ಮೂಡಲಗಿ: ‘ಕಲ್ಲೋಳಿಯ ಶ್ರೀ ಮಹಾಲಕ್ಷ್ಮಿ ಸೌಹಾರ್ದ ಸಹಕಾರಿ ಸೊಸೈಟಿಯು 2023-24ನೇ ಆರ್ಥಿಕ ವರ್ಷದ ಕೊನೆಯಲ್ಲಿ ₹2.51 ಕೋಟಿ ಲಾಭ ಗಳಿಸಿ ಪ್ರಗತಿಯಲ್ಲಿ ಸಾಗಿದೆ’ ಎಂದು ಸೊಸೈಟಿಯ ಅಧ್ಯಕ್ಷ ಈರಣ್ಣ ಕಡಾಡಿ ತಿಳಿಸಿದರು. ಸೊಸೈಟಿಯ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸದ್ಯ ಸೊಸೈಟಿಯಲ್ಲಿ 12,612 ಸದಸ್ಯರಿದ್ದು, ₹20.12 ಲಕ್ಷ ಶೇರು ಬಂಡವಾಳ, ₹6.96 ಕೋಟಿ ಕಾಯ್ದಿಟ್ಟ ನಿಧಿ, ₹71.10 ಕೋಟಿ ಠೇವು ಸಂಗ್ರಹ ಹಾಗೂ ₹66.71 ಕೋಟಿ ಸಾಲವನ್ನು ವಿತರಿಸಲಾಗಿದೆ’ ಎಂದು …
Read More »Monthly Archives: ಏಪ್ರಿಲ್ 2024
ಹುಕ್ಕೇರಿ: ಸ್ಮಶಾನ ಜಾಗದಲ್ಲಿ ಸ್ವಚ್ಛತಾ ಅಭಿಯಾನ
ಹುಕ್ಕೇರಿ: ಪಟ್ಟಣದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನೌಕರರ ಕಾಲೊನಿ ಪಕ್ಕದ ವೀರಶೈವ ಲಿಂಗಾಯತ ಸಮಾಜದ ಸ್ಮಶಾನ (ರುದ್ರಭೂಮಿ) ಜಾಗವನ್ನು ಸಮುದಾಯದ ಜನರು ಭಾನುವಾರ ಸ್ವಚ್ಛಗೊಳಿಸಿದರು. ಬಜಾರ್ ರಸ್ತೆ ಸೇರಿದಂತೆ ವಿವಿಧ ಬಡಾವಣೆಯ ಲಿಂಗಾಯತ ಒಳಪಂಗಡ ಸಮುದಾಯದ ಜನರು ಬೆಳಿಗ್ಗೆ ಸ್ಮಶಾನ ಭೂಮಿಗೆ ಬಂದು ಸ್ವಚ್ಛತಾ ಅಭಿಯಾನ ಹಮ್ಮಿಕೊಂಡರು. ಸ್ಮಶಾನದಲ್ಲಿ ಬೆಳೆದಿದ್ದ ಮುಳ್ಳು ಕಂಟಿ, ಗಿಡಗಂಟಿ, ಹುಲ್ಲು ಸೇರಿದಂತೆ ಕುರುಚಲ ಗಿಡಗಳನ್ನು ಕತ್ತರಿಸಿ ಸ್ವಚ್ಛಗೊಳಿಸಿದರು. ಒಣಗಿದ ಗಿಡದ ಬೊಡ್ಡೆ ದಂಡೆಗೆ …
Read More »ಕೇಜ್ರಿವಾಲ್ ಬಂಧನ ಖಂಡಿಸಿ AAPಯಿಂದ ಸಾಮೂಹಿಕ ಉಪವಾಸ,
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನವನ್ನು ಖಂಡಿಸಿ ಎಎಪಿ ನಾಯಕರು ಭಾನುವಾರ ಜಂತರ್ ಮಂತರ್‌ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಎಎಪಿ ಆಡಳಿತವಿರುವ ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಭಗವಂತ ಮಾನ್ ಅವರು, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಹುಟ್ಟೂರಾದ ಖಟ್ಕರ್ ಕಲಾನ್‌ನಲ್ಲಿ ಸಾಮೂಹಿಕ ಉಪವಾಸದಲ್ಲಿ ಪಾಲ್ಗೊಂಡಿದ್ದಾರೆ. ದೆಹಲಿ ವಿಧಾನಸಭೆ ಸ್ಪೀಕರ್ ರಾಮ್ ನಿವಾಸ್ ಗೋಯೆಲ್, ಡೆಪ್ಯೂಟಿ ಸ್ಪೀಕರ್ ರಾಖಿ ಬಿಲಾ, ಸಚಿವರಾದ ಅತಿಶಿ, ಗೋಪಾಲ್ ರೈ ಮತ್ತು …
Read More »ನನ್ನದು ಗಜಕೇಸರಿ ಯೋಗ, ಮುಂದೆ ನಾನು ‘ಪ್ರಧಾನಿ’ಯಾದರು ಆಗಬಹುದು :ಸಂಯುಕ್ತ ಪಾಟೀಲ್
ಬಾಗಲಕೋಟೆ : ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆಯ ವಿಚಾರವಾಗಿ ಅಸಮಾಧಾನ ಬಿಜೆಪಿ ಪಕ್ಷ ಅಷ್ಟೆ ಅಲ್ಲದೆ ಕಾಂಗ್ರೆಸ್ ಪಕ್ಷ ಕೂಡ ಇದಕ್ಕೆ ಹೊರತಾಗಿಲ್ಲ. ಏಕೆಂದರೆ ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಶಾಸಕ ವಿಧಾನದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರು ಲೋಕಸಭೆ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಸಚಿವ ಶಿವಾನಂದ್ ಪಾಟೀಲ್ ಅವರ ಪುತ್ರಿ ಸಂಯುಕ್ತ ಪಾಟೀಲ್ ಗೆ ಟಿಕೆಟ್ ನೀಡಿದೆ. ಹೀಗಾಗಿ ಅವರು ಇದೀಗ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ. …
Read More »ನಾಳೆ ಸಂಭವಿಸಲಿದೆ ‘ಖಗೋಳ ವಿಸ್ಮಯ’ : ಎಲ್ಲೆಲ್ಲಿ ಗೋಚರಿಸಲಿದೆ ವರ್ಷದ ಮೊದಲ ‘ಸೂರ್ಯಗ್ರಹಣ’
ನವದೆಹಲಿ : ಏಪ್ರಿಲ್ 8ರ ನಾಳೆ ಸೂರ್ಯಗ್ರಹಣ ಸಂಭವಿಸಲಿದೆ. ಇದು ಈ ವರ್ಷದ ಮೊದಲ ಸೂರ್ಯಗ್ರಹಣವಾಗಿದೆ. ವೈಜ್ಞಾನಿಕ ದೃಷ್ಟಿಕೋನದಿಂದ, ಸೂರ್ಯಗ್ರಹಣವು ಕೇವಲ ಖಗೋಳ ಘಟನೆಯಾಗಿದೆ, ಆದರೆ ಧಾರ್ಮಿಕ ದೃಷ್ಟಿಕೋನದಿಂದ ಇದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಜ್ಯೋತಿಷ್ಯದ ಪ್ರಕಾರ, ಗ್ರಹಣ ಸಮಯದಲ್ಲಿ ನಮ್ಮ ಸುತ್ತಲಿನ ಎಲ್ಲವೂ ಪರಿಣಾಮ ಬೀರುತ್ತದೆ. ಸೂರ್ಯಗ್ರಹಣಕ್ಕೂ ಮೊದಲು, ವರ್ಷದ ಮೊದಲ ಚಂದ್ರ ಗ್ರಹಣವು ಮಾರ್ಚ್ 25 ರಂದು ಗೋಚರಿಸಿತು, ಇದು ಭಾರತದಲ್ಲಿ ಗೋಚರಿಸಲಿಲ್ಲ. ವಿಶೇಷವೆಂದರೆ ಎರಡೂ ಗ್ರಹಣ ದಿನಗಳು …
Read More »ಕೇಸರಿ ಪಡೆಗೆ ಕ್ಯಾರೆ ಎನ್ನದ ಈಶ್ವರಪ್ಪ..ಶಿವಮೊಗ್ಗದಲ್ಲಿ ಶಕ್ತಿ ಪ್ರದರ್ಶನ: ಅಪ್ಪ-ಮಕ್ಕಳ ವಿರುದ್ಧ ವಾಗ್ದಾಳಿ
ಶಿವಮೊಗ್ಗ: ಪುತ್ರನಿಗೆ ಟಿಕೆಟ್ ಕೈತಪ್ಪಿದ ಹಿನ್ನಲೆ ಪಕ್ಷೇತರವಾಗಿ ಕಣಕ್ಕಿಳಿದಿರುವ ಕೆಎಸ್ ಈಶ್ವರಪ್ಪ (K. S. Eshwarappa) ಅವರು ಶಿವಮೊಗ್ಗ(Shivamogga)ದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಶಿವಮೊಗ್ಗ ನಗರದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಧರ್ಮದ ಪರವಾಗಿರುವ ಈಶ್ವರಪ್ಪ ಗೆಲ್ತಾರೆ. ಶಿವಮೊಗ್ಗದಲ್ಲಿ ನಾನು ಯಾರಿಗೂ ಅನ್ಯಾಯ ಮಾಡಿಲ್ಲ ಎಂದು ಬಿಎಸ್‌ವೈ ಕುಟುಂಬದ ವಿರುದ್ದ ಮತ್ತೆ ವಾಗ್ದಾಳಿ ನಡೆಸಿದರು. ನಿಮ್ಮ ಒಬ್ಬ ಮಗ ಎಂಪಿ, ಒಬ್ಬ ಎಂಎಲ್‌ಎ ಅವನೇ ರಾಜ್ಯಾಧ್ಯಕ್ಷ, ಕರ್ನಾಟಕದಲ್ಲಿ ಇವರೇ …
Read More »4 ಕೋಟಿ ಹಣದೊಂದಿಗೆ ಬಿಜೆಪಿ ಸದಸ್ಯ ಸೇರಿ ಮೂವರ ಬಂಧನ
ಶನಿವಾರ ಚೆನ್ನೈನ ತಾಂಬರಂ ರೈಲು ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತ ಸೇರಿದಂತೆ ಮೂವರನ್ನು 4 ಕೋಟಿ ರೂ ನೊಂದಿಗೆ ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ಹಣವನ್ನು ಹೆಚ್ಚಿನ ತನಿಖೆಗಾಗಿ ಆದಾಯ ತೆರಿಗೆ ಇಲಾಖೆಗೆ ಕಳುಹಿಸಲಾಗಿದೆ ಎಂದು ಚೆಂಗಲ್ಪಟ್ಟು ಡಿಇಒ ತಿಳಿಸಿದ್ದಾರೆ. ಆರೋಪಿಗಳಾದ ಬಿಜೆಪಿ ಸದಸ್ಯ ಹಾಗೂ ಖಾಸಗಿ ಹೋಟೆಲ್ ಮ್ಯಾನೇಜರ್ ಸತೀಶ್, ಆತನ ಸಹೋದರ ನವೀನ್ ಮತ್ತು ಒಬ್ಬ ಚಾಲಕ ಪೆರುಮಾಳ್ ಸೇರಿ ಆರು ಬ್ಯಾಗ್ ಗಳಲ್ಲಿ 4 ಕೋಟಿ ರೂ ಹಣವನ್ನು …
Read More »ನಾಳೆ ಸಂಭವಿಸಲಿದೆ ‘ಖಗೋಳ ವಿಸ್ಮಯ’ : ಎಲ್ಲೆಲ್ಲಿ ಗೋಚರಿಸಲಿದೆ ವರ್ಷದ ಮೊದಲ ‘ಸೂರ್ಯಗ್ರಹಣ’
ನವದೆಹಲಿ : ಏಪ್ರಿಲ್ 8ರ ನಾಳೆ ಸೂರ್ಯಗ್ರಹಣ ಸಂಭವಿಸಲಿದೆ. ಇದು ಈ ವರ್ಷದ ಮೊದಲ ಸೂರ್ಯಗ್ರಹಣವಾಗಿದೆ. ವೈಜ್ಞಾನಿಕ ದೃಷ್ಟಿಕೋನದಿಂದ, ಸೂರ್ಯಗ್ರಹಣವು ಕೇವಲ ಖಗೋಳ ಘಟನೆಯಾಗಿದೆ, ಆದರೆ ಧಾರ್ಮಿಕ ದೃಷ್ಟಿಕೋನದಿಂದ ಇದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಜ್ಯೋತಿಷ್ಯದ ಪ್ರಕಾರ, ಗ್ರಹಣ ಸಮಯದಲ್ಲಿ ನಮ್ಮ ಸುತ್ತಲಿನ ಎಲ್ಲವೂ ಪರಿಣಾಮ ಬೀರುತ್ತದೆ. ಸೂರ್ಯಗ್ರಹಣಕ್ಕೂ ಮೊದಲು, ವರ್ಷದ ಮೊದಲ ಚಂದ್ರ ಗ್ರಹಣವು ಮಾರ್ಚ್ 25 ರಂದು ಗೋಚರಿಸಿತು, ಇದು ಭಾರತದಲ್ಲಿ ಗೋಚರಿಸಲಿಲ್ಲ. ವಿಶೇಷವೆಂದರೆ ಎರಡೂ ಗ್ರಹಣ ದಿನಗಳು …
Read More »ರಾಜ್ಯದಲ್ಲಿ ಈವರೆಗೆ 35 ಕೋಟಿ ರೂ. ನಗದು ಸೇರಿ 262 ಕೋಟಿ ರೂ. ಮೊತ್ತದ ಚುನಾವಣಾ ಅಕ್ರಮ ವಸ್ತು ಜಪ್ತಿ
ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ವಿವಿಧ ತನಿಖಾ ತಂಡಗಳು ಇದುವರೆಗೆ 262 ಕೋಟಿ ರೂ. ಮೊತ್ತದ ಅಕ್ರಮ ವಸ್ತು ಜಪ್ತಿ ಮಾಡಿವೆ. 35 ಕೋಟಿ ರೂಪಾಯಿ ನಗದು ಸೇರಿ 262 ಕೋಟಿ ರೂ. ಮೊತ್ತದ ವಿವಿಧ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 133 ಕೋಟಿ ರೂಪಾಯಿ ಮೌಲ್ಯದ ಮದ್ಯ, 5.48 ಕೋಟಿ ರೂ ಮೌಲ್ಯದ ಮಾದಕ ವಸ್ತು, 9.49 ಕೋಟಿ ರೂ. ಮೌಲ್ಯದ 16 ಕೆಜಿ ಚಿನ್ನ, 27 …
Read More »ಈಶ್ವರಪ್ಪ ಅವರ ವಿರುದ್ಧ ಎಫ್ ಐಆರ್ ದಾಖಲ
ಶಿವಮೊಗ್ಗ: ಲೋಕಸಭಾ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಚುನಾವಣಾಧಿಕಾರಿಯಿಂದ ಅಗತ್ಯ ಅನುಮತಿ ಪಡೆಯದೆ ರಾಜಕೀಯ ಕಾರ್ಯಕ್ರಮ ಆಯೋಜಿಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪ ಕೇಳಿಬಂದಿದೆ.ಈ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ. ಶುಕ್ರವಾರ ತೀರ್ಥಹಳ್ಳಿ ತಾಲ್ಲೂಕು ನೊಣಬೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಂಬುತೀರ್ಥದ ದೇವಸ್ಥಾನ ಒಂದರಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಿ ಅಲ್ಲೇ ಹತ್ತಿರದಲ್ಲೇ ಅರ್ಚಕರ ಮನೆ ಅಂಗಳದಲ್ಲಿ …
Read More »