Breaking News

Daily Archives: ಜೂನ್ 8, 2024

D.K. Shivakumar ಸಿಬಿಐ ತನಿಖೆಗೆ ಸಹಕಾರ ನೀಡಲು ಸಿದ್ಧ

ಬೆಂಗಳೂರು: ರಾಜ್ಯ ಸರಕಾರದ ಅನುಮತಿ ಇಲ್ಲದಿದ್ದರೂ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಅಕ್ರಮ ನಡೆದರೆ ತನಿಖೆ ನಡೆಸಲು ಸಿಬಿಐಗೆ ಅವಕಾಶವಿದೆ. ಹಾಗಾಗಿ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.   ಸುದ್ದಿಗಾರರೊಂದಿಗೆ ಮಾತನಾಡಿ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣವನ್ನು ಸಿಬಿಐಗೆ ವಹಿಸುವ ಪ್ರಶ್ನೆಯಿಲ್ಲ. ಆದರೆ ಬ್ಯಾಂಕ್‌ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಅಕ್ರಮ ನಡೆದರೆ ಸರಕಾರದ ಅನುಮತಿ …

Read More »

ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ ; ಆರೆಂಜ್‌ ಅಲರ್ಟ್‌ ಘೋಷಣೆ

ಮಂಗಳೂರು: ಕರಾವಳಿ ಭಾಗದಲ್ಲಿ ಮುಂಗಾರು ಮಳೆ ಬಿರುಸು ಪಡೆಯುವ ಸಾಧ್ಯತೆ ಇದ್ದು, ಜೂ. 8ರಿಂದ 11ರ ವರೆಗೆ “ಆರೆಂಜ್‌ ಅಲರ್ಟ್‌’ ಘೋಷಿಸಲಾಗಿದೆ. ಈ ವೇಳೆ ಬಿರುಸಿನ ಗಾಳಿ-ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.   ಕರಾವಳಿ ಭಾಗದಲ್ಲಿ ಜೂ. 2ರಂದು ಮುಂಗಾರು ಆಗಮಿಸಿತ್ತಾದರೂ ಬಳಿಕದ ದಿನಗಳಲ್ಲಿ ಭಾರೀ ಮಳೆ ಸುರಿಯಲಿಲ್ಲ. ಮುಂದಿನ ನಾಲ್ಕು ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ …

Read More »

ಭಾರತ-ಪಾಕ್‌ ಪಂದ್ಯದ ಟಿಕೆಟ್‌ ದರ ದುಬಾರಿ

ನ್ಯೂಯಾರ್ಕ್‌: ರವಿವಾರದ ಭಾರತ-ಪಾಕಿಸ್ಥಾನ ನಡುವಿನ ಟಿ20 ವಿಶ್ವಕಪ್‌ ಮುಖಾಮುಖೀಗಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಈ ಪಂದ್ಯದ ಟಿಕೆಟ್‌ ಬೆಲೆ ದುಬಾರಿಯಾಗಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ. ಈ ಪಂದ್ಯಕ್ಕೆ ಐಸಿಸಿ ಜಾಹೀರಾತು ಪ್ರಕಟಿಸಿದ ಬೆನ್ನಲ್ಲೇ 20 ಲಕ್ಷಕ್ಕೂ ಅಧಿಕ ಜನರಿಂದ ಟಿಕೆಟ್‌ಗೆ ಬೇಡಿಕೆ ಬಂದಿತ್ತು. ಹೀಗಾಗಿ ಎಲ್ಲರಿಗೂ ಟಿಕೆಟ್‌ ಒದಗಿಸುವುದು ಕಷ್ಟವಾಯಿತು ಎಂದು ಅಮೆರಿಕ ಕ್ರಿಕೆಟ್‌ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ. ಈ ಪಂದ್ಯಕ್ಕೆ 300 ಡಾಲರ್‌ (25,000 ರೂ.) ಟಿಕೆಟ್‌ ಕೂಡ ಇದೆ. …

Read More »

TDP ಚಂದ್ರಬಾಬು ನಾಯ್ಡು ಕುಟುಂಬದ ಆಸ್ತಿ 5 ದಿನದಲ್ಲಿ 870 ಕೋ.ರೂ ಏರಿಕೆ!!

ಹೊಸದಿಲ್ಲಿ: ಆಂಧ್ರ ವಿಧಾನಸಭೆ, ಲೋಕಸಭೆ ಚುನಾವಣೆ ಯಲ್ಲಿ ತೆಲುಗು ದೇಶಂ ಪಕ್ಷದ ಮುಖ್ಯಸ್ಥ (ಟಿಡಿಪಿ) ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಕುಟುಂ ಬದ ಆಸ್ತಿ ಮೌಲ್ಯವು 870 ಕೋಟಿ ರೂ. ಹೆಚ್ಚಳವಾಗಿದೆ. ನಾಯ್ಡು ಕುಟುಂಬಸ್ಥರು ಪ್ರವರ್ತಕರಾಗಿರುವ ಹಾಗೂ ಷೇರುಗಳನ್ನು ಹೊಂದಿರುವ ಹೆರಿಟೇಜ್‌ ಫ‌ುಡ್ಸ್‌ ಕಂಪೆನಿಯ ಷೇರು ಮೌಲ್ಯ ಜೂ.3ರಂದು 424 ರೂ.ಗಳಿತ್ತು. ಶುಕ್ರವಾರ ಅದು 661.25 ರೂ.ಗೆ ಏರಿದೆ. ಹೀಗಾಗಿ ಜೂ.3ರಂದು 3,700 ಕೋಟಿ ರೂ.ಗಳಿದ್ದ ಕಂಪೆನಿಯ ಮಾರುಕಟ್ಟೆ …

Read More »

ನಿರೀಕ್ಷೆ ಹುಸಿಗೊಳಿಸಿದ ನಾಯಕರಿಗೆ ಚಾಟಿ ಬೀಸಿದ ರಾಹುಲ್‌ ಗಾಂಧಿ

ಬೆಂಗಳೂರು: ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿಯವರು ರಾಜ್ಯದಲ್ಲಿ ಕಾಂಗ್ರೆಸ್‌ ಗಳಿಸಿದ ಸಾಮಾನ್ಯ ಫ‌ಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿರೀಕ್ಷೆ ಹುಸಿಗೊಳಿಸಿದ ನಾಯಕರಿಗೆ ಚಾಟಿ ಬೀಸಿದ್ದಾರೆ. ಕರ್ನಾಟಕದಲ್ಲಿ ನಾವು ಈ ರೀತಿಯ ಫ‌ಲಿತಾಂಶ ನಿರೀಕ್ಷೆ ಮಾಡಿರಲಿಲ್ಲ. ಇದು ನಮಗೆ ತುಂಬ ನಿರಾಸೆ ಉಂಟುಮಾಡಿದೆ. ಚುನಾವಣೆಗೆ ಮುನ್ನ ನೀವು ಕಟ್ಟಿಕೊಟ್ಟ ಚಿತ್ರಣವೇ ಬೇರೆ ಆಗಿತ್ತು. ಅದರಂತೆಯೇ ಲೆಕ್ಕ ಹಾಕಿದರೂ ಕನಿಷ್ಠ 17ರಿಂದ 18 ಸ್ಥಾನಗಳನ್ನು ಗೆದ್ದು ತರಬಹುದು ಅಂದುಕೊಂಡಿದ್ದೆವು. ಆದರೆ ಚುನಾವಣೆ ಅನಂತರ …

Read More »

ವೃತ್ತಿರಂಗದಲ್ಲಿ ಮುನ್ನಡೆ. ಸ್ವತಂತ್ರ ಉದ್ಯಮಿಗಳಿಗೆ ಎದುರಾಳಿಗಳಿಂದ ಸ್ಪರ್ಧೆ

ಮೇಷ: ಆರೋಗ್ಯ ಸ್ಥಿರ. ಉದ್ಯೋಗಸ್ಥರು ವ್ಯವಹಾರಸ್ಥರಿಗೆ ವಿಪುಲ ಅವಕಾಶ. ಹಲವು ಕಾಲದಿಂದ ಕಾಡುತ್ತಿರುವ ಜಟಿಲ ಸಮಸ್ಯೆಗೆ ಪರಿಹಾರ. ಶುಭ ಕಾರ್ಯಕ್ಕೊದಗಿದ ವಿಘ್ನ ದೂರ. ಗೃಹಿಣಿಯರಿಗೆ, ಮಕ್ಕಳಿಗೆ ಆನಂದದ ದಿನ. ವೃಷಭ: ವೃತ್ತಿರಂಗದಲ್ಲಿ ಮುನ್ನಡೆ. ಸ್ವತಂತ್ರ ಉದ್ಯಮಿಗಳಿಗೆ ಎದುರಾಳಿಗಳಿಂದ ಸ್ಪರ್ಧೆ. ಗುರುಸಮಾನರ ಅಕಸ್ಮಾತ್‌ ಭೇಟಿ. ಸಂಗಾತಿಯ ಮನೋಗತವನ್ನು ಗೌರವಿಸಿ ನಡೆದುಕೊಂಡರೆ ಕ್ಷೇಮ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಮಿಥುನ: ಗಣೇಶ, ದುರ್ಗೆಯರ ಆರಾಧನೆ ಯಿಂದ ವಿಘ್ನ ನಿವಾರಣೆ. ಶುಭ ಕಾರ್ಯ ನಡೆಸುವ ಬಗ್ಗೆ ಚಿಂತನೆ. ಹಿರಿಯರ …

Read More »