ಮುಧೋಳ: ಮುಧೋಳ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಗರಸಭೆ ಸಭಾಭವನದಲ್ಲಿ ಜಮಖಂಡಿ ಉಪವಿಭಾಗಧಿಕಾರಿಗಳು ಶ್ವೇತಾ ಬೀಡಿಕರ ನೇತೃತ್ವದಲ್ಲಿ ಚುನಾವಣೆ ನಡೆಯಿತು. ಕಾಂಗ್ರೆಸ್ ಪಕ್ಷದ ವಾರ್ಡ್ ನಂ 30 ಸದಸ್ಯೆ ಸುನಂದಾ ಹನಮಂತ ತೇಲಿ 17 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ವಾರ್ಡ್ ನಂ 3 ರ ಪಕ್ಷೇತರ ಸದಸ್ಯ ಮಹಿಬೂಬ್ ಮುಕ್ತುಮಸಾಬ್ ಬಾಗವಾನ್ 17 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ನಾಮಪತ್ರ ಪರಿಶೀಲನೆ ಹಾಗೂ ಹಿಂಪಡೆಯಲು ಅವಕಾಶ ನೀಡಿ …
Read More »Monthly Archives: ಆಗಷ್ಟ್ 2024
ದರ್ಶನ್ ನ್ನು ಪರಪ್ಪನ ಅಗ್ರಹಾರದಿಂದ ಬೇರೆಡೆ ಸ್ಥಳಾಂತರಿಸುವ ಆಲೋಚನೆ :ಸಿದ್ದರಾಮಯ್ಯ
ಬೆಳಗಾವಿ: ‘ಕೊಲೆ ಆರೋಪಿ, ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರದಿಂದ ಬೇರೆಡೆ ಸ್ಥಳಾಂತರಿಸುವ ಆಲೋಚನೆ ನಡೆದಿದೆ. ಅಧಿಕಾರಿಗಳ ಮಟ್ಟದಲ್ಲಿ ನಿರ್ಧಾರ ಮಾಡುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸಮೀಪದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೋಮವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಬೇಕೋ, ಬೇರೆಡೆ ಕಳಿಸಬೇಕೋ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ’ ಎಂದರು. ‘ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಿದ ವಿಚಾರವಾಗಿ ಏಳು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಗೃಹಸಚಿವ ಡಾ.ಜಿ.ಪರಮೇಶ್ವರ …
Read More »ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ: ಕೃಷ್ಣಾ ನದಿ ನೀರಿನ ಮಟ್ಟ ದಿಢೀರ್ ಏರಿಕೆ
ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶ ಹಾಗೂ ಜಿಲ್ಲೆಯ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ, ದೂಧಗಂಗಾ ನದಿಯ ಮಲಿಕವಾಡ- ದತ್ತವಾಡ ಸೇತುವೆ ಸೋಮವಾರ ಜಲಾವೃತಗೊಂಡಿದೆ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ರಾಜಾಪೂರ ಬ್ಯಾರೇಜಿನಿಂದ ಕೃಷ್ಣಾ ನದಿಗೆ 47,250 ಕ್ಯುಸೆಕ್ ಹೊರ ಹರಿವು ಇದೆ. ದೂಧಗಂಗಾ ನದಿಗೆ 15,840 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ-ಯಡೂರ ಬ್ಯಾರೇಜ್ ಬಳಿಯಲ್ಲಿ ಕೃಷ್ಣಾ ನದಿಗೆ 63,090 ಕ್ಯುಸೆಕ್ ನೀರು ಹರಿದು ಬರುತ್ತಿದೆ. …
Read More »ಸಂಗೊಳ್ಳಿ ರಾಯಣ್ಣನ ಪುತ್ಥಳಿ ಅನಾವರಣ ಮಾಡಿದ ಸಿಎಂ ಸಿದ್ಧರಾಮಯ್ಯ
ಸಂಗೊಳ್ಳಿ ರಾಯಣ್ಣನ ಪುತ್ಥಳಿ ಅನಾವರಣ ಮಾಡಿದ ಮುಖ್ಯಮಂತ್ರಿ ರಾಯಣ್ಣನಂತಹ ದೇಶ ಪ್ರೇಮಿಗಳು ಮತ್ತೇ ಹುಟ್ಟಬೇಕಿದೆ- ಸಿಎಂ ಸಿದ್ಧರಾಮಯ್ಯ ಯಾವ ತಪ್ಪು ಮಾಡಿಲ್ಲ. ಅಧಿಕಾರದಿಂದ ಕೆಳಗಿಳಿಸುವ ವಿರೋಧಿಗಳ ಹುನ್ನಾರ ನಡೆಯಲ್ಲ ಬಾಲಚಂದ್ರ ಜಾರಕಿಹೊಳಿ ನಮ್ಮವರು. ಆದರೆ ಅವರ ಮಿತ್ರರು ನಮ್ಮವರಲ್ಲ ಬಾಲಚಂದ್ರರತ್ತ ಮುಖ ನೋಡಿ ಮುಗುಳ್ನಗೆ ಬೀರಿದ ಸಿದ್ಧರಾಮಯ್ಯ ಗೋಕಾಕ: ಸಂಗೊಳ್ಳಿ ರಾಯಣ್ಣ ಹುಟ್ಟಿದ ಸ್ಥಳದಲ್ಲಿ ಮ್ಯೂಜಿಯಮ್ ಮತ್ತು ಸೈನಿಕ ಶಾಲೆ ತೆರೆಯಲಾಗಿದೆ. ನಂದಗಡದಲ್ಲಿರುವ ಸಮಾಧಿಯನ್ನು ಸಹ ಅಭಿವೃದ್ದಿ ಮಾಡಲಾಗಿದೆ. ಸಂಗೊಳ್ಳಿ …
Read More »ಕಲ್ಲೋಳಿ ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಮಾಯವ್ವ ಬಸವಂತ ದಾಸನವರ ಮತ್ತು ಉಪಾಧ್ಯಕ್ಷರಾಗಿ ಮೇಘಾ ಬಸವರಾಜ ಖಾನಾಪೂರ ಅವಿರೋಧವಾಗಿ ಆಯ್ಕೆ
ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಮಾಯವ್ವ ಬಸವಂತ ದಾಸನವರ ಮತ್ತು ಉಪಾಧ್ಯಕ್ಷರಾಗಿ ಮೇಘಾ ಬಸವರಾಜ ಖಾನಾಪೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೋಮವಾರದಂದು ಜರುಗಿದ ಪಟ್ಟಣ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ತಲಾ ಒಂದೊಂದು ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ಎರಡು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿವೆ. ಹಿಂದುಳಿದ “ಅ”ವರ್ಗ ಮಹಿಳೆಗೆ ಅಧ್ಯಕ್ಷ ಸ್ಥಾನವು ಮೀಸಲಿದ್ದರೇ, ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಿತ್ತು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಮರ್ಥ ನೇತೃತ್ವದಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು …
Read More »ಸೆ.2 ರಿಂದ ರಾಜ್ಯಾದ್ಯಂತ `ಬಯಸಿದ ಕಡೆ ಆಸ್ತಿ ನೋಂದಣಿ’ : ಏನಿದು `ಎನಿವೇರ್ ಆಸ್ತಿ ನೋಂದಣಿ’ ಯೋಜನೆ? ಇಲ್ಲಿದೆ ಮಾಹಿತಿ
ಬೆಂಗಳೂರು : ಆಸ್ತಿ ಖರೀದಿ, ಮಾರಾಟಗಾರರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಎನಿವೇರ್ ಆಸ್ತಿ ನೋಂದಣಿ ಯೋಜನೆಯನ್ನು ಸೆಪ್ಟೆಂಬರ್ . 02 ರಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ರಾಜ್ಯ ವಿಧಾನಸಭೆಯ ಅಂದಾಜು ಸಮಿತಿಯು ನೋಂದಣಿ ಇಲಾಖೆ ನೀಡುವ ‘ಎನಿವೇರ್ ನೋಂದಣಿ’ ಸೇವೆಯನ್ನು ರಾಜ್ಯ ಮಟ್ಟದ ಕಾರ್ಯವಿಧಾನವಾಗಿ ವಿಸ್ತರಿಸುವುದಕ್ಕೆ ಮುಂದಾಗಿದೆ. ಸಾರ್ವಜನಿಕರು ಸ್ಥಿರಾಸ್ತಿ ನೋಂದಣಿಗಾಗಿ ನಿರ್ದಿಷ್ಟ ಉಪ ನೋಂದಣಿ ಕಚೇರಿಗೆ ಭೇಟಿ ನೀಡದೇ, ಮತ್ತಾವುದೇ …
Read More »ನನೆಗುದಿಗೆ ಬಿದ್ದಿರುವ ಕೌಜಲಗಿ ತಾಲ್ಲೂಕು ರಚನೆ ಬೇಡಿಕೆ; ಕಣ್ತೆರೆದು ನೋಡುವರೇ CM?
ಕೌಜಲಗಿ: ಭೌಗೋಳಿಕವಾಗಿ ಮೂರು ತಾಲ್ಲೂಕು ಆಗುವಷ್ಟು ಗೋಕಾಕ ದೊಡ್ಡದಾಗಿದೆ. ಇದನ್ನು ವಿಭಜಿಸಿ, ಪ್ರತ್ಯೇಕವಾಗಿ ಕೌಜಲಗಿ ತಾಲ್ಲೂಕು ರಚಿಸಬೇಕೆಂಬ ಬೇಡಿಕೆ ಐದು ದಶಕಗಳಿಂದ ಇದೆ. ಇಲ್ಲಿಗೆ ಸೋಮವಾರ ಭೇಟಿ ನೀಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಸ್ಪಂದಿಸುವರೇ ಎಂಬ ಕುತೂಹಲ ಮೂಡಿದೆ. ಕೌಜಲಗಿ ಪ್ರತ್ಯೇಕ ತಾಲ್ಲೂಕಿಗಾಗಿ 1973ರಿಂದ ಹೋರಾಟ ನಡೆದಿದೆ. ಹುಂಡೇಕಾರ, ಗದ್ದಿಗೌಡರ, ವಾಸುದೇವ ಸಮಿತಿಗಳು 41 ಗ್ರಾಮ ಒಳಗೊಂಡು ಕೌಜಲಗಿಯನ್ನು ತಾಲ್ಲೂಕು ಕೇಂದ್ರ ರಚಿಸಬೇಕು ಎಂದು ಶಿಫಾರಸು ಮಾಡಿವೆ. ಇದಕ್ಕಾಗಿ ಜನರು ನಿರಂತರವಾಗಿ …
Read More »ಹೆಸರುಕಾಳು ದರ ₹4,000ಕ್ಕೆ ಕುಸಿತ, ಚಿಂತೆಗೀಡಾದ ಜಿಲ್ಲೆಯ ಅನ್ನದಾತ
ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿದೆ. ಶೇ 80ರಷ್ಟು ರೈತರು ಈಗಾಗಲೇ ರಾಶಿ ಮಾಡಿದ್ದಾರೆ. ಲಕ್ಷಾಂತರ ಕ್ವಿಂಟಲ್ ಹೆಸರುಕಾಳು ಸಿದ್ಧಗೊಂಡಿದೆ. ಆದರೆ, ದರ ಕುಸಿತ ರೈತರನ್ನು ಚಿಂತೆಗೀಡು ಮಾಡಿದೆ. ಜಿಲ್ಲಾಡಳಿತ ಯಾವಾಗ ಖರೀದಿ ಕೇಂದ್ರ ತೆರೆಯುವುದೋ ಎಂದು ರೈತರು ಕಾದು ಕುಳಿತಿದ್ದಾರೆ. ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ತುಂಬ ಹದವಾಗಿ ಬಿದ್ದಿದೆ. ಪರಿಣಾಮ ಪ್ರತಿ ವರ್ಷಕ್ಕಿಂತ ಈಗ ಹೆಸರು ಬೆಳೆ ಅತ್ಯಂತ …
Read More »ಗೃಹಲಕ್ಷ್ಮಿ ದುಡ್ಡಲ್ಲಿ ಹೋಳಿಗೆ ಊಟ ಹಾಕಿಸಿದ ಅಜ್ಜಿಗೆ ಸಿಎಂ ಸ್ಪೆಷಲ್ ರಿಕ್ವೆಸ್ಟ್;
ಇತ್ತೀಚೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದವು. ಇದರ ನಡುವೆಯೇ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯೊಬ್ಬರು ಮಾಡಿರುವ ಕಾರ್ಯವು ಎಲ್ಲರ ಗಮನ ಸೆಳೆದಿತ್ತು. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಸುಟ್ಟಟ್ಟಿ ಎನ್ನುವ ಗ್ರಾಮದ ಅಕ್ಕಾತಾಯಿ ಲಂಗೂಟಿ ಎನ್ನುವ ವೃದ್ಧೆ ತನಗೆ ಬಂದಿದ್ದ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಗ್ರಾಮದ ಮಹಿಳೆಯರಿಗೆ ಹೋಳಿಗೆ ಊಟ ಹಾಕಿಸಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಫುಲ್ ಖುಷ್ ಆಗಿದ್ದು, ನಮ್ಮ …
Read More »ಲೋಕಾ ದಾಳಿಗೊಳಗಾದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗೆ ಭಡ್ತಿ?
ಲೋಕಾ ದಾಳಿಗೊಳಗಾದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗೆ ಭಡ್ತಿ? ಬೆಂಗಳೂರು: ಲೋಕಾಯುಕ್ತ ದಾಳಿ ಹಿನ್ನೆಲೆಯಲ್ಲಿ ಅಮಾನತುಗೊಳ್ಳಬೇಕಾದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗೆ ಹೆಚ್ಚುವರಿ ಭಡ್ತಿ ನೀಡಲು ಸರಕಾರ ಸಿದ್ಧತೆ ನಡೆಸಿದೆ. ವಾಣಿಜ್ಯ ತೆರಿಗೆ ಇಲಾಖೆ ಬೆಂಗಳೂರು ಜಂಟಿ ಆಯುಕ್ತರ ಮೇಲೆ ಕಳೆದ ತಿಂಗಳಷ್ಟೇ ಲೋಕಾಯುಕ್ತ ದಾಳಿ ನಡೆಸಿದ್ದರು. ಅವರ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ಕೂಡ ದಾಖಲಾಗಿತ್ತು. ಅಕ್ರಮ ಆಸ್ತಿ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಸರಕಾರಕ್ಕೆ ಲೋಕಾಯುಕ್ತ ವರದಿ ನೀಡಿದೆ. ಅದರಂತೆ …
Read More »