ಬೆಳಗಾವಿ: ರಾಜ್ಯ ಸರಕಾರ ನೂತನ ವಾಗಿ ಪ್ರಾರಂಭ ಮಾ ಡಿರುವ ಪಹಣಿ ಜೊತೆ ಆಧಾರ ಲಿಂಕ ಮಾಡುವ ಯೋಜನೆಗೆ ರಾಜ್ಯದ ಎಲ್ಲ ಕಡೆ ಪ್ರಶಂಸೆ ಸಿಗುತ್ತಿದೆ ಅದೇರೀತಿ ಹಿಂಡಾಲಗಾ ಗ್ರಾಮ ಪಂಚಾಯತಿ ವ್ಯಾಪ್ತಿ ಯಲ್ಲಿ ಬರುವ ಗ್ರಾಮ ಗಳಾದ, ಹಿಂಡಲಗಾ, ಗಣೇಶ್ ಪುರ, ಬೆನಕನ ಹಳ್ಳಿ, ಸಾವ ಗಾಂವ, ಈ ಒಂದು ಗ್ರಾಮ ಗಳಲ್ಲಿ ಪಹಣಿ ಗೆ (ಉತಾರ) ಆಧಾರ ಕಾರ್ಡ್ ಜೋಡಣೆ ಕಾರ್ಯ ವೇಗ ದಿಂದ ಸಾಗಿ ದೆ, …
Read More »Daily Archives: ಆಗಷ್ಟ್ 30, 2024
ಮುಡಾ ನಿವೇಶನ ಹಂಚಿಕೆ : ಸ್ಫೋಟಕ ಆಡಿಯೋ ಬಿಡುಗಡೆ
ಬೆಂಗಳೂರು,ಆ.30- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ ಅವರಿಗೆ ಬದಲಿ ನಿವೇಶನ ನೀಡುವ ನಿರ್ಣಯವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಡಳಿತ ಮಂಡಳಿ ತೆಗೆದುಕೊಂಡಿಲ್ಲ. ಆದರೂ ನಿಯಮಬಾಹಿರವಾಗಿ 14 ನಿವೇಶನಗಳನ್ನು ಪಡೆಯಲಾಗಿದೆ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ರವಿಕುಮಾರ್ ಗಂಭೀರ ಆರೋಪ ಮಾಡಿದ್ದು, ಆಡಿಯೋ ಸಾಕ್ಷ್ಯವನ್ನು ಬಿಡುಗಡೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ಹಲವಾರು ಮಾಹಿತಿಗಳನ್ನು ದಾಖಲೆಗಳ ಸಮೇತ ಬಿಡುಗಡೆ ಮಾಡಿದರು. ಬಿಜೆಪಿ ಸರ್ಕಾರದಲ್ಲಿ ಹಾಗೂ ಮುಡಾದಲ್ಲಿ …
Read More »ಬಿ.ವೈ.ವಿಜಯೇಂದ್ರ ವಿರುದ್ಧದ FIRಗೆ ಹೈಕೋರ್ಟ್ ತಡೆ
ಬಿ.ವೈ.ವಿಜಯೇಂದ್ರ ವಿರುದ್ಧದ FIRಗೆ ಹೈಕೋರ್ಟ್ ತಡೆ ಬೆಂಗಳೂರು: ದ್ವೇಷದ ಪೋಸ್ಟ್ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಗೆ ಹೈಕೋರ್ಟ್ ತಡೆ ನೀಡಿದೆ. ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದು ಕೋರಿ ಬಿ.ವೈ.ವಿಜಯೇಂದ್ರ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಎಫ್‌ಐಆರ್ ಗೆ ತಡೆ ನೀಡಿದೆ. ಅಲ್ಲದೇ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿದೆ. ಮೀಸಲಾತಿಗೆ ಸಂಬಂಧಿಸಿದಂತೆ ವಿಡಿಯೋ ತುಣುಕೊಂದನ್ನು ಬಿಜೆಪಿ ರಾಜ್ಯ …
Read More »ಬೆಂಗಳೂರಿನಿಂದ ಮಂಗಳೂರಿಗೆ ಕಾರಿನಲ್ಲಿ ಮಾದಕ ವಸ್ತು ಸಾಗಾಟ
ಮಂಗಳೂರು: ಕಾರಿನಲ್ಲಿ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಬೆಂಗಳೂರಿನಿಂದ ಮಂಗಳೂರಿಗೆ ಬಾಡಿಗೆ ಕಾರಿನಲ್ಲಿ ಮಾದಕ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದರು. ಎಂಡಿಎಂಎ ಸೇರಿದಂತೆ ಹಲವು ಮಾದಕ ವಸ್ತು ಹಾಗೂ ಕಾರು ಸಮೇತ ಪೊಲಿಸರು ಮೂವರನ್ನು ಬಂಧಿಸಿದ್ದಾರೆ. ಶಾಜಹಾನ್, ಮೊಹಮ್ಮದ್ ನಿಸಾರ್, ಮನ್ಸೂರ್ ಬಂಧಿತ ಆರೋಪಿಗಳು. ಬಂಧಿತರಿಂದ 2.10 ಲಕ್ಷ ಮೌಲ್ಯದ 42 ಗ್ರಾಂ ಎಂಡಿಎಂಎ ಜಪ್ತಿ ಮಾಡಲಾಗಿದೆ. ಬಾಡಿಗೆ ಕಾರಿನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ …
Read More »ದರ್ಶನ್ ವಿಚಾರಕ್ಕೆ ಪ್ರಭಾವಿ ಸಚಿವರಿಗೆ ಸಿಎಂ ತರಾಟೆ!
ದರ್ಶನ್ ವಿಚಾರಕ್ಕೆ ಪ್ರಭಾವಿ ಸಚಿವರಿಗೆ ಸಿಎಂ ತರಾಟೆ! ಬೆಂಗಳೂರು ಆಗಸ್ಟ್ 30: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶದ್‌ಗೆ ರಾಜಾತಿಥ್ಯ ನೀಡುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರಭಾವಿ ಸಚಿವರೊಬ್ಬರಿಗೆ ತರಾಟೆ ತೆಗೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಜೈಲಿನಲ್ಲಿ ದರ್ಶನ್‌ಗೆ ಐಶಾರಾಮಿ ವ್ಯವಸ್ಥೆ ನೀಡಿರುವುದರ ಹಿಂದೆ ಸಚಿವರೊಬ್ಬರ ಕೈವಾಡವಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಅದಕ್ಕೆ ಸಿಎಂ ಗರಂ ಆಗಿದ್ದು, ಆ ಸಚಿವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ‘ನೋಡಪ್ಪ ಇಂತಹ ವಿಚಾರಕ್ಕೆ …
Read More »ರಾಜ್ಯದಲ್ಲಿ ಹಿಟ್ & ರನ್ ಗೆ ಮತ್ತೊಂದು ಬಲಿ :ಅರ್ಚಕ ಸ್ಥಳದಲ್ಲೇ ಸಾವು!
ಗದಗ : ರಾಜ್ಯದ್ಲಲಿ ಹಿಟ್ & ರನ್ ಗೆ ಮತ್ತೊಂದು ಬಲಿಯಾಗಿದ್ದು, ಅಪರಿಚಿತ ವಾಹನ ಡಿಕ್ಕಿಯಾಗಿ ಅರ್ಚಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಗದಗ ಜಿಲ್ಲೆಯ ಗದಗ ಜಿಲ್ಲೆಯ ಗಜೇಂದ್ರಗಢ ತಾಲೂಕಿನ ನರೇಗಲ್ ಪಟ್ಟಣದಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ನರೇಗಲ್ ನಿವಾಸಿ ಮಲ್ಲಯ್ಯ ಬಕ್ಕಯ್ಯನವರ (65) ಮೃತಪಟ್ಟಿದ್ದಾರೆ. ಬೆಳಿಗ್ಗೆ ಚಹಾ ಕುಡಿಯಲೆಂದು ಮನೆಯಿಂದ ಹೊರ ಹೋಗಿದ್ದ ಮಲ್ಲಯ್ಯ ಅವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ …
Read More »ಬಿಜೆಪಿ ಸದಸ್ಯ ಅಪಹರಣ; ಮೂವರ ಮೇಲೆ ಪ್ರಕರಣ
ಚನ್ನಮ್ಮನ ಕಿತ್ತೂರು: ಇಲ್ಲಿಯ ಪಟ್ಟಣ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ಗುರುವಾರ ತಡರಾತ್ರಿ ಬಿಜೆಪಿ ಸದಸ್ಯ ನಾಗರಾಜ ಬಸವರಾಜ ಅಸುಂಡಿ (36) ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಮ್ಮನ ಕಿತ್ತೂರು ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತಾಲ್ಲೂಕಿನ ಮೇಟ್ಯಾಲ ಗ್ರಾಮದ ಅಶೋಕ ಚನ್ನಬಸಪ್ಪ ಮಾಳಗಿ, ಚನ್ನಾಪುರದ ಬಸವರಾಜ ಶೇಖಪ್ಪ ಸಂಗೊಳ್ಳಿ ಮತ್ತು ಕಿತ್ತೂರಿನ ಸೋಮವಾರ ಪೇಟೆಯ ಸುರೇಶ ಈರಪ್ಪ ಕಡೇಮನಿ ಆರೋಪಿಗಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಾಗರಾಜ ತಂದೆ ಬಸವರಾಜ ಈ …
Read More »ನವೀಕರಣವಾಗದ ಲೀಸ್ ಆಸ್ತಿಯಿಂದ ನಷ್ಟ
ಹುಬ್ಬಳ್ಳಿ: ಲೀಸ್‌ಗೆ ನೀಡಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಸ್ತಿಗಳ ನವೀಕರಣವಾಗದ ಕಾರಣ ಪಾಲಿಕೆಗೆ ಪ್ರತಿ ವರ್ಷ ₹50 ಕೋಟಿಯಿಂದ ₹100 ಕೋಟಿವರೆಗೆ ನಷ್ಟವಾಗುತ್ತಿದೆ. ಮಹಾನಗರ ಪಾಲಿಕೆಯ ₹2,744 ಆಸ್ತಿಗಳನ್ನು ಲೀಸ್‌ಗೆ ನೀಡಲಾಗಿದೆ. ಸ್ವಾತಂತ್ರ್ಯಪೂರ್ವ ಮತ್ತು ನಂತರದಿಂದ ಒಂದು ವರ್ಷದ ಅವಧಿಯಿಂದ 999 ವರ್ಷಗಳ ಅವಧಿಗೆ ಲೀಸ್‌ಗೆ ನೀಡಿರುವ ಆಸ್ತಿಗಳು ಅದರಲ್ಲಿವೆ. ಕೆಲವರಿಗೆ 50 ಚದರ ಅಡಿ ಆಸ್ತಿಯನ್ನು ಸಹ ಲೀಸ್ ನೀಡಲಾಗಿದೆ. ರಸ್ತೆ ನಿರ್ಮಾಣ ಕಾಮಗಾರಿಗೆ ಕೆಲವು ಆಸ್ತಿಗಳು …
Read More »