Breaking News

Daily Archives: ಏಪ್ರಿಲ್ 13, 2024

ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ.: ಶಿವಾನಂದ ಪಾಟೀಲ್ ಸವಾಲು

ಬಾಗಲಕೋಟೆ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಕ್ಕೆ ಸಚಿವ ಶಿವಾನಂದ ಪಾಟೀಲ್ ತಿರುಗೇಟು ನೀಡಿದ್ದು, “ಸಕ್ಕರೆ ಕಾರ್ಖಾನೆಗಳಿಂದ‌ 50 ಲಕ್ಷ ಕೇಳಿದ್ದಾರೆ ಎಂಬ ಆರೋಪ ಸಾಬೀತು ಮಾಡಿದರೆ ನಾನು ರಾಜಕೀಯ ತ್ಯಜಿಸುವೆ” ಎಂದು ಸವಾಲು ಹಾಕಿದ್ದಾರೆ. ಒಂದು ವೇಳೆ ಆರೋಪವನ್ನು ಸಾಬೀತು ಮಾಡಲು ವಿಫಲರಾದರೆ ಶಾಸಕ ಯತ್ನಾಳ್ ಅವರು ರಾಜಕೀಯ ಬಿಡಲಿ ಎಂದಿದ್ದಾರೆ. ವಿಜಯಪುರದಿಂದ ಪಕ್ಷೇತರರಾಗಿ ಸ್ಪರ್ಧೆಗೆ ಸವಾಲೆಸೆದ ಸಚಿವ ಶಿವಾನಂದ, ಒಂದು ವೇಳೆ ಯತ್ನಾಳ್ ನನಗಿಂತ ಒಂದೇ …

Read More »

ಚೆಕ್‌ಪೋಸ್ಟ್ನಲ್ಲಿ 12 ಕೋಟಿ ರೂ. ಮೌಲ್ಯದ ಆಭರಣ ವಶ

ದಾವಣಗೆರೆ : ನಗರದ ಹದಡಿ ರಸ್ತೆಯಲ್ಲಿರುವ ಲೋಕಿಕೆರೆ ಚೆಕ್‌ಪೋಸ್ಟ್ನಲ್ಲಿ ಗುರುವಾರ ರಾತ್ರಿ 12 ಕೋಟಿ ರೂ. ಮೌಲ್ಯದ ಚಿನ್ನ, ಬೆಳ್ಳಿ, ವಜ್ರದ ಆಭರಣಗಳನ್ನು ಎಸ್.ಎಸ್.ಟಿ ತಂಡ ವಶಪಡಿಸಿಕೊಂಡಿದೆ. ವಾಹನ ಬೆಂಗಳೂರಿನಿಂದ ದಾವಣಗೆರೆಗೆ ಬಂದಿತ್ತು. ಎಸ್.ಎಸ್.ಟಿ ತಂಡದ ಮುಖ್ಯಸ್ಥ ಆರ್.ಮಲ್ಲಿಕಾರ್ಜುನ, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಮತ್ತು ಕೆಟಿಜೆ ನಗರ ಠಾಣೆಯ ಪೊಲೀಸರಿದ್ದ ತಂಡವು ವಾಹನದ ತಪಾಸಣೆ ನಡೆಸಿತು. ವಾಹನದಲ್ಲಿ ಪೆಂಡೆಂಟ್, ಡಾಲರ್, ವಜ್ರದ ಹರಳು ಸೇರಿ ಆಭರಣಗಳು ಇದ್ದವು. ಅವುಗಳಿಗೆ …

Read More »

ಸಿಡಿಲು ಬಡಿದು 18 ಕುರಿ ಸಾವು

ಕುಂಸಿ: ಸಿಡಿಲು ಬಡಿದು 18 ಕುರಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸಮೀಪದ ಆಯನೂರು ಕೋಟೆಯಲ್ಲಿ ಶುಕ್ರವಾರ ನಡೆದಿದೆ. ಸಂಜೆ ಸಾಧಾರಣ ಮಳೆಯಾಗುತ್ತಿತ್ತು. ನಂತರ ಬಡಿದ ಸಿಡಿಲಿಗೆ 18 ಕುರಿಗಳು ಬಲಿಯಾಗಿವೆ. ಮಾಲೀಕ ಝಾಕಿರ್ ಹುಸೇನ್ ಅವರು ಕುರಿಗಳನ್ನು ಮೇಯಿಸಲು ಮಕ್ಕಳೊಂದಿಗೆ ಆಯನೂರು ಕೋಟೆ ಪಕ್ಕದ ಬಯಲಿಗೆ ಹೊಡೆದುಕೊಂಡು ಹೋಗಿದ್ದರು‌.ಸಾಧಾರಣ ಮಳೆಯ ನಂತರ ಆಕಸ್ಮಿಕವಾಗಿ ಬಡಿದ ಸಿಡಿಲಿಗೆ ಹದಿನೆಂಟು ಕುರಿಗಳು ಬಲಿಯಾಗಿವೆ. ಝಾಕಿರ್ ಅವರ ಕುಟುಂಬ ಕುರಿ ಮಾರಾಟದಿಂದಲೇ ಜೀವನ ನಡೆಸುತ್ತಿತ್ತು. …

Read More »

ರಾಜ್ಯದ ಎಲ್ಲಾ ಶಾಲೆಗಳು ಮೇ. 29 ರಿಂದ ಪುನರಾರಂಭ : `ದಸರಾ’ ಸೇರಿ ಒಟ್ಟು 121 ದಿನ ರಜೆ!

ಬೆಂಗಳೂರು : ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಪ್ರೌಢ ಶಾಲೆಗಳಿಗೆ 2024-25ನೇ ಸಾಲಿನ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿ ಪ್ರಕಟವಾಗಿದ್ದು, ಮೇ. 29 ರಿಂದ ಶಾಲೆಗಳು ಪುನರಾರಂಭವಾಗಲಿವೆ. ಈ ಶೈಕ್ಷಣಿಕ ವರ್ಷದಲ್ಲಿ 18 ದಿನ ದಸರಾ ರಜೆ, 48 ದಿನ ಬೇಸಿಗೆ ರಜೆ, 244 ದಿನ ಶಾಲಾ ಕರ್ತವ್ಯದ ದಿನಗಳು ಎಂದು ನಿಗದಿ ಪಡಿಸಲಾಗಿದೆ. ಮಕ್ಕಳು ಮತ್ತು ಶಿಕ್ಷಕರಿಗೆ 121 ದಿನಗಳ ಒಟ್ಟಾರೆ ರಜೆ ಸಿಗಲಿದೆ. …

Read More »

ಲಂಚ ಪಡೆಯುವಾಗ ಬಲೆಗೆ ಬಿದ್ದ ಶಿಕ್ಷಣಾಧಿಕಾರಿಗೆ ಒಂದು ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ

ಯಾದಗಿರಿ: ಲಂಚ ಪಡೆಯುವಾಗ ಲೋಕಾಯುಕ್ತ ಬಲಗೆ ಬಿದ್ದಿದ್ದ ಶಿಕ್ಷಣ ಇಲಾಖೆ ಅಧಿಕಾರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಯಾದಗಿರಿ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಬಸವರಾಜ ಇನಾಮಾದಾರ ಅವರು ಶಿಕ್ಷೆಗೆ ಒಳಗಾದವರು. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ವಿಚಾರಣೆ ನಡೆಸಿದ ವಿಶೇಷ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಎ.ಸ್ ರೇಖಾ ಅವರು ಶಿಕ್ಷಣಾಧಿಕಾರಿ ವೆಂಕಯ್ಯರಿಗೆ ಒಂದು ವರ್ಷ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

Read More »

ಪೋಕ್ಸೊ ಪ್ರಕರಣ: ತಲೆಮರೆಸಿಕೊಂಡಿದ್ದ ಶಿಕ್ಷಕ ಸೆರೆ

ಮೂಡುಬಿದಿರೆ: ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿ ಪೋಕ್ಸೊ ಪ್ರಕರಣ ಎದುರಿಸುತ್ತಾ ತಲೆಮರೆಸಿಕೊಂಡಿದ್ದ ಆರೋಪಿ ಕಲ್ಲಮುಂಡ್ಕೂರು ಪ್ರೌಢಶಾಲೆಯ ಶಿಕ್ಷಕ ಗುರು ಎಂ.ಪಿ.ಯನ್ನು ಗುರುವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಪೋಕ್ಸೊ ಪ್ರಕರಣದಿಂದಾಗಿ ಶಾಲೆಯಿಂದ ಅಮಾನತುಗೊಂಡಿದ್ದ ಆರೋಪಿ ಗುರು ಇತ್ತೀಚೆಗೆ ಜಿಲ್ಲಾ ಸೆಶನ್ಸ್‌ ಕೋರ್ಟ್‌ನಲ್ಲಿ ಸಲ್ಲಿಸಿದ್ದ ನಿರೀಕ್ಷಣ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಶಾಲೆಯ ಕೆಲವು ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಶಿಕ್ಷಕ ಗುರು ವಿರುದ್ಧ ಸಂತ್ರಸ್ತ ಮಕ್ಕಳು, ಅವರ ಹೆತ್ತವರು ಮತ್ತು …

Read More »

₹9.50 ಲಕ್ಷ ಮೌಲ್ಯದ ಚಿನ್ನಾಭರಣ ವಶ, ಆರೋಪಿ ಬಂಧನ

ಹುಬ್ಬಳ್ಳಿ: ಗೋಕುಲ ಬಸ್‌ ನಿಲ್ದಾಣದಲ್ಲಿ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿ ಮಹಿಳೆಯನ್ನು ಗೋಕುಲ ಠಾಣೆ ಪೊಲೀಸರು ಬಂಧಿಸಿ, ₹9.50 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ತಮಿಳುನಾಡಿನ ಕುಪ್ಪಂ ನಿವಾಸಿ ಸಂಧ್ಯಾ ಬಂಧಿತ ಆರೋಪಿ.ಬಸ್‌ ನಿಲ್ದಾಣದ ಪ್ಲಾಟ್‌ಫಾರ್ಮ್‌ 4ರ ಬಳಿ ಜನವರಿ 5ರಂದು ಮಹಿಳೆ ಬಸ್‌ ಹತ್ತುವಾಗ, ಆರೋಪಿ ಅವರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 139 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಳು. ಗೋಕುಲ ರೋಡ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. …

Read More »

ಕಳ್ಳನ ಬಂಧನ: 3 ಲಕ್ಷ ರೂ. ಮೌಲ್ಯದ ಸೊತ್ತುಗಳ ವಶ

ಸುರತ್ಕಲ್‌: ಇಲ್ಲಿನ ಮುಂಚೂರು ಸಮೀಪ ರೈಲ್ವೇ ಹಳಿ ಬಳಿಯ ಬಾಡಿಗೆ ಮನೆಯೊಂದರಿಂದ ನಗದು ಸಹಿತ ಚಿನ್ನ, ಬೆಳ್ಳಿಯ ಸೊತ್ತುಗಳನ್ನು ಕಳವುಗೈದಿದ್ದ ಆರೋಪಿಯನ್ನು 24 ಗಂಟೆಯಲ್ಲೇ ಪೊಲೀಸರು ಬಂಧಿಸಿದ್ದಾರೆ. ಹೊಸಕೋಟೆ ನಿವಾಸಿ ಜಂಬಯ್ಯ (24) ಬಂಧಿತ ಆರೋಪಿ. ಈತ ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಮೊಬೈಲ್‌ ಅನ್ನು ವಶಕ್ಕೆ ಪಡೆಯಲಾಗಿದೆ.

Read More »