ಹಾವೇರಿ: ರಾಜ್ಯದಲ್ಲಿ ಬಿಜೆಪಿ ಪಕ್ಷದಿಂದಾಗಿ ಅಭಿವೃದ್ಧಿಯಾಗಿದೆ. ರಾಜ್ಯದಲ್ಲಿ ಈ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಆರ್ಥಿಕ ಸ್ಥಿತಿ ಅಯೋಮಯಾಗಿದೆ. ರಾಜ್ಯದ ಬರಗಾಲ ನಿವಾರಣೆಗೆ ಸಭೆ ಮಾಡಿದರಷ್ಟೇ ಸಾಲದು. ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು, ಆಗ ಬದುಕಿಗೆ ಹತ್ತಿರವಾಗುತ್ತದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ರಾಣೇಬೆನ್ನೂರು ತಾಲೂಕು ಮಾಕನೂರಿನಲ್ಲಿ ಮಾತನಾಡಿದ ಅವರು, ಎಚ್.ಕೆ. ಪಾಟಿಲ್ ಅವರು ಹೇಳಿದ ಪ್ರತಿ ಮಾತಿಗೆ ಉತ್ತರ ನೀಡಬೇಕೆಂದು ಏನಿಲ್ಲ. ಯಾರ ಬದುಕೆಂದು …
Read More »Monthly Archives: ಮಾರ್ಚ್ 2024
ಬತ್ತಿದ ಕೆರೆಗಳು; ಮೀನು ಉತ್ಪಾದನೆಗೆ ಬರ
ಬೆಳಗಾವಿ: ರಾಜ್ಯದಲ್ಲಿ ತಲೆದೋರಿರುವ ಬರಗಾಲದ ಹೊಡೆತ ಮೀನು ಸಾಕಾಣಿಕೆ ಮೇಲೂ ಬಿದ್ದಿದ್ದು, ಬಹುತೇಕ ಕೆರೆಗಳಲ್ಲಿ ನೀರಿನ ಅಭಾವದಿಂದ ಮೀನು ಉತ್ಪಾದನೆ ಇಳಿಮುಖಗೊಂಡಿದೆ. ಮೀನು ಸಾಕಾಣಿಕೆ ಮಾಡುವ ಕುಟುಂಬಗಳು ಸಂಕಷ್ಟಕ್ಕೀಡಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಕೇವಲ 127 ಕೆರೆಗಳಲ್ಲಿ ಮೀನಿನ ಮರಿ ಬಿತ್ತನೆ ಮಾಡಲಾಗಿದೆ. ಕಳೆದ ವರ್ಷ ಮೀನು ಉತ್ಪಾದನೆಯಲ್ಲಿ ಆದ ಲಾಭ ಈ ಬಾರಿ ಸಿಗುವುದು ಅಸಾಧ್ಯವಾಗಿದೆ. ಕೆರೆಗಳಲ್ಲಿ ನೀರಿನ ಕೊರತೆ ಮೀನುಗಳ ಹುಟ್ಟು ಹಾಗೂ ಬೆಳವಣಿಗೆ ಮೇಲೆ ಭಾರೀ …
Read More »ಕಿಟಕಿ ತೆರೆದು ದಂಪತಿ ಸರಸ ಸಲ್ಲಾಪ, ಬೆಡ್ ರೂಮ್ ಕಿಟಕಿ ಹಾಕಿಕೊಳ್ಳುವಂತೆಯೂ ಮನವಿ,ವಿಚಿತ್ರ ದೂರೊಂದು ದಾಖಲ…
ಬೆಂಗಳೂರು, ಮಾರ್ಚ್ 20: ಇತ್ತೀಚಿನ ದಿನಗಳಲ್ಲಿ ಯುವಕ, ಯುವತಿಯರು ಮೈಮರೆತು ಸರಸ ಸಲ್ಲಾಪದಲ್ಲಿ ತೊಡಗುವುದು ಹೆಚ್ಚಾಗುತ್ತಿವೆ ಎನ್ನುವ ಸುದ್ದಿಗಳು ಆಗುತ್ತಲೇ ಇರುತ್ತವೆ. ಆದರೆ ಬೆಂಗಳೂರಿನ ಈ ನಗರದಲ್ಲಿ ವಿಚಿತ್ರ ಪ್ರಕರಣವೊಂದು ದಾಖಲಾಗಿದೆ. ಹಾಗಾದರೆ ಆ ಪ್ರಕರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ವಿಚಿತ್ರ ದೂರೊಂದು ದಾಖಲಾಗಿದೆ. ಪಕ್ಕದ ಮನೆ ದಂಪತಿಯು ಕಿಟಕಿ ತೆರೆದು ಸರಸ ಸಲ್ಲಾಪದಲ್ಲಿ ತೊಡಗುತ್ತಿದ್ದಾರೆ. ಇದರಿಂದ ನಮಗೆ ತುಂಬಾ ಸಮಸ್ಯೆ ಆಗುತ್ತಿದೆ …
Read More »CSK’ ನಾಯಕತ್ವಕ್ಕೆ ‘ಧೋನಿ’ ಗುಡ್ ಬೈ,
ನವದೆಹಲಿ : ಐಪಿಎಲ್ 2024ರ ಮೊದಲು, ಚೆನ್ನೈ ಸೂಪರ್ ಕಿಂಗ್ಸ್ ಹೊಸ ನಾಯಕನನ್ನ ಘೋಷಿಸಿದ್ದು, ಇದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ . ಎಂಎಸ್ ಧೋನಿ ಇದ್ದಕ್ಕಿದ್ದಂತೆ ನಾಯಕತ್ವವನ್ನ ತೊರೆದಿದ್ದು, ಈಗ ಋತುರಾಜ್ ಗಾಯಕ್ವಾಡ್ ಅವರನ್ನ ಚೆನ್ನೈ ತಂಡದ ಹೊಸ ನಾಯಕನನ್ನಾಗಿ ಮಾಡಲಾಗಿದೆ. ಧೋನಿ ಕಳೆದ ಋತುವಿನಲ್ಲಿ ಚೆನ್ನೈ ಪರ ಐದನೇ ಬಾರಿಗೆ ಐಪಿಎಲ್ ಗೆದ್ದಿದ್ದರು ಮತ್ತು ಈಗ ಅವರು ತಂಡದ ಕಮಾಂಡ್’ನ್ನ ಗಾಯಕ್ವಾಡ್’ಗೆ ಹಸ್ತಾಂತರಿಸಿದ್ದಾರೆ.
Read More »ಸ್ಕ್ರೀನಿಂಗ್ ಕಮಿಟಿ ಮುಂದಿದ್ದ ಪಟ್ಟಿಯಲ್ಲಿ ವೀಣಾ ಹೆಸರೇ ಇರಲಿಲ್ಲ ಸಂಯುಕ್ತ ಪಾಟೀಲ್ ಯಾರು ಅನ್ನೋದು ಯಾವ ಶಾಸಕನಿಗೂ ಗೊತ್ತಿಲ್ಲ: ಕಾಶಪ್ಪನವರ್
ಸಂಯುಕ್ತ ಪಾಟೀಲ್ ಯಾರು ಅನ್ನೋದು ಬಾಗಲಕೋಟೆ ಜಿಲ್ಲೆಯ ಯಾವ ಶಾಸಕನಿಗೂ ಗೊತ್ತಿಲ್ಲ, ಅವರು ತಮ್ಮನ್ನು ಕೂಡ ಯಾವತ್ತೂ ಭೇಟಿಯಾಗಿಲ್ಲ, ಅಸಲಿಗೆ ಅವರು ರೇಸ್ ನಲ್ಲಿರಲಿಲ್ಲ, ತನ್ನ ಪತ್ನಿ ಮತ್ತು ಅಜಯಕುಮಾರ್ ಸರ್ನಾಯಕ್-ಇಬ್ಬರ ಹೆಸರುಗಳನ್ನು ಮಾತ್ರ ಸಿಇಸಿಗೆ ಕಳಿಸಲಾಗಿತ್ತು. ದೆಹಲಿ:ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಕೆಂಡಾಮಂಡಲರಾಗಿದ್ದಾರೆ. ಅದುಕಾಂಗ್ರೆಸ್ ಶಾಸಕ ಸ್ವಾಭಾವಿಕವೂ ಹೌದು. ಅವರ ಪತ್ನಿ ವೀಣಾ ಕಾಶಪ್ಪನವರ್ ಗೆ (Veena Kashappanavar) ಬಾಗಲಕೋಟೆ ಲೋಕಸಭಾ ಕ್ಷೇತ್ರದ (Bagalkot Lok Sabha …
Read More »ಮಂಡ್ಯ ಬಿಟ್ಟು ಬೇರೆ ಕಡೆ ಸ್ಪರ್ಧಿಸಲ್ಲ: ಸುಮಲತಾ
ಬೆಂಗಳೂರು: ‘ನಾನು ಏನೇ ರಾಜಕೀಯ ಮಾಡಿದರೂ ಅದು ಮಂಡ್ಯದಲ್ಲಿ. ಇದನ್ನು ವರಿಷ್ಠರಿಗೆ ಹೇಳಿ ಬಂದಿದ್ದೇನೆ. ಬಿಜೆಪಿ ವರಿಷ್ಠರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಇದೇ 22ರವರೆಗೆ ಕಾಯುವಂತೆಯೂ ಹೇಳಿದ್ದಾರೆ’ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹೇಳಿದರು. ದೆಹಲಿಯಿಂದ ವಾಪಸಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬೆಂಗಳೂರು ಉತ್ತರ ಕ್ಷೇತ್ರಕ್ಕೇ ನಾನು ಹೋಗಲಿಲ್ಲ. ಇನ್ನು ಚಿಕ್ಕಬಳ್ಳಾಪುರಕ್ಕೆ ಹೋಗುತ್ತೇನೆಯೇ? ಮಂಡ್ಯ ಕ್ಷೇತ್ರವನ್ನು ಬಿಟ್ಟು ಬೇರೆಲ್ಲೂ ಸ್ಪರ್ಧೆ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. ದೆಹಲಿಗೆ …
Read More »ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷವನ್ನು ಬಿಡುವುದಿಲ್ಲ : ರಮೇಶ್ ಕತ್ತಿ ಸ್ಪಷ್ಟನೆ
ಬೆಳಗಾವಿ : ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ರಮೇಶ್ ಕತ್ತಿ ಅವರಿಗೆ ಟಿಕೆಟ್ ಮಿಸ್ ಆಗಿದ್ದು ಅಣ್ಣ ಸಾಹೇಬ ಜೊಲ್ಲೆಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿದೆ ಈ ಕುರಿತು ರಮೇಶ್ ಕತ್ತಿ ಬೇಸರ ವ್ಯಕ್ತಪಡಿಸಿದ್ದು, ಯಾಕೆ ಟಿಕೆಟ್ ಕೈತಪ್ಪಿದೆ ಎಂದು ನನಗೆ ಮಾಹಿತಿ ಇಲ್ಲ ಎಂದು ಅವರು ಬೇಸರ ಹೊರಹಕಿದ್ದಾರೆ. ಚಿಕ್ಕೋಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಚಿಕ್ಕೋಡಿಯಿಂದ ಅಣ್ಣಾ ಸಾಹೇಬ ಜೊಲ್ಲೆಗೆ ಟಿಕೆಟ್ ನೀಡಿದ್ದಾರೆ.ಪಕ್ಷದ ಕಾರ್ಯಕರ್ತನಾಗಿ ಅವರ ಗೆಲುವಿಗೆ ನಾನು ಶ್ರಮಿಸುತ್ತೇನೆ. …
Read More »‘ಪಕ್ಷೇತರ’ ಅಭ್ಯರ್ಥಿಯಾಗಿ ಸಂಗಣ್ಣ ಕರಡಿ ಸ್ಪರ್ಧೆ
ಕೊಪ್ಪಳ : ತಮ್ಮ ಮಗನಿಗೆ ಲೋಕಸಭಾ ಟಿಕೆಟ್ ಸಿಕ್ಕಿಲ್ಲವೆಂದು ಈಗಾಗಲೇ ಬಿಜೆಪಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಬಂಡಾಯವೇದಿದ್ದು ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಇದೀಗ ಬಿಜೆಪಿ ಮತ್ತೊಬ್ಬ ನಾಯಕ ಬಂಡಾಯವೇದಿದ್ದು ಕೊಪ್ಪಳದಿಂದ ಸಂಸದ ಕರಡಿ ಸಂಗಣ್ಣ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ. ಹೌದು ಕೆಎಸ್ ಈಶ್ವರಪ್ಪ ಬಳಿಕ ಮತ್ತೊಬ್ಬ ಬಿಜೆಪಿ ನಾಯಕ ಬಂಡಾಯವೆದ್ದಿದ್ದು, ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಸಂಗಣ್ಣ …
Read More »ರೇಣುಕಾಚಾರ್ಯ ಅವರನ್ನು ಪಕ್ಷದಿಂದ ಹೊರ ಹಾಕುವಂತೆ ಹೈಕಮಾಂಡ್ ಸೂಚಿಸಿದೆಯಾ..?
ದಾವಣಗೆರೆ: ಲೋಕಸಭಾ ಚುನಾವಣೆಯಲ್ಲಿ ಕೆಲವು ಭಿನ್ನಾಭಿಪ್ರಾಯ ಹೊಗೆಯಾಡುತ್ತಿದೆ. ಕೆಲವರು ಬಂಡಾಯವನ್ನೇ ಎದ್ದಿದ್ದಾರೆ. ದಾವಣಗೆರೆಯ ವಿಚಾರದಲ್ಲೂ ಅಷ್ಟೇ ಟಿಕೆಟ್ ವಿಚಾರಕ್ಕೆ ರೇಣುಕಾಚಾರ್ಯ ಬೇಸರ ಮಾಡಿಕೊಂಡು ಕೂತಿದ್ದಾರೆ. ಸಂಸದ ಸಿದ್ದೇಶ್ವರ ಪತ್ನಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಕೋಪ ಹೊರಗೆ ಹಾಕಿದ್ದಾರೆ. ಅಷ್ಟೇ ಅಲ್ಲ ಅತೃಪ್ತರ ತಂಡ ಕಟ್ಟಿಕೊಂಡು ಬಹಿರಂಗವಾಗಿಯೇ ಸಭೆ ನಡೆಸಿದ್ದಾರೆ. ರೇಣುಕಾಚಾರ್ಯರ ಟೀಂ ಹೈಕಮಾಂಡ್ ನಾಯಕರಿಗೆ ಟಿಕೆಟ್ ಬದಲಿಸುವಂತೆ ಸೂಚನೆ ನೀಡಿದೆ. ಹೀಗಾಗಿ ಹೈಕಮಾಂಡ್ ನಿಂದ ಎಚ್ಚರಿಕೆಯ ಸಂದೇಶ ಸಿಕ್ಕಿದೆ. ಹೈಕಮಾಂಡ್ ಸೂಚನೆ …
Read More »ಯಾವ ಕ್ಷೇತ್ರದಲ್ಲಿ ಯಾವ ಪಕ್ಷ ಗೆಲ್ಲಲಿದೆ?
ರಾಜ್ಯದಲ್ಲಿ ಕೂಡ ಲೋಕಸಭಾ ಚುನಾವಣಾ ಕಾವು ಜೋರಾಗಿದ್ದು, ಮೂರು ಪಕ್ಷಗಳೂ ಗೆಲುವಿನ ಲೆಕ್ಕಾಚಾರದಲ್ಲಿ ಇವೆ. ಈ ಮಧ್ಯೆ ಇಂಡಿಯಾ ಟಿವಿ ತಾಜಾ ಸಮೀಕ್ಷೆ ಹೊರ ಬಿದ್ದಿದ್ದು, ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಇಂಡಿಯಾ ಟಿವಿಯ ಸಮೀಕ್ಷೆಯಂತೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ರಾಜ್ಯದಲ್ಲಿ ಭರ್ಜರಿ ಗೆಲುವು ಸಾಧಿಸಲಿದೆ.ಆದರೆ, ಕಳೆದ ಬಾರಿಯಷ್ಟು ಸ್ಥಾನಗಳು ಬಿಜೆಪಿಗೆ ಸಿಗುವುದಿಲ್ಲ. ಕೆಲವು ಸ್ಥಾನ ಕೈ ತಪ್ಪುವ ಸಾಧ್ಯತೆ ಇದೆ. ತೆಲಂಗಾಣದಲ್ಲಿ …
Read More »