Breaking News

Monthly Archives: ಜೂನ್ 2024

ರಾಜ್ಯ ಸರ್ಕಾರದ ವಿರುದ್ಧ ಸ್ವಜನಪಕ್ಷಪಾತ ಆರೋಪ ಮಾಡಿದ ಬಿಜೆಪಿಗೆ ತಿಮ್ಮಾಪುರ ತಿರುಗೇಟು

ಬೆಂಗಳೂರು, ಜೂನ್​ 30: ಅಬಕಾರಿ ಇಲಾಖೆ (Excise Department) ಬೆಂಗಳೂರು ವ್ಯಾಪ್ತಿಯ ಎಂಟು ಜನ ಉಪ ಆಯಕ್ತರ ಪೈಕಿ ನಾಲ್ವರನ್ನು ತಮ್ಮದೇ ಜಾತಿಯ ಅಧಿಕಾರಿಗಳನ್ನು ನೇಮಿಸಿದ್ದನ್ನು ರಾಜ್ಯ ಬಿಜೆಪಿ (BJP) ವಿರೋಧಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಸ್ವಜನ ಪಕ್ಷಪಾತದ ಗಂಭೀರ ಆರೋಪ ಮಾಡಿದೆ. ಅಬಕಾರಿ ಇಲಾಖೆಯಲ್ಲಿ ಜಾತಿ ತಾರತಮ್ಯ ಮಾಡಲಾಗಿದೆ. ಒಂದೇ ಸಮುದಾಯದ ನಾಲ್ವರಿಗೆ ಸ್ಥಾನಮಾನ ನೀಡಲಾಗಿದೆ. ವರ್ಗಾವಣೆ ಹಾಗೂ ನೇಮಕಾತಿಯಲ್ಲಿ ಕೆಲ ಸಚಿವರ ಆಪ್ತರಿಗೆ ಮಣೆ ಹಾಕಲಾಗಿದೆ. ಈ ಹಿಂದೆಯೂ …

Read More »

ಪ್ರವಾಹ ಎದುರಿಸಲು ಕ್ರಮ ಕೈಗೊಳ್ಳಿ: ತಹಶೀಲ್ದಾರ್‌ ಮಂಜುಳಾ ನಾಯಿಕ

ಸಂಕೇಶ್ವರ: ಮಹಾರಾಷ್ಟ್ರದ ಅಂಬೋಲಿ ಘಟ್ಟ ಪ್ರದೇಶದಲ್ಲಿ ರಭಸದಿಂದ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಸಂಕೇಶ್ವರ ಪಟ್ಟಣದ ಹರಿಯುವ ಹಿರಣ್ಯಕೇಶಿ ನದಿ ತುಂಬಿ ಹರಿಯುತಿದ್ದು ಭವಿಷ್ಯದಲ್ಲಿ ಪ್ರವಾಹ ಭೀತಿ ಎದುರಿಸಲು ಈಗಿನಿಂದಲೇ ತಾಲ್ಲೂಕು ಆಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಹುಕ್ಕೇರಿ ತಹಶೀಲ್ದಾರ್‌ ಮಂಜುಳಾ ನಾಯಿಕ ಅವರು ಶನಿವಾರ ಸಂಕೇಶ್ವರಕ್ಕೆ ಭೇಟಿ ನೀಡಿ ಹಿರಣ್ಯಕೇಶಿ ನದಿಯ ನೀರಿನ ಮಟ್ಟ ವಿಕ್ಷಿಸಿದರು. ಮುಂದಿನ ದಿನಗಳಲ್ಲಿ ಹಿರಣ್ಯಕೇಶಿ ನದಿಗೆ ಹೆಚ್ಚು ನೀರು ಬಂದರೆ ನದಿ ಗಲ್ಲಿ, ಶಂಕರಲಿಂಗ ಮಠ, ಹೊಸ …

Read More »

ತಿರಸ್ಕಾರದಿಂದ ಪುರಸ್ಕಾರ

ಚಪ್ಪಾಳೆ ತಟ್ಟಿ ಭಿಕ್ಷೆ ಬೇಡುತ್ತಿದ್ದ ಕೈಗಳು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿವೆ. ಕೀಳಾಗಿ ಕಾಣಲಾಗುತ್ತಿದ್ದ ದೇಹಗಳಿಗೆ ಹೊಸ ಮೈಮಾಟ ಬಂದಿದೆ. ಗೇಲಿಗೆ ಗುರಿಯಾಗಿದ್ದ ನಡಿಗೆ ‘ಕ್ಯಾಟ್‌ವಾಕ್‌’ ಆಗಿದೆ. ಮೂದಲಿಕೆಗೆ ಕಾರಣವಾಗಿದ್ದ ಮುಖದ ಮೇಲೆ ಮಾದಕ ಕಳೆ ಬಂದಿದೆ. ವಿರೂಪಿ ಎಂದು ಕರೆಸಿಕೊಳ್ಳುತ್ತಿದ್ದವರು ಈಗ ರೂಪದರ್ಶಿಗಳು… ಹೌದು. ಲಿಂಗತ್ವ ಅಲ್ಪಸಂಖ್ಯಾತರ ಬಾಳಲ್ಲಿ ಪರಿವರ್ತನೆಯ ಸಮಯ ಬಂದಿದೆ. ಅವಮಾನಕ್ಕೆ ಒಳಗಾದವರು ಮುಖ್ಯವಾಹಿನಿಯಲ್ಲಿ ಸಾಗುವ ಯತ್ನ ನಡೆಸಿದ್ದಾರೆ. ಕೀಳಾಗಿ ಕಾಣುತ್ತಿದ್ದ ಕಣ್ಣುಗಳು ಹುಬ್ಬೇರಿಸಿ ದಿಟ್ಟಿಸುವಂತೆ ಅವರು ಬದಲಾಗುತ್ತಿದ್ದಾರೆ. …

Read More »

ಬಸನಗೌಡ ಪಾಟೀಲ್​ ಯತ್ನಾಳ್​ ಪತ್ರಕ್ಕೆ ಅಮಿತ್ ಶಾ ಸ್ಪಂದನೆ, ಹಲವರಿಗೆ ಶುರುವಾಯ್ತು ನಡುಕ!

ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬರೆದಿದ್ದ ಪತ್ರಕ್ಕೆ ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಂದಿಸಿ ಉತ್ತರ ಬರೆದಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಸೇರಿದಂತೆ ಈ ಹಿಂದೆ ಕರ್ನಾಟಕದಲ್ಲಿ ನಡೆದ ಘಟನೆಗಳನ್ನು ಉಲ್ಲೇಖಿಸಿ ಪತ್ರ ಬರೆದಿದ್ದರು, ಇದೀಗ ಗೃಹ ಸಚಿವರ ಕಡೆಯಿಂದ ಸ್ಪಂದನೆ ಸಿಕ್ಕಿದ್ದು, ಹಲವರಿಗೆ ನಡುಕ ಶುರುವಾಗಿದೆ. ವಿಜಯಪು, (ಜೂನ್ 28): ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣವನ್ನು ಸಿಬಿಐ ತನಿಖೆಗೆ …

Read More »

CBSE, ICSE ಸೇರಿ ಎಲ್ಲಾ ಖಾಸಗಿ ಶಾಲೆಗಳಲ್ಲಿ ಕನ್ನಡ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

ಬೆಂಗಳೂರು: CBSE, ICSE, ಅಂತರರಾಷ್ಟ್ರೀಯ ಮಂಡಳಿ ಸೇರಿದಂತೆ ಕೇಂದ್ರೀಯ ಪಠ್ಯಕ್ರಮದ ರಾಜ್ಯದ ಎಲ್ಲಾ ಖಾಸಗಿ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಮತ್ತು ದ್ವಿತೀಯ ಭಾಷೆಯಾಗಿ ಭೋದಿಸುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ನಿಯಮಗಳಿಗೆ ತಿದ್ದುಪಡಿ ತಂದು ರಾಜ್ಯ ಸರ್ಕಾರದಿಂದ ರಾಜ್ಯ ಪತ್ರ ಹೊರಡಿಸಲಾಗಿದೆ. ಈ ನಿಯಮ ಅನುಸರಿಸಿದಲ್ಲಿ ಮಾತ್ರ ಖಾಸಗಿ ಶಾಲೆಗಳನ್ನು ನಡೆಸಲು ರಾಜ್ಯ ಸರ್ಕಾರದ ನಿರಾಕ್ಷೇಪಣಾ ಪತ್ರ ದೊರೆಯಲಿದೆ ಎಂದು ಹೇಳಲಾಗಿದೆ. ಈ ಹಿಂದೆ ಕೇಂದ್ರೀಯ ಪಠ್ಯಕ್ರಮದ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ …

Read More »

ಪ್ರಜ್ವಲ್ ಬಳಿ ಇತ್ತು 15 ಸಿಮ್ ಕಾರ್ಡ್ʼಗಳು.! ಒಂದು ನಂಬರ್ ಬ್ಲಾಕ್ ಮಾಡಿದ್ರೆ ಮತ್ತೊಂದು ನಂಬರ್ ನಿಂದ ಕಾಲ್

ಬೆಂಗಳೂರು: ಜೈಲಿನಲ್ಲಿರುವ ಅತ್ಯಾಚಾರ ಆರೋಪಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಒಂದೊಂದೇ ಕೃತ್ಯಗಳು ಬಯಲಿಗೆ ಬರುತ್ತಿವೆ. ಪ್ರಜ್ವಲ್ ರೇವಣ್ಣ ಬಳಿ ಒಂದಲ್ಲ.. ಎರಡಲ್ಲ.. ಬರೋಬ್ಬರಿ 15 ಸಿಮ್‍ ಗಳು ಇತ್ತಂತೆ. ಒಂದು ನಂಬರ್ ಬ್ಲಾಕ್ ಮಾಡಿದ್ರೆ ಮತ್ತೊಂದು ನಂಬರ್ ನಿಂದ ಕಾಲ್. ಹೀಗೆ ಪ್ರಜ್ವಲ್ ರೇವಣ್ಣ ಬರೋಬ್ಬರಿ 15 ಸಿಮ್ ಕಾರ್ಡ್ ಹೊಂದಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಕೆಲ ಪರಿಚಿತರ ಪತ್ನಿಯರೇ ಪ್ರಜ್ವಲ್‍ಗೆ ಟಾರ್ಗೆಟ್. ಕೆಲಸ ಕೇಳಿಕೊಂಡು, ಮಕ್ಕಳಿಗೆ ಸೀಟ್ ಕೇಳಿಕೊಂಡು …

Read More »

170 ಲಕ್ಷ ಕೋಟಿ ಮೀರಿದ ಕೇಂದ್ರದ ಸಾಲ

ಕೇಂದ್ರ ಸರ್ಕಾರದ ಒಟ್ಟು ಸಾಲವು 2024ರ ಮಾರ್ಚ್‌ ಅಂತ್ಯದ ವೇಳೆಗೆ ₹171.78 ಲಕ್ಷ ಕೋಟಿಗೆ ಏರಿಕೆಯಾಗಿದೆ. 2023ರ ಡಿಸೆಂಬರ್‌ ಅಂತ್ಯದಿಂದ ಆರಂಭಗೊಂಡು 2024ರ ಮಾರ್ಚ್‌ ಅಂತ್ಯದ ವೇಳೆದ ವೇಳೆ ಶೇ 3.4ರಷ್ಟು ಏರಿಕೆಯಾಗಿದೆ ಎಂದು ಹಣಕಾಸು ಸಚಿವಾಲಯದ ಸಾರ್ವಜನಿಕ ಸಾಲದ ನಿರ್ವಹಣಾ ತ್ರೈಮಾಸಿಕ ವರದಿಯಲ್ಲಿ (ಜನವರಿ-ಮಾರ್ಚ್‌, 2024) ಹೇಳಲಾಗಿದೆ ₹166.14 ಲಕ್ಷ ಕೋಟಿ;2023ರ ಡಿಸೆಂಬರ್‌ ಅಂತ್ಯದಲ್ಲಿ ಇದ್ದ ಸಾಲದ ಮೊತ್ತ ₹171.78 ಲಕ್ಷ ಕೋಟಿ;2024ರ ಮಾರ್ಚ್‌ ಅಂತ್ಯದ ವೇಳೆ ಇದ್ದ …

Read More »

ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮಕ್ಕೆ ಹನಿ ಟ್ರ್ಯಾಪ್‌ ನಂಟು

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮದ ಹಿಂದೆ ಹನಿಟ್ರ್ಯಾಪ್‌ ಇದೆ ಎಂದು ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಗಂಭೀರ ಆರೋಪ ಮಾಡಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾರೆ. ಆಂಧ್ರಪ್ರದೇಶದ ಸತ್ಯನಾರಾಯಣ ವರ್ಮ ಎಂಬಾತ ಈ ಪ್ರಕರಣದ ಸೂತ್ರಧಾರ. ವರ್ಮ ಒಬ್ಬ ವೃತ್ತಿಪರ ಕೇಡಿ ಎನ್ನುವ ಮಾಹಿತಿಯಿದೆ. ಹಲವು ರಾಜ್ಯಗಳಲ್ಲಿ ನಡೆದ ಅಕ್ರಮಗಳಲ್ಲಿ ಈತನ ಪಾತ್ರವಿದೆ ಎಂಬ ಆರೋಪಗಳು ಕೇಳಿಬಂದಿವೆ. ಈತನಿಗೆ ನಮ್ಮ ರಾಜ್ಯದ ಸಚಿವರು, ಶಾಸಕರು, …

Read More »

ಪ್ರಜ್ವಲ್‌ ಧ್ವನಿ ಬದಲಾಯಿಸಲು ಯತ್ನ

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಕೇಳಿ ಬಂದಿರುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಸಂಬಂಧ ಇತ್ತೀಚೆಗೆ ಅವರನ್ನು ಧ್ವನಿ ಪರೀಕ್ಷೆಗೆ ಒಳಪಡಿಸಿದಾಗ ಕೊಂಚ ಧ್ವನಿ ಬದಲಾಯಿಸಿ ಮಾತನಾಡಲು ಯತ್ನಿಸಿರುವ ಆರೋಪ ಕೇಳಿ ಬಂದಿತ್ತು. ಹಾಸನದ ಅಶ್ಲೀಲ ಚಿತ್ರವಿರುವ ಪೆನ್‌ಡ್ರೈವ್‌ ಕೇಸ್‌ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ಚುರುಕುಗೊಳಿಸಿದ್ದು ಪ್ರಜ್ವಲ್‌ ವಿರುದ್ಧ ದಾಖಲಾಗಿರುವ ಸಾಲು-ಸಾಲು ದೂರುಗಳ ಪೈಕಿ ಒಂದೊಂದೇ ಪ್ರಕರಣದ ಸಾಕ್ಷ್ಯ ಕಲೆ ಹಾಕಲಾಗುತ್ತಿದೆ. …

Read More »

ಪೊಲೀಸರ ಮೇಲೆ‌ ಹಲ್ಲೆ ನಡೆಸಿ ಪರಾರಿಯಾದ ದುಷ್ಕರ್ಮಿಗಳು

ಗದಗ: ಸರಣಿಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕರೆದೊಯ್ಯುವ ವೇಳೆ ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ನಾಲ್ವರು ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಗರದ ಬೆಟಗೇರಿಯ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ಶುಕ್ರವಾರ ರಾತ್ರಿ ನಡೆದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ಜಯನಗರದಲ್ಲಿ ನಡೆದಿದ್ದ ಸರಣಿಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಜಾಡು ಹಿಡಿದು ನಗರಕ್ಕೆ ಆಗಮಿಸಿದ್ದ ಗಂಗಾವತಿ ಶಹರ ಪೊಲೀಸ್ ಠಾಣೆಯ ಪೊಲೀಸರು ಸ್ಥಳೀಯ ಎಸ್.ಎಂ. ಕೃಷ್ಣ ನಗರದಲ್ಲಿ ವಾಸವಿದ್ದ ಅಮ್ಜದ್ …

Read More »