿರುವ ಸರ್ಕಾರಿ ಭೂಮಿಯ ಸಮೀಕ್ಷೆ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿರುವ 36,926 ಎಕರೆ ಸರ್ಕಾರಿ ಭೂಮಿ …

Read More »

ರಾಜ್ಯಾದ್ಯಂತ ಸಿಡಿದೆದ್ದ `ಕೈ’ ಕಾರ್ಯಕರ್ತರು : ರಾಜ್ಯಪಾಲರ ಭಾವಚಿತ್ರಕ್ಕೆ ಮಸಿ ಬಳಿದು ಆಕ್ರೋಶ!

ಮೈಸೂರು : ರಾಜ್ಯ ರಾಜಕೀಯದಲ್ಲಿ ರಾಜಕೀಯ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡುವ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಹಿ ಹಾಕಿದ್ದು, ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಮೈಸೂರು ಸೇರಿದಂತೆ ರಾಜ್ಯದ ಹಲವಡೆ ಮೋದಿ, ಶಾ ಸೇವಕನಾಗಿರುವ ಗೆಹ್ಲೋಟ್ ಗೆ ಧಿಕ್ಕಾರ ಎಂದು ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರು ಜಿಲ್ಲೆಯ ತಗಡೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗಿ …

Read More »

ರಸ್ತೆಬದಿ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ ಜರುಗಿಸಿ:ಮೊಹಮ್ಮದ್ ರೋಷನ್

ಬೆಳಗಾವಿ: ‘ನಗರದಲ್ಲಿ ಕೈಗಾರಿಕೆಯವರು ರಸ್ತೆ ಬದಿ ತ್ಯಾಜ್ಯ ಎಸೆಯುವುದು ಕಂಡು ಬಂದರೆ ಕಠಿಣ ಕ್ರಮ ಜರುಗಿಸಬೇಕು’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚಿಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೈಗಾರಿಕೆ ಇಲಾಖೆಯ ಜಿಲ್ಲಾಮಟ್ಟದ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.   ‘ಕೈಗಾರಿಕಾ ಪ್ರದೇಶದಲ್ಲಿನ ವಿವಿಧ ಕಾರ್ಖಾನೆಗಳ ತ್ಯಾಜ್ಯವನ್ನು ಮರುಬಳಕೆ ಮಾಡಲು ಅವಕಾಶವಿಲ್ಲ. ಹಾಗಾಗಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿ ಅನ್ವಯ, ತ್ಯಾಜ್ಯ ವಿಲೇವಾರಿಗೆ …

Read More »

ವಾಸಿ ಭವನ ನಿರ್ಮಾಣಕ್ಕೆ ಸಿಗದ ನಿವೇಶನ

ಬೆಳಗಾವಿ: ನಗರಕ್ಕೆ ಪ್ರವಾಸಿ ಭವನ ಮಂಜೂರಾಗಿ ಆರು ವರ್ಷ ಕಳೆದಿದೆ. ಆದರೆ, ಕಾಮಗಾರಿ ಕೈಗೊಳ್ಳಲು ಇಂದಿಗೂ ಜಾಗವೇ ಸಿಕ್ಕಿಲ್ಲ. ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರ ಕಚೇರಿಗೆ ಬೆಳಗಾವಿಯಲ್ಲಿ ಸ್ವಂತ ಕಟ್ಟಡವಿಲ್ಲ. ಜಿಲ್ಲೆಯ ಪ್ರವಾಸಿ ತಾಣಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡಲು ಸೂಕ್ತ ವ್ಯವಸ್ಥೆಯೂ ಇಲ್ಲ. ಇದಕ್ಕೆ ಪರಿಹಾರ ಒದಗಿಸಲೆಂದು ರಾಜ್ಯ ಸರ್ಕಾರ 2018-19ನೇ ಸಾಲಿನಲ್ಲಿ ಬೆಳಗಾವಿಗೆ ಪ್ರವಾಸಿ ಭವನ ಮಂಜೂರುಗೊಳಿಸಿ, ₹2 ಕೋಟಿ ಅನುದಾನ ಘೋಷಿಸಿತ್ತು. ಪ್ರಥಮ ಹಂತವಾಗಿ ₹1 …

Read More »

155 ರೈತರಿಗೆ ಕೃಷಿ ಪರಿಕರ ವಿತರಣೆ

ಯಮಕನಮರಡಿ: ರೈತರಿಗೆ ಕಡಿಮೆ ಖಚ್ಚಿನಲ್ಲಿ ಡ್ರೋನ್ ಮೂಲಕ ಔಷಧ ಸಿಂಪಡಣೆ ಮತ್ತು ಸರ್ಕಾರ ರಿಯಾಯಿತಿ ದರದಲ್ಲಿ ರೈತರಿಗೆ ಅನುಕೂಲವಾಗುವಂತಹ ಸಲಕರಣೆಗಳನ್ನು ನೀಡುತ್ತಿದ್ದು, ಅವರ ಆರ್ಥಿಕಮಟ್ಟ ಸುಧಾರಣೆಗೆ ಅನಕೂಲವಾಗಿದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.   ಸಮೀಪದ ಹತ್ತರಗಿ ಸುಕ್ಷೇತ್ರದ ಕಾರಿಮಠದಲ್ಲಿ ಶನಿವಾರ ನಡೆದ ಹುಕ್ಕೇರಿ ಕೃಷಿ ಇಲಾಖೆಯ ಸಹಯೋಗದಲ್ಲಿ ಯಮಕನಮರಡಿ ಹೊಬಳಿ ಮಟ್ಟದ 155 ಫಲಾನುಭವಿಗಳಿಗೆ ಕೃಷಿ ಇಲಾಖೆಯಿಂದ ವಿವಿಧ ಯೋಜನೆಗಳ ಸವಲತ್ತು ವಿತರಣಾ …

Read More »