Breaking News

Daily Archives: ಮೇ 16, 2024

ಸಿಇಟಿ ಪರೀಕ್ಷೆಯಲ್ಲಿ ಸಾಲು ಸಾಲು ಎಡವಟ್ಟು,

ಬೆಂಗಳೂರು, (ಮೇ 16): ಸಿಇಟಿ ಪರೀಕ್ಷೆಯಲ್ಲಾದ(CET Exam) ಸಾಲು ಸಾಲು ಎಡವಟ್ಟಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (Karnataka Examination Authority) ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ (Ramya) ಅವರ ತಲೆದಂಡವಾಗಿದೆ. ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ 51ಕ್ಕೂ ಹೆಚ್ಚು ಪಠ್ಯೇತರ ಪ್ರಶ್ನೆಗಳನ್ನು ಕೇಳುವ ಮೂಲಕ ವಿದ್ಯಾರ್ಥಿಗಳ, ಉಪನ್ಯಾಸಕರ ಮತ್ತು ಪೋಷಕರ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಕರ್ನಾಟಕ ಪರೀಕ್ಷ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಅವರನ್ನು ವರ್ಗಾವಣೆ ಮಾಡಿ …

Read More »

ಚಿತ್ರದುರ್ಗ: ಐವರ ಅಸ್ಥಿಪಂಜರ ಪತ್ತೆ,

ಚಿತ್ರದುರ್ಗ, ಮೇ.16: ನಗರದ ಚಳ್ಳಕೆರೆ (Challakere) ಗೇಟ್​ ಸಮೀಪದ ಜೈಲ್ ರಸ್ತೆಯಲ್ಲಿರುವ ಪಾಳುಬಿದ್ದ ಜಗನ್ನಾಥರೆಡ್ಡಿ ಎಂಬುವವರ ಮನೆಯಲ್ಲಿ 2023ರ ಡಿಸೆಂಬರ್ 28ರಂದುಐವರ ಅಸ್ಥಿಪಂಜರ(Skeleton) ಪತ್ತೆಯಾಗಿದ್ದವು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್(FSL) ರಿಪೋರ್ಟ್ ಬಂದಿದ್ದು, ಚಿತ್ರದುರ್ಗ ಪೊಲೀಸರ ಕೈ ಸೇರಿದೆ. ಈ ವರದಿಯಲ್ಲಿ ಸಾವಿನ ಕುರಿತು ಸತ್ಯಾಂಶ ಬಯಲಾಗಿದೆ. ಎಸ್ಪಿ ಹೇಳಿದ್ದಿಷ್ಟು ಇನ್ನು ಈ ಕುರಿತು ಮಾತನಾಡಿದ ಚಿತ್ರದುರ್ಗ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ, ‘ಚಿತ್ರದುರ್ಗದ ಮನೆಯೊಂದರಲ್ಲಿ ಐವರ ಅಸ್ಥಿಪಂಜರ …

Read More »

ಚಿಕ್ಕೋಡಿ ಸದಲಗಾದಲ್ಲಿ ಮೊಸಳೆ ದಾಳಿಗೆ ರೈತ ಬಲಿ

ಬೆಳಗಾವಿ, : ವೃದ್ಧ ರೈತರೊಬ್ಬರು ಮೊಸಳೆ ದಾಳಿಗೆ ಬಲಿಯಾದ ದಾರುಣ ಘಟನೆ ಚಿಕ್ಕೋಡಿ (Chikkodi) ತಾಲೂಕಿನ ದತ್ತವಾಡ-ಸದಲಗಾ ಬಳಿಯ ದೂದ್​​​​ಗಂಗಾ ನದಿ (Doodhganga river) ದಡದಲ್ಲಿ ಸಂಭವಿಸಿದೆ. ಮೃತರನ್ನು ಚಿಕ್ಕೋಡಿ ತಾಲೂಕಿನ ಸದಲಗಾ (Sadalga) ಗ್ರಾಮದ ನಿವಾಸಿ ಮಹಾದೇವ ಪುನ್ನಪ್ಪ ಖುರೆ (72) ಎಂದು ಗುರುತಿಸಲಾಗಿದೆ. ಶುಕ್ರವಾರ (ಮೇ 10ರಂದು) ಮಹಾದೇವ ಖುರೆ ನದಿ ತೀರದ ಪ್ರದೇಶದಲ್ಲಿನ ತಮ್ಮ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದರು. ಕೃಷಿ ಕೆಲಸ ಮುಗಿಸಿ ಸ್ನಾನ ಮಾಡಲು ನದಿಗೆ ತೆರಳಿದ್ದರು. …

Read More »

ಬತ್ತಿದ ಮಲಪ್ರಭೆ, ಈ ನಾಲ್ಕು ಜಿಲ್ಲೆಗೆ ಜಲಕಂಟಕ

ಬೆಳಗಾವಿ, ಮೇ.15: ಬೆಳಗಾವಿ(Belagavi) ಜಿಲ್ಲೆಯ ಕಣಕುಂಬಿ ಗ್ರಾಮದಲ್ಲಿ ಹುಟ್ಟುವ ಮಲಪ್ರಭಾ ನದಿ(Malaprabha River). ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ, ಬಾಗಲಕೋಟೆ ಜಿಲ್ಲೆಯ ಜೀವನದಿಯಾಗಿದೆ. ಈ ಭಾಗದ ರೈತರಿಗೆ ಮತ್ತು ಜನರ ಬದುಕು ಹಸನಾಗಿಸಿದ ನದಿ ಇದು. ಆದ್ರೆ ಈಮಲಪ್ರಭಾ ನದಿ ಇದೀಗಸಂಪೂರ್ಣವಾಗಿ ಬತ್ತಿ ಹೋಗಿದ್ದು, ನದಿ ಅಕ್ಕಪಕ್ಕದ ಗ್ರಾಮಗಳಿಗೆ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಅದರಲ್ಲೂ ಎಂ.ಕೆ ಹುಬ್ಬಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಬೋರ್​ವೆಲ್​ಗಳು ಬತ್ತಿ, ಕುಡಿಯಲು ನೀರು ಸಿಗುತ್ತಿಲ್ಲ. ಬೆಳೆಯೂ ಕೂಡ ಒಣಗಿ …

Read More »

ಸ್ಕ್ರೂಡ್ರೈವರ್​ನಿಂದ ಚುಚ್ಚಿ ಯುವಕನ ಬರ್ಬರ ಕೊಲೆ

ಬೆಳಗಾವಿ, ಮೇ.: ಸ್ಕ್ರೂಡ್ರೈವರ್​ನಿಂದ ಚುಚ್ಚಿ ಯುವಕನೋರ್ವನನ್ನ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಳಗಾವಿಯ ಮಹಾಂತೇಶನಗರದ ಬ್ರಿಡ್ಜ್ ಬಳಿ (ಮೇ.16) ಮಧ್ಯಾಹ್ನ ನಡೆದಿದೆ. ಬೆಳಗಾವಿ(Belagavi)ಯ ಗಾಂಧಿನಗರ ನಿವಾಸಿ ಇಬ್ರಾಹಿಂ ಗೌಸ್(22) ಕೊಲೆಯಾದ ಯುವಕ. ಪ್ರೇಯಸಿ ಜೊತೆಬೈಕ್​ನಲ್ಲಿ ಹೊರಟಿದ್ದ ಆಕೆಯ ಸಹೋದರನನ್ನ ಅಡ್ಡಗಟ್ಟಿದ ಆರೋಪಿ ಮುಜಾಮಿಲ್ ಸತ್ತಿಗೇರಿ, ಸ್ಕ್ರೂಡ್ರೈವರ್​ನಿಂದ ಇರಿದು ಪರಾರಿಯಾಗಿದ್ದ.   ಗಾಯಾಳು ಗೌಸ್​ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಬೆಳಗಾವಿಯ ಮಾಳಮಾರುತಿ ಪೊಲೀಸ್ …

Read More »

ಸರಣಿ ಅಪಘಾತ, ಬೈಕ್​ ಸವಾರ ಸಾವು

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿ ಗೇಟ್ ಬಳಿ ಸರಣಿ ಅಪಘಾತ ಸಂಭವಿಸಿದ್ದು, ಬಸ್​​ ಡಿಕ್ಕಿಯಾಗಿ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಸ್ ಹಿಂದೆ ಬರುತ್ತಿದ್ದ 2 ಕಾರು, ಮತ್ತೊಂದು ಬಸ್​ ಡಿಕ್ಕಿಯಾಗಿದ್ದು, ಹಲವರಿಗೆ ಗಾಯವಾಗಿದೆ. ಕೂಡಲೇ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಕುರಿತು ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Read More »

ಟಿಕೆಟ್ ತೋರಿಸಿ ಎಂದಿದ್ದಕ್ಕೆ ಟಿಸಿ(Ticket Collector) ಸೇರಿ ಐವರ ಮೇಲೆ ಮಾರಣಾಂತಿಕ ಹಲ್ಲೆ

ಬೆಳಗಾವಿ, ಮೇ.: ಟಿಕೆಟ್ ತೋರಿಸಿ ಎಂದಿದ್ದಕ್ಕೆ ಟಿಸಿ(Ticket Collector) ಸೇರಿ ಐವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಚಾಲುಕ್ಯ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಳಗಾವಿ(Belagavi) ಜಿಲ್ಲೆಯ ಖಾನಾಪುರ ತಾಲೂಕಿನ ಲೋಂಡಾ ಬಳಿ ನಡೆದಿದೆ. ನಾಲ್ವರು ಅಪರಿಚಿತ ಮುಸುಕುಧಾರಿಪ್ರಯಾಣಿಕರು ಸೇರಿಟಿಸಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ. ನಂತರ ಟಿಸಿ ಮತ್ತು ನಾಲ್ವರು ಪ್ರಯಾಣಿಕರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವ ನಾಲ್ವರಿಗೂ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ …

Read More »

ಜನ ಸಾಮಾನ್ಯರಿಗೆ ಬಿಗ್ ರಿಲೀಫ್ ; ಶುಗರ್, ಲಿವರ್ ಕಾಯಿಲೆ ಸೇರಿ ’41 ಔಷಧಿ’ಗಳ ಬೆಲೆ ಇಳಿಕೆ

ನವದೆಹಲಿ : ಮಧುಮೇಹ, ಹೃದಯ ಮತ್ತು ಯಕೃತ್ತಿನ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಾಮಾನ್ಯವಾಗಿ ಬಳಸುವ 41 ಔಷಧಿಗಳು ಮತ್ತು ಆರು ಸೂತ್ರೀಕರಣಗಳ ಬೆಲೆಯನ್ನ ಸರ್ಕಾರ ಕಡಿಮೆ ಮಾಡಿದೆ. ಆಂಟಾಸಿಡ್ಗಳು, ಮಲ್ಟಿವಿಟಮಿನ್ಗಳು ಮತ್ತು ಪ್ರತಿಜೀವಕಗಳು ಅಗ್ಗವಾಗಲಿವೆ ಎಂದು ಔಷಧೀಯ ಇಲಾಖೆ ಮತ್ತು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (NPPA) ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ವಿವಿಧ ಔಷಧಿಗಳ ಕಡಿಮೆ ಬೆಲೆಯ ಮಾಹಿತಿಯನ್ನ ತಕ್ಷಣದಿಂದ ಜಾರಿಗೆ ಬರುವಂತೆ ವಿತರಕರು ಮತ್ತು ಸ್ಟಾಕಿಸ್ಟ್ಗಳಿಗೆ ರವಾನಿಸಲು ಫಾರ್ಮಾ …

Read More »

RCB vs CSK: ಎರಡೂ ತಂಡಗಳಿಗೆ ಪ್ರಮುಖ ಆಲ್‌ರೌಂಡರ್‌ಗಳು ಅಲಭ್ಯ; ಹೇಗಿರಲಿದೆ ಪ್ಲೇಯಿಂಗ್ 11

ಐಪಿಎಲ್ 2024ರ ಪಂದ್ಯಾವಳಿಯಲ್ಲಿ ರಣ ರೋಚಕ ಪಂದ್ಯವೆಂದೇ ಬಿಂಬಿಸಲಾಗುತ್ತಿರುವ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಪಂದ್ಯ ಮೇ 18ರಂದು ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯವನ್ನು ಆಯೋಜಿಸಲಾಗುತ್ತಿದೆ. ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಅವರನ್ನು ಮೈದಾನದಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಎಂಎಸ್ ಧೋನಿ ಅವರು ಕೊನೆಯ ಬಾರಿಗೆ ಚಿನ್ನಸ್ವಾಮಿ ಆಡುತ್ತಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಎರಡೂ ತಂಡಗಳ ಅಭಿಮಾನಿಗಳು ಮೈದಾನದಲ್ಲಿ ಪಂದ್ಯ ನೋಡಲು ಕಾತರರಾಗಿದ್ದಾರೆ. ಪ್ಲೇ ಆಫ್‌ …

Read More »

ಸ್ಕಾಟ್ಲೆಂಡ್ ಜೆರ್ಸಿ ಮೇಲೆ ರಾರಾಜಿಸಿದ ‘ನಂದಿನಿ’ ಲೋಗೋ; CM ಸಿದ್ದು ಸಂತಸ

ಬೆಂಗಳೂರು: ಈ ಬಾರಿಯ ಟಿ20 ವಿಶ್ವಕಪ್ ನಲ್ಲಿ (T20 World Cup) ಕನ್ನಡ ರಾರಾಜಿಸಲಿದೆ. ಹೌದು, ಈ ಬಾರಿ ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್ ಗೆ KMF ನಂದಿನಿ ಸ್ಪಾನ್ಸರ್ ಶಿಪ್ ಪಡೆದುಕೊಂಡಿದೆ. ಸದ್ಯ ನಂದಿನಿ ಲೋಗೋ ಇರುವ ಅಧಿಕೃತ ಜೆರ್ಸಿಯನ್ನು ಸ್ಕಾಟ್ಲೆಂಡ್ (Scotland) ಬಿಡುಗಡೆ ಮಾಡಿದೆ. ಈ ಕುರಿತ ಫೋಟೋಗಳನ್ನು X ನಲ್ಲಿ ಅಧಿಕೃತವಾಗಿ ಸ್ಕಾಟ್ಲೆಂಡ್ ಕ್ರಿಕೆಟ್ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ. ಜೆರ್ಸಿಯ ಭುಜ ಮೇಲೆ ಕೆಎಂಎಫ್​ ಲೋಗೋ ರಾರಾಜಿಸುತ್ತಿದ್ದು, …

Read More »