Breaking News

Daily Archives: ಮಾರ್ಚ್ 29, 2024

ಗುದದ್ವಾರಕ್ಕೆ ಏರ್‌ಬಿಟ್ಟು ಯುವಕ ದುರ್ಮರಣ!

ಬೆಂಗಳೂರು: ಇಬ್ಬರು ಸ್ನೇಹಿತರು ತಮಾಷೆ ಮಾಡುವ ಬರದಲ್ಲಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ವಾಹನ ಸರ್ವೀಸ್‌ ಸೆಂಟರ್‌ನಲ್ಲಿದ್ದ ಏರ್‌ ಪ್ರೆಶರ್‌ ಮೆಶಿನ್‌ ಗಾಳಿಯು ಗುದದ್ವಾರದ ಮೂಲಕ ಕರಳಿಗಿ ನುಗ್ಗಿ ಯುವಕ ಸಾವಿಗೀಡಾಗಿದ್ದಾನೆ.ಅಶ್ವತ್ಥ ನಗರದ ಯೋಗೇಶ್‌ (23) ಮೃತ ದುರ್ದೈವಿ. ಮಾರ್ಚ್‌ 25 ರಂದು ರಾತ್ರಿ ಯೋಗೇಶ್‌ ಗುದದ್ವಾರಕ್ಕೆ ಏರ್‌ಪ್ರೆಶರ್‌ ಗನ್‌ ಇಟ್ಟು ಸಾವಿಗೆ ಕಾರಣವಾದ ಆರೋಪದ ಮೇರೆಗೆ ಥಣಿಸಂದ್ರದ ಮುರುಳಿ (24) ಎಂಬುವನನ್ನು ಪೊಲೀಸರುಬಂಧಿಸಿದ್ದಾರೆ. ಯೋಗೇಶ್ ಹಾಗೂ ಮುರುಳಿ ಹಲವು …

Read More »

ಲೋಕಸಭೆ ಅಖಾಡ 2024 ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬೆಳಗಾವಿ: ಟಿಕೆಟ್‌ ಪಡೆಯುವ ವಿಚಾರದಲ್ಲಿ ಸಾಕಷ್ಟು ಆಕ್ಷೇಪಣೆಗಳನ್ನು ಎದುರಿಸಿದ್ದ ಜಗದೀಶ ಶೆಟ್ಟರ್‌ ಈಗ ಒಂದು ಹಂತದ ಆತಂಕ ನಿವಾರಿಸಿಕೊಂಡಿದ್ದಾರೆ. ಪಕ್ಷದ ಪ್ರಮುಖ ಪ್ರಭಾವಿ ನಾಯಕ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಜಿಲ್ಲಾ ನಾಯಕರ ಜತೆ ನಡೆದ ಸಂಧಾನ ಸಭೆ ಹಾಗೂ ಪ್ರಚಾರ ರ್ಯಾಲಿ ಶೆಟ್ಟರ್‌ ಅವರಿಗೆ ನೈತಿಕ ಬಲ ತಂದುಕೊಟ್ಟಿದೆ.   ಸಭೆಯಲ್ಲಿ ಜಗದೀಶ ಶೆಟ್ಟರ್‌ ಬಗ್ಗೆ ನಿರೀಕ್ಷೆ ಮಾಡಿದಂತೆ ಸ್ಥಳೀಯ ಮುಖಂಡರಿಂದ ಹಾಗೂ ಕಾರ್ಯಕರ್ತರಿಂದ ಅಂತಹ ಅಸಮಾಧಾನಗಳು ಕಂಡು ಬರಲಿಲ್ಲ. ಆದರೆ ಟಿಕೆಟ್‌ …

Read More »

‘ಲೋಕಾ’ ದಾಳಿಯಲ್ಲಿ ಪತ್ತೆಯಾಯ್ತು ಅಧಿಕಾರಿಯ ಆಕ್ರಮ ಸಂಪತ್ತು;17 ಸೈಟ್, 27 ಎಕರೆ ಕೃಷಿ ಭೂಮಿ:

ಕೊಪ್ಪಳ: ಕೊಪ್ಪಳದ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪ ಅವರಿಗೆ ಸೇರಿದ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಅಕ್ರಮ ಸಂಪತ್ತು ಹೊಂದಿರುವುದು ಪತ್ತೆಯಾಗಿದೆ. ಕೊಪ್ಪಳದ ಬಿ.ಟಿ. ಪಾಟೀಲ ನಗರದ ಬಾಡಿಗೆ ಮನೆ, ಗದಗದ ಮನೆ, ಕಚೇರಿ ಹಾಗೂ ರೋಣ ತಾಲೂಕಿನ ಮೆಣಸಗಿಯಲ್ಲಿರುವ ಮನೆ ಸೇರಿ ಒಟ್ಟು ಎಂಟು ಕಡೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಎರಡು ವರ್ಷಗಳಿಂದ ಸಹದೇವ ಕೊಪ್ಪಳ …

Read More »

ಕೇಂದ್ರ ಸರ್ಕಾರ ರಾಜ್ಯಕ್ಕೆ 2.30 ಲಕ್ಷ ಸಾವಿರ ಕೋಟಿ ರೂ. ನೀಡಿದೆ;ಜೋಶಿ

ಕರ್ನಾಟಕದಲ್ಲಿ ಬರಗಾಲ ಆವರಿಸಿದ್ದು, ಪರಿಹಾರ ನೀಡುವಂತೆ ಮನವಿ ಸಲ್ಲಿಸಿದರೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಇನ್ನೂ ಕೂಡ ಬರ ಪರಿಹಾರ ಘೋಷಣೆ ಮಾಡಿಲ್ಲ. ಹೀಗಾಗಿ ಬರ ಪರಿಹಾರ ಕೊಡಿಸುವಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್​ ಮೆರೆ ಹೋಗಿದೆ. ಈ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯಿಸಿ ಕಾಂಗ್ರೆಸ್ ಸುಳ್ಳಿನ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದರು

Read More »

ಕಾಂಗ್ರೆಸ್​ ತೊರೆದು ಶಿಂಧೆ ಬಣ ಸೇರ್ಪಡೆಯಾದ ಬಾಲಿವುಡ್​ ನಟ ಗೋವಿಂದ; ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಮುಂಬೈ: ಹಿರಿಯ ಬಾಲಿವುಡ್​ ನಟ, ಮಾಜಿ ಸಂಸದ ಗೋವಿಂದ ಗುರುವಾರ (ಮಾರ್ಚ್​ 28) ಕಾಂಗ್ರೆಸ್​ ತೊರೆದು ಶಿವಸೇನೆ (ಏಕನಾಥ್​ ಶಿಂಧೆ ಬಣ) ಸೇರ್ಪಡೆಯಾಗಿದ್ದಾರೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಏಕನಾಥ್​ ಶಿಂಧೆ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೋವಿಂದಾ ಅವರು ಮುಂಬೈ ವಾಯುವ್ಯ ಕ್ಷೇತ್ರದಿಂದ ಶಿವಸೇನೆ ಟಿಕೆಟ್ ಪಡೆದು ಸ್ಪರ್ಧಿಸುವ ಇರಾದೆ ಹೊಂದಿದ್ದಾರೆಂದು ಮೂಲಗಳು ತಿಳಿಸಿವೆ. 2004ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಗೋವಿಂದ ಬಿಜೆಪಿಯ ಧೀಮಂತ …

Read More »

ಕೆ.ಆರ್.ಎಸ್. ಅಣೆಕಟ್ಟಿಗೆ ಕಿಂಚಿತ್ತೂ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದ ಹೈಕೋರ್ಟ್

ಬೆಂಗಳೂರು: ಕೆ.ಆರ್.ಎಸ್. ಅಣೆಕಟ್ಟಿನ ಸುತ್ತಮುತ್ತ ಪ್ರದೇಶದಲ್ಲಿ ಯಾವುದೇ ರೀತಿಯ ಗಣಿಗಾರಿಕೆ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಅವಕಾಶ ನೀಡುವ ಕುರಿತು ತಜ್ಞರ ತೀರ್ಮಾನವೇ ಅಂತಿಮ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಣೆಕಟ್ಟೆಗೆ ಕಿಂಚಿತ್ತೂ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಮೊದಲಿಗಿಂತಲೂ ಈಗ ಹೆಚ್ಚಿದೆ ಎಂದು ನ್ಯಾಯಾಲಯ ತಿಳಿಸಿದೆ.ಸ್ಟೋನ್ ಕ್ರಷರ್ ಗೆ ಅವಕಾಶ ಕೋರಿ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಮಂಚಮ್ಮದೇವಿ ಸ್ಟೋನ್ ಕ್ರಶರ್ ಮತ್ತು ಎಂ ಸ್ಯಾಂಡ್ ಮಾಲೀಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ಮುಖ್ಯ …

Read More »