Breaking News

Monthly Archives: ಮೇ 2024

ಮೊಸಳೆಗಳಿವೆ ಎಚ್ಚರಿಕೆ!

ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಮನುಷ್ಯ ಮತ್ತು ಮೊಸಳೆಗಳ ಸಂಘರ್ಷ ಬೇಸಿಗೆಯಲ್ಲಿ ಅಧಿಕ. ಕೃಷ್ಣಾ ನದಿಯಲ್ಲಿ ನೀರು ಕಡಿಮೆ ಆದ ಕೂಡಲೇ ಆಹಾರ ಅರಸಿ ದಡಕ್ಕೆ ಬರುವ ಮೊಸಳೆಗಳನ್ನು ಅಲ್ಲಿಯ ಜನರು ಏನು ಮಾಡುತ್ತಾರೆ? ನದಿಯಿಂದ ದಡಕ್ಕೆ ಮೊಸಳೆ ಬಂದಿದೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ದೊಡ್ಡ ಗುಂಪೇ ಸೇರುತ್ತದೆ. ಹೊರ ಬಂದ ಮೊಸಳೆಯನ್ನು ಭಯದಿಂದಾಗಿ ಕಲ್ಲು, ಬಡಿಗೆಗಳಿಂದ ಹೊಡೆದು ಇಲ್ಲವೆ ಟ್ರ್ಯಾಕ್ಟರ್‌ ಹಾಯಿಸಿ ಕೊಂದ ಉದಾಹರಣೆಗಳು ಇವೆ. ಆದರೆ, ಈಗ ಪರಿಸ್ಥಿತಿ …

Read More »

ಖಾನಾಪುರ: ಪ್ರವಾಸಿ ತಾಣವಾಗಲಿ ಸಣ್ಣಹೊಸೂರಿನ ದೊಡ್ಡ ಕೆರೆ, ಬರಗಾಲದಲ್ಲೂ ಜಲಪೂರಣ

ಖಾನಾಪುರ: ತಾಲ್ಲೂಕಿನ ಹಲವೆಡೆ ಮಳೆಯ ಕೊರತೆಯ ಪರಿಣಾಮ ಈ ಸಲದ ಬೇಸಿಗೆಯಲ್ಲಿ ಎಲ್ಲೆಡೆ ಜಲಕ್ಷಾಮ ತಲೆದೋರಿದೆ. ಪ್ರಾಣಿ- ಪಕ್ಷಿಗಳು, ಜಲಚರಗಳಿಗೂ ಕುಡಿಯುವ ನೀರಿನ ತೊಂದರೆ ಉದ್ಭವಿಸಿದೆ. ಆದರೆ ಪಟ್ಟಣದಿಂದ 8 ಕಿ.ಮೀ ದೂರದಲ್ಲಿರುವ ಸಣ್ಣ ಹೊಸೂರು ಗ್ರಾಮದ ವಿಶಾಲವಾದ ಕೆರೆ ನೀರಿನಿಂದ ತುಂಬಿ ಕಂಗೊಳಿಸುತ್ತಿದೆ. ಇದನ್ನು ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣ ಮಾಡಬೇಕಾದ ಅವಶ್ಯಕತೆ ಇದೆ. ಈ ಕೆರೆಯಲ್ಲಿ ನೀರಿನ ಸಂಗ್ರಹದ ಪರಿಣಾಮ ಅಂಚಿನಲ್ಲಿ ನೂರಾರು ಬಿಳಿ ಕೊಕ್ಕರೆ, ರಾಜಹಂಸ, ಪಾರಿವಾಳ, …

Read More »

ಹಿಂದೂಗಳನ್ನು ರಕ್ಷಿಸುವ ಪಕ್ಷಗಳನ್ನು ಆಯ್ಕೆ ಮಾಡಿ: ದಿಲೀಪ ಪರಾಂಡೆ

ಬೆಳಗಾವಿ: ‘ಕರ್ನಾಟಕ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ವಿವಿಧೆಡೆ ಅಧಿಕಾರದಲ್ಲಿರುವ ಬಿಜೆಪಿ ಹೊರತಾದ ಪಕ್ಷಗಳು, ಮುಸ್ಲಿಂ ತುಷ್ಟೀಕರಣ ಮಾಡುತ್ತಿವೆ. ಹಾಗಾಗಿ ಎಲ್ಲ ರಾಜ್ಯಗಳಲ್ಲೂ ಹಿಂದೂಗಳ ರಕ್ಷಣೆ ಮಾಡುವ ಮತ್ತು ಹಿಂದುತ್ವ ಪ್ರತಿಪಾದಿಸುವ ಪಕ್ಷಗಳನ್ನು ಆಯ್ಕೆ ಮಾಡಬೇಕು’ ಎಂದು ವಿಶ್ವ ಹಿಂದೂ ಪರಿಷತ್‌ ಅಖಿಲ ಭಾರತೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ದಿಲೀಪ ಪರಾಂಡೆ ಹೇಳಿದರು.   ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ನವರು ಮಾಡುತ್ತಿರುವ ಮುಸ್ಲಿಂ ತುಷ್ಟೀಕರಣದಿಂದ ಹಿಂದೂಗಳಿಗೆ ಅಪಾಯವಿದೆ. …

Read More »

ನೀರು ಬಿಡುಗಡೆಗೆ ಮಹಾರಾಷ್ಟ್ರ ‌ಡಿಸಿಎಂ ಫಡ್ನವಿಸ್‌ಗೆ ಜೊಲ್ಲೆ ಮನವಿ

ಚಿಕ್ಕೋಡಿ: ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮುಂತಾದವರು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಮುಂಬೈನಲ್ಲಿ ಭೇಟಿ ಮಾಡಿ ಕೃಷ್ಣಾ, ವೇದಗಂಗಾ, ಘಟಪ್ರಭಾ ನದಿಗಳಿಗೆ ನೀರು ಬಿಡುಗಡೆ ಮಾಡುವಂತೆ ಶನಿವಾರ ಮನವಿ ಮಾಡಿದರು. ‌ ರಾಜ್ಯದಲ್ಲಿ ಮಳೆ ಇಲ್ಲದದ್ದರಿಂದ ಕೂಡಲೇ ಕೃಷ್ಣಾ ಹಾಗೂ ಉಪನದಿಗಳಿಗೆ ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ನೀರು ಬಿಡುಗಡೆ ಮಾಡಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡಬೇಕು ಎಂದು ವಿನಂತಿಸಿಕೊಂಡರು. …

Read More »

ಬೆಳಗಾವಿ: ಶತಮಾನೋತ್ಸವ ಕಾರ್ಯಕ್ರಮ ಸಂಪನ್ನ

ಬೆಳಗಾವಿ: ಇಲ್ಲಿನ ಖಾಸಬಾಗದ ಉಪ್ಪಾರ ಗಲ್ಲಿಯಲ್ಲಿ ನಾಲ್ಕು ದಿನ ವೈಭವದಿಂದ ನಡೆದ ಬನಶಂಕರಿ ದೇವಸ್ಥಾನದ ಶತಮಾನೋತ್ಸವ ಕಾರ್ಯಕ್ರಮ ಭಾನುವಾರ ಸಂಪನ್ನಗೊಂಡಿತು. ಜಾತ್ರೆಯ ಕೊನೆಯ ದಿನ ಬೆಳಿಗ್ಗೆ ಮಹಾಕುಂಭಾಭಿಷೇಕ, ದೀಪಾರಾಧನೆ, ಮಹಾಮಂಗಳಾರತಿ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ಸಾವಿರಾರು ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ಸರದಿ ಸಾಲಿನಲ್ಲಿ ನಿಂತು, ಬನಶಂಕರಿ ದೇವಿ ದರ್ಶನಾಶೀರ್ವಾದ ಪಡೆದುಕೊಂಡರು. ತಮ್ಮ ಇಷ್ಟಾರ್ಥ ಈಡೇರಿದ್ದರಿಂದ ಕೆಲವರು ದೇವಿಗೆ ಸೀರೆ, ಚಿನ್ನಾಭರಣ …

Read More »

ಬಸವಣ್ಣ ಪಾವಿತ್ರ್ಯತೆ ಕಲಿಸಿದ ಪುರುಷೋತ್ತಮ: ಸಿದ್ಧಬಸವ ದೇವರು

ಬೆಳಗಾವಿ: ‘ಸಮಾನತೆ ತತ್ವ, ಸಾಮಾಜಿಕ ಕ್ರಾಂತಿ ಹಾಗು ಅನುಭವ ಮಂಟಪದ ಮುಖಾಂತರ ಪ್ರಜಾಪ್ರಭುತ್ವದ ಕಲ್ಪನೆ ನೀಡಿ, ಸೂಳೆ ಸಂಕವ್ವ ಸೇರಿದಂತೆ ಎಲ್ಲ ವೃತ್ತಿಯವರಿಗೆ ಸಮಾನವಾಗಿ ಧಾರ್ಮಿಕ ಸ್ವಾತಂತ್ರ್ಯ ನೀಡಿದ ಬಸವಣ್ಣ ಎಲ್ಲರಿಗೂ ಪಾವಿತ್ರ್ಯತೆ ಕಲಿಸಿದ ಪುರುಷೋತ್ತಮ’ ಎಂದು ಯಮಕನಮರಡಿಯ ಹುಣಸಿಕೊಳ್ಳ ಮಠದ ಸಿದ್ಧಬಸವ ದೇವರು ಶ್ಲಾಘಿಸಿದರು.   ಇಲ್ಲಿನ ಶಿವಬಸವ ನಗರದ ಪ್ರಭುದೇವ ಸಭಾಗೃಹದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ನಾಗನೂರು ರುದ್ರಾಕ್ಷಿಮಠದ ಸಹಯೋಗದಲ್ಲಿ ಬಸವ ಜಯಂತ್ಯುತ್ಸವದ ಎರಡನೇ ದಿನವಾದ …

Read More »

ಚಿಕ್ಕೋಡಿ: ಯಮ ಸಲ್ಲೇಖನ ವ್ರತ ಕೈಗೊಂಡ ಮುನಿ

ಚಿಕ್ಕೋಡಿ(ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಕೋಥಳಿಯ ದೇಶಭೂಷಣ ಮುನಿಗಳ ಜೈನ ಆಶ್ರಮದಲ್ಲಿ ಸಮಾಧಿ ಸೇನ ಮುನಿಗಳು(79) ಮೇ 17ರಿಂದ ನಾಲ್ಕು ಪ್ರಕಾರದ ಆಹಾರ(ಲೇಹ, ಪೇಯ, ಸ್ವಾದ್ಯ ಮತ್ತು ಖಾದ್ಯ) ತ್ಯಾಗ ಮಾಡಿ, ಯಮ ಸಲ್ಲೇಖನ ವ್ರತ ಕೈಗೊಂಡಿದ್ದಾರೆ. ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ಅಥಣಿ ತಾಲ್ಲೂಕು, ಪಕ್ಕದ ಮಹಾರಾಷ್ಟ್ರದ ಕೊಲ್ಹಾಪೂರ ಮತ್ತು ಸಾಂಗ್ಲಿ ಜಿಲ್ಲೆಯಿಂದ ಅಪಾರ ಸಂಖ್ಯೆಯಲ್ಲಿ ಜನರು ಆಶ್ರಮಕ್ಕೆ ಆಗಮಿಸಿ, ಮುನಿಗಳ ದರ್ಶನ ಪಡೆಯುತ್ತಿದ್ದಾರೆ.   ಗದಗ ಜಿಲ್ಲೆಯ ಗಜೇಂದ್ರಗಡದವರಾದ ಸಮಾಧಿ …

Read More »

ಮುಂಡರಗಿ: ಬಿಸಿಲಿನಿಂದ ಬೆಂದಿದ್ದ ಜನಕ್ಕೆ ತಂಪೆರೆದ ವರುಣ

ಮುಂಡರಗಿ: ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಶನಿವಾರ ರಾತ್ರಿ ಹಾಗೂ ಭಾನುವಾರ ಸಂಜೆ ಸಾಧಾರಣ ಮಳೆ ಸುರಿಯಿತು. ಕಳೆದ ಹಲವು ದಿನಗಳಿಂದ ಮಳೆಗಾಗಿ ಹಂಬಲಿಸುತ್ತಿದ್ದ ಜನರ ಮುಖದಲ್ಲಿ ಸಾಧಾರಣವಾಗಿ ಸುರಿದ ಮಳೆಯು ಮಂದಹಾಸ ಮೂಡಿಸಿತು. ಭಾನುವಾರ ಸಂಜೆ 4ಗಂಟೆಗೆ ಆರಂಭವಾದ ಮಳೆಯು ಸುಮಾರು ಮುಕ್ಕಾಲು ಗಂಟೆಗಳ ಕಾಲ ಸುರಿಯಿತು. ಮಳೆಯ ರಭಸಕ್ಕೆ ಹೂತು ಹೋಗಿದ್ದ ಪಟ್ಟಣದ ಬಹುತೇಕ ಚರಂಡಿಗಳ ಹೂಳೆಲ್ಲಿ ಕಿತ್ತುಹೋಯಿತು. ಪಟ್ಟಣದ ಹೊರವಲಯದ ಖಾಲಿ ನಿವೇಶನಗಳು ಹಾಗೂ …

Read More »

ಅಧೀರ್ ರಂಜನ್ ಬಗ್ಗೆ ಹೇಳಿಕೆ: ಕೋಲ್ಕತ್ತದಲ್ಲಿ ಖರ್ಗೆ ಪೋಸ್ಟರ್‌ಗೆ ಮಸಿ

ಕೋಲ್ಕತ್ತ: ಇಂಡಿಯಾ ಒಕ್ಕೂಟಕ್ಕೆ ಮಮತಾ ಬ್ಯಾನರ್ಜಿ ಅವರು ಸೇರುವ ಬಗ್ಗೆ ಅಧೀರ್ ರಂಜನ್ ಚೌಧರಿ ಅವರು ನಿರ್ಧರಿಸುವುದಿಲ್ಲ ಎಂದು ಹೇಳಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಚಿತ್ರಕ್ಕೆ ಕೋಲ್ಕತ್ತದಲ್ಲಿ ಮಸಿ ಬಳಿಯಲಾಗಿದೆ. ಇಲ್ಲಿರುವ ಕಾಂಗ್ರೆಸ್‌ನ ರಾಜ್ಯ ಕಚೇರಿಯ ಮುಂಭಾದಲ್ಲಿರುವ ಹಲವು ಪೋಸ್ಟರ್‌ಗಳಲ್ಲಿ ಖರ್ಗೆ ಅವರ ಚಿತ್ರಕ್ಕೆ ಮಸಿ ಬಳಿಯಲಾಗಿದೆ. ಖರ್ಗೆ ಅವರ ಚಿತ್ರವಿದ್ದ ಪೋಸ್ಟರ್‌ ಮೇಲೆ ‘ತೃಣಮೂಲ ಕಾಂಗ್ರೆಸ್‌ನ ಏಜೆಂಟ್‌’ ಎಂದು ಬರೆಯಲಾಗಿದೆ. ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅಧೀರ್ …

Read More »

ಹುಬ್ಬಳ್ಳಿ: ಆತ್ಮಹತ್ಯೆಗೆ ಯತ್ನಿಸಿದ್ದ ಅಂಜಲಿ ಸಹೋದರಿ ಗುಣಮುಖ

ಹುಬ್ಬಳ್ಳಿ: ಫಿನಾಯಿಲ್ ಸೇವಿಸಿ ಶನಿವಾರ ಆತ್ಮಹತ್ಯೆಗೆ ಯತ್ನಿಸಿದ್ದ, ಈಚೆಗೆ ಕೊಲೆಯಾದ ಇಲ್ಲಿನ ವೀರಾಪುರ ಓಣಿಯ ನಿವಾಸಿ ಅಂಜಲಿ ಅವರ ಸಹೋದರಿ ಯಶೋಧಾಗೆ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಗುಣಮುಖರಾದ ಯಶೋಧಾ ಭಾನುವಾರ ಮನೆಗೆ ಮರಳಿದ್ದಾರೆ. ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಮಠಾಧೀಶರ ಪ್ರತಿಭಟನೆ ವೇಳೆ ಯಶೋಧಾ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿತ್ತು. ಆದರೆ, ತಡರಾತ್ರಿ ಫಿನಾಯಿಲ್‌ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ‘ಅಕ್ಕ ಅಂಜಲಿಯನ್ನು ಕೊಲೆ …

Read More »