Breaking News

Daily Archives: ಫೆಬ್ರವರಿ 21, 2024

ಕುಡುಕನನ್ನು ಥಳಿಸಿ ನಾಯಿಗೂಡಿನಲ್ಲಿ ಕೂಡಿಹಾಕಿದ ಬಾರ್ ಸಿಬ್ಬಂದಿ!

ವಿಜಯಪುರ: ನಾಯಿ ಕದಿಯಲು ಬಂದಿದ್ದಾನೆ ಎಂದು ಭಾವಿಸಿ ಪಾನಮತ್ತ ವ್ಯಕ್ತಿಯನ್ನು ಅದೇ ನಾಯಿಯ ಗೂಡಿನಲ್ಲಿ ಕೂಡಿ ಹಾಕಿದ್ದು ಮಾತ್ರವಲ್ಲದೇ ಆತನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ವರದಿಗಳ ಪ್ರಕಾರ ಬಬಲೇಶ್ವರ ರಸ್ತೆಯಲ್ಲಿರುವ ಸಾಯಿ ಪ್ರಭಾತ್‌ ಬಾರ್‌ನ ಸಿಬ್ಬಂದಿ ಪಾನಮತ್ತ ವ್ಯಕ್ತಿ ಸೋಮು ಬಾರ್‌ನ ಸಾಕುನಾಯಿಯನ್ನು ಕದಿಯಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಿ, ಆತನನ್ನು ಅದೇ ನಾಯಿಯ ಗೂಡಿನಲ್ಲಿ ಕೂಡಿ ಹಾಕಿದ್ದಾನೆ. ಮಾತ್ರವಲ್ಲದೇ ಆತನಿಗೆ ಅಮಾನುಷವಾಗಿ ಥಳಿಸಿದ್ದು, ಹಲವು ಗಂಟೆಗಳ ಕಾಲ …

Read More »

ಸಚಿವ ಸತೀಶ್ ಜಾರಕಿಹೊಳಿ ಅವರ ಆದೇಶ ಮೇರೆಗೆ ಜನ, ಜಾನುವಾರುಗಳಿಗೆ ಅನುಕೂಲಕ್ಕಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಕುಡಿಯುವ ನೀರು ಬಿಡುಗಡೆ.

ಸಚಿವ ಸತೀಶ್ ಜಾರಕಿಹೊಳಿ ಅವರ ಆದೇಶ ಮೇರೆಗೆ ಜನ, ಜಾನುವಾರುಗಳಿಗೆ ಅನುಕೂಲಕ್ಕಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಕುಡಿಯುವ ನೀರು ಬಿಡುಗಡೆ. ಗೋಕಾಕ : ಪ್ರಸ್ತುತ ಬರ ಹಾಗೂ ತೀವ್ರ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದರಿಂದ ಹಳ್ಳಿ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿತ್ತು, ಆದರಿಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಅಧಿಕಾರಿಗಳೊಂದಿಗೆ ಕರೆ ಮಾಡಿ ಮಾತನಾಡಿ ಜನ, ಜಾನುವಾರುಗಳಿಗೆ ಅನುಕೂಲಕ್ಕಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಕುಡಿಯುವ ನೀರು …

Read More »

ಸಾರ್ವಜನಿಕ ಕ್ಷೇತ್ರದಲ್ಲಿರುವುದರಿಂದ ಕುಟುಂಬಕ್ಕೆ ಸಮಯ ಕೊಟ್ಟಿದ್ದು, ಬಹಳ ಕಡಿಮೆ:C.M.

ಬೆಂಗಳೂರು: ಸಾರ್ವಜನಿಕ ಕ್ಷೇತ್ರದಲ್ಲಿರುವುದರಿಂದ ಕುಟುಂಬಕ್ಕೆ ಸಮಯ ಕೊಟ್ಟಿದ್ದು, ಬಹಳ ಕಡಿಮೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು. ಕರ್ನಾಟಕ ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ಖಾತೆ ಎಕ್ಸ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸಿಎಂ ಸಿದ್ದರಾಮಯ್ಯ ಅವರಿಗೆ ವೈಯಕ್ತಿಕ ವಿಚಾರ ಹಾಗೂ ಕುಟುಂಬದ ಕುರಿತು ಪ್ರಶ್ನಿಸುತ್ತಾರೆ.   ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಸಾರ್ವಜನಿಕ ಕ್ಷೇತ್ರದಲ್ಲಿರುವಾಗ ಸಮಯ ಸಿಗಲ್ಲ. ಇದರಿಂದ ಕುಟುಂಬಕ್ಕೆ ಸಮಯ ಕೊಟ್ಟಿದ್ದು, ಬಹಳ ಕಡಿಮೆ. …

Read More »

ಮತ್ತೆ ಶುರುವಾಯ್ತು ರೈತರ ದೆಹಲಿ ಚಲೋ ಯಾತ್ರೆ- ಪಂಜಾಬ್‌ ಗಡಿಯಲ್ಲಿ 14 ಸಾವಿರ ಮಂದಿ ಜಮಾವಣೆ!

ನವದೆಹಲಿ : ಕೇಂದ್ರ ಬಿಜೆಪಿ (BJP) ಸರ್ಕಾರದ ಕೃಷಿ ನೀತಿಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪಾದಯಾತ್ರೆ (Farmers protest) ಬುಧವಾರದಿಂದ ತೀವ್ರಸ್ವರೂಪ ಪಡೆಯುವ ಸಾಧ್ಯತೆಯಿದೆ. ಪಂಜಾಬ್‌ – ಹರಿಯಾಣಾ ಗಡಿಯಲ್ಲಿ (Punjab-Haryana border) 14,000 ಕ್ಕೂ ಹೆಚ್ಚು ಮಂದಿ ರೈತರು ಇಂದು ಒಗ್ಗೂಡುತ್ತಿದ್ದಾರೆ. ಜೊತೆಗೆ 1200 ಟ್ರಾಕ್ಟರ್ ಟ್ರಾಲಿಗಳು, 300 ಕಾರ್‌ ಗಳು ಹಾಗೂ 10 ಮಿನಿ ಬಸ್‌ ಗಳೂ ಸಹ ಇಂದು ದೆಹಲಿ ಚಲೋ(Delhi Chalo) ಯಾತ್ರೆಗೆ ಸಜ್ಜಾಗಿವೆ. …

Read More »