Breaking News

Monthly Archives: ಮೇ 2024

ಮುರುಘಾ ಶ್ರೀ’ ವಿರುದ್ಧ ಪೋಕ್ಸೋ ಕೇಸ್ : ಜೂ. 3 ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್..!

ಬೆಂಗಳೂರು : ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂ.3 ಕ್ಕೆ ವಿಚಾರಣೆ ಮುಂದೂಡಿಕೆಯಾಗಿದೆ. ಮುರುಘಾ ಶ್ರೀಗಳ ವಿರುದ್ಧದ ಪೋಕ್ಸೋ ಪ್ರಕರಣದ ವಿಚಾರಣೆಯನ್ನು ಜೂನ್ 3 ಕ್ಕೆ ಮುಂದೂಡಿ 2 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. ಸಾಕ್ಷಿ ವಿಚಾರಣೆಗೆ ಆರೋಪಿ ಪರ ವಕೀಲ ಕೆ.ಬಿ.ಕೆ ಸ್ವಾಮಿ 2 ದಿನಗಳ ಕಾಲಾವಕಾಶ ಕೇಳಿದ ಹಿನ್ನೆಲೆ ವಿಚಾರಣೆಯನ್ನು ಮುಂದೂಡಲಾಗಿದೆ. ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರ …

Read More »

ಪ್ರಜ್ವಲ್ ರೇವಣ್ಣ 6 ದಿನ ಪೊಲೀಸ್ ಕಸ್ಟಡಿಗೆ

ಬೆಂಗಳೂರು ಮೇ 31: ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕೋರ್ಟ್ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಬೆಂಗಳೂರು ನ್ಯಾಯಾಲಯಕ್ಕೆ ಇಂದು ಪ್ರಜ್ವಲ್ ರೇವಣ್ಣ ಅವರನ್ನು ಹಾಜರುಪಡಿಸಲಾಗಿತ್ತು. ವಾದ ಪ್ರತಿವಾದಗಳ ನಂತರ ಅವರನ್ನು ಕೋರ್ಟ್ ಆರು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಲೈಂಗಿಕ ಕಿರುಕುಳ ಆರೋಪದ ವಿಚಾರಣೆಗಾಗಿ ಎಸ್‌ಐಟಿ ಪ್ರಜ್ವಲ್ ರೇವಣ್ಣ ಅವರನ್ನು ಕಸ್ಟಡಿಗೆ ನೀಡುವಂತೆ ಕೋರಿತ್ತು. ಇದೇ ವೇಳೆ ವಕೀಲರ …

Read More »

8ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಕಿಯಾಗಿ ಪಾಠ ಮಾಡಿದ ಜಿಲ್ಲಾಧಿಕಾರಿ

ಧಾರವಾಡ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಘೋಷವಾಕ್ಯ ‘ಶೈಕ್ಷಣಿಕ ಬಲವರ್ಧನೆ ವರ್ಷ’ ಇದಕ್ಕೆ ಅನುಗುಣವಾಗಿ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸರಕಾರಿ ಶಾಲೆಯ 7 ಮತ್ತು 8 ನೇ ವರ್ಗದ ಮಕ್ಕಳಿಗೆ ಇಂಗ್ಲೀಷ್ ವಿಷಯದ ಪಾಠ ಬೋಧನೆ ಮಾಡಿದರು. ನಗರದ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಸರಕಾರಿ ಉರ್ದು ಮತ್ತು ಕನ್ನಡ ಪ್ರಾಥಮಿಕ, ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ 8 ನೇ ತರಗತಿ ಇಂಗ್ಲೀಷ್ ಭಾಷಾ ವಿಷಯ ಪಾಠ ಬೋಧಿಸುವ ಮೂಲಕ …

Read More »

ಕಣಬರ್ಗಿ ಕೆರೆಯಲ್ಲಿ ಬಳಕೆಯಾಗದ ಸೌಕರ್ಯ

ಬೆಳಗಾವಿ: ನಗರ ಹೊರವಲಯದ ಕಣಬರ್ಗಿಯಲ್ಲಿರುವ ಕೆರೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಮಾದರಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಪಕ್ಷಿಗಳ ಪರಿವೀಕ್ಷಣಾ ಗ್ಯಾಲರಿ, ಬಯಲು ರಂಗಮಂದಿರ, ವ್ಯಾಯಾಮ ಶಾಲೆ, ತಿನಿಸುಗಳ ಅಂಗಡಿ ಮತ್ತಿತರ ಸೌಕರ್ಯ ಇಲ್ಲಿವೆ. ಆದರೆ, ಮಹಾನಗರ ಪಾಲಿಕೆ ನಿರ್ಲಕ್ಷ್ಯದಿಂದ ಹಲವು ಸೌಕರ್ಯ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಒಂದು ಕಾಲಕ್ಕೆ ಕನಿಷ್ಠ ಮೂಲಸೌಕರ್ಯವೂ ಇಲ್ಲದೆ ಕಳೆಗುಂದಿದ್ದ ಕಣಬರ್ಗಿ ಕೆರೆಯಂಗಳ ಇಂದು ಕಣ್ಮನ ಸೆಳೆಯುತ್ತಿದೆ. ಆದರೆ, ಬೆಳಗಾವಿ-ಗೋಕಾಕ ಮಾರ್ಗದಲ್ಲಿ ಸಂಚರಿಸುವ ಹಲವರು ಇಲ್ಲಿಯೇ ತ್ಯಾಜ್ಯ ಪದಾರ್ಥ ಎಸೆದು ಹೋಗುತ್ತಿರುವುದರಿಂದ …

Read More »

ಕೋಳಿ ಫಾರ್ಮ್‌: ನೋಣಗಳ ಹಾವಳಿಯಿಂದ ಬೇಸತ್ತ ಜನ

ಯಮಕನಮರಡಿ: ಹುಕ್ಕೇರಿ ತಾಲ್ಲೂಕಿನ ನಾಗನೂರ ಕೆ.ಎಂ ಮತ್ತು ಕೆ.ಡಿ ಗ್ರಾಮಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೋಣಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಜನರು ಬೇಸತ್ತಿದ್ದಾರೆ. ಗ್ರಾಮದ ಹೊರವಲಯದಲ್ಲಿ 300 ಮೀಟರ್ ಅಂತರದಲ್ಲಿ 10 ಕೋಳಿ ಫಾರ್ಮ್‌ ಇವೆ. ಇಲ್ಲಿಂದಲೇ ಗ್ರಾಮಕ್ಕೆ ನೋಣಗಳು ಬಂದಿವೆ. ಗ್ರಾಮದ ಮನೆಗಳಲ್ಲಿ ಊಟ ಮಾಡುವಾಗಲೆಲ್ಲ ತಟ್ಟೆಯಲ್ಲಿ ನೋಣಗಳ ಬೀಳುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದರು. ನಾಗನೂರ ಕೆ.ಎಂ.ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಮೇ 29ರಿಂದ ಆರಂಭವಾಗಿದೆ. ನೂರಾರು …

Read More »

ಹೊಸ ವಂಟಮುರಿ ಮಹಿಳೆ ವಿವಸ್ತ್ರಗೊಳಿಸಿದ ಪ್ರಕರಣ: ಇಬ್ಬರ ಜಾಮೀನು ರದ್ದು

ಬೆಳಗಾವಿ: ತಾಲ್ಲೂಕಿನ ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ವಿದ್ಯುತ್‌ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ 12 ಆರೋಪಿಗಳಲ್ಲಿ ಇಬ್ಬರ ಜಾಮೀನು ರದ್ದು ಮಾಡಿ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದೆ. 2018ರಲ್ಲಿ ಹೊಸ ವಂಟಮುರಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಬಣ್ಣೆಪ್ಪ ಪಾಟೀಲ ಎಂಬುವರ ಕೊಲೆ ಯತ್ನ ನಡೆದಿತ್ತು. ಆ ಪ್ರಕರಣದಲ್ಲಿ ಆಗಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಪ್ಪ ರಾಯಪ್ಪ ವನ್ನೂರಿ ಹಾಗೂ ಬಸು ರುದ್ರಪ್ಪ ನಾಯಕ ಮುಖ್ಯ ಆರೋಪಿಗಳಾಗಿದ್ದರು. ಆಗಲೂ …

Read More »

ಬಿಜೆಪಿ ಹಗರಣಗಳನ್ನು ಕೆದಕಲಾರಂಭಿಸಿದ ಕಾಂಗ್ರೆಸ್‌

ಬೆಂಗಳೂರು, ಮೇ 31- ವಾಲ್ಮೀಕಿ ಅಭಿವೃದ್ಧಿ ನಿಗಮದ ಬೃಹತ್‌ ಹಗರಣದಲ್ಲಿ ಸಚಿವ ನಾಗೇಂದ್ರ ಅವರ ತಲೆದಂಡವನ್ನು ತಪ್ಪಿಸಲು ನಾನಾ ರೀತಿಯ ಸರ್ಕಸ್‌ಗಳು ನಡೆಯುತ್ತಿದ್ದು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆದ 162 ಕೋಟಿ ರೂ.ಗಳ ಹಗರಣವನ್ನು ಕೆಣಕಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆ.   ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 187 ಕೋಟಿ ರೂ.ಗಳು ನಿಗಮದ ಉಪಖಾತೆಗಳಿಗೆ ವರ್ಗಾವಣೆಯಾಗಿರುವಂತೆ ಅಲ್ಲಿಂದ ಬೇರೆ ಬೇರೆ ಖಾತೆಗಳಿಗೂ ಸಂದಾಯವಾಗಿದೆ ಎಂಬ ಆರೋಪಗಳಿದ್ದು, ಸಂಪುಟದಲ್ಲಿ ಬಹಳಷ್ಟು ಮಂದಿ …

Read More »

ನಾಡಿದ್ದು ಕಾಂಗ್ರೆಸ್‌ ಶಾಸಕಾಂಗ ಪಕ್ಷ ಸಭೆ

ಬೆಂಗಳೂರು: ಜೂನ್‌ 2ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಮೇಲ್ಮನೆ ಚುನಾವಣೆ ಸಹಿತ ಹಲವು ವಿಷಯಗಳು ಸಭೆಯಾಗಲಿವೆ. ವಿಧಾನಸಭೆ ಸಂಖ್ಯಾಬಲದ ಆಧಾರದಲ್ಲಿ ನಡೆಯಲಿರುವ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಜೂನ್‌ 3 ಕೊನೆಯ ದಿನ. ಅದರ ಹಿಂದಿನ ದಿನವೇ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಮುಖ್ಯವಾಗಿ ನಾಮಪತ್ರ ಸಲ್ಲಿಕೆಗೆ ಅಗತ್ಯವಿರುವ ಶಾಸಕರ ಸಹಿ ಮತ್ತಿತರ ಪ್ರಕ್ರಿಯೆಗಳಿಗೆ ಸಂಬಂಧಿಸಿ ಅಂದು ಸೂಚನೆ ನೀಡಲಾಗುವುದು. ಜತೆಗೆ ಜೂನ್‌ 3ರಂದು …

Read More »

ಜೂನ್‌ 2ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ ನಿರೀಕ್ಷೆ

ಬೆಂಗಳೂರು: ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿಗೆ ಜೂನ್‌ 2ರಂದು ಮುಂಗಾರು ಪ್ರವೇಶಿಸುವ ಸಾಧ್ಯತೆಗಳಿದ್ದು ಈ ವರ್ಷ ಉತ್ತಮ ಮುಂಗಾರು ಮಳೆ ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ನೈಋತ್ಯ ಮಾನ್ಸೂನ್‌ ಮೇ 30ರಂದು ಕೇರಳ ಪ್ರವೇಶಿಸಿದೆ. ಸಾಮಾನ್ಯವಾಗಿ ನೈಋತ್ಯ ಮುಂಗಾರು ಕೇರಳವನ್ನು ಜೂನ್‌ 1ರಂದು ಪ್ರವೇಶ ಮಾಡುತ್ತಿತ್ತು. ಆದರೆ ಈ ವರ್ಷ 2 ದಿನ ಮೊದಲೇ ಕೇರಳ ಪ್ರವೇಶಿಸಿದೆ. ಈ ಹಿನ್ನೆಲೆಯಲ್ಲಿ ಜೂನ್‌ 2ರಂದು ರಾಜ್ಯದ ದಕ್ಷಿಣ ಒಳನಾಡು ಹಾಗೂ …

Read More »

ಆಶಾ ಕಾರ್ಯಕರ್ತೆರಿಗೆ 4 ತಿಂಗಳಿಂದ ಸಂಬಳ ಇಲ್ಲ

ಬೆಂಗಳೂರು: ಚುನಾವಣೆ, ಲಸಿಕೀಕರಣ, ಗರ್ಭಿಣಿಯರು, ಬಾಣಂತಿಯರ ಆರೋಗ್ಯ ವಿಚಾರಣೆ ಸಹಿತ ವಿವಿಧ ಕಾರ್ಯಗಳನ್ನು ನಡೆಸಿ ಮಾಹಿತಿ ಸಲ್ಲಿಸುವ ಆಶಾ ಕಾರ್ಯಕರ್ತೆಯರಿಗೆ 3-4 ತಿಂಗಳುಗಳಿಂದ ಗೌರವಧನ ಪಾವತಿಯಾಗಿಲ್ಲ. ರಾಜ್ಯಾದ್ಯಂತ ಒಟ್ಟು 62 ಸಾವಿರ ಆಶಾ ಕಾರ್ಯಕರ್ತೆಯರಿಗೆ ಕಳೆದ ಫೆಬ್ರವರಿಯಿಂದ ಗೌರವಧನ ಸಿಕ್ಕಿಲ್ಲ. ರಾಜ್ಯ ಸರಕಾರದಿಂದ ನೀಡುವ 5,000 ರೂ. ಗೌರವಧನ ಮತ್ತು ಕೇಂದ್ರ ಸರಕಾರದ ಅಂದಾಜು 5,000 ರೂ. ಪ್ರೋತ್ಸಾಹಧನ ಸಹಿತ 3 ತಿಂಗಳ ಒಟ್ಟು 30 ಸಾವಿರ ರೂ. ಇನ್ನೂ ಪಾವತಿಯಾಗಿಲ್ಲ. …

Read More »