Breaking News

Monthly Archives: ಮೇ 2024

ಕೊಪ್ಪಳ | ಮತ್ತೆ ಮಳೆಯ ಸಿಂಚನ; ರೈತರಲ್ಲಿ ಮಂದಹಾಸ

ಕೊಪ್ಪಳ: ಬರಗಾಲ, ಬಿರುಬಿಸಿಲು ಹಾಗೂ ಬಿಸಿಗಾಳಿಗೆ ಬೇಸತ್ತು ಹೋಗಿದ್ದ ಜಿಲ್ಲೆಯ ಜನರಿಗೆ ಮೇಲಿಂದ ಮೇಲೆ ಸುರಿಯುತ್ತಿರುವ ಮಳೆ ಖುಷಿ ನೀಡಿದೆ. ಕೃಷಿ ಚಟುವಟಿಕೆಗೆ ಸಿದ್ಧರಾಗುತ್ತಿರುವ ರೈತರಲ್ಲಿಯೂ ಮಳೆಯ ಹನಿಗಳು ಮಂದಹಾಸ ಮೂಡಿಸಿವೆ. ಮಂಗಳವಾರ ತಡರಾತ್ರಿಯಿಂದ ಬುಧವಾರದ ಬೆಳಗಿನ ಜಾವದ ತನಕ ಕೊಪ್ಪಳ, ಕುಷ್ಟಗಿ ತಾಲ್ಲೂಕಿನ ಹನುಮಸಾಗರ, ಮುನಿರಾಬಾದ್‌, ಕುಕನೂರು, ಗಂಗಾವತಿ ಸೇರಿದಂತೆ ಜಿಲ್ಲೆಯ ಹಲವು ಕಡೆ ಉತ್ತಮವಾಗಿ ಮಳೆಯಾಗಿದೆ.

Read More »

ಕರಾವಳಿ ಜಿಲ್ಲೆಗಳಲ್ಲಿ ಬಂದಿದೆ ಹಾಲಿಗೆ ಬರ!

ಕುಂದಾಪುರ: ಕೊರೊನಾ ಕಾಲಘಟ್ಟದಲ್ಲಿ 5 ಲಕ್ಷ ಲೀಟರ್‌ಗೆ ತಲುಪಿದ್ದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಾಲು ಉತ್ಪಾದನೆ ಈಗ 3.5 ಲಕ್ಷ ಲೀ. ಗೆ ಇಳಿದಿದೆ. ಉಭಯ ಜಿಲ್ಲೆಗಳಿಗೆ ನಿತ್ಯವೂ2 ಲಕ್ಷ ಲೀ. ಹಾಲು ನೆರೆಯ ಹಾಲು ಒಕ್ಕೂಟಗಳಿಂದ ಖರೀದಿಸಿ ಪೂರೈಸಲಾಗು ತ್ತಿದೆ. ಹೈನೋದ್ಯಮದಿಂದ ರೈತರು ವಿಮುಖರಾಗುತ್ತಿರುವುದು ಪ್ರಮುಖ ಕಾರಣ ಎನ್ನುತ್ತಾರೆ ಪರಿಣಿತರು. ಪ್ರತೀ ಬೇಸಗೆಯಲ್ಲಿ ಹಸುರು ಮೇವಿನ ಕೊರತೆಯಿಂದ ಹಾಲು ಉತ್ಪಾದನೆ ಇಳಿಕೆಯಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಗಣನೀಯ …

Read More »

ಧಾರವಾಡ ಮಾವು‌ ಮೇಳದಲ್ಲಿ ಗಮನ ಸೆಳೆದ 2.5 ಲಕ್ಷ ರೂ.ಬೆಲೆಯ ಮಿಯಾ ಜಾಕಿ ಮಾವು

ಧಾರವಾಡ : ವಿಶ್ವದ ಅತ್ಯಂತ ದುಬಾರಿಯಾದ ಕೆ.ಜಿ.ಗೆ 2.5 ಲಕ್ಷ ರೂ.ಗಳ ಮಾವಿನ ಹಣ್ಣು ಮಿಯಾ ಜಾಕಿ ಧಾರವಾಡದ ಮಾವು‌ಮೇಳದಲ್ಲಿ ಗಮನ ಸೆಳೆಯುತ್ತಿದೆ. ಬರೀ ಒಂದು ಹಣ್ಣಿಗೆ ಕನಿಷ್ಠವೆಂದರೂ 25-30ಸಾವಿರ ರೂ. ಖಚಿತ..! ಹೌದು..ಇಷ್ಟೊಂದು ದುಬಾರಿ‌ ಮಾವಿನ ಹಣ್ಣು ಖರೀದಿಸದೇ ಹೋದರೂ ಕಣ್ಣುಂಬ್ತಿಕೊಳ್ಳಬಹುದು. ಇಲ್ಲಿಯ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮಂಗಳವಾರದಿಂದ ಆರಂಭಗೊಂಡಿರುವ ಮಾವು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಕಳಶ ಪ್ರಾಯವಾಗಿ ಸುದ್ದಿಯಲ್ಲಿದೆ. ಈ ದುಬಾರಿ ಮಾವು ಕಲಕೇರಿ ಮಾವು ಬೆಳೆಗಾರ …

Read More »

ನಮ್ಮಲ್ಲಿ ಒಳಜಗಳ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ನಮ್ಮಲ್ಲಿ ಒಳಜಗಳ ಇಲ್ಲ. ಹಾಗಿದ್ದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಜಗಳವಾಗಿ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು ರಾಜಕೀಯವಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದರು.   ಉತ್ತಮ ವಾತಾವರಣ ಪರಿಷತ್ ಚುನಾವಣೆಯ ವಾತಾವರಣ ಉತ್ತಮವಾಗಿದ್ದು, ಈ ಬಾರಿ ಕಾಂಗ್ರೆಸ್ ಪಕ್ಷ ಚುನಾವಣೆಯನ್ನು …

Read More »

ಕರೆಂಟ್ ಶಾಕ್ ಪ್ರಕರಣ;ಖಂಡಿಸಿ ಹಿಂದೂ ಜಾಗೃತಿ ಸೇನೆಯಿಂದ ಸರಕಾರದ ಪ್ರತಿಕೃತಿ ದಹನ

ಕಲಬುರಗಿ: ನಗರದಲ್ಲಿ ಮಂಗಳವಾರ ಬೆಳಗ್ಗೆ ಹಿಂದೂ ಜಾಗೃತಿ ಸೇನೆಯ ಕಾರ್ಯಕರ್ತರು ಸರ್ದಾರ್ ವಲ್ಲಭಾಯಿ ಪಟೇಲ್ ವೃತ್ತದಲ್ಲಿ ಜಮಾವಣೆಗೊಂಡು ಜಿಲ್ಲೆಯ ಸೇಡಂ ತಾಲೂಕಿನ ದೇವನೂರು ಗ್ರಾಮದ ನಿವಾಸಿ ಅರ್ಜುನಪ್ಪ ಹನುಮಂತ್ ಬಡಿವಾಳ್ ಎಂಬ ಯುವಕ ಯುವಕನನ್ನು ಕೂಡಿಹಾಕಿ 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ಮರ್ಮಾಂಗಕ್ಕೆ ಕರೆಂಟ್ ಶಾಕ್ ನೀಡಿದ ಘಟನೆ ಖಂಡಿಸಿ ಮಾನವ ಸರಪಳಿ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸರ್ಕಾರದ ಪ್ರತಿ ಕೃತಿ ದಹನ ಮಾಡಿದರು.   …

Read More »

ಯಾವ ತಿಮಿಂಗಿಲವನ್ನಾದರೂ ಹಿಡಿದು, ಬಡಿದು ನುಂಗಲಿ

ಬೆಂಗಳೂರು: ಕುಮಾರಣ್ಣ ಯಾವ ತಿಮಿಂಗಿಲವನ್ನಾದರೂ ಹಿಡಿದು, ಬಡಿದು ನುಂಗಲಿ. ಆದರೆ ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ನನ್ನ ಒಂದು ಸಣ್ಣ ಹಸ್ತಕ್ಷೇಪವಿದ್ದರೂ ಅದಕ್ಕೆ ಬೆಲೆ ತೆರಲು ನಾನು ಸಿದ್ಧ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೇರೆಯವರಿಂದ ಮಾತನಾಡಿಸುವ, ಪ್ರತಿಭಟನೆ ಮಾಡಿಸುವ, ಬೇರೆಯವರ ಮೇಲೆ ಅನಗತ್ಯ ಆರೋಪ ಮಾಡುವ ಅಗತ್ಯ ನನಗಿಲ್ಲ. ನಾನು ಚುನಾವಣಾ ಪ್ರಚಾರದಲ್ಲಿ ನಿರತನಾಗಿದ್ದೇನೆ. ನಾನು ರಾಜಕೀಯ ಪಕ್ಷದ ಅಧ್ಯಕ್ಷ. ಈ ಪ್ರಕರಣದಲ್ಲಿ ಒಂದು …

Read More »

ವಿಧಾನಪರಿಷತ್ತಿನ ಆರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ 29 ಮಂದಿ ನಾಮಪತ್ರ ಸಲ್ಲಿಕೆ

ಬೆಂಗಳೂರು: ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ವಿಧಾನಪರಿಷತ್ತಿನ ಆರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನೆರಡು ದಿನವಷ್ಟೇ ಬಾಕಿ ಇದ್ದು, ಈವರೆಗೆ 29 ಅಭ್ಯರ್ಥಿಗಳಿಂದ 40 ನಾಮಪತ್ರಗಳು ಸಲ್ಲಿಕೆಯಾಗಿವೆ. ಒಟ್ಟು 28 ಪುರುಷರು, ಒರ್ವ ಮಹಿಳೆ ಸೇರಿದಂತೆ 29 ಅಭ್ಯರ್ಥಿಗಳು 40 ಉಮೇದುವಾರಿಕೆಗಳನ್ನು ಸಲ್ಲಿಸಿದ್ದಾರೆ. ಇದರಲ್ಲಿ ಬಿಜೆಪಿಯಿಂದ 3, ಕಾಂಗ್ರೆಸ್‌ನಿಂದ 5, ಜೆಡಿಎಸ್‌ನಿಂದ 1 ಹಾಗೂ 20 ಮಂದಿ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ. ಈಶಾನ್ಯ ಪದವೀಧರ ಕ್ಷೇತ್ರದಿಂದ 12, ಬೆಂಗಳೂರು …

Read More »

HDK ನಾನೂ ಪೆನ್‌ಡ್ರೈವ್‌ ಬಿಡುತ್ತೇನೆ, ದೊಡ್ಡ ತಿಮಿಂಗಲ ಹಿಡಿಯುತ್ತಾರಾ?

ಬೆಂಗಳೂರು: ಬಿಜೆಪಿ ಶಾಸಕರ ಎಡಗೈ ಬಂಟ, ಬಲಗೂ ಬಂಟರನ್ನು ಹಿಡಿದಿದ್ದೇವೆ ಎಂದು ಹೇಳಿರುವ ಕಾಂಗ್ರೆಸ್‌ ಶಾಸಕರೊಬ್ಬರು ದೊಡ್ಡ ತಿಮಿಂಗಲ ಎಂದಿದ್ದಾರೆ. ನಮ್ಮ ರಾಜ್ಯದ ದೊಡ್ಡ ತಿಮಿಂಗಲ ಯಾರು ಎಂಬುದು ಜನರಿಗೆ ಗೊತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ಹೊರಹಾಕಿದರು. ನನ್ನ ಜೀವನ ತೆರೆದ ಪುಸ್ತಕ. ನನ್ನ ವೈಯಕ್ತಿಕ ಜೀವನದ ಬಗ್ಗೆ ವಿಧಾನಸಭೆ ಕಲಾಪಗಳಲ್ಲೇ ಪ್ರಸ್ತಾಪಿಸಿದ್ದೇನೆ. ನಾನು ನೋವು ನುಂಗಿದ್ದೇನೆಯೇ ಹೊರತು, ಜನರಿಗೆ ಯಾವುದೇ ರೀತಿಯ ಅನ್ಯಾಯ ಮಾಡಿಲ್ಲ. ನೋವು …

Read More »

8 ಹೊಸ ಡಿಪ್ಲೋಮಾ ಕೋರ್ಸ್‌ಗೆ ಎಂಜಿನಿಯರಿಂಗ್‌ ಪ್ರವೇಶ

ಬೆಂಗಳೂರು: ಡಿಪ್ಲೋಮಾದ ಎಂಟು ಹೊಸ ಕೋರ್ಸ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್‌ ಕೋರ್ಸ್‌ನ ಲ್ಯಾಟರಲ್‌ ಎಂಟ್ರಿಗೆ ಅವಕಾಶ ನೀಡಲು ಉನ್ನತ ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಅದರಂತೆ ಗೇಮಿಂಗ್‌ ಮತ್ತು ಅನಿಮೇಷನ್‌, ಕ್ಲೌಡ್ ಕಂಪ್ಯೂಟಿಂಗ್‌ ಮುಂತಾದ ಡಿಪ್ಲೋಮಾ ಕೋರ್ಸ್‌ಗಳನ್ನು ಡಿಜಿಸಿಇಟಿ-2024 ಪರೀಕ್ಷೆಗೆ ಸೇರ್ಪಡೆ ಮಾಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಕ್ಕೆ ಸೂಚನೆ ನೀಡಿದೆ. 2021-22ರ ಸಾಲಿನಲ್ಲಿ ಆರಂಭಗೊಂಡಿರುವ ಈ ಹೊಸ ಡಿಪ್ಲೋಮಾ ಕೋರ್ಸ್‌ಗಳಿಗೆ ಪ್ರವೇಶ ಪಡೆದು ಮೂರು ವರ್ಷಗಳ ಡಿಪ್ಲೋಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳು …

Read More »

ಪ್ರಜ್ವಲ್‌ ರೇವಣ್ಣ ಪತ್ತೆಗಾಗಿ ಎಸ್‌ಐಟಿ ತಂಡ ಹುಡುಕಾಟ, ಖಚಿತತೆ ಸಿಕ್ಕಿಲ್ಲ

ಬೆಂಗಳೂರು: ಹಾಸನದ ಅಶ್ಲೀಲ ಪೆನ್‌ಡ್ರೈವ್‌ ಪ್ರಕರಣದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗಾಗಿ ವಿಶೇಷ ತನಿಖಾ ತಂಡವು (ಎಸ್‌ಐಟಿ) ತಲಾಶ್‌ ಚುರುಕುಗೊಳಿಸಿದ್ದು, ಜರ್ಮನಿಯ ಕೆಲವು ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದ್ದಾರೆ ಎಂದು ತಿಳಿದು ಬಂದಿದೆ. ಸಂಸದ ಪ್ರಜ್ವಲ್‌ ರೇವಣ್ಣ ಪತ್ತೆಗಾಗಿ ಎಸ್‌ಐಟಿ ತಂಡವು ಹುಡುಕಾಟ ಮುಂದುವರೆಸಿದೆ. ಈ ನಿಟ್ಟಿನಲ್ಲಿ ಜರ್ಮನಿಯ ಕೆಲ ಅಧಿಕಾರಿಗಳ ಸಂಪರ್ಕ ಸಾಧಿಸಿರುವ ಎಸ್‌ಐಟಿ ಅವರಿಂದ ಮಾಹಿತಿ ಕಲೆ ಹಾಕುತ್ತಿದೆ. ಆದರೆ, ನಿಖರವಾಗಿ ಪ್ರಜ್ವಲ್‌ ರೇವಣ್ಣ ವಾಸಿಸುತ್ತಿರುವ ಪ್ರದೇಶದ ಕುರಿತು ಖಚಿತತೆ …

Read More »