Breaking News

Monthly Archives: ಮಾರ್ಚ್ 2024

ಶೋಭಾ ಕರಂದ್ಲಾಜೆ ವಿರುದ್ಧ ಚುನಾವಣಾ ಆಯೋಗಕ್ಕೆ ಡಿಎಂಕೆ ದೂರು!

ಚೆನ್ನೈ: ಬಿಜೆಪಿ ನಾಯಕಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಬುಧವಾರ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಇತ್ತೀಚೆಗೆ ಬೆಂಗಳೂರಿನ ಕುಂದಲಹಳ್ಳಿ ಬಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್​ ಸ್ಫೋಟಕ್ಕೆ ತಮಿಳುನಾಡು ಕಾರಣ ಎಂದು ಮಂಗಳವಾರ ಹೇಳಿದ್ದರು.     ತಮಿಳುನಾಡು ಕರ್ನಾಟಕದ ಜನರ ಮಧ್ಯೆ ಕೋಮು ದ್ವೇಷದ ಭಾಷಣ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ರಾಷ್ಟ್ರೀಯ ತನಿಖಾ ದಳ ಯಾರನ್ನೂ ಬಂಧನ ಮಾಡಿಲ್ಲ. …

Read More »

ಬಣ್ಣ ಹಚ್ಚಿದ ಜಾನಪದ ಗಾಯಕ ಮಾಳು ನಿಪನಾಳ

ಕರಟಕ ದಮನಕ (Karataka Damanka) ಚಿತ್ರದ ಹಿತ್ಲಕ ಕರಿಬ್ಯಾಡ ಮಾವ ಹಾಡೂ ಹಿಟ್ ಆಗಿದೆ. ಸಿನಿಮಾ ಬರೋ ಮೊದ್ಲು, ಸಿನಿಮಾ ಬಂದ್ಮೇಲೆ ಹೀಗೆ ಎರಡೂ ಟೈಮ್‌ನಲ್ಲೂ ಈ ಹಾಡು ಹಿಟ್ (Song Hit) ಆಗಿ ವೈರಲ್ ಆಗಿದೆ. ಶಾಲೆಯ ಬಸ್‌ಗಳಲ್ಲೂ ಈ ಹಾಡು ಉತ್ತರ ಕರ್ನಾಟಕದಲ್ಲಿ ಕೇಳಿ ಬರುತ್ತದೆ. ಟ್ರ್ಯಾಕ್ಟರ್‌ನಲ್ಲಿ ಇದು ಕಾಮನ್ ಅನ್ನೋಮಟ್ಟಿಗೆ ಹಿಟ್ ಆಗಿದೆ. ಆದರೆ ಈಗ ವಿಷಯ ಇಲ್ಲ ಬಿಡಿ. ಈ ಹಾಡನ್ನ ಹಾಡಿರೋ ಉತ್ತರ …

Read More »

ಲೋಕಸಭೆ ಚುನಾವಣಾ ನೀತಿ ಸಂಹಿತೆ ಜಾರಿ : ರಾಜಕಾರಣಿಗಳಿಗೆ ಸರ್ಕಾರಿ ವಾಹನ ನೀಡದಂತೆ ಸೂಚನೆ

ಬೆಂಗಳೂರು : ಲೋಕಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಈಗಾಗಲೇ ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜಕಾರಣಿಗಳಿಗೆ ಸರ್ಕಾರಿ ವಾಹನ ನೀಡದಂತೆ ಸೂಚನೆ ನೀಡಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಬಗ್ಗೆ ಆದೇಶ ಹೊರಡಿಸಿದ್ದು, ಸರ್ಕಾರಿ ವಾಹನಗಳ ಬಳಕೆ ಕುರಿತಂತೆ ಚುನಾವಣಾ ಆಯೋಗ ರೂಪಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ.   ಸರ್ಕಾರಿ ವಾಹನಗಳನ್ನು ರಾಜಕಾರಣಿಗಳು ಹಾಗೂ ರಾಜಕೀಯ ಪಕ್ಷಗಳು ಯಾವುದೇ ಕಾರ್ಯಕ್ಕೂ ಬಳಸಬಾರದು. …

Read More »

ಮೊದಲ ಹಂತದ ಲೋಕಸಭೆ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

ನವದೆಹಲಿ: ಪ್ರಜಾಪ್ರಭುತ್ವದ ಹಬ್ಬವೆಂದೇ ಹೇಳಲಾಗುವ ಲೋಕಸಭೆ ಚುನಾವಣೆ ಇಂದಿನಿಂದ ಆರಂಭವಾಗಲಿದೆ, ಮೊದಲ ಹಂತದಲ್ಲಿ ಏಪ್ರಿಲ್ 19ರಂದು 21 ರಾಜ್ಯಗಳ 102 ಲೋಕಸಭಾ ಕ್ಷೇತ್ರಗಳಿಗೆ ಬುಧವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಮೊದಲ ಹಂತದಲ್ಲಿ ಅಂಡಮಾನ್ ಮತ್ತು ನಿಕೋಬಾರ್, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ದೆಹಲಿ, ಹಿಮಾಚಲ ಪ್ರದೇಶ, ಗೋವಾ, ಗುಜರಾತ್, ಕೇರಳ, ತಮಿಳುನಾಡು, ಪಂಜಾಬ್, ತೆಲಂಗಾಣ, ಉತ್ತರಾಖಂಡ ಸೇರಿ ವಿವಿಧ ರಾಜ್ಯಗಳ 102 ಕ್ಷೇತ್ರಗಳಿಗೆ ಚುನಾವಣಾ ಪ್ರಕ್ರಿಯೆ ಇಂದಿನಿಂದ ಆರಂಭವಾಗಲಿದೆ. ಮಾರ್ಚ್ 27ರವರೆಗೆ ನಾಮಪತ್ರ …

Read More »

ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಬ್ರದರ್ಸ್ ಕುಕ್ಕರ್ ಹಂಚುತ್ತಿದ್ದಾರೆ : ಹೆಚ್‌ಡಿಕೆ ಆರೋಪ

ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಬ್ರದರ್ಸ್ ಕುಕ್ಕರ್ ಹಂಚುತ್ತಿದ್ದಾರೆ : ಹೆಚ್‌ಡಿಕೆ ಆರೋಪ   ಬೆಂಗಳೂರು,- ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮತದಾರರಿಗೆ ಹಂಚಲು ನಾಲ್ಕು ಲಕ್ಷ ಕುಕ್ಕರ್ಗಳನ್ನು ಕಾಂಗ್ರೆಸ್ನವರು ಲೋಡ್ ಮಾಡಿದ್ದಾರೆಂದು ಆರೋಪಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಚುನಾವಣಾ ಆಯೋಗ ಮಧ್ಯಪ್ರವೇಶ ಮಾಡಿ ಈ ರೀತಿಯ ಆಮಿಷವೊಡ್ಡುವುದನ್ನು ತಡೆಯಬೇಕೆಂದು ಒತ್ತಾಯಿಸಿದರು.

Read More »

ಏ.1ರಿಂದ ದುಬಾರಿಯಾಗಲಿವೆ ಔಷಧಗಳು

ಬೆಂಗಳೂರು,- ಏಪ್ರಿಲ್ 1ರಿಂದ ಔಷಧಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಪೈನ್ಕಿಲ್ಲರ್, ಆಯಂಟಿ ಇನೆಕ್ಷನ್ ಸೇರಿದಂತೆ ಸುಮಾರು 800 ಪ್ರಮುಖ ಔಷಧಗಳ ಬೆಲೆಯಲ್ಲಿ ಏರಿಕೆ ಕಂಡು ಬರಲಿದೆ. ಹೋಲ್ಸೇಲ್ ಪ್ರೈಸ್ ಇಂಡೆಕ್ಸ್ ಬದಲಾವಣೆಯ ನಂತರ ರಾಷ್ಟ್ರೀಯ ಅಗತ್ಯ ಪಟ್ಟಿಯಲ್ಲಿ ಔಷಧಿಗಳ ಬೆಲೆಯಲ್ಲಿ ಶೇ.0.0055ರಷ್ಟು ಹೆಚ್ಚಳವನ್ನು ಸರ್ಕಾರ ಅನುಮೋದಿಸಲಿದೆ.   ಹಣದುಬ್ಬರದ ಪರಿಣಾಮವಾಗಿ ಔಷಧ ಕಂಪನಿಗಳು ಬೆಲೆ ಏರಿಕೆ ಮಾಡುವಂತೆ ಕೆಲ ದಿನಗಳಿಂದ ಬೇಡಿಕೆ ಇಟ್ಟಿದ್ದವು. 2022ರಲ್ಲಿ ಔಷಧಗಳ ಬೆಲೆಯನ್ನು ಶೇ.10ರಿಂದ 12ರವರೆಗೆ …

Read More »

ಕೇಂದ್ರ, ರಾಜ್ಯ ವಿವಿಧ ಇಲಾಖೆ ಸಿಬ್ಬಂದಿಗಳಿಗೆ ಅಂಚೆ ಮತದಾನಕ್ಕೆ ಅವಕಾಶ

ಬಳ್ಳಾರಿ : ಲೋಕಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ವಿವಿಧ ಚುನಾವಣಾ ಕಾರ್ಯಗಳಿಗೆ ನಿಯೋಜಿಸಿದ ಅಧಿಕಾರಿಗಳು ಮತ್ತು ಖಾಸಗಿ ವಲಯಗಳ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಕಡ್ಡಾಯವಾಗಿ ಮತದಾನ ಮಾಡಬೇಕು. ಯಾರೂ ಮತದಾನದಿಂದ ಹೊರಗುಳಿಯಬಾರದು ಎಂದು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಅವರು ಹೇಳಿದರು. ಮಂಗಳವಾರ, ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಅಂಚೆ ಮತಪತ್ರ ವಿತರಣೆ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. …

Read More »

ಬೆಂಗಳೂರಲ್ಲಿ ಶಾಲೆಯ ಸಮೀಪವೇ ಜಿಲೆಟಿನ್ ಪತ್ತೆ

ಬೆಂಗಳೂರು,- ನಗರದ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ಘಟನೆ ಮಾಸುವ ಮುನ್ನವೇ ನಗರದ ಶಾಲೆಯೊಂದರ ಸಮೀಪದ ಖಾಲಿ ನಿವೇಶನದಲ್ಲಿ ಸ್ಪೋಟಕವಸ್ತುಗಳು ಪತ್ತೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.’ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿಯ ಶಾಲೆಯ ಮುಂಭಾಗದ ಖಾಲಿ ಜಮೀನಿನಲ್ಲಿ ನಿಲ್ಲಿಸಲಾಗಿದ್ದ ಟ್ರ್ಯಾಕ್ಟರ್ವೊಂದರಲ್ಲಿ ಜಿಲೆಟಿನ್ ಕಡ್ಡಿ, ಎಲೆಕ್ಟ್ರಿಕಲ್ ಡಿಟೋನೇಟರ್ ಸೇರಿದಂತೆ ಇತರೆ ಕೆಲವು ಸ್ಪೋಟಕ ವಸ್ತುಗಳು ಪತ್ತೆಯಾಗಿದ್ದು,ಆತಂಕಕ್ಕೆ ಕಾರಣವಾಗಿದೆ. ಬಂಡೆಗಳನ್ನು ಸ್ಪೋಟಿಸಲು ಸ್ಪೋಟಕಗಳನ್ನು ತಂದು ಇಲ್ಲಿಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಈ …

Read More »

ಶೆಟ್ಟರ್‌ಗೆ ದಿಗಿಲು, ಯಾರ ಟಿಕೆಟ್‌ ಬದಲು?

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಪಾಲಿಗೆ ಬಾಕಿ ಉಳಿದಿರುವ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ವರಿಷ್ಠರಿಗೂ ತಲೆಬಿಸಿ ಸೃಷ್ಟಿಸಿದೆ. ಬೆಳಗಾವಿಯಲ್ಲಿ ಎದುರಾಗಿರುವ ಪ್ರತಿರೋಧದ ಬಿಸಿಯಿಂದ ಜಗದೀಶ್‌ ಶೆಟ್ಟರ್‌ ದಿಗಿಲುಗೊಂಡಿ ದ್ದಾರೆ. ಇದೆಲ್ಲದರ ಮಧ್ಯೆ ಒಂದು ಕ್ಷೇತ್ರದ ಟಿಕೆಟ್‌ ಬದಲಾಗಬಹುದೆಂಬ ಚರ್ಚೆ ಬಿಜೆಪಿ ವಲಯದಲ್ಲಿ ಬಲವಾಗಿದ್ದು, ಬುಧವಾರ ಪ್ರಧಾನಿ ನೇತೃತ್ವದಲ್ಲಿ ನಡೆ ಯುವ ಕೇಂದ್ರೀಯ ಚುನಾವಣ ಸಮಿತಿ (ಸಿಇಸಿ) ಸಭೆಯಲ್ಲಿ ಎಲ್ಲ ಕುತೂಹಲಗಳಿಗೂ ತೆರೆ ಬೀಳಬಹುದು ಎಂದು ನಿರೀಕ್ಷಿಸಲಾಗಿದೆ. ಸಿಇಸಿಗೆ ಪೂರ್ವಭಾವಿಯಾಗಿ ನಡೆಯುವ …

Read More »

ಸಿದ್ಧೇಶ್ವರ ಜಾತ್ರೆಯಲ್ಲಿ ಹರಿದ ಭಂಡಾರದ ಹೊಳೆ

ಚಿಕ್ಕೋಡಿ: ಹಂಡ ಕುದರಿ ಪುಂಡ ಅರಣ್ಯಸಿದ್ಧಗ ಚಾಂಗ್ ಭಲೋ… ಬಿಳಿ ಗುಡಿ ಅರಣ್ಯಸಿದ್ಧಗ ಚಾಂಗ ಭಲೋ… ಎಂಬ ಉದ್ಘೋಷ ಇಡೀ ಕ್ಷೇತ್ರದಲ್ಲಿ ಮೊಳಗಿತು. ರಣಬಿಸಿಲಿನ ಮಧ್ಯೆಯೂ ಭಂಡಾರದ ಹೊಳೆ ಹರಿಸಿದ ಭಕ್ತರು, ಸಂಭ್ರಮದಲ್ಲಿ ಮಿಂದೆದ್ದರು. ಊರಿಗೆ ಊರೇ ಹಳದಿಮಯವಾಗಿತ್ತು. ತಾಲ್ಲೂಕಿನ ಕೆರೂರಿನಲ್ಲಿ ಅರಣ್ಯ ಸಿದ್ಧೇಶ್ವರ ಹಾಗೂ ಮಲಕಾರಿ ಸಿದ್ಧೇಶ್ವರ ಜಾತ್ರೆ ಕೊನೆಯ ದಿನವಾದ ಸೋಮವಾರ ನಡೆದ ಭಂಡಾರದ ಓಕುಳಿಯಲ್ಲಿ ಕಂಡುಬಂದ ದೃಶ್ಯಗಳಿವು. ಮಾರ್ಚ್‌ 13ರಂದು ಆರಂಭಗೊಂಡ ಈ ಜಾತ್ರೆ ‘ನಿವ್ವಾಳಕಿ’ …

Read More »