Breaking News

Daily Archives: ಮಾರ್ಚ್ 21, 2024

ಲೋಕಸಭೆ ಚುನಾವಣೆ: ಪಿಎಸ್‌ಐ ಲಿಖಿತ ಪರೀಕ್ಷೆ ಮುಂದೂಡಿಕೆ

ಬೆಂಗಳೂರು, ಮಾರ್ಚ್ 21: ಲೋಕಸಭೆ ಚುನಾವಣೆ 2024ರ ದಿನಾಂಕ ಘೋಷಣೆಯಾಗಿದೆ. ರಾಜ್ಯದ 28 ಕ್ಷೇತ್ರಗಳಿಗೆ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಈಗಾಗಲೇ ಜಾರಿಗೆ ಬಂದಿದೆ.ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಲಿಖಿತ ಪರೀಕ್ಷೆಯ ದಿನಾಂಕವನ್ನು ಮುಂದೂಡಿಕೆ ಮಾಡಿದೆ. ಮುಂದಿನ ಪರೀಕ್ಷಾ ದಿನಾಂಕವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಹೇಳಿದೆ.ಲೋಕಸಭೆ ಚುನಾವಣೆ ನೀತಿ …

Read More »

ಅಬಕಾರಿ ಅಕ್ರಮ ತಡೆಗಟ್ಟಲು ತಂಡಗಳ ರಚನೆ

ದಾವಣಗೆರೆ : ಲೋಕಸಭಾ ಚುನಾವಣೆ ನಡೆಯುತ್ತಿದ್ದು ಶಾಂತಯುತ, ಪಾರದರ್ಶಕ, ನಿಷ್ಪಕ್ಷಪಾತ ಚುನಾವಣೆ ನಡೆಸಲು ಅಕ್ರಮ ಕಳ್ಳಭಟ್ಟಿ ತಯಾರಿಕೆ, ನಕಲಿ ಮದ್ಯ, ಸರಾಯಿ, ಅಕ್ರಮ ಮದ್ಯ ಹಂಚಿಕೆ, ಮದ್ಯ, ಮಾದಕ ವಸ್ತುಗಳ ಸರಬರಾಜು ತಡೆಗಟ್ಟಲು ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಎಚ್ಚರ ವಹಿಸಲು ಅಬಕಾರಿ ಇಲಾಖೆ ಅಧಿಕಾರಿಗಳ ತಂಡ ರಚಿಸಲಾಗಿದೆ. ನಕಲಿ ಮದ್ಯ, ಅಕ್ರಮ ಮದ್ಯ ಹಂಚಿಕೆ, ಮಾದಕ ವಸ್ತುಗಳ ಸರಬರಾಜು ಸೇರಿದಂತೆ ಇತರೆ ಅಕ್ರಮಗಳು ಕಂಡುಬಂದಲ್ಲಿ ಟೋಲ್ ಫ್ರೀ ಸಂಖ್ಯೆ 18004250379 ಗೆ …

Read More »

ಬೆಳಗಾವಿ ಲೋಕಸಭೆ ಚುನಾವಣೆ: ಭದ್ರಕೋಟೆಗೆ ಇನ್ನೂ ಸಿಗದ ಸೇನಾಪತಿ

ಬೆಳಗಾವಿ: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿ ಐದು ದಿನಗಳಾದರೂ ಬೆಳಗಾವಿ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎಂಬುದನ್ನು ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ಇನ್ನೂ ಬಹಿರಂಗವಾಗಿ ಘೋಷಿಸಿಲ್ಲ. ಒಂದು ಹಳೆ ಮುಖ, ಇನ್ನೊಂದು ಹೊಸ ಮುಖದ ಹೆಸರು ಮಾತ್ರ ಕಾರ್ಯಕರ್ತರ ಬಾಯಿಯಲ್ಲಿ ಓಡಾಡುತ್ತಿವೆ.   ಬೆಳಗಾವಿ ಕ್ಷೇತ್ರ ಕಳೆದ ಐದು ಚುನಾವಣೆಗಳಿಂದ ಬಿಜೆಪಿ ಭದ್ರಕೋಟೆ ಎಂದು ನಿರೂಪಿಸಿದೆ. ದಿವಂಗತ ಸುರೇಶ ಅಂಗಡಿ ಅವರು 2004, 2009, 2014, 2019 ಹೀಗೆ ಸತತ …

Read More »

ಕಾಂಗ್ರೆಸ್ ನೈತಿಕವಾಗಿ ದಿವಾಳಿಯಾಗಿದೆ,: ಟ್ವೀಟ್ ಮಾಡಿರುವ ಜೆಪಿ ನಡ್ಡಾ

ನವದೆಹಲಿ: ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತಗೊಂಡಿರುವುದಕ್ಕೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಆರೋಪ ಮಾಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ವಾಗ್ದಾಳಿ ನಡೆಸಿದ್ದಾರೆ. ಟ್ವೀಟ್ ಮಾಡಿರುವ ಜೆಪಿ ನಡ್ಡಾ, ಕಾಂಗ್ರೆಸ್ ನ್ನು ಜನ ಈ ಬಾರಿಯ ಚುನಾವಣೆಯಲ್ಲಿ ಸಂಪೂರ್ಣ ತಿರಸ್ಕರಿಸಲಿದ್ದಾರೆ ಹಾಗೂ ಐತಿಹಾಸಿಕ ಸೋಲನ್ನು ಎದುರಿಸುವ ಭಯದಿಂದ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಭಾರತದ ಪ್ರಜಾಪ್ರಭುತ್ವ ಹಾಗೂ ಸಂಸ್ಥೆಗಳ ಬಗ್ಗೆ ಮನಸೋ ಇಚ್ಛೆ ಮಾತನಾಡಿದ್ದಾರೆ, ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಭೀತಿಯನ್ನು ಆರ್ಥಿಕ …

Read More »

ಪರಿಷತ್ ಸ್ಥಾನಕ್ಕೆ ಮರಿತಿಬ್ಬೇಗೌಡ ರಾಜೀನಾಮೆ; ನಾಯಕರ ವಿರುದ್ಧ ವಾಗ್ದಾಳಿ

ಹುಬ್ಬಳ್ಳಿ: ವಿಧಾನ ಪರಿಷತ್ತು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ವಿಧಾನಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮರಿತಿಬ್ಬೇಗೌಡ, ನಾನು ಸ್ವಇಚ್ಛೆಯಿಂದ ಪರಿಷತ್ತು ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಜೆಡಿಎಸ್ ನಲ್ಲಿ ಜಾತ್ಯತೀತ ತತ್ವಗಳು ಉಳಿದಿಲ್ಲ. ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ. ಈ ಬಗ್ಗೆ ಪಕ್ಷದ ವರಿಷ್ಠರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜವಾಗಿಲ್ಲ ಎಂದರು. ನಾಲ್ಕು ಬಾರಿ ದಕ್ಷಿಣ …

Read More »

ಈ ಸರ್ಕಾರದಿಂದ ರಾಜ್ಯದ ಆರ್ಥಿಕ ಸ್ಥಿತಿ ಅಯೋಮಯಾಗಿದೆ: ಬೊಮ್ಮಾಯಿ

ಹಾವೇರಿ: ರಾಜ್ಯದಲ್ಲಿ ಬಿಜೆಪಿ ಪಕ್ಷದಿಂದಾಗಿ ಅಭಿವೃದ್ಧಿಯಾಗಿದೆ. ರಾಜ್ಯದಲ್ಲಿ ಈ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಆರ್ಥಿಕ ಸ್ಥಿತಿ ಅಯೋಮಯಾಗಿದೆ. ರಾಜ್ಯದ ಬರಗಾಲ ನಿವಾರಣೆಗೆ ಸಭೆ ಮಾಡಿದರಷ್ಟೇ ಸಾಲದು. ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು, ಆಗ ಬದುಕಿಗೆ ಹತ್ತಿರವಾಗುತ್ತದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.   ರಾಣೇಬೆನ್ನೂರು ತಾಲೂಕು ಮಾಕನೂರಿನಲ್ಲಿ ಮಾತನಾಡಿದ ಅವರು, ಎಚ್.ಕೆ. ಪಾಟಿಲ್ ಅವರು ಹೇಳಿದ ಪ್ರತಿ ಮಾತಿಗೆ ಉತ್ತರ ನೀಡಬೇಕೆಂದು ಏನಿಲ್ಲ. ಯಾರ ಬದುಕೆಂದು …

Read More »

ಬತ್ತಿದ ಕೆರೆಗಳು; ಮೀನು ಉತ್ಪಾದನೆಗೆ ಬರ

  ಬೆಳಗಾವಿ: ರಾಜ್ಯದಲ್ಲಿ ತಲೆದೋರಿರುವ ಬರಗಾಲದ ಹೊಡೆತ ಮೀನು ಸಾಕಾಣಿಕೆ ಮೇಲೂ ಬಿದ್ದಿದ್ದು, ಬಹುತೇಕ ಕೆರೆಗಳಲ್ಲಿ ನೀರಿನ ಅಭಾವದಿಂದ ಮೀನು ಉತ್ಪಾದನೆ ಇಳಿಮುಖಗೊಂಡಿದೆ. ಮೀನು ಸಾಕಾಣಿಕೆ ಮಾಡುವ ಕುಟುಂಬಗಳು ಸಂಕಷ್ಟಕ್ಕೀಡಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಕೇವಲ 127 ಕೆರೆಗಳಲ್ಲಿ ಮೀನಿನ ಮರಿ ಬಿತ್ತನೆ ಮಾಡಲಾಗಿದೆ.   ಕಳೆದ ವರ್ಷ ಮೀನು ಉತ್ಪಾದನೆಯಲ್ಲಿ ಆದ ಲಾಭ ಈ ಬಾರಿ ಸಿಗುವುದು ಅಸಾಧ್ಯವಾಗಿದೆ. ಕೆರೆಗಳಲ್ಲಿ ನೀರಿನ ಕೊರತೆ ಮೀನುಗಳ ಹುಟ್ಟು ಹಾಗೂ ಬೆಳವಣಿಗೆ ಮೇಲೆ ಭಾರೀ …

Read More »

ಕಿಟಕಿ ತೆರೆದು ದಂಪತಿ ಸರಸ ಸಲ್ಲಾಪ, ಬೆಡ್ ರೂಮ್ ಕಿಟಕಿ ಹಾಕಿಕೊಳ್ಳುವಂತೆಯೂ ಮನವಿ,ವಿಚಿತ್ರ ದೂರೊಂದು ದಾಖಲ…

ಬೆಂಗಳೂರು, ಮಾರ್ಚ್​ 20: ಇತ್ತೀಚಿನ ದಿನಗಳಲ್ಲಿ ಯುವಕ, ಯುವತಿಯರು ಮೈಮರೆತು ಸರಸ ಸಲ್ಲಾಪದಲ್ಲಿ ತೊಡಗುವುದು ಹೆಚ್ಚಾಗುತ್ತಿವೆ ಎನ್ನುವ ಸುದ್ದಿಗಳು ಆಗುತ್ತಲೇ ಇರುತ್ತವೆ. ಆದರೆ ಬೆಂಗಳೂರಿನ ಈ ನಗರದಲ್ಲಿ ವಿಚಿತ್ರ ಪ್ರಕರಣವೊಂದು ದಾಖಲಾಗಿದೆ. ಹಾಗಾದರೆ ಆ ಪ್ರಕರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ವಿಚಿತ್ರ ದೂರೊಂದು ದಾಖಲಾಗಿದೆ. ಪಕ್ಕದ ಮನೆ ದಂಪತಿಯು ಕಿಟಕಿ ತೆರೆದು ಸರಸ ಸಲ್ಲಾಪದಲ್ಲಿ ತೊಡಗುತ್ತಿದ್ದಾರೆ. ಇದರಿಂದ ನಮಗೆ ತುಂಬಾ ಸಮಸ್ಯೆ ಆಗುತ್ತಿದೆ …

Read More »

CSK’ ನಾಯಕತ್ವಕ್ಕೆ ‘ಧೋನಿ’ ಗುಡ್ ಬೈ,

ನವದೆಹಲಿ : ಐಪಿಎಲ್ 2024ರ ಮೊದಲು, ಚೆನ್ನೈ ಸೂಪರ್ ಕಿಂಗ್ಸ್ ಹೊಸ ನಾಯಕನನ್ನ ಘೋಷಿಸಿದ್ದು, ಇದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ . ಎಂಎಸ್ ಧೋನಿ ಇದ್ದಕ್ಕಿದ್ದಂತೆ ನಾಯಕತ್ವವನ್ನ ತೊರೆದಿದ್ದು, ಈಗ ಋತುರಾಜ್ ಗಾಯಕ್ವಾಡ್ ಅವರನ್ನ ಚೆನ್ನೈ ತಂಡದ ಹೊಸ ನಾಯಕನನ್ನಾಗಿ ಮಾಡಲಾಗಿದೆ.   ಧೋನಿ ಕಳೆದ ಋತುವಿನಲ್ಲಿ ಚೆನ್ನೈ ಪರ ಐದನೇ ಬಾರಿಗೆ ಐಪಿಎಲ್ ಗೆದ್ದಿದ್ದರು ಮತ್ತು ಈಗ ಅವರು ತಂಡದ ಕಮಾಂಡ್’ನ್ನ ಗಾಯಕ್ವಾಡ್’ಗೆ ಹಸ್ತಾಂತರಿಸಿದ್ದಾರೆ.

Read More »