ಮಂಗಳೂರು, : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವಸಂತ ಜೆರೋಸಾ ಶಾಲೆಯ(St. Gerosa School, Mangaluru) ಶಿಕ್ಷಕಿ ಸಿಸ್ಟರ್ ಪ್ರಭಾ ಅವರು ಶ್ರೀರಾಮನಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಆಡಿಯೋ ಮಾಡಿದ ಪೋಷಕಿಗೆ ಇವರೇ ಎಂದು ಮಹಿಳೆಯ ಕುಟುಂಬ ಸಹಿತ ಫೋಟೋವನ್ನು ಕಿಡಿಗೇಡಿಗಳು ವೈರಲ್ ಮಾಡಿದ್ದಾರೆ. ಅಲ್ಲದೆ, ಪ್ರಕರಣದ ನಂತರ ವಿದೇಶದಿಂದ ನಿರಂತರವಾಗಿ ಕರೆ ಮಾಡಿ ಬೆದರಿಕೆ ಹಾಕುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಜೆರೋಸಾ ಶಾಲೆಯ ಶಿಕ್ಷಕಿ ಧರ್ಮ ಅವಹೇಳನ ಪ್ರಕರಣ ಸಂಬಂಧ ಶಿಕ್ಷಕಿ …
Read More »Monthly Archives: ಫೆಬ್ರವರಿ 2024
ಶಿವಾಜಿಯವರ 36 ಬಾಡಿಗಾರ್ಡ್ಗಳಲ್ಲಿ 13 ಜನ ಮುಸ್ಲಿಂ ಇದ್ರು: ಸಂತೋಷ್ ಲಾಡ್
ಹುಬ್ಬಳ್ಳಿ, : ಛತ್ರಪತಿ ಶಿವಾಜಿ ಮಹರಾಜರ (Chhatrapati Shivaji Maharaj) 36 ಬಾಡಿಗಾರ್ಡ್ಗಳಲ್ಲಿ 13 ಜನ ಮುಸ್ಲಿಂ ಬಾಡಿಗಾರ್ಡ್ಗಳಿದ್ದರು ಎಂದು ಸಚಿವ ಸಂತೋಷ್ ಲಾಡ್(Santosh Lad) ಹೇಳಿದ್ದಾರೆ. ನಗರದ ಮರಾಠಾ ಗಲ್ಲಿಯಲ್ಲಿ ನಡೆದ ಶಿವಾಜಿ ಮಹರಾಜರ 397 ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಾಜಿ ಮಹರಾಜರು ಮುಸ್ಲಿಂ ವಿರೋಧಿ ಅಲ್ಲ. ಇತಿಹಾಸವನ್ನು ಇವತ್ತು ಯಾರ ಹೇಗೆಬೇಕಾದರೂ ಹೇಳಬಹುದು. 60 ಸಾವಿರ ಮುಸ್ಲಿಂರು ಶಿವಾಜಿ ಸೈನ್ಯದಲ್ಲಿ ಇದ್ದರು. ಭಗವಾ ಕಲರ್ ಶಿವಾಜಿ …
Read More »ಯುವಕನ ಮೇಲೆ ಲಾಠಿಗಳಿಂದ ಹಲ್ಲೆ ನಡೆಸಿದ ಅಪಾರ್ಟ್ಮೆಂಟ್ ಸೆಕ್ಯುರಿಟಿ ಗಾರ್ಡ್ಗಳು
ದೇವನಹಳ್ಳಿ, ಫೆ.20: ಸ್ನೇಹಿತನನ್ನ ಡ್ರಾಪ್ ಮಾಡಲು ಅಪಾರ್ಟ್ಮೆಂಟ್ಗೆ ಹೋದ ಯುವಕನ ಮೇಲೆ ಸೆಕ್ಯುರಿಟಿ ಗಾರ್ಡ್ಗಳು ಲಾಠಿಗಳಿಂದಹಲ್ಲೆ (Assault)ನಡೆಸಿದ ಪ್ರಕರಣ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಮಾರಸಂದ್ರ ಬಳಿ ನಡೆದಿದೆ. ಲಾಠಿಗಳಿಂದ ಹಲ್ಲೆ ನಡೆಸುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅರ್ಚನ್ (19) ಹಲ್ಲೆಗೊಳಗಾದ ಯುವಕ. ಮಾರಸಂದ್ರ ಬಳಿಯ ಪ್ರಾವಿಡೆಂಟ್ ವೆಲ್ವರ್ಥ ಸಿಟಿ ಅಪಾರ್ಟ್ಮೆಂಟ್ನಲ್ಲಿ ಅರ್ಚನ್ ಮೇಲೆ ಭದ್ರತಾ ಸಿಬ್ಬಂದಿಗಳು ಹಲ್ಲೆ ನಡೆಸಿದ್ದಾರೆ. ವಿಚಾರ ತಿಳಿದ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯು ಯುವಕನ ಮೇಲಿನ ಹಲ್ಲೆಯನ್ನು ಖಂಡಿಸಿದ್ದು, …
Read More »ನಡುರಸ್ತೆಯಲ್ಲಿ ಪತ್ನಿಯನ್ನು ಅಟ್ಟಾಡಿಸಿ ಮಚ್ಚಿನಿಂದ ಹಲ್ಲೆ ಮಾಡಿದ ಪತಿ
ಬೆಂಗಳೂರು, (ಫೆಬ್ರವರಿ 20): ಬೇರೊಬ್ಬನ ಜೊತೆ ಅನೈತಿಕ ಸಂಬಂಧದ(illicit relationship_ ಅನುಮಾನದ ಮೇಲೆ ನಡುರಸ್ತೆಯಲ್ಲೇ ಪತ್ನಿ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆಯನ್ನು (Assault) ಮಾಡಿದ್ದಾನೆ. ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಪತ್ನಿಗೆ ಮಚ್ಚಿನಿಂದ ಹೊಡೆದಿದ್ದಾನೆ. ಬೆಂಗಳೂರಿನ(Bengaluru) ಜೀವನ್ ಭೀಮಾ ನಗರದ ವಿಂಡ್ ಟನಲ್ ರಸ್ತೆಯಲ್ಲಿ ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಶೇಕ್ ಮುಜೀಬ್ ಎನ್ನುವಾತ ನೈಗರ್ (28) ಎನ್ನುವಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಆದ್ರೆ, ಹೆಂಡ್ತಿ ಬೇರೊಬ್ಬನ ಜತೆ …
Read More »71st Miss World: ವಿಶ್ವ ಸುಂದರಿ ಸ್ಪರ್ಧೆ; ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ ಕನ್ನಡತಿ ಸಿನಿ ಶೆಟ್ಟಿ
ಈ ಬಾರಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಕನ್ನಡತಿ ಸಿನಿ ಶೆಟ್ಟಿ (21) ಪ್ರತಿನಿಧಿಸುತ್ತಿದ್ದಾರೆ. 30 ದಶಕಗಳ ಬಳಿಕ ವಿಶ್ವ ಸುಂದರಿ ಸ್ಪರ್ಧೆಯನ್ನು ಭಾರತದಲ್ಲಿ ಆಯೋಜಿಸಲಾಗಿದೆ. 28 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಈ ಸ್ಪರ್ಧೆ ನಡೆದಿತ್ತು. ಈ ವರ್ಷ ಮಿಸ್ ವರ್ಲ್ಡ್ ಗ್ರ್ಯಾಂಡ್ ಫಿನಾಲೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮಾರ್ಚ್ 9 ರಂದು ಅದ್ಭುತ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳಲಿದೆ.71ನೇವಿಶ್ವ ಸುಂದರಿ ಸ್ಪರ್ಧೆಆರಂಭವಾಗಿದೆ. ಈ ಈವೆಂಟ್ ಫೆಬ್ರವರಿ …
Read More »ಸ್ವಾತಂತ್ರ ಬಂದು 75 ವರ್ಷವಾದ್ರೂ ಅಂಧಕಾರದಲ್ಲಿವೆ 80 ಕುಟುಂಬಗಳು, ಬ್ಯಾಟರಿ ಬೆಳಕಲ್ಲೇ ಮಕ್ಕಳ ವ್ಯಾಸಂಗ
ಚಾಮರಾಜನಗರ, ಫೆ.20: ಜಿಲ್ಲೆಯ ಹನೂರು ತಾಲೂಕಿನ ಕಾಡಂಚಿನ ಪ್ರದೇಶವಾದ ಪಾಲಾರ್ (Palar) ಗ್ರಾಮದಲ್ಲಿನ ಜನರ ಸ್ಥಿತಿ ಹೇಳತೀರದ್ದು. ಸ್ವಾತಂತ್ರ ಬಂದು ಬರೋಬ್ಬರಿ 75 ವರ್ಷ ಕಳೆದ್ರು ಈ ಗ್ರಾಮದ 80 ಸೋಲಿಗ ಮನೆಗಳಿಗೆ ವಿದ್ಯುತ್ ಭಾಗ್ಯವೇ ಇಲ್ಲ (No Electricity Connection). ಇನ್ನು ಅಂಧಕಾರದಲ್ಲಿ ಕಾಲ ಕಳೆಯುತ್ತಿದ್ರು ಸರ್ಕಾರ ಈ ಗ್ರಾಮಕ್ಕೆ ವಿದ್ಯುತ್ ಸಂಪರ್ಕವೇ ನೀಡಿಲ್ಲ. ಕತ್ತಲಾದ್ರೆ ಸಾಕು ಚಿಮಣಿ, ಬುಡ್ಡಿ, ಬ್ಯಾಟರಿ ಬೆಳಕಲ್ಲೇ ಕಾಲ ಕಳೆಯುತ್ತಿದ್ದಾರೆ. ಕಾಡುಗಳ್ಳ ವೀರಪ್ಪನ್ಗೆ ಸಹಾಯ …
Read More »ಸತ್ತವರ ಬ್ಯಾಂಕ್ ಖಾತೆಗೂ ಗೃಹಲಕ್ಷ್ಮಿ ಹಣ ಜಮೆ; ಯೋಜನೆಯ ಹಣ ಪಡೆಯಲು ಕುಟುಂಬಸ್ಥರ ಪರದಾಟ
ಗದಗ, ಫೆ.20: ಸತ್ತವರ ಬ್ಯಾಂಕ್ ಖಾತೆಗೂಗೃಹಲಕ್ಷ್ಮಿ ಹಣಜಮೆಯಾಗಿದ್ದು, ಅದನ್ನು ಪಡೆಯಲು ಕುಟುಂಬಸ್ಥರು ಹರಸಾಹಸ ಪಡುತ್ತಿರುವ ಘಟನೆ ಗದಗ ಜಿಲ್ಲೆಯ ನರಗುಂದ(Naragunda) ತಾಲೂಕಿನ ಜಗಾಪುರ ಗ್ರಾಮದಲ್ಲಿ ನಡೆದಿದೆ. ಜಗಾಪುರ ಗ್ರಾಮದ ನಿಂಗವ್ವ ಶಿವಪ್ಪ ಹೂಲಿ ಎಂಬಾಕೆ ಗೃಹ ಲಕ್ಷಿ ಯೋಜನೆ ಜಾರಿಗೆ ಬರುವ ಮುನ್ನವೇ ಅಂದರೆ ಆಗಸ್ಟ್ 26, 2020 ರಂದು ಮೃತಪಟ್ಟಿದ್ದಾರೆ. ಆದರೆ, ಸೊಸೆ ಲಲಿತಾ ಹೂಲಿ ಗೃಹಲಕ್ಷ್ಮಿ ಯೋಜನೆ ಅಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಳು. ಈ ಹಿನ್ನಲೆ ಮೃತಳ …
Read More »ಯುವ ನಿಧಿ ಯೋಜನೆಗೆ ಚಾಲನೆ ಸಿಕ್ಕಿ ತಿಂಗಳಾದರೂ ಖಾತೆಗೆ ಬಿದ್ದಿಲ್ಲ ಹಣ
ಬೆಂಗಳೂರು, ಫೆ.20: ಕಾಂಗ್ರೆಸ್ ಸರ್ಕಾರ ನುಡಿದಂತೆಯೇ ತನ್ನ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ (Congress Guarantee) ಯೋಜನೆಗಳಿಗೆ ಚಾಲನೆ ನೀಡಿದೆ. ಡಿಗ್ರಿ ಹಾಗೂ ಡಿಪ್ಲೋಮಾ ಕಂಪ್ಲೀಟ್ ಆದ ಯುವಕ, ಯುವತಿಯರಿಗೋಸ್ಕರ ಇದೀಗ 5 ನೇ ಯೋಜನೆಯಾದ ಯುವ ನಿಧಿ ಯೋಜನೆಗೆ (Yuva Nidhi Scheme) ಡಿಸೆಂಬರ್ ತಿಂಗಳ 26 ರಂದು ಚಾಲನೆ ದೊರೆತು ತಿಂಗಳುಗಳೆ ಕಳೆದಿವೆ. ಆದರೆ ಇನ್ನೂ ಕೆಲ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಬಾರದೇ ಯುವನಿಧಿಯಿಂದ ಕಾದು ಕಾದು ಸುಸ್ತಾದ …
Read More »ಕರ್ನಾಟಕ ಸೇರಿದಂತೆ ದೇಶದ ವಿವಿಗಳಿಗೆ ಕೇಂದ್ರದಿಂದ 3600 ಕೋಟಿ ರೂ. ಅನುದಾನ ಬಿಡುಗಡೆ: ಪ್ರಲ್ಹಾದ್ ಜೋಶಿ
ಬೆಳಗಾವಿ, ಫೆಬ್ರವರಿ 20: ಕರ್ನಾಟಕ, ಜಮ್ಮು-ಕಾಶ್ಮೀರ ಸೇರಿದಂತೆ ದೇಶದ ಅನೇಕ ವಿಶ್ವ ವಿದ್ಯಾಲಯಗಳಿಗೆ ಕೇಂದ್ರ ಸರ್ಕಾರ 3600 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿಳಿಸಿದರು. ಬೆಳಗಾವಿಯಲ್ಲಿ (Belagavi) ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಪ್ರಧಾನಮಂತ್ರಿ ಉಷಾ ಯೋಜನೆ’ಯಡಿ (PM Usha Yojana) 78 ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅನುದಾನ ನೀಡಿದ್ದು, ಇಂದೇ ಅದರ ಬಿಡುಗಡೆಯಾಗುತ್ತಿದೆ ಎಂದು ಹೇಳಿದರು. ಕರ್ನಾಟಕದ …
Read More »ಫಾಲ್ಸ್ ನೋಡಲು ಹೋಗಿ ಬೈಕ್ ಸಮೇತ ಪ್ರಪಾತಕ್ಕೆ ಬಿದ್ದ ವ್ಯಕ್ತಿ
ಬೆಳಗಾವಿ, ಫೆ.20: ಜಿಲ್ಲೆಯ ಖಾನಾಪುರ ತಾಲೂಕಿನ ಚಿಕಲೆ ಗ್ರಾಮದ ಫಾಲ್ಸ್ ನೋಡಲು ಹೋಗಿ ಬೈಕ್ ಸಮೇತ 100 ಅಡಿ ಪ್ರಪಾತಕ್ಕೆ ಬಿದ್ದಿದ್ದ ಸವಾರನನ್ನು ರಕ್ಷಿಸಲಾಗಿದೆ. ಬೆಳಗಾವಿ ಕ್ಯಾಂಪ್ ಪ್ರದೇಶದ ವಿನಾಯಕ ಬುತ್ತುಲ್ಕರ್ ರಕ್ಷಣೆ ಮಾಡಲಾದ ವ್ಯಕ್ತಿ. ಖಾನಾಪುರ ಗೋವಾ ಗಡಿ ಭಾಗದಲ್ಲಿರುವ ಪ್ರಸಿದ್ಧ ಚಿಕಲೆ ಫಾಲ್ಸ್ ನೋಡಲು ಸ್ನೇಹಿತರ ಜೊತೆಗೆ ಬಂದಿದ್ದಾಗ ವಿನಾಯಕ ಬೈಕ್ ಸಮೇತ ಪ್ರಪಾತಕ್ಕೆ ಬಿದ್ದಿದ್ದರು. ಬೈಕ್ ಮೇಲೆ ಹೋಗುವಾಗ ಆಯತಪ್ಪಿ ನೂರು ಅಡಿ ಪ್ರಪಾತಕ್ಕೆ ಬಿದ್ದಿದ್ದರು. ಇದನ್ನು …
Read More »