Breaking News

Daily Archives: ಫೆಬ್ರವರಿ 13, 2024

ರಾತ್ರಿ 12.00 ಗಂಟೆಗೆ ಗೃಹಿಣಿಯರು ನನಗೆ ಕರೆ ಮಾಡುತ್ತಾರೆ – ಆರಗ ಜ್ಞಾನೇಂದ್ರ!

ಬೆಂಗಳೂರು : ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟದ (Illegal liquor sale)ಹಾವಳಿ ಮಿತಿ ಮೀರಿದೆ . ರಾತ್ರಿ 12.00 ಗಂಟೆಗೆ ಗೃಹಿಣಿಯರು ನನಗೆ ಕರೆ ಮಾಡಿ, ಈ ಅಕ್ರಮದಲ್ಲಿ ನಿಮ್ಮ ಶಾಸಕರ ಪಾಲೂ ಇದೆಯೇ?, ಯಾಕೆ ಇದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಪ್ರಶ್ನಿಸುತ್ತಾರೆ ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಅಳಲು ತೋಡಿಕೊಂಡಿದ್ದಾರೆ. ಮಂಗಳವಾರ ಸದನದಲ್ಲಿ ಅಕ್ರಮ ಮದ್ಯ ಮಾರಾಟದ ಕುರಿತು ಚರ್ಚೆ ನಡೆಯುವ ವೇಳೆ ಅವರು ಮಾತನಾಡಿದರು. ಶಾಸಕ …

Read More »

ಲೋಕಸಭಾ ಚುನಾವಣೆ: ಮಂಡ್ಯ ಕಣದಿಂದ ಹಿಂದೆ ಸರಿದ ನಿಖಿಲ್, ಯಾರಿಗೆ ಸಿಗಲಿದೆ ಜೆಡಿಎಸ್ ಟಿಕೆಟ್, ಮಹತ್ವದ ಸಭೆ

ಮಂಡ್ಯ, ಫೆ.13: ನಾನು ಮಂಡ್ಯ ಲೋಕಸಭಾ ಕ್ಷೇತ್ರದ (Mandya Loksabha Election) ಟಿಕೆಟ್‌ ಆಕಾಂಕ್ಷಿ ಅಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಮಂಡ್ಯ ಲೋಕಸಭಾ ಅಖಾಡದಿಂದ ಹಿಂದೆ ಸರಿದಿದ್ದಾರೆ. ಹಾಗಿದ್ರೆ ಮಂಡ್ಯ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಯಾರು? ಎಂಬ ಪ್ರಶ್ನೆ ಎದ್ದಿದೆ. ಅಭ್ಯರ್ಥಿ ಆಯ್ಕೆ ಮತ್ತೆ ದಳಪತಿಗಳಿಗೆ ಗೊಂದಲವಾಗಿದೆ. ಮಂಡ್ಯ ಲೋಕಸಭಾ ಅಖಾಡದಿಂದ ನಿಖಿಲ್ ಹಿಂದೆ ಸರಿದ ಹಿನ್ನಲೆ ಇದೀಗ …

Read More »

ಕಗ್ಗಂಟಾಗಿಯೇ ಉಳಿದ ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿ ಆಯ್ಕೆ; ನಾಮ ಪತ್ರ ಸಲ್ಲಿಸಲು ಮೂರೇ ದಿನ ಬಾಕಿ

ಬೆಂಗಳೂರು,: ರಾಜ್ಯಸಭೆ ಚುನಾವಣೆಗೆ (Rajya Sabha Election) ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಕಾಂಗ್ರೆಸ್​ಗೆ (Congress) ಕಗ್ಗಂಟಾಗಿದೆ. ರಾಜ್ಯಸಭೆಗೆ ನಾಮ ಪತ್ರ ಸಲ್ಲಿಸಲು ಇನ್ನು ಮೂರೇ ದಿನ ಬಾಕಿ ಇದೆ. ಇದುವರೆಗೂ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಅಂತಿಮ ನಿರ್ಧಾರ ಆಗಿಲ್ಲ. ರಾಜ್ಯ ನಾಯಕರ ಆಯ್ಕೆಗೆ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಹೈಕಮಾಂಡ್ ನಿಂದಲೇ ಹೊರ ರಾಜ್ಯದ ಒಂದು ಅಭ್ಯರ್ಥಿಯ ಫೈನಲ್ ಆಗುವ ಸಾಧ್ಯತೆ ಇದೆ. ಅಭಿಷೇಕ್ ಮನು ಸಿಂಘ್ವಿ ಅಥವಾ ರಘುರಾಂ ರಾಜನ್ …

Read More »

ಅಪ್ರಾಪ್ತ ವಯಸ್ಕರರು ವಾಹನ ಚಲಾಯಿಸಲು ಅನುಮತಿ ನೀಡಿದ್ದಕ್ಕೆ ಪೋಷಕರಿಗೆ 1.5 ಲಕ್ಷ ರೂ. ದಂಡ

ಬೆಂಗಳೂರು, : ಇತ್ತೀಚಿಗೆ ಅಪ್ರಾಪ್ತ ವಯಸ್ಕರರು (Children) ವಾಹನ ಚಲಾಯಿಸುವುದು (Vehicle Driving) ಹೆಚ್ಚಾಗಿದೆ. ಬೈಕ್​ ಅನ್ನು ಸರಿಯಾಗಿ ಬ್ಯಾಲೆನ್ಸ್​ ಮಾಡಲು ಬರದಿದ್ದರೂ, ಸಂಚಾರಿ ನಿಯಮಗಳ ಬಗ್ಗೆ ಅರಿವು ಇರದಿದ್ದರೂ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಓಡಿಸುತ್ತಾರೆ. ಇದರಿಂದ ಅಪಘಾತ ಸಂಭವಿಸಿ ಜೀವಕ್ಕೆ ಕುಂದು ತಂದುಕೊಳ್ಳುತ್ತಾರೆ. ನಿಯಮ ಮೀರಿ ವಾಹನ ಚಲಾಯಿಸಿ ಅಪಘಾತ ಮಾಡಿದ ಆರು ಅಪ್ರಾಪ್ತ ವಯಸ್ಕರ ಪೋಷಕರಿಗೆ (Parents) ತಲಾ 25 ಸಾವಿರ ರೂ. ದಂಡ ವಿಧಿಸಲಾಗಿದೆ. ಈ ಎಲ್ಲ …

Read More »

ಮರಳು ದಂಧೆಗೆ ಕಾಂಗ್ರೆಸ್​​ ಮುಖಂಡ ಡಾ. ಶಶಿಧರ್ ಹಟ್ಟಿ ಬಲಿ

ಗದಗ, ಫ್ರಬವರಿ 13: ಮರಳು ದಂಧೆಗೆ (Illegal Sand Mining) ಕಾಂಗ್ರೆಸ್​​ (Congress) ಮುಖಂಡ ಡಾ. ಶಶಿಧರ್ ಹಟ್ಟಿ (Dr Shashidhar Hatti) ಬಲಿಯಾಗಿದ್ದಾರೆ. ಗದಗ ಜಿಲ್ಲೆ ರೋಣ ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ಶಶಿಧರ್ ಡೆತ್​ನೋಟ್ ಬರೆದಿಟ್ಟು ಸೋಮವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಲುಂಗಿಯಿಂದ ನೇಣು ಬಿಗಿದುಕೊಂಡು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೂ ಮುನ್ನ ಮರಳು ದಂಧೆಕೋರ, ಕಾಂಗ್ರೆಸ್ ಮುಖಂಡ ಶರಣಗೌಡ ಪಾಟೀಲ್ ಹೆಸರನ್ನು ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ. ಎಲ್ಲಾ ಲೆಕ್ಕ ಕೊಟ್ಟರೂ ಶರಣಗೌಡ ಪದೇಪದೇ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ …

Read More »

ಹಣಕಾಸು ಆಯೋಗದ ಮುಂದೆ ಸಿದ್ದರಾಮಯ್ಯನವರು ಸಮಸ್ಯೆ ಹೇಳಲಿ: ಪ್ರಹ್ಲಾದ್‌ ಜೋಶಿ

ಕೋಲಾರ: ತಿನ್ನಲು ನಾನು, ಯುದ್ಧಕ್ಕೆ ನೀವು ಹೋಗಿ ಅಂತಾ ಸಿದ್ದರಾಮಯ್ಯ (Siddaramaiah) ಹೇಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿರುಗೇಟು ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತೆರಿಗೆ ವಂಚನೆ ಮಾಡಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ ತಿರುಗೇಟು ನೀಡಿದರು. ಸಿದ್ದರಾಮಯ್ಯನವರು ಹಣಕಾಸು ಆಯೋಗದ ಮುಂದೆ ಅವರ ಸಮಸ್ಯೆ ಹೇಳಲಿ ಎಂದು ಸವಾಲು ಹಾಕಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ 60 …

Read More »

ಬಿಜೆಪಿ ಶಾಸಕಾಂಗ ಸಭೆ ಅಂತ್ಯ: ಸಭೆಯಲ್ಲಿ ಯಾವೆಲ್ಲಾ ನಿರ್ಧಾರ

ಬೆಂಗಳೂರು, (ಫೆಬ್ರವರಿ 12): ಇಂದಿನಿಂದ ಕರ್ನಾಟಕ ವಿಧಾನಮಂಡಲ ಅಧಿವೇಶನ (Karnataka Session) ಆರಂಭವಾಗಿದ್ದು, ಮೊದಲ ದಿನವೇ ವಿಪಕ್ಷ ಬಿಜೆಪಿ(BJP) ಸದಸ್ಯರು ಕೇಸರಿ ಶಾಲು ಹಾಕಿಕೊಂಡು ಜೈ ಶ್ರೀರಾಮ್.. ಜೈ ಶ್ರೀರಾಮ್ ಅನ್ನೋ ಘೋಷಣೆಗಳನ್ನು ಕೂಗಿ ರಾಮನ ಜಪ ಮಾಡಿದೆ. ಇನ್ನು ನಾಳೆಯಿಂದ (ಫೆಬ್ರವರಿ 13) ಅಧಿವೇಶನದಲ್ಲಿ ಯಾವೆಲ್ಲಾ ವಿಷಯಗಳನ್ನ ಪ್ರಸ್ತಾಪಿಸಿ ಸರ್ಕಾರವನ್ನು ಕಟ್ಟಿಹಾಕಬೇಕೆಂದು ಬಿಜೆಪಿ ಇಂದು ಶಾಸಕಾಂಗ ಸಭೆ (Karnataka BJP legislative party meeting) ನಡೆಸಿದ್ದು, ಕೆಲವು ಮಹತ್ವದ …

Read More »

ಕುಮಾರಸ್ವಾಮಿ ಮತ್ತು ಪ್ರೀತಂ ನಡುವೆ ಮತ್ತೆ ವಾಕ್ ಸಮರ ಶುರು

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಮತ್ತು ಮಂಡ್ಯ ಸಂಭಾವ್ಯ ಅಭ್ಯರ್ಥಿಗಳ ವಿಚಾರದಲ್ಲಿ ಪ್ರೀತಂ ಜೆ ಗೌಡ ಮತ್ತು ಹಾಸನ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ವ್ಯತಿರಿಕ್ತ ಹೇಳಿಕೆಗಳ ನಂತರ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತ್ತು ಪ್ರೀತಂ ನಡುವೆ ಮತ್ತೆ ವಾಕ್ ಸಮರ ಶುರುವಾಗಿದೆ ಹಾಸನ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಮತ್ತು ಮಂಡ್ಯ ಸಂಭಾವ್ಯ ಅಭ್ಯರ್ಥಿಗಳ ವಿಚಾರದಲ್ಲಿ ಪ್ರೀತಂ ಜೆ ಗೌಡ ಮತ್ತು ಹಾಸನ ಹಾಲಿ …

Read More »

ಲೋಕಸಭೆ ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಆದ್ಯತೆ ನೀಡುವಂತೆ ಖರ್ಗೆಗೆ ಶಾಮನೂರು ಶಿವಶಂಕರಪ್ಪ ಪತ್ರ

ಬೆಂಗಳೂರು, ಫೆ.12: ರಾಜ್ಯಸಭೆ (Rajya Sabha) ಮತ್ತು ಲೋಕಸಭೆ ಚುನಾವಣೆ (Lok Sabha Elections) ಸಮೀಪಿಸುತ್ತಿದ್ದು, ಟಿಕೆಟ್​ಗಾಗಿ ಕಾಂಗ್ರೆಸ್​ನಲ್ಲಿ ಲಾಭಿಗಳು ಆರಂಭಗೊಂಡಿವೆ. ಈ ನಡುವೆ, ಮುಂಬರುವ ಎರಡು ಚುನಾವಣೆಗಳಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಆದ್ಯತೆ ನೀಡುವಂತೆ ಕೋರಿ ಅಖಿಲ ಭಾರತ ಲಿಂಗಾಯತ ಮಹಾಸಭಾದ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರು ಎಐಸಿಸಿ ಅಧ್ಯಕ್ಷಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರಿಗೆ ಪತ್ರ ಬರೆದಿದ್ದಾರೆ.   ರಾಜ್ಯಸಭೆಯಲ್ಲಿ ಮೂರು ಸ್ಥಾನಗಳು ಕಾಂಗ್ರೆಸ್​ಗೆ ದೊರೆಯಲಿವೆ. ಈ ಮೂರು ಸ್ಥಾನಗಳಲ್ಲಿ ಒಂದು …

Read More »