Breaking News

Daily Archives: ಮೇ 15, 2024

ಚುನಾವಣೆ ಪ್ರಚಾರದ ವೇಳೆ ಚಿತ್ರ ಬಿಡಿಸಿ ಉಡುಗೊರೆ ನೀಡಿದ್ದ ಬಾಗಲಕೋಟೆ ಯುವತಿ: ಕೊಟ್ಟ ಮಾತಿನಂತೆ ಪತ್ರ ಬರೆದ ಪ್ರಧಾನಿ!

ಬಾಗಲಕೋಟೆ: ಚುನಾವಣಾ ಪ್ರಚಾರದ ವೇಳೆ ಪ್ರಧಾನಮಂತ್ರ ನರೇಂದ್ರ ಮೋದಿ ಹಾಗೂ ಅವರ ತಾಯಿ ಇರುವ ಭಾವಚಿತ್ರ ನೀಡಿದ್ದ ಬಾಗಲಕೋಟೆ ಯುವತಿ ನಾಗರತ್ನಾ ಬಸವರಾಜ ಮೇಟಿಯವರಿಗೆ ಮೋದಿ ಅವರು ಧನ್ಯವಾದ ತಿಳಿಸಿ, ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿ ಅವರು ಬಾಗಲಕೋಟೆಯಲ್ಲಿ ಭಾಷಣ ಮಾಡುವ ವೇಳೆ ನಾಗರತ್ನಾ ಅವರು ಫೋಟೋ ಹಿಡಿದು ನಿಂತಿದ್ದರು. ಇದನ್ನು ಗಮನಿಸಿದ ಮೋದಿಯವರು ತಮ್ಮ ಅಂಗರಕ್ಷಕ ಅಧಿಕಾರಿಗಳಿಂದ ಫೋಟೊ ತರಿಸಿಕೊಂಡು, ಪತ್ರ ಬರೆಯುವುದಾಗಿ ತಿಳಿಸಿದ್ದರು. ಇದೀಗ ಕೊಟ್ಟ ಮಾತಿನಂತೆ …

Read More »

ಮುಂಗಾರು ಆರಂಭವಾಗುವವರೆಗೂ ಹೆಚ್ಚಿನ ಗುಡುಗು- ಧೂಳು ಸಹಿತ ಬಿರುಗಾಳಿ: IMD ಎಚ್ಚರಿಕೆ

ಬೆಂಗಳೂರು: ನೈಋತ್ಯ ಮಾನ್ಸೂನ್ ಪ್ರಾರಂಭವಾಗುವವರೆಗೆ ಹೆಚ್ಚಿನ ಗುಡುಗು ಮತ್ತು ಧೂಳು ಸಹಿತ ಬಿರುಗಾಳಿ ಬೀಸುವ ಸಾಧ್ಯತೆಯಿದೆ, ಆದರೆ ರಾಜ್ಯ ಮತ್ತು ದೇಶದಲ್ಲಿ ಯಾವುದೇ ಶಾಖದ ಅಲೆ ಎಚ್ಚರಿಕೆ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮುಂಬಯಿಯ ಘಾಟ್‌ಕೋಪರ್ ನಲ್ಲಿ ಅಕ್ರಮ ಸಂಗ್ರಹಣೆಯು ಇಂಧನ ಮಾರಾಟ ಕೇಂದ್ರದ ಮೇಲೆ ಬಿದ್ದು ಕನಿಷ್ಠ ಹೋರ್ಡಿಂಗ್ ಬಿದ್ದು 14 ಮಂದಿಯನ್ನು ಬಲಿತೆಗೆದುಕೊಂಡ ಪ್ರಕರಣ ಉಲ್ಲೇಖಿಸಿರುವ , ಇಲಾಖೆಯು ಜನರಿಗೆ ಎಚ್ಚರಿಕೆ ನೀಡಿ ಸುರಕ್ಷಿತವಾಗಿರಲು ಸಲಹೆ …

Read More »

SSLC ಪರೀಕ್ಷೆ ಟಾಪರ್ ಸನ್ಮಾನಿಸಿ, ಬಹುಮಾನ ಪ್ರಕಟಿಸಿದ ಸಿಎಂ ಸಿದ್ದರಾಮಯ್ಯ!

ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌ ಪಡೆದ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತ ಹಾಗೂ ದ್ವಿತೀಯ ರ‍್ಯಾಂಕ್‌ ಪಡೆದ ಮಂಡ್ಯ ತಾಲೂಕಿನ ತುಂಬಿಗೆರೆ ಮೊರಾರ್ಜಿ ಶಾಲೆಯ ವಿದ್ಯಾರ್ಥಿ ನವನೀತ್ ಕೆ.ಸಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಸನ್ಮಾನಿಸಿದ್ದು, ಶುಭ ಹಾರೈಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, ಅಮೋಘ ಸಾಧನೆ ಮಾಡಿದ ಈ ವಿದ್ಯಾರ್ಥಿಗಳ ಮುಂದಿನ‌ …

Read More »

ಬೆಂಗಳೂರು: 21 ವರ್ಷದ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು: ನಗರದ ಖಾಸಗಿ ಕಾಲೇಜುವೊಂದರ ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದು 21 ವರ್ಷದ ಯುವಕ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಬಳ್ಳಾರಿ ಮೂಲದ ಸಿ ರಾಹುಲ್ ಎಂದು ಗುರುತಿಸಲಾಗಿದೆ. ಮೂರನೇ ವರ್ಷದ ಇಂಜಿನಿಯರಿಂಗ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಹುಲ್ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದ.   ಅವರ ತಂದೆ ವಿದೇಶದಲ್ಲಿ ಕೆಲಸ ಮಾಡುತ್ತಾರೆ ಎಂಬುದು ತಿಳಿದುಬಂದಿದೆ. ತಡವಾಗಿ ಬಂದಿದ್ದರಿಂದ ಪರೀಕ್ಷಾ ಕೊಠಡಿಯೊಳಗೆ ಪ್ರವೇಶ ನಿರಾಕರಿಸಿದ್ದರಿಂದ ವಿದ್ಯಾರ್ಥಿ ಮನನೊಂದು ಆತ್ಮಹತ್ಯೆಗೆ ಮುಂದಾಗಿದ್ದಾನೆ ಎನ್ನಲಾಗಿದೆ. ಆತ …

Read More »

ಸಿಎಸ್ ಆರ್ ಅನುದಾನ ಅಡಿಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ: ಡಿಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡಿರುವ ಟಾಪರ್‌ಗಳನ್ನು ಬೆಂಗಳೂರಿನಲ್ಲಿ ನಿನ್ನೆ ಮಂಗಳವಾರ ಸನ್ಮಾನಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜ್ಯದ ಅನುದಾನವನ್ನು ಅವಲಂಬಿಸದೆ ಸರ್ಕಾರಿ ಶಾಲೆಗಳನ್ನು ಸಿಎಸ್‌ಆರ್ ಅಡಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆಯಿದೆ ಎಂದು ಹೇಳಿದರು. ಎಸ್‌ಎಸ್‌ಎಲ್‌ಸಿ ಟಾಪರ್‌ಗಳಾದ ಪ್ರಥಮ ರ್ಯಾಂಕ್ ಪಡೆದ ಅಂಕಿತಾ ಮತ್ತು ತೃತೀಯ ರ್ಯಾಂಕ್ ಪಡೆದ ನವನೀತ್ ಅವರಿಗೆ ಕ್ರಮವಾಗಿ 5 ಲಕ್ಷ ಮತ್ತು 2 ಲಕ್ಷ ರೂಪಾಯಿಗಳನ್ನು …

Read More »

ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ; 1 ಸಾವಿರ ಹುದ್ದೆಗೆ 9 ಲಕ್ಷ ಅರ್ಜಿ!

ಬೆಂಗಳೂರು, ಮೇ 06: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳ ಬೇಡಿಕೆಯಂತೆ ಅರ್ಜಿ ಸಲ್ಲಿಕೆ ದಿನಾಂಕವನ್ನು ಮೇ 15ರ ತನಕ ವಿಸ್ತರಣೆ ಮಾಡಲಾಗಿದೆ. ಕಂದಾಯ ಇಲಾಖೆ ಉಳಿಕೆ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದಲ್ಲಿರುವ ಒಟ್ಟು 1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳನ್ನು ಕೆಇಎ ಮೂಲಕ ನೇಮಕ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ.

Read More »

KPSC: ಗಮನಿಸಿ ಕೆಪಿಎಸ್‌ಸಿ ನೇಮಕಾತಿಯಲ್ಲಿ 2 ಮಹತ್ವದ ಬದಲಾವಣೆ

ಬೆಂಗಳೂರು, ಮೇ 15: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿಯಲ್ಲಿ ಎರಡು ಬದಲಾವಣೆ ಮಾಡಿದೆ. ಈಗಾಗಲೇ ಹೊರಡಿಸಿರುವ ನೇಮಕಾತಿ ಅಧಿಸೂಚನೆಯಲ್ಲಿ ಈ ಬದಲಾವಣೆ ಆಗಿದ್ದು, ಅಭ್ಯರ್ಥಿಗಳು ಗಮನಿಸಬಹುದು. ಈ ಕುರಿತು ಫ್ಯಾನೇಂದ್ರ ಕುಮಾರ್ ಗಂಗ್ವಾರ್, ಪರೀಕ್ಷಾ ನಿಯಂತ್ರಕರು ಹಾಗೂ ಕಾರ್ಯದರ್ಶಿ (ಪ್ರ), ಕರ್ನಾಟಕ ಲೋಕ ಸೇವಾ ಆಯೋಗ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.ದಿನಾಂಕ15/03/2024ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಬದಲಾವಣೆ ವಿವರ: ಆಯೋಗದಿಂದ ಕಾಲ ಕಾಲಕ್ಕೆ …

Read More »

ಕೊಪ್ಪಳ | ಮತ್ತೆ ಮಳೆಯ ಸಿಂಚನ; ರೈತರಲ್ಲಿ ಮಂದಹಾಸ

ಕೊಪ್ಪಳ: ಬರಗಾಲ, ಬಿರುಬಿಸಿಲು ಹಾಗೂ ಬಿಸಿಗಾಳಿಗೆ ಬೇಸತ್ತು ಹೋಗಿದ್ದ ಜಿಲ್ಲೆಯ ಜನರಿಗೆ ಮೇಲಿಂದ ಮೇಲೆ ಸುರಿಯುತ್ತಿರುವ ಮಳೆ ಖುಷಿ ನೀಡಿದೆ. ಕೃಷಿ ಚಟುವಟಿಕೆಗೆ ಸಿದ್ಧರಾಗುತ್ತಿರುವ ರೈತರಲ್ಲಿಯೂ ಮಳೆಯ ಹನಿಗಳು ಮಂದಹಾಸ ಮೂಡಿಸಿವೆ. ಮಂಗಳವಾರ ತಡರಾತ್ರಿಯಿಂದ ಬುಧವಾರದ ಬೆಳಗಿನ ಜಾವದ ತನಕ ಕೊಪ್ಪಳ, ಕುಷ್ಟಗಿ ತಾಲ್ಲೂಕಿನ ಹನುಮಸಾಗರ, ಮುನಿರಾಬಾದ್‌, ಕುಕನೂರು, ಗಂಗಾವತಿ ಸೇರಿದಂತೆ ಜಿಲ್ಲೆಯ ಹಲವು ಕಡೆ ಉತ್ತಮವಾಗಿ ಮಳೆಯಾಗಿದೆ.

Read More »

ಕರಾವಳಿ ಜಿಲ್ಲೆಗಳಲ್ಲಿ ಬಂದಿದೆ ಹಾಲಿಗೆ ಬರ!

ಕುಂದಾಪುರ: ಕೊರೊನಾ ಕಾಲಘಟ್ಟದಲ್ಲಿ 5 ಲಕ್ಷ ಲೀಟರ್‌ಗೆ ತಲುಪಿದ್ದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಾಲು ಉತ್ಪಾದನೆ ಈಗ 3.5 ಲಕ್ಷ ಲೀ. ಗೆ ಇಳಿದಿದೆ. ಉಭಯ ಜಿಲ್ಲೆಗಳಿಗೆ ನಿತ್ಯವೂ2 ಲಕ್ಷ ಲೀ. ಹಾಲು ನೆರೆಯ ಹಾಲು ಒಕ್ಕೂಟಗಳಿಂದ ಖರೀದಿಸಿ ಪೂರೈಸಲಾಗು ತ್ತಿದೆ. ಹೈನೋದ್ಯಮದಿಂದ ರೈತರು ವಿಮುಖರಾಗುತ್ತಿರುವುದು ಪ್ರಮುಖ ಕಾರಣ ಎನ್ನುತ್ತಾರೆ ಪರಿಣಿತರು. ಪ್ರತೀ ಬೇಸಗೆಯಲ್ಲಿ ಹಸುರು ಮೇವಿನ ಕೊರತೆಯಿಂದ ಹಾಲು ಉತ್ಪಾದನೆ ಇಳಿಕೆಯಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಗಣನೀಯ …

Read More »

ಧಾರವಾಡ ಮಾವು‌ ಮೇಳದಲ್ಲಿ ಗಮನ ಸೆಳೆದ 2.5 ಲಕ್ಷ ರೂ.ಬೆಲೆಯ ಮಿಯಾ ಜಾಕಿ ಮಾವು

ಧಾರವಾಡ : ವಿಶ್ವದ ಅತ್ಯಂತ ದುಬಾರಿಯಾದ ಕೆ.ಜಿ.ಗೆ 2.5 ಲಕ್ಷ ರೂ.ಗಳ ಮಾವಿನ ಹಣ್ಣು ಮಿಯಾ ಜಾಕಿ ಧಾರವಾಡದ ಮಾವು‌ಮೇಳದಲ್ಲಿ ಗಮನ ಸೆಳೆಯುತ್ತಿದೆ. ಬರೀ ಒಂದು ಹಣ್ಣಿಗೆ ಕನಿಷ್ಠವೆಂದರೂ 25-30ಸಾವಿರ ರೂ. ಖಚಿತ..! ಹೌದು..ಇಷ್ಟೊಂದು ದುಬಾರಿ‌ ಮಾವಿನ ಹಣ್ಣು ಖರೀದಿಸದೇ ಹೋದರೂ ಕಣ್ಣುಂಬ್ತಿಕೊಳ್ಳಬಹುದು. ಇಲ್ಲಿಯ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮಂಗಳವಾರದಿಂದ ಆರಂಭಗೊಂಡಿರುವ ಮಾವು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಕಳಶ ಪ್ರಾಯವಾಗಿ ಸುದ್ದಿಯಲ್ಲಿದೆ. ಈ ದುಬಾರಿ ಮಾವು ಕಲಕೇರಿ ಮಾವು ಬೆಳೆಗಾರ …

Read More »