ರಾಯಚೂರು, ಫೆಬ್ರವರಿ 15: ಪಾರ್ಟ್ ಟೈಂ ಜಾಬ್ ಆಫರ್ (ಅರೆಕಾಲಿಕ ಉದ್ಯೋಗದ ಆಮಿಷ) ನಂಬಿ ಸರ್ಕಾರಿ ಶಾಲೆ (Government School) ಶಿಕ್ಷಕಿಯೊಬ್ಬರು ಬರೋಬ್ಬರಿ 2.77 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿರುವ ಪ್ರಕರಣ (Cyber Crime) ರಾಯಚೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ರಾಯಚೂರಿನ (Raichur) ಮಸ್ಕಿ ಪಟ್ಟಣದ ನಿವಾಸಿಯಾಗಿರುವ ಶಿಕ್ಷಕಿ 2023ರ ಸೆಪ್ಟೆಂಬರ್ 3ರಿಂದ ಈ ವರ್ಷದ ಜನವರಿ 12ರ ನಡುವಣ ಅವಧಿಯಲ್ಲಿ ಸೈಬರ್ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡಿದ್ದರು. ಮಹಿಳೆ ಪೊಲೀಸರನ್ನು ಸಂಪರ್ಕಿಸಿ ಈ ವರ್ಷದ …
Read More »Monthly Archives: ಫೆಬ್ರವರಿ 2024
ರಾತ್ರಿ 1 ಗಂಟೆಗೆ ಲಂಚ ಪಡೆಯುತ್ತಿದ್ದ ಐನಾತಿಗಳು : ರೆಡ್‌ಹ್ಯಾಂಡ್‌ಆಗಿ ಲೋಕಾ ಬಲೆಗೆ
ಕಲಬುರ್ಗಿ: ಇಲ್ಲಿನ ಓಂ ನಗರದ ಆಹಾರ ಸುರಕ್ಷತೆ ಮತ್ತು ಭದ್ರತಾ ಪ್ರಾಧಿಕಾರ ಕಚೇರಿಯ (FSSAI) ಮೇಲೆ ದಾಳಿ ನಡೆಸಿ ಇಬ್ಬರು ಆಹಾರ ನಿರೀಕ್ಷಕರನ್ನು(Food inspectors) ಲೋಕಾಯುಕ್ತ ಪೊಲೀಸರು (Lokayukta) ಬಂಧಿಸಿದ್ದಾರೆ ಪರಮೇಶ್ವರ ಮಠಪತಿ ಹಾಗು ಕಿರಣ್ ಲೋಕಾ ಬಲೆಗೆ ಬಿದ್ದ ನಿರೀಕ್ಷರು ನೀರು ಶುದ್ದೀಕರಣ ಆರ್‌ಓ ಪ್ಲಾಂಟ್ ಪರವಾನಗಿ ನವೀಕರಣ ಮಾಡಲು ಮೊಹ್ಮದ್ ಮುಖದ್ದೀರ್ ಎಂಬುವವರಿಂದ 40ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಅಧಿಕಾರಿಗಳು ಸಿಕ್ಕಿಬಿದ್ದಿದ್ದು, ಅವರನ್ನು ಬಂಧಿಸಲಾಗಿದೆ. …
Read More »ಹಣ ಕೊಡದಿದ್ರೆ ಮಗಳ ಬೆತ್ತಲೆ ಫೋಟೋ ರಿಲೀಸ್ : ಜೈಲಿನಿಂದಲೇ ಬಂತು ಕರೆ!
ಬೆಂಗಳೂರು: ಹಣ ಕೊಡದಿದ್ರೆ ಮಗಳ ನಗ್ನ ಫೋಟೋಗಳನ್ನು ರಿಲೀಸ್ ಮಾಡೋದಾಗಿ ರೌಡಿಯೊಬ್ಬ ಧಮ್ಕಿ ಹಾಕಿದ್ದಾನೆ. ಜೈಲಲ್ಲಿ ಇದ್ದುಕೊಂಡೇ ಯುವತಿಯ ನಗ್ನ ಫೋಟೋವನ್ನು ಆಕೆಯ ತಾಯಿಗೆ ಕಳುಹಿಸಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾನೆ. ಜೈಲಲ್ಲಿರುವ ರೌಡಿ ಮನೋಜ್ ಎಂಬಾತ ತನ್ನ ಸಹವರ್ತಿ ಕೆಂಚನಿಂದ ಯುವತಿಯ ಬೆತ್ತಲೆ ಫೋಟೊ ತರಿಸಿಕೊಂಡು, ಆ ಫೋಟೋವನ್ನು ಯುವತಿಯ ತಾಯಿಗೆ ಕಳುಹಿಸಿ ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದಾನೆ. ಕಳೆದ ಆಗಸ್ಟ್ ನಲ್ಲಿಯೂ ಇದೇ ರೀತಿ ಯುವತಿಯ …
Read More »ಎಲ್ಲಾ ಡಬಲ್..ಡಬಲ್ ಎಂದವನು ಹಾಕಿದ್ದು ಡಬಲ್ ಪಂಗನಾಮ!!
ಚಿತ್ರದುರ್ಗ : ಜನರಿಗೆ ಆಸೇ ತೋರಿಸಿ ಹಣ ಡಬಲ್ ಮಾಡಿಕೊಡ್ತೀನಿ ಎಂದು ಜನರಿಗೆ ಕೋಟಿ ಕೋಟಿ ಹಣ ವಂಚಿಸಿದ ಪ್ರಕರಣ ಚಿತ್ರದುರ್ಗದಲ್ಲಿ ಬೆಳಕಿದೆ ಬಂದಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ (Holalkere) ತಾಲೂಕಿನ ಚಿಕ್ಕಜಾಜೂರಿನಲ್ಲಿ (Chikkajajur) ಕಳೆದ ಡಿಸೆಂಬರ್ 15ರಂದು ಈ ಘಟನೆ ನಡೆದಿದ್ದುತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಆಂಧ್ರ ಪ್ರದೇಶ (Andhra Pradesh) ಮೂಲದ ಕೋಡೆ ರಮಣಯ್ಯ (Kode Ramanaiah) ಎಂದು ಗುರುತಿಸಲಾಗಿದೆ. ಈತ ಹಣವನ್ನು ಡಬಲ್ ಮಾಡುವುದಾಗಿ ಆನ್ …
Read More »ರೈಲಿನಲ್ಲಿ ಮಹಿಳೆಯರ ಸರ ಕಸಿದು ಪರಾರಿಯಾಗುತ್ತಿದ್ದ ಚಾಲಾಕಿಗಳ ಬಂಧನ
ಬೆಂಗಳೂರು: ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಕಳ್ಳರಿಬ್ಬರನ್ನು (Chain theft) ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ದಂಡು (Bengaluru Dandu) ಎಂದು ಕರೆಯಲ್ಪಡುವ ಈ ಕಳ್ಳರ ಗುಂಪು, ರೈಲಿನಲ್ಲಿ ಮಹಿಳೆಯರ ಸರ ಕಸಿದು ಪರಾರಿಯಾಗುತ್ತಿದ್ದರು. ಬಂಧಿತರನ್ನು ಬಾಲಾಜಿ (Balaji) ಹಾಗೂ ಕಮಲನಾಥನ್ (Kamalnath) ಎಂದು ಗುರುತಿಸಲಾಗಿದೆ. ಜನವರಿ 18 ರಂದು ಬೆಂಗಳೂರು-ಜೋಲಾರ್ಪೇಟೆ (Bengaluru-Jolarpete) ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸುಮಿತ್ರಾ (Sumitra) ಎಂಬುವವರ ಸರವನ್ನು, ಬಂಗಾರಪೇಟೆಯ (Bangarpete) ಬಿಸಾನತ್ತಂ ಬಳಿ ಸರ …
Read More »ಮತದಾನ ಮಾಡುವ ಶಿಕ್ಷಕರಿಗೆ ಸಾಂದರ್ಭಿಕ ರಜೆ
ಬೆಂಗಳೂರು: ಕರ್ನಾಟಕ ವಿಧಾನ ವರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಿಬಿಎಂಪಿ ಹಾಗೂ ರಾಮನಗರ ಜಿಲ್ಲೆ ಉಪ ಚುನಾವಣೆ ಫೆ.16 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆಯತ್ತಿರುವ ವಿಧಾನ ವರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತ ಕ್ಷೇತ್ರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನ ರಹಿತ ವಿದ್ಯಾ ಸಂಸ್ಥೆಗಳು ಸೇರಿದಂತೆ ಎಲ್ಲಾ ಪ್ರಕ್ಷಣಿಕ ಸಂಸ್ಥೆಗಳಲ್ಲಿ, ಕೆಲಸ ನಿರ್ವಹಿಸುತ್ತಿರುವ ಅರ್ಹ …
Read More »ಫೆಬ್ರವರಿ 23ರ ಬಳಿಕ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ ಸಿಎಂ-ಡಿಸಿಎಂ
ಬೆಂಗಳೂರು: ವಿನಾನಸಭಾ ಚುನಾವಣೆ ಗೆಲ್ಲಲು ಮಾಡಿದ್ದ ಪ್ಲ್ಯಾನ್ ಮೂಲಕವೇ ಲೋಕಸಭಾ ಚುನಾವಣೆ (Lokasabha Election) ಗೆಲ್ಲಲು ಕಾಂಗ್ರೆಸ್ (Congress) ಮುಂದಾಗಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಫೆಬ್ರವರಿ 23ರ ಬಳಿಕ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆ ಮಾದರಿಯಲ್ಲೇ ಲೋಕಸಭಾ ಚುನಾವಣೆ ಪ್ರಚಾರಕ್ಕೂ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತ್ಯೇಕವಾಗಿ ವಿವಿಧ …
Read More »ಕಿಮ್ಸ್ ಪಕ್ಕದ ಚರಂಡಿಯಲ್ಲಿ ಶವ ಪತ್ತೆ
ಹುಬ್ಬಳ್ಳಿ: ಇಲ್ಲಿನ ಕಿಮ್ಸ್ ಆಸ್ಪತ್ರೆಯ ಹಾಸ್ಟೆಲ್ ಆವರಣ ಗೋಡೆಗೆ ಹೊಂದಿಕೊಂಡ ಚರಂಡಿಯಲ್ಲಿ ಅಪರಿಚಿತ ಶವವೊಂದು ಕೊಳೆತ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದೆ. ಚರಂಡಿ ಸ್ವಚ್ಛತೆ ಕೈಗೊಂಡಿದ್ದ ಸಂದರ್ಭದಲ್ಲಿ ಶವದ ಅಸ್ಥಿಪಂಜರ ಮತ್ತು ತಲೆಬುರುಡೆ ಸಿಕ್ಕಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿದ್ಯಾನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಹಲವು ತಿಂಗಳುಗಳ ಹಿಂದೆಯೇ ದೇಹ ಚರಂಡಿಗೆ ಬಿದ್ದಿರಬಹುದು ಎನ್ನುವ ಅನುಮಾನವಿದ್ದು, ಇದು ಕೊಲೆಯೋ ಅಥವಾ ಸಹಜ ಸಾವಾಗಿದೆಯೋ …
Read More »ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಪರಿಹಾರ ಕಂಡುಕೊಳ್ಳಿ: ಡಿಸಿ
ಬೆಳಗಾವಿ: ‘ಕೋವಿಡ್-19 ನಂತರದ ಕಾಲಘಟ್ಟದಲ್ಲಿ ವೈದ್ಯಕೀಯ ತ್ಯಾಜ್ಯದ ಪ್ರಮಾಣ ಹೆಚ್ಚಿದೆ. ಈ ತ್ಯಾಜ್ಯ ನಿರ್ವಹಣೆಗೆ ನಾವು ಪರಿಣಾಮಕಾರಿಯಾದ ಪರಿಹಾರ ಕಂಡುಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು. ಇನ್‌ಸ್ಟಿಟ್ಯೂಟ್ ಆಫ್ ಎನ್ವಿರಾನ್ಮೆಂಟ್ ಮತ್ತು ಹಜಾರ್ಡಸ್ ಮೆಟೀರಿಯಲ್ಸ್ ಮ್ಯಾನೇಜ್‌ಮೆಂಟ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಯುಎಸ್‌ಎ ರಾಕ್ವಿಲೆ, ಮೇರಿಲ್ಯಾಂಡ್‌ನ ಅಲಯನ್ಸ್ ಆಫ್ ಹಜಾರ್ಡಸ್ ಮೆಟೀರಿಯಲ್ಸ್ ಪ್ರೊಫೆಷನಲ್ಸ್ ಸಂಸ್ಥೆಗಳ ಸಹಯೋಗದಲ್ಲಿ, ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಅಪಾಯಕಾರಿ ತ್ಯಾಜ್ಯ …
Read More »ಕಾರ್ಖಾನೆಯಿಂದ ಬೆಳೆ ನಷ್ಟ: ಅಧಿಕಾರಿಗಳ ಪರಿಶೀಲನೆ
ಹಂದಿಗುಂದ: ‘ಗೋದಾವರಿ ಬಯೊರಿಫೈನರಿಸ್ ಸಕ್ಕರೆ ಕಾರ್ಖಾನೆಯಿಂದ ಹೊರಮ್ಮುವ ಬೂದಿ ಹಾಗೂ ಕಲುಷಿತ ನೀರಿನಿಂದ ಬೆಳಗಾವಿ ಜಿಲ್ಲೆಯ ಗಡಿ ಭಾಗದ ಹಳ್ಳಿಗಳಲ್ಲಿ ಬೆಳೆಗಳು ಹಾಳಾಗುತ್ತಿವೆ’ ಎಂದು ರೈತರು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಸಿದ ದೂರು ಆಧರಿಸಿ ಮಂಗಳವಾರ, ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ರಾಯಬಾಗ ತಾಲ್ಲೂಕಿನ ಮರಾಕುಡಿ ಹಾಗೂ ಕಪ್ಪಲಗುದ್ದಿ ಗ್ರಾಮಗಳಿಗೆ ಭೇಟಿ ನೀಡಿದ ಅಧಿಕಾರಿಗಳು, ರೈತರು ಬೆಳೆದ ಬೆಳೆಗಳ ಮೇಲೆ ಬಿದ್ದಿರುವ ಕಾರ್ಖಾನೆಯ ಬೂದಿ ಹಾಗೂ …
Read More »