Breaking News

Daily Archives: ಜೂನ್ 17, 2024

ಬೆಳಗಾವಿ: ಇನ್ನೂ ಪೂರೈಕೆಯಾಗದ ಸಮವಸ್ತ್ರ

ಬೆಳಗಾವಿ: 2024-25ನೇ ಸಾಲಿನ ತರಗತಿ ಆರಂಭವಾಗಿ ಮೂರು ವಾರವಾದರೂ, ಇನ್ನೂ ಹಲವು ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರದ ಬಟ್ಟೆ ವಿತರಣೆಯಾಗಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಹಳೇ ಸಮವಸ್ತ್ರದಲ್ಲೇ ಶಾಲೆಯತ್ತ ಹೆಜ್ಜೆ ಹಾಕುವುದು ಅನಿವಾರ್ಯವಾಗಿದೆ. ಪ್ರತಿವರ್ಷ ಶಾಲಾ ಆರಂಭೋತ್ಸವ ದಿನವೇ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಿಗೆ ಸಮವಸ್ತ್ರದ ಬಟ್ಟೆ ನೀಡಲಾಗುತ್ತಿತ್ತು. 8ರಿಂದ 10ನೇ ತರಗತಿ ವಿದ್ಯಾರ್ಥಿನಿಯರಿಗೆ ಚೂಡಿದಾರ್‌ ಬಟ್ಟೆ ಕೊಡಲಾಗುತ್ತಿತ್ತು. ಈ ವರ್ಷದಿಂದ ತಮಗೂ ಚೂಡಿದಾರ್‌ ಬಟ್ಟೆ ಸಿಗುತ್ತದೆ ಎಂದು 6 ಮತ್ತು …

Read More »

ಸ್ವಾವಲಂಬಿ ಬದುಕಿಗೆ ಧರ್ಮಸ್ಥಳ ಸಂಘ ಸಹಕಾರಿ: ಉದ್ಯಮಿ ರಾಜು ಶೆಟ್ಟಿ

ಯರಗಟ್ಟಿ: ‘ಮಹಿಳೆಯರು ಸ್ವಂತ ಉದ್ಯೋಗ ಮಾಡಲು ತರಬೇತಿ ನೀಡುವ ಜೊತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಸಹಕಾರಿಯಾಗಿದೆ’ ಎಂದು ಹೋಟೆಲ್‌ ಉದ್ಯಮಿ ರಾಜು ಶೆಟ್ಟಿ ಹೇಳಿದರು. ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ವೀಲ್ ಚೇರ್ ಮತ್ತು ವಾಟರ್ ಬೆಡ್ ವಿತರಿಸಿ ಅವರು ಮಾತನಾಡಿದರು. ಸಂಸ್ಥೆಯ ಜಿಲ್ಲಾ ನಿರ್ದೇಶಕ ಲವಕುಮಾರ ಮಾತನಾಡಿ, ‘ಸಂಸ್ಥೆ ಮಹಿಳೆಯರ ಅಭಿವೃದ್ಧಿ ಜೊತೆಗೆ ಕುಟಂಬದ ಪ್ರಗತಿಗೂ ಹಲವು ಯೋಜನೆ …

Read More »

ರಾಯಬಾಗ: ಕೆರೆ-ಕೊಳ್ಳಗಳು ಭರ್ತಿ

ರಾಯಬಾಗ: ಕೆರೆ-ಕೊಳ್ಳಗಳು ಭರ್ತಿಯಾದರೆ ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗಿ ಜನರಿಗೆ ನೀರಿನ ಬವಣೆ ತಪ್ಪುತ್ತದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ ಹೇಳಿದರು. ತಾಲ್ಲೂಕಿನ ನಂದಿಕುರಳಿ ಗ್ರಾಮದಲ್ಲಿ ಕೆರೆಗೆ ಬಾಗಿನ ಅರ್ಪಣೆ ಮಾಡಿ ಅವರು ಮಾತನಾಡಿದರು. ಶಿವನಗೌಡ ಪಾಟೀಲ ಮಾತನಾಡಿ, ‘ವರುಣನ ಕೃಪಾ ಕಟಾಕ್ಷದಿಂದ ಮಳೆ ಬಂದು ಹಲವಾರು ಕೆರೆ, ಕಟ್ಟೆಗಳಿಗೆ ನೀರು ಅಲ್ಪ ಸ್ವಲ್ಪ ಬಂದಿದೆ. ಹಳ್ಳ ಕೊಳ್ಳಗಳು ಹರಿದಿರುವುದರಿಂದ ಕುಡಿಯುವ ನೀರಿನ ಅಭಾವ ತಪ್ಪಿದಂತಾಗಿದೆ. ದನ ಕರುಗಳಿಗೆ ಮೇವಿನ …

Read More »

ರೇಣುಕಸ್ವಾಮಿ ಕೊಲೆ ಪ್ರಕರಣ| ಕಲಾವಿದರ ವ್ಯಕ್ತಿತ್ವ ಮಾದರಿಯಾಗಿರಲಿ: ಕೂಡಲಸಂಗಮಶ್ರೀ

ರೇಣುಕಸ್ವಾಮಿ ಕೊಲೆ ಪ್ರಕರಣ| ಕಲಾವಿದರ ವ್ಯಕ್ತಿತ್ವ ಮಾದರಿಯಾಗಿರಲಿ: ಕೂಡಲಸಂಗಮಶ್ರೀ   ಅಥಣಿ : ‘ಯಾವುದೇ ಕಲಾವಿದರು ಜನರಿಗೆ ಮಾದರಿಯಾಗುವಂಥ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಇಲ್ಲದಿದ್ದರೆ ರೇಣುಕಸ್ವಾಮಿ ಕೊಲೆಯಂಥ ಘಟನೆ ನಡೆಯುತ್ತವೆ’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ರಾಜಕುಮಾರ್, ವಿಷ್ಣುವರ್ಧನ್ ಅವರಂಥ ನಟರನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು. ಪರದೆ ಮೇಲೆ ವಿವಿಧ ಪಾತ್ರಗಳನ್ನು ನಿರ್ವಹಿಸುವ ಕಲಾವಿದರು, ವಾಸ್ತವ ಬದುಕಿನಲ್ಲಿ ಜನರಿಗೆ ಮಾದರಿಯಾಗುವಂತೆ …

Read More »

ಚಿಕ್ಕೋಡಿ: ಶಿಕ್ಷಕರ ಕೊರತೆ, ಸುಧಾರಿಸದ ಫಲಿತಾಂಶ

ಚಿಕ್ಕೋಡಿ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದರೆ ಸಾಕು ಇಡೀ ರಾಜ್ಯವೇ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯತ್ತ ನೋಡುವ ಕಾಲವೊಂದಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಫಲಿತಾಂಶದ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ. ಜಿಲ್ಲೆಯಲ್ಲಿ ಸಾಕಷ್ಟು ಶಿಕ್ಷಕರ ಕೊರತೆ ಇರುವುದೇ ಇದಕ್ಕೆ ಕಾರಣ ಎನ್ನುವುದು ಶಿಕ್ಷಣ ತಜ್ಞರ ಅಭಿಮತ. ಈ ಬಾರಿಯ ಫಲಿತಾಂಶ ಕೂಡ ಇದನ್ನೇ ಸಾಬೀತು ಮಾಡುವಂತಿದೆ. ಕುಸಿಯುತ್ತಿರುವ ಫಲಿತಾಂಶದ ಜತೆಗೆ ಗರಿಷ್ಠ ಫಲಿತಾಂಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕೂಡ ಕಡಿಮೆಯಾಗುತ್ತ ಸಾಗಿದೆ. ಹಿಂದೆ …

Read More »

ಪೆಟ್ರೋಲ್, ಡೀಸೆಲ್‌ ತೆರಿಗೆ ಹೆಚ್ಚಳ: ಎತ್ತುಗಳ ಬಳಸಿ ಸ್ಕೂಟರ್ ಎಳೆದು BJP ಆಕ್ರೋಶ

ಬೆಳಗಾವಿ: ಇಂಧನ ತೈಲಗಳ ತೆರಿಗೆ ದರ ಏರಿಕೆ ಮಾಡಿದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ನಗರದಲ್ಲಿ ಸೋಮವಾರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವಿನೂತನ ಪ್ರತಿಭಟನೆ ಮಾಡಿದರು. ಎತ್ತುಗಳಿಗೆ ಬೈಕ್‌-ಸ್ಕೂಟರ್‌ಗಳನ್ನು ಕಟ್ಟಿ ಎಳೆಯುವ ಮೂಲಕ ಆಕ್ರೋಶ ಹೊರಹಾಕಿದರು. ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ ಪಾಟೀಲ ಬೈಕುಗಳನ್ನು ತಳ್ಳಿಕೊಂಡು ಹೋಗುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ರಾಣಿ ಚನ್ನಮ್ಮ ವೃತ್ತದಲ್ಲಿ ಸೇರಿದ ಪ್ರತಿಭಟನಕಾರರು, ಕೆಲಕಾಲ ವೃತ್ತದ ಸಂಚಾರ ಬಂದ್‌ …

Read More »

ಮೂಡಲಗಿ | ಕಾರು ಡಿಕ್ಕಿ: ಬಾಲಕ ಸಾವು

ಮೂಡಲಗಿ: ತಾಲ್ಲೂಕಿನ ನಾಗನೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಮೀಪ ಸೋಮವಾರ ಮೂಡಲಗಿ- ಗೋಕಾಕ ರಾಜ್ಯ ಹೆದ್ದಾರಿ ಮೇಲೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟಿದ್ದಾನೆ. ನಾಗನೂರಿನ ಲಕ್ಷ್ಮಣ ಕೆಂಚನವರ ಅವರ ಪುತ್ರ ವಿನಾಯಕ (8) ಅಪಘಾತಕ್ಕೆ ಬಲಿಯಾದ ಬಾಲಕ. ರಾಯಬಾಗ ತಾಲ್ಲೂಕಿನ ಆಲಕನೂರು ಗ್ರಾಮದ, ಚಾಲಕ ದೇವಪ್ಪ ಅರ್ಜುನ ಯಲ್ಲಟ್ಟಿ ಅಪಘಾತಪಡಿಸಿದ ಆರೋಪಿ. ನಾಗನೂರು ಕಡೆಯಿಂದ ಗೋಕಾಕ ಮಾರ್ಗವಾಗಿ ಕಾರ್‌ ವೇಗವಾಗಿ ಸಂಚರಿಸುತ್ತಿತ್ತು. ಬಾಲಕ ರಸ್ತೆಯ …

Read More »

ಅಭಿವೃದ್ಧಿ ಕಾಮಗಾರಿಗಳನ್ನು ಕೈಬಿಟ್ಟಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಗರಸಭೆ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ರೂಪ ಅನಂತರಾಜು ಆಗ್ರಹ

ಗೌರಿಬಿದನೂರು: ದಲಿತರು ಹೆಚ್ಚಾಗಿ ವಾಸಿಸುವ ವಾರ್ಡ್‌ಗಳಲ್ಲಿ ನಡೆಸಲು ಉದ್ದೇಶಿಸಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಕೈಬಿಟ್ಟಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಗರಸಭೆ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ರೂಪ ಅನಂತರಾಜು ಆಗ್ರಹಿಸಿದ್ದಾರೆ.   ‘2022ರಲ್ಲಿ ನಾನು ನಗರಸಭೆ ಅಧ್ಯಕ್ಷೆಯಾಗಿದ್ದಾಗ ಅಂದಿನ ಶಾಸಕ ಹಾಗೂ ನಗರಸಭೆ ಎಲ್ಲ ಸದಸ್ಯರೊಂದಿಗೆ ಚರ್ಚಿಸಿ ಅಮೃತ ನಗರೋತ್ಥಾನ ಯೋಜನೆಯಡಿ ₹30ಕೋಟಿ ವೆಚ್ಚದ ಕಾಮಗಾರಿಗಳ ಕ್ರಿಯಾ ಯೋಜನೆ ಸಿದ್ಧಪಡಿಸಿ ನಗರ ಯೋಜನಾ ನಿರ್ದೇಶಕರಿಗೆ ಕಳುಹಿಸಿಕೊಡಲಾಗಿತ್ತು. 18ನೇ ವಾರ್ಡ್ ನೆಹರೂ …

Read More »

ತೈಲ ಬೆಲೆ ಏರಿಕೆ ಸಾಮಾನ್ಯರನ್ನು ಬಾಧಿಸದು: ಸಚಿವ ಕೆ.ಎಚ್‌.ಮುನಿಯಪ್ಪ

ವಿಜಯಪುರ(ದೇವನಹಳ್ಳಿ): ‘ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಕಡಿಮೆ ಇದೆ. ಸ್ವಲ್ಪ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಲಾಗಿದೆ. ರೈತರು ಮತ್ತು ಸಾರ್ವಜನಿಕರನ್ನು ಇದು ಬಾಧಿಸದು’ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ. ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗಿಂತ ರಾಜ್ಯದಲ್ಲಿ ತೈಲ ಬೆಲೆ ಕಡಿಮೆ ಇದೆ. ಸಾಮಾನ್ಯ ವರ್ಗದ ಜನರನ್ನು ಗಮನದಲ್ಲಿ ಇಟ್ಟುಕೊಂಡೆ ಬೆಲೆಯನ್ನು ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ ಎಂದರು. ಸಾರ್ವಜನಿಕರು …

Read More »

ಸ್ಮಶಾನಕ್ಕೆ ರಸ್ತೆ ಕಲ್ಪಿಸದಿದ್ದರೆ ಪ್ರತಿಭಟನೆ: ಗ್ರಾಮಸ್ಥರ ಎಚ್ಚರಿಕೆ

ವಿಜಯಪುರ(ದೇವನಹಳ್ಳಿ): ಹೋಬಳಿಯ ವೆಂಕಟಗಿರಿಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಗವಾರ, ದೊಡ್ಡಸಾಗರಹಳ್ಳಿ ಗ್ರಾಮಗಳ ಜನರಿಗೆ ಮೀಸಲಿಟ್ಟಿರುವ ಸ್ಮಶಾನಕ್ಕೆ ರಸ್ತೆ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಸ್ಮಶಾನಕ್ಕೆ ರಸ್ತೆ ಇಲ್ಲದೆ ಇಲ್ಲಿನ ಪರದಾಡುತ್ತಿದ್ದಾರೆ. ರಸ್ತೆ ನಿರ್ಮಿಸಿಕೊಡಿ ಎಂದು ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಇನ್ಮುಂದೆ ಯಾರಾದರೂ ಮೃತಪಟ್ಟರೆ ನೇರವಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಶವ ಇಟ್ಟು ಪ್ರತಿಭಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಎರಡೂ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ, ರೈತರ …

Read More »