Breaking News

Daily Archives: ಫೆಬ್ರವರಿ 12, 2024

2024: ಗೃಹಲಕ್ಷ್ಮಿಗೆ 17500 ಕೋಟಿ ರೂ. ನಿಗದಿ; ಮಹಿಳೆಯರ ಆರ್ಥಿಕ ಸ್ಥಿತಿ ಉತ್ತಮ: ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು: ರಾಜ್ಯ ವಿಧಾನ ಮಂಡಲ ಜಂಟಿ ಅಧಿವೇಶನವನ್ನು (Karnataka Budget Session 2024) ಉದ್ದೇಶಿಸಿ ರಾಜ್ಯಪಾಲರ ಭಾಷಣ ಅತ್ಯಂತ ಅರ್ಥಗರ್ಭಿತವಾಗಿದೆ. ಸರ್ಕಾರದ ಸಾಧನೆಗಳ ಪ್ರತಿಬಿಂಬವಾಗಿದೆ. ನನ್ನ ಇಲಾಖೆಗೆ ಸಂಬಂಧಿಸಿದಂತೆ ಐದು ಗ್ಯಾರಂಟಿ ಯೋಜನೆಗಳಲ್ಲಿ (Congress Guarantee Scheme) ಒಂದಾಗಿರುವ ಗೃಹಲಕ್ಷ್ಮಿ ಯೋಜನೆಗೆ (Gruha lakshmi scheme) ಇದುವರೆಗೂ 17500 ಕೋಟಿ ರೂಪಾಯಿ ಅನುದಾನವನ್ನು ನಿಗದಿಪಡಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಹೇಳಿದ್ದಾರೆ.   …

Read More »

ರಾಜ್ಯ ವಿಧಾನ ಮಂಡಲ ಜಂಟಿ ಅಧಿವೇಶನ: ರಾಜ್ಯಪಾಲರ ಹಿಂದಿ ಭಾಷಣಕ್ಕೆ ವಾಟಾಳ್ ನಾಗರಾಜ್ ವಿರೋಧ

ಬೆಂಗಳೂರು, ಫೆಬ್ರವರಿ 12: ಕನ್ನಡ ಉಳಿಸುವುದಕ್ಕೆ ಬಹಳ ಪ್ರಮುಖವಾದಂತಹ ರಾಜ್ಯದ ಶಾಸನ ಸಭೆಯ ಜಂಟಿ ಅಧಿವೇಶನದಲ್ಲಿ ಕನ್ನಡ ಮಾಯವಾಗಿದೆ. ಹಿಂದಿಯಲ್ಲಿ ಮಾತನಾಡಿರುವುದು ಖಂಡನೆ. ಶಾಸಕರಿಗೆ, ಮಂತ್ರಿಗಳಿಗೆ ಕನ್ನಡ ಬೇಡ್ವಾ ಎಂದು ಹೋರಾಟಗಾರ ವಾಟಾಳ್ ನಾಗರಾಜ್(Vatal Nagaraj)ವಾಗ್ದಾಳಿ ಮಾಡಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇವತ್ತು ಕರ್ನಾಟಕ ರಾಜ್ಯದ ವಿಧಾನಮಂಡಲದ ಮೊದಲನೆ ದಿನ. ಇದನ್ನು ಉದ್ದೇಶಿಸಿ ರಾಜ್ಯಪಾಲರು ಹಿಂದೆಯಲ್ಲಿ ಭಾಷಣ ಮಾಡಿದ್ದಾರೆ. ರಾಜ್ಯಪಾಲರ ಬಗ್ಗೆ ನನಗೆ ಗೌರವವಿದೆ. ಆದರೆ ಅವರ ಹಿಂದಿ ಭಾಷಣದ …

Read More »

ಶ್ರೀರಾಮನಿಗೆ ಅವಹೇಳನ ಮಾಡಿದ ಸಂತ ಜೆರೋಸಾ ಶಾಲಾ ಶಿಕ್ಷಕಿ ಅಮಾನತು

ಮಂಗಳೂರು, ಫೆ.12:ಶ್ರೀರಾಮನಿಗೆ (Sri Ram) ಅವಹೇಳನಮಾಡಿದ ಆರೋಪ ಸಂಬಂಧ ಸಂತ ಜೆರೋಸಾ ಶಾಲೆಯ (St Gerosa School) ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ಆಡಳಿತ ಮಂಡಳಿ ಅಮಾನತು ಮಾಡಿದೆ. ದೇವರಿಗೆ ಅವಹೇಳನ ಖಂಡಿಸಿ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ (Vedavyas Kamath) ನೇತೃತ್ವದಲ್ಲಿ ಇಂದು ಪೋಷಕರು ಶಾಲೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಸ್ಥಳಕ್ಕೆ ಆಗಮಿಸಿದ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕಿಯನ್ನು ಅಮಾನತು ಮಾಡಿದ್ದಾಗಿ ತಿಳಿಸಿದ್ದಾರೆ. ನಗರದ ಜೆಪ್ಪುನಲ್ಲಿರುವ ಜೆರೋಸಾ ಶಾಲೆಯ ಏಳನೇ ತರಗತಿ ಶಿಕ್ಷಕಿ ಪ್ರಭಾ …

Read More »

ಸಹೋದರಿಯನ್ನ ಚುಡಾಯಿಸಿದ್ದನ್ನು ಪ್ರಶ್ನಿಸಿದ ಯುವಕನಿಗೆ ಪುಡಿ ರೌಡಿಗಳಿಂದ ಹಲ್ಲೆ

ಗದಗ, ಫೆಬ್ರವರಿ 12: ಅವಳಿ ನಗರದಲ್ಲಿ ಮತ್ತೆ ಪುಡಿ ರೌಡಿಗಳು(rowdies)ಅಟ್ಟಹಾಸ‌‌ ಮೆರೆದಿದ್ದು, 20 ವರ್ಷದ ಯುವಕನನ್ನು ಅಟ್ಟಾಡಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವಂತಹ ಘಟನೆ ಗದಗನ ಬೆಟಗೇರಿಯ ಹುಯಿಲಗೋಳ ರಸ್ತೆಯಲ್ಲಿ ಫೆಬ್ರವರಿ 8 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ಯುವಕ ತೇಜಸ್ ಮೇಹರವಾಡಿ ಸದ್ಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಸಹೋದರಿಗೆ ಯಾಕೆ ಚುಡಾಯಿಸುತ್ತೀರಿ ಅಂತ ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಆರೋಪ ಮಾಡಲಾಗಿದೆ. ಎಂಟು ಯುವಕರ …

Read More »

ಶಾಸಕರಿಗಾಗಿ ನಿರ್ಮಿಸಲಾದ ಕ್ಲಬ್ ಉದ್ಘಾಟನೆ: ​ಇಲ್ಲಿ‌ ಸ್ವಲ್ಪ ಎಣ್ಣೆ ಹಾಕಬಹುದು ಎಂದ ಹೊರಟ್ಟಿ

ಬೆಂಗಳೂರು, ಫೆ.12: ಬಾಲಬ್ರೂಹಿ ಗೆಸ್ಟ್ ಹೌಸ್​ನಲ್ಲಿ ಶಾಸಕರಿಗಾಗಿ ನಿರ್ಮಿಸಿದ ಕ್ಲಬ್ ವಿಧಾನಮಂಡಲ ಸಂಸ್ಥೆಯನ್ನು ಮುಖ್ಯಮಂತ್ರಿಸಿದ್ದರಾಮಯ್ಯ (Siddaramaiah)ಅವರು ಇಂದು ಉದ್ಘಾಟಿಸಿದರು. ಬಳಿಕ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti), ಯಾರ ಯಾರ ಕಾಲಕ್ಕೆ ಆಗಬೇಕು ಅನ್ನೋದು ಬರೆದುಕೊಟ್ಟಿರುತ್ತಾರೆ. 2022ರ ಮಾಡಬೇಕಿತ್ತು, ಕಾಲ ಕೂಡಿ ಬಂದಾಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ಉದ್ಘಾಟನೆ ಆಗಿದೆ. ನಾವು ಬೆಂಗಳೂರು ಕ್ಲಬ್​ಗೆ ಚಪ್ಪಲಿ ಹಾಕಿಕೊಂಡು ಹೋದಾಗ ಬಿಡಲಿಲ್ಲ. ಪೊಲೀಸರ ಜೊತೆ ಜಗಳ ಮಾಡಿ ಹೋಗಿದ್ದೆವು. ಸಂಸದರು, …

Read More »

ಶಕ್ತಿ ಯೋಜನೆ ಕೆಲವೇ ತಿಂಗಳು ಅಷ್ಟೇ:ಅಮೃತ ದೇಸಾಯಿ,

ಶಕ್ತಿ ಯೋಜನೆ – ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಜಾರಿಯಾದ ಮೊದಲ ಗ್ಯಾರಂಟಿ ಯೋಜನೆ. ಆದರೆ ಈ ಯೋಜನೆ ಯಶಸ್ವಿಯಾಗಿದೆ ಅಂತಾ ಸರಕಾರವೇನೋ ಹೇಳುತ್ತೆ. ಆದರೆ ಅದನ್ನು ಮುಂದಿನ ಬಹಳ ತಿಂಗಳುಗಳವರೆಗೆ ತೆಗೆದುಕೊಂಡು ಹೋಗೋದೇ ಸವಾಲಾಗಿದೆ. ಏಕೆಂದರೆ ಕೆಎಸ್ಸಾರ್ಟಿಸಿ ಹಲವಾರು ವರ್ಷಗಳಿಂದ ಹತ್ತಾರು ಸಮಸ್ಯೆಗಳಿಂದ ಕಂಗೆಟ್ಟುಹೋಗಿದೆ.ರಾಜ್ಯದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಶುರುವಾದ ಶಕ್ತಿ ಯೋಜನೆಯಿಂದ ಮಹಿಳೆಯರ ಓಡಾಟದ ಸಂಖ್ಯೆ ಹೆಚ್ಚಾಗಿದೆ. ಆದರೆ ಈ ಯೋಜನೆಯಿಂದಾಗಿ ಸುರಕ್ಷತೆ, ಸಮಯೋಚಿತ …

Read More »

ಕೇಸರಿ ಬಿಜೆಪಿಯವರ ಸ್ವತ್ತಲ್ಲ, ಎಲ್ಲ ಹಿಂದೂ ದೇವಸ್ಥಾನಗಳ ಮೇಲೆ ಕೇಸರಿ ಧ್ವಜವಿರುತ್ತದೆ,: ಎಂಬಿ ಪಾಟೀಲ್

ಕೇಸರಿ ಬಿಜೆಪಿಯವರ ಸ್ವತ್ತಲ್ಲ, ಎಲ್ಲ ಹಿಂದೂ ದೇವಸ್ಥಾನಗಳ ಮೇಲೆ ಕೇಸರಿ ಧ್ವಜವಿರುತ್ತದೆ, ಮಠಮಾನ್ಯಗಳಲ್ಲಿ ಕೇಸರಿ ಬಾವುಟಗಳಿರುತ್ತವೆ, ನಾವೆಲ್ಲ ಮನೆಗಳಲ್ಲಿ ಪೂಜೆ ಮಾಡುವಾಗ ಕೇಸರಿ ಬಟ್ಟೆಯನ್ನು ಇಟ್ಟುಕೊಂಡಿರುತ್ತೇವೆ, ಕೇಸರಿ ಶಲ್ಯ ಹೆಗಲ ಮೇಲೆ ಹಾಕಿಕೊಂಡಿರುತ್ತೇವೆ, ಹಾಗಾಗಿ ಕೇಸರಿ ಶಲ್ಯ, ಕೇಸರಿ ಬಾವುಟ ಬಿಜೆಪಿಯವರ ಸೊತ್ತಲ್ಲ ಎಂದು ಸಚಿವ ಎಂಬಿ ಪಾಟಿಲ್ ಹೇಳಿದರು.ನಾವು ಜೈ ಬೀಮ್, ಜೈ ವಾಲ್ಮೀಕಿ, ಜೈ ಬಸವಣ್ಣ ಜೊತೆಗೆ ಜೈ ಶ್ರೀರಾಮ ಕೂಡ ಅನ್ನುತ್ತೇವೆ ಎಂಬಿ ಪಾಟೀಲ್, ಸಚಿವ

Read More »

ಹೆಲ್ಮೆಟ್​ ಹಾಕದಿರುವುದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸಪ್ಪನ ಕೈಕಚ್ಚಿದ ಬೈಕ್ ಸವಾರ

ಬೆಂಗಳೂರು, (ಫೆಬ್ರವರಿ 21): ಹೆಲ್ಮೆಟ್​ ಸಂಬಂಧ (helmet) ಸಂಚಾರಿ ಪೊಲೀಸರು (Traffic Police) ಹಾಗೂ ವಾಹನ ಸವಾರರ ನಡುವೆ ಕಿರಿಕ್ ನಡೆಯುತ್ತಿರುತ್ತವೆ. ಆದ್ರೆ, ಇಲ್ಲೋರ್ವ ಬೈಕ್ ಸವಾರ ಹೆಲ್ಮೆಟ್ ಹಾಕದಿರುವುದನ್ನು ಪ್ರಶ್ನಿಸಿದ್ದಕ್ಕೆ ಸಂಚಾರಿ ಪೊಲೀಸ್ ಪೇದೆಯ ಕೈಕಚ್ಚಿದ್ದಾನೆ. ಬೆಂಗಳೂರಿನ (Bengaluru) ವಿಲ್ಸನ್ ಗಾರ್ಡನ್ 10ನೇ ಕ್ರಾಸ್​ನಲ್ಲಿ ಈ ಘಟನೆ ನಡೆದಿದೆ. ಬಳಿಕ ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿ ಕರೆಸಿ ಬೈಕ್​ ಸವಾರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಬೈಕ್​ ಸವಾರನ ವಿರುದ್ಧ ಸಂಚಾರಿ …

Read More »

ಬಿಎಸ್​ಎನ್​ಎಲ್ ಜನರಲ್ ಮ್ಯಾನೇಜರ್ ಕಾರು ಜಪ್ತಿ

ವಿಜಯಪುರ, ಫೆ.12: ಭಾರತ ಸಂಚಾರ ನಿಗಮ ಲಿಮಿಟೆಡ್ (BSNL) ಜನರಲ್ ಮ್ಯಾನೇಜರ್ ಬಳಕೆ ಮಾಡುತ್ತಿದ್ದ ಕಾರು ಜಪ್ತಿ ಮಾಡಲಾಗಿದೆ. ನಿಗಮದಿಂದ ನೀಡಿದ ಕಾರಿನ ಬದಲು ಬೇರೆ ಕಾರು ಬಳಕೆ ಮಾಡುತ್ತಿದ್ದ ಬಗ್ಗೆ ಸಿಬ್ಬಂದಿ ನೀಡಿದ ದೂರಿನ ಅನ್ವಯ ಪೊಲೀಸರು ವಿಕಾಸ್ ಜೈಕರ್ ಬಳಸುತ್ತಿದ್ದ ಕಾರನ್ನು ಜಪ್ತಿ ಮಾಡಿದ್ದಾರೆ. ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಜನರಲ್ ಮ್ಯಾನೇಜರ್ ಆಗಿ ವಿಕಾಸ್ ಜೈಕರ್ ಕೆಲಸ ಮಾಡುತ್ತಿದ್ದಾರೆ. ಬಿಎಸ್​ಎಲ್​ನಿಂದ ಕಾರು ನೀಡಿದ್ದರೂ ವಿಕಾಸ್ ಜೈಕರ್ ಅವರು ಬೆಳಗಾವಿಯಿಂದ …

Read More »

ಗ್ಯಾರಂಟಿ ಎಂದು ಕಾಂಗ್ರೆಸ್​ ಕಡಿದು ಕಟ್ಟಿಹಾಕಿದ್ದು ಏನಿಲ್ಲ: ವಿಜಯೇಂದ್ರ

ಚಿಕ್ಕಬಳ್ಳಾಪುರ, ಫೆ.12: ಗ್ಯಾರಂಟಿ (Congress Guarantees) ಎಂದು ಕಾಂಗ್ರೆಸ್​ನವರು ಕಡಿದು ಕಟ್ಟಿಹಾಕಿದ್ದು ಏನಿಲ್ಲ. ಕಾಂಗ್ರೆಸ್​ ಸಾಕಷ್ಟು ಭರವಸೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದಿದೆ.ಅಧಿಕಾರಕ್ಕೆ ಬಂದು ಎಂಟು ಒಂಬತ್ತು ತಿಂಗಳಾದರೂ ಅಭಿವೃದ್ಧಿ ಕಾಣಿಸುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷಬಿವೈ ವಿಜಯೇಂದ್ರ (BY Vijayendra)ಆರೋಪಿಸಿದ್ದಾರೆ. ಇಡೀ ದೇಶಕ್ಕೆ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು ಮಾದರಿಯಾಗಿವೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬಜೆಟ್ ಅಧಿವೇಶನದಲ್ಲಿ ಭಾಷಣ ಮಾಡಿದ ಬೆನ್ನಲ್ಲೇ ಈ ಹೇಳಿಕೆ ನೀಡಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು ಗ್ರಾಮದಲ್ಲಿ …

Read More »