Breaking News

Daily Archives: ಮೇ 21, 2024

ಆಟವಾಡುತ್ತಿದ್ದವಳ ಕಿತ್ತು ತಿಂದ ಬೀದಿ ನಾಯಿ; ರಕ್ತಸ್ರಾವವಾಗಿ 4 ವರ್ಷದ ಬಾಲಕಿ ಸಾವು

ರಾಯಚೂರು: ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯ ಮೇಲೆ ಬೀದಿ ನಾಯಿಯೊಂದು ದಾಳಿ (Dog Attack) ನಡೆಸಿ ಅಟ್ಟಾಡಿಸಿ ಕಿತ್ತು ತಿಂದಿತ್ತು. ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ನಾಲ್ಕು ವರ್ಷದ ಬಾಲಕಿ ಇದೀಗ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ರಾಯಚೂರಿನ ಕೊರವಿಹಾಳ ಗ್ರಾಮದಲ್ಲಿ ಬೀದಿ ನಾಯಿ ದಾಳಿಗೆ ನಾಲ್ಕು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಲಾವಣ್ಯ(4) ನಾಯಿ ಕಡಿತಕ್ಕೆ ಬಲಿಯಾದವಳು. ಕೊರವಿಹಾಳ ಗ್ರಾಮದ ಕೀರಲಿಂಗ ಎಂಬುವವರ ಮಗಳು ಲಾವಣ್ಯ ಕಳೆದ ಶನಿವಾರ ಮೃತಪಟ್ಟಿದ್ದು, ಘಟನೆಯು ತಡವಾಗಿ ಬೆಳಕಿಗೆ ಬಂದಿದೆ. …

Read More »

ಬೆಳ್ಳಂ ಬೆಳಗ್ಗೆ ಶಿರಾಡಿ ಘಾಟಿಯಲ್ಲಿ ಭೀಕರ ಅಪಘಾತ; ತಾಯಿ ಮಗ ಮೃತ್ಯು

ಮಂಗಳೂರು: ಬೆಂಗಳೂರಿನಿಂದ ಮಂಗಳೂರು ಕಡೆಗೆ ಒಂದೇ ಕುಟುಂಬದ ಸದಸ್ಯರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರೊಂದು ಶಿರಾಡಿ ಘಾಟಿಯಲ್ಲಿ ಭೀಕರ ಅಪಘಾತಗೊಂಡ ಪರಿಣಾಮ ತಾಯಿ-ಮಗ ಮೃತಪಟ್ಟ ಘಟನೆ ಇಂದು (ಮೇ.21) ಬೆಳ್ಳಂಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಇತರರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಮೃತಪಟ್ಟವರನ್ನು ಪಾಣೆಮಂಗಳೂರು ಬೊಂಡಾಲದ ಶಬ್ಬೀರ್ ಎಂಬವರ ಮಗ ಮೊಹಮ್ಮದ್ ಶಫೀಕ್(20) ಹಾಗೂ ಅವರ ಪತ್ನಿ ಸಫಿಯಾ(50) ಎಂದು ಗುರುತಿಸಲಾಗಿದೆ. …

Read More »

ಕೌಜಲಗಿ: ನನಸಾಗದ ಸಿಪಿಐ ಕಚೇರಿ, ಪೊಲೀಸ್ ಠಾಣೆ

ಕೌಜಲಗಿ: ಗೋಕಾಕ ತಾಲ್ಲೂಕಿನ ಅರಭಾವಿ ವಿಧಾನಸಭಾ ಮತಕ್ಷೇತ್ರದ ಕೌಜಲಗಿ ದೊಡ್ಡ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಹಾಗೂ ಭೌಗೋಳಿಗವಾಗಿ ಇದು ತಾಲ್ಲೂಕು ಕೇಂದ್ರವಾಗಿ ಅರ್ಹತೆ ಹೊಂದಿದೆ. ಈ ಪ್ರದೇಶದಲ್ಲಿ ಅಪರಾಧ, ಅಪಘಾತಗಳ ಸಂಖ್ಯೆಯೂ ಹೆಚ್ಚು. ಹೊಸ ಪೊಲೀಸ್‌ ಠಾಣೆ ಮತ್ತು ಸಿಪಿಐ ಕಚೇರಿ ಮಂಜೂರು ಮಾಡಬೇಕು ಎಂಬ ಬೇಡಿಕೆ ಮಾತ್ರ ಇನ್ನೂ ಈಡೇರಿಲ್ಲ. ಅಂದಾಜಿನ ಪ್ರಕಾರ ಈಗ 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ವ್ಯಾಪಾರ ವಹಿವಾಟಿಗಾಗಿ ಪಟ್ಟಣದ ಸುತ್ತಲಿನ …

Read More »

ಕಾಯಕಲ್ಪಕ್ಕೆ ಕಾದಿದೆ ಶತಮಾನದ ಕೆರೆ

ಚಿಕ್ಕೋಡಿ: ‘ಕೆರೆಯನ್ನು ಕಟ್ಟಿಸು. ಬಾವಿಯನ್ನು ಸವೆಸು….’ ಎಂದು ಕನ್ನಡ ಶಾಸನವೊಂದರಲ್ಲಿ ಬರೆದಿರುವುದು ಎಲ್ಲರಿಗೂ ಗೊತ್ತಿದೆ. ಆದರೆ, ಈಗ ಕೆರೆ ಕಟ್ಟಿಸುವುದಿರಲಿ, ಇರುವ ಕೆರೆ ಸಂರಕ್ಷಿಸುವ ಗೋಜಿಗೆ ಯಾರೂ ಹೋಗುತ್ತಿಲ್ಲ ಎಂಬುದಕ್ಕೆ ಪಟ್ಟಣದ ಹೊರವಲಯದಲ್ಲಿರುವ ಹಾಲಟ್ಟಿ ಕೆರೆ ಸಾಕ್ಷಿ. ಲೋಕೋಪಯೋಗಿ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಗೆ ಸೇರಿದ 39 ಎಕರೆ ಜಾಗದಲ್ಲಿ ಹರಡಿಕೊಂಡಿರುವ ಹಾಲಟ್ಟಿ ಕೆರೆ ಚಿಕ್ಕೋಡಿ ಪಟ್ಟಣದ ಪ್ರಮುಖ ಹಾಗೂ ಏಕೈಕ ಕೆರೆ. ಶತಮಾನದ ಹಿಂದಿನ ಈ ಕೆರೆಗೆ ಆಗೊಮ್ಮೆ, …

Read More »

ಮೈಸೂರಿನಲ್ಲಿ ತಂಬಾಕು ಬೆಳೆಗಾರರಿಗೆ ಸಂಕಷ್ಟ ತಂದ ಮಳೆ; ರೈತರ ಗತಿಯೇನು..?

ಮೈಸೂರು, ಮೇ 21: ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಮಳೆ ಬಾರದೆ ಸಕಾಲದಲ್ಲಿ ತಂಬಾಕು ಕೃಷಿ ಆರಂಭಿಸಲು ಅಡಚಣೆ ಮಾಡಿದ ಮಳೆ ಇದೀಗ ಕಷ್ಟಪಟ್ಟು ಬೋರ್ ವೆಲ್ ನೀರಿನ ಮೂಲಕ ಬೆಳೆ ಬೆಳೆದ ಬೆಳೆಗಾರರಿಗೂ ಸಂಕಷ್ಟ ತಂದಿದೆ. ಕಾರಣ ಪೂರ್ವ ಮುಂಗಾರು ಮಳೆಯ ಅಬ್ಬರಕ್ಕೆ ಬಹುತೇಕ ಕಡೆ ಜಮೀನಿಗೆ ನೀರು ನುಗ್ಗಿ ಕೃಷಿ ನೆಲಕಚ್ಚಿವೆ. ಪಿರಿಯಾಪಟ್ಟಣ, ಹುಣಸೂರು, ಕೆ.ಆರ್.ನಗರ ತಾಲೂಕು ವ್ಯಾಪ್ತಿಯಲ್ಲಿ ತಂಬಾಕು ಕೃಷಿಗೆ ಮುಂದಾಗಿದ್ದ ಬೆಳೆಗಾರರು ಈಗ ಸಂಕಷ್ಟ ಎದುರಿಸುವಂತಾಗಿದೆ. ಕಳೆದ …

Read More »

ಧಾರವಾಡ ಜಿಲ್ಲೆಗೆ ಮೂರು ದಿನ ಗುಡು ಸಹಿತ ಭಾರೀ ಮಳೆ ಸಂಭವ:?

ಧಾರವಾಡ, ಮೇ 21: ವಿದ್ಯಾಕಾಶಿ ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಆಗುತ್ತಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಹವಾಮಾನದಲ್ಲಿನ ಬದಲಾವಣೆಗಳಿಂದ ಮುಂದಿನ ಕೆಲವು ದಿನಗಳ ಕಾಲ ಜೋರು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.   ಹುಬ್ಬಳ್ಳಿ, ಕಲಘಟಗಿ ಸೇರಿದಂತೆ ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ಕಳೆದೊಂದು ವಾರದಿಂದ ಉತ್ತಮ ಮಳೆ ಆಗುತ್ತಿದೆ. ಬಿಸಿಲಿನಿಂದ ರೋಸಿ ಹೋಗಿದ್ದ ಜನರಿಗೆ ಮಳೆರಾಯ ಆಗಾಗ ತಂಪೆರೆಯುತ್ತಿದ್ದಾನೆ. ಇದೀಗ ಮುಂದಿನ …

Read More »

ಕರೂರ್‌ ವೈಶ್ಯ ಬ್ಯಾಂಕ್‌ ಲಾಭದಲ್ಲಿ ಶೇ 34ರಷ್ಟು ಏರಿಕೆ

ಕರೂರ್‌ ವೈಶ್ಯ ಬ್ಯಾಂಕ್‌ ಲಾಭದಲ್ಲಿ ಶೇ 34ರಷ್ಟು ಏರಿಕೆ ಬೆಂಗಳೂರು: ಕರೂರ್‌ ವೈಶ್ಯ ಬ್ಯಾಂಕ್‌ 2023-24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹456 ಕೋಟಿ ನಿವ್ವಳ ಲಾಭ ಗಳಿಸಿದೆ. 2022-23ರ ಇದೇ ಅವಧಿಯಲ್ಲಿ ₹338 ಕೋಟಿ ಲಾಭ ಗಳಿಸಿತ್ತು. ಈ ಲಾಭಕ್ಕೆ ಹೋಲಿಸಿದರೆ ಶೇ 34.9ರಷ್ಟು ಏರಿಕೆಯಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ. ವರಮಾನವು ₹739 ಕೋಟಿಯಿಂದ ₹867 ಕೋಟಿಗೆ ಹೆಚ್ಚಳವಾಗಿದೆ. ನಿವ್ವಳ ಬಡ್ಡಿ ಆದಾಯವು ಶೇ 11.5ರಷ್ಟು ಏರಿಕೆಯಾಗಿದ್ದು, ₹893 ಕೋಟಿಯಿಂದ …

Read More »

ಅಧಿಕಾರ ಸಿಗದೆ ಕುಮಾರಸ್ವಾಮಿ ಕೈ ಹೊಸಕಿಕೊಳ್ಳುತ್ತಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯ

ಬೆಂಗಳೂರು : “ಕುಮಾರಸ್ವಾಮಿ ಅವರು ಕಿಂಗ್ ಮೇಕರ್ ಆಗುತ್ತೇನೆ ಎಂದುಕೊಂಡಿದ್ದರು. ನನ್ನ ಅಧ್ಯಕ್ಷತೆಗೆ ಜನರು 136 ಸ್ಥಾನ, ಅವರಿಗೆ 19 ಸ್ಥಾನ ನೀಡಿದ್ದಾರೆ. ಈಗ ಅಧಿಕಾರ ಸಿಗದೆ ಕೈ, ಕೈ ಹೊಸಕಿಕೊಳ್ಳುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವ್ಯಂಗ್ಯವಾಡಿದರು. ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದದಲ್ಲಿ ಡಿ.ಕೆ.ಶಿವಕುಮಾರ್ ರಾಜಿನಾಮೆ ನೀಡಲಿ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆಗೆ ಅವರು ತಿರುಗೇಟು ನೀಡಿದ ಅವರು, “ಅಸೂಯೆಗೆ ಎಲ್ಲಾದರೂ ಮದ್ದಿದೆಯೇ? ಶಕ್ತಿ ಕಳೆದುಕೊಂಡಿದ್ದೇವೆ ಎಂದು …

Read More »

ಸಹೋದರಿ ಮೇಲೆಯೇ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಅಣ್ಣಂದಿರಿಬ್ಬರು ಅರೆಸ್ಟ್

ತಮ್ಮ 14 ವರ್ಷದ ಸಹೋದರಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರು ಸಹೋದರರನ್ನು ಉತ್ತರಪ್ರದೇಶದ ಗಾಜೀಯಾಬಾದ್ ಪೊಲೀಸರು ಬಂಧಿಸಿದ್ದಾರೆ. ತಿಲಾ ಮೋರ್ಹ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಭಾನುವಾರ ಸಹೋದರರನ್ನು ಬಂಧಿಸಲಾಗಿದೆ. ದೂರಿನ ಪ್ರಕಾರ ಇಬ್ಬರು ಸಹೋದರರು ತಮ್ಮ ಸಹೋದರಿ 8 ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಕಳೆದ ಒಂದು ವರ್ಷದಿಂದ ಆಕೆಯನ್ನು ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದು, ಈ ಕಾರಣದಿಂದ ಆಕೆ ಗರ್ಭಿಣಿಯಾಗಿದ್ದಳು. ಶನಿವಾರ …

Read More »

1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಅರ್ಜಿ ಶುಲ್ಕ ನಾಳೆ ಕೊನೆಯ ದಿನ!

ಬೆಂಗಳೂರು: ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದಲ್ಲಿರುವ ಒಟ್ಟು 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 18 ಕೊನೆ ದಿನ. ಆದರೆ ಶುಲ್ಕ ಪಾವತಿಸಲು ಮೇ 22ರವರೆಗೆ ಅವಕಾಶ ನೀಡಲಾಗಿದೆ. ಹುದ್ದೆ ಹೆಸರು : ಗ್ರಾಮ ಆಡಳಿತ ಅಧಿಕಾರಿ (VA – ಗ್ರಾಮ ಲೆಕ್ಕಿಗ) ಹುದ್ದೆಗಳ …

Read More »