Breaking News

Daily Archives: ಫೆಬ್ರವರಿ 8, 2024

ಯೋಧೆ ಪದ್ಮಶ್ರೀಗೆ ನಾಗರಿಕ ಸನ್ಮಾನ

ಪರಮಾನಂದವಾಡಿ: ‘ದೇಶಾಭಿಮಾನವೇ ನಮ್ಮ ಸೈನಿಕರಿಗೆ ಧೈರ್ಯ, ಶೌರ್ಯ ತುಂಬುತ್ತದೆ. ಹೀಗಾಗಿ ಸೈನಿಕರು ರಾಷ್ಟ್ರದ ರಕ್ಷಣೆಗಾಗಿ ತಮ್ಮ ಪ್ರಾಣ ತ್ಯಾಗ ಮಾಡುವುದಕ್ಕೂ ಹಿಂದೆ ಸರಿಯುವುದಿಲ್ಲ. ಈ ದೇಶಾಭಿಮಾನ ಎಲ್ಲರಿಗೂ ಮಾದರಿ’ ಎಂದು ಮುಖಂಡ ಬಸವರಾಜ ಸನದಿ ಹೇಳಿದರು. ರಾಯಬಾಗ ತಾಲ್ಲೂಕಿನ ಪ್ರಥಮ ಮಹಿಳಾ ಯೋಧರಾದ ಪದ್ಮಶ್ರೀ ಸಂಜು ವಾಳಕೆ ಅವರು ಜನವರಿ 26ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಂಡು, ರಾಷ್ಟ್ರಪತಿ ಅವರಿಂದ ಗೌರವ ಪ್ರಶಸ್ತಿ ‍‍‍ಪಡೆದ ಕಾರಣ, ಗ್ರಾಮದಲ್ಲಿ ಗುರುವಾರ …

Read More »

22 ಸಾವಿರ ಲಂಚ ಪಡೆಯುವಾಗ, ಜಿಲ್ಲಾ ನೋಂದಣಿ ಕಚೇರಿಯ ಡೇಟಾ ಆಪರೇಟರ್‌ ಸೋಮಶೇಖರ ಮಾಸ್ತಮರಡಿಲೋಕಾಯುಕ್ತ ಪೊಲೀಸರ ಬಲೆಗೆ

ಬೆಳಗಾವಿ: ಜಿಲ್ಲಾ ನೋಂದಣಿ ಕಚೇರಿಯ ಡೇಟಾ ಆಪರೇಟರ್‌ ಸೋಮಶೇಖರ ಮಾಸ್ತಮರಡಿ ₹22 ಸಾವಿರ ಲಂಚ ಪಡೆಯುವಾಗ, ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ‘ತಾಲ್ಲೂಕಿನ ಕಂಗ್ರಾಳಿ ಬಿ.ಕೆ ಗ್ರಾಮದಲ್ಲಿ ನಾನು ಖರೀದಿಸಿದ ಜಾಗಕ್ಕೆ ಸಂಬಂಧಿಸಿ ಕೊರತೆ ಮುದ್ರಾಂಕ ದೃಢೀಕರಣ ಮಾಡಿಕೊಡಲು ಸೋಮಶೇಖರ ₹22 ಸಾವಿರ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ’ ಎಂದು ಬೆಳಗಾವಿಯ ಅವಿನಾಶ ಧಾಮಣಕರ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು.   ‘ಅವನಾಶ ಅವರಿಂದ ಗುರುವಾರ ಹಣ ಪಡೆಯುವಾಗ ಸಿಕ್ಕಿಬಿದ್ದ ಸೋಮಶೇಖರ …

Read More »

ಬೆಳಗಾವಿ ಜಿಲ್ಲೆ ವಿಭಜಿಸಿ,:ಮುರುಘರಾಜೇಂದ್ರ

ಗೋಕಾಕ: ‘ಆಡಳಿತಾತ್ಮಕ ದೃಷ್ಟಿಯಿಂದ ಅವಿಭಜಿತ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಮೂರು ಹೊಸ ಜಿಲ್ಲೆಗಳನ್ನು ರಚಿಸಲು ಮುಂದಾಗಿ, ರಾಜ್ಯ ಸರ್ಕಾರವು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮಾಹಿತಿ ಸಲ್ಲಿಸುವಂತೆ ಆದೇಶಿಸಿರುವುದು ಸ್ವಾಗತಾರ್ಹ’ ಎಂದು ನೂತನ ಗೋಕಾಕ ಜಿಲ್ಲಾ ಚಾಲನಾ ಸಮಿತಿಯ ಅಧ್ಯಕ್ಷ ಮುರುಘರಾಜೇಂದ್ರ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.   ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದ ಅತಿದೊಡ್ಡ ಜಿಲ್ಲಾ ಕೇಂದ್ರವಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ನೂತನ ಜಿಲ್ಲೆಯನ್ನಾಗಿ ಮಾಡುವಂತೆ ಪಿ.ಸಿ.ಗದ್ದಿಗೌಡರ, …

Read More »

ಸವದತ್ತಿ: ತಾಲ್ಲೂಕಿನ ಹೂಲಿ ಅಜ್ಜನ ಅದ್ದೂರಿ ರಥೋತ್ಸವ

ಸವದತ್ತಿ: ತಾಲ್ಲೂಕಿನ ಹೂಲಿ ಗ್ರಾಮದ ಗುರು ಬಾಲಲೀಲಾ ಸಂಗಮೇಶ್ವರ ಸ್ವಾಮೀಜಿ 91ನೇ ಪುಣ್ಯ ಸ್ಮರಣೋತ್ಸವ ಹಾಗೂ ಹೂಲಿ ಅಜ್ಜನ ಮಠದ ಜಾತ್ರಾ ಮಹೋತ್ಸವದ ನಿಮಿತ್ತ ಗುರುವಾರ ರಥೋತ್ಸವ ಜರುಗಿತು. ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಅಲಂಕೃತ ರಥದಲ್ಲಿ ಬಾಲಲೀಲಾ ಸಂಗಮೇಶ್ವರರ ಭಾವಚಿತ್ರವನ್ನು ಪ್ರತಿಷ್ಠಾಪಿಸಿ, ವಿವಿಧ ವಾದ್ಯ ಮೇಳದೊಂದಿಗೆ ಅದ್ಧೂರಿ ರಥೋತ್ಸವ ಜರುಗಿತು. ಸುತ್ತಲಿನ ಗ್ರಾಮಗಳ ಅಜ್ಜನ ಭಕ್ತರು ಆಗಮಿಸಿದ್ದರು. ಇಷ್ಟಾರ್ಥ ಸಿದ್ಧಿಗಾಗಿ ಉತ್ತತ್ತಿ, ಬಾಳೆಹಣ್ಣು ರಥಕ್ಕೆ ಎಸೆದು ಭಕ್ತಿ …

Read More »

ಗಂಗಾವತಿಯಲ್ಲಿ ಕಿಷ್ಕಿಂಧಾ ಜಿಲ್ಲಾ ರಚನೆಗಾಗಿ `ಸರ್ಕಾರಕ್ಕೆ ಸಾವಿರ ಪತ್ರ’ ಅಭಿಯಾನ

ಗಂಗಾವತಿ: ವಾಣಿಜ್ಯ ನಗರಿ ಗಂಗಾವತಿಯನ್ನು ಕೇಂದ್ರವನ್ನಾಗಿಟ್ಟುಕೊಂಡು ನೂತನ ಕಿಷ್ಕಿಂಧಾ ಜಿಲ್ಲೆ ರಚಿಸಬೇಕು ಎಂದು ಒತ್ತಾಯಿಸಿ, (Koppala News) ರಾಜ್ಯ ಸರ್ಕಾರದ ಗಮನ ಸೆಳೆಯಲು ಇಲ್ಲಿನ ಸಂಕಲ್ಪ ಪದವಿ ಮತ್ತು ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿಭಿನ್ನ ಅಭಿಯಾನ (Campaign) ಆರಂಭಿಸಿದ್ದಾರೆ.   ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ನಾಗರಾಜ್ ಗುತ್ತೇದಾರ, ಕಾಲೇಜಿನ ವಿದ್ಯಾರ್ಥಿಗಳು ಸರ್ಕಾರಕ್ಕೆ ಸಾವಿರ ಪತ್ರ ಎಂಬ ಅಭಿಯಾನ ಆರಂಭಿಸಿದ್ದು, ಫೆ.10 ರಂದು …

Read More »

ಮತ್ತೆ ಮೋದಿ ಸರ್ಕಾರ ಪಕ್ಕಾ! ‘ಇಂಡಿಯಾ’ ಕೂಟಕ್ಕೆ ಸೋಲೇ ಗತಿ?

ನವದೆಹಲಿ: ಬಹುನಿರೀಕ್ಷಿತ ಲೋಕಸಭಾ ಚುನಾವಣೆ (Lok Sabha Election) ಪೂರ್ವ ಸಮೀಕ್ಷೆಗಳ ವರದಿ ಹೊರಬಿದ್ದಿದ್ದು, ಸತತ ಮೂರನೇ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಸಿಗುವ (Win for NDA) ಸಾಧ್ಯತೆ ಗೋಚರಿಸಿದೆ(Lok Sabha Pre Poll Survey). ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಬಳಿಕ ಟೈಮ್ಸ್‌ನೌ ಹಾಗೂ ಇಂಡಿಯಾ ಟುಡೆ- ಸಿ ವೋಟರ್‌ ನಡೆಸಿದ ಪ್ರತ್ಯೇಕ ಸಮೀಕ್ಷೆಗಳ ಪ್ರಕಾರ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಉತ್ತರ …

Read More »

ಸಿಲ್ಲಿವಿಚಾರ ಬಿಟ್ಟು ಬಡತನ.. ನಿರುದ್ಯೋಗದ ಬಗ್ಗೆ ಮಾತಾಡಿ: ಸಿಎಂ ಕಿಡಿ

ಬೆಂಗಳೂರು: ಊಟ ಮಾಡೋದು, ಬಟ್ಟೆ ಹಾಕೋಳುದು, ತಿಂಡಿ ತಿನ್ನೋದರ ಬಗ್ಗೆ ಮಾತಾಡೋಕೆ ಆಗುತ್ತಾ ಅವೆಲ್ಲಾ ಸಿಲ್ಲಿ ಪ್ರಶ್ನೆಗಳು ಎಂದು ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿಯವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ವಿಷಯದ ಕುರಿತು ಜನಸ್ಪಂದನ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ಊಟ ಮಾಡೋದು, ಬಟ್ಟೆ ಹಾಕೋಳುದು, ತಿಂಡಿ ತಿನ್ನೋದರ ಬಗ್ಗೆ ಮಾತಾಡೋಕೆ ಆಗುತ್ತಾ ಅವೆಲ್ಲಾ ಸಿಲ್ಲಿ ಪ್ರಶ್ನೆಗಳು. ಈ ದೇಶದ ಬಡವರ ಬಗ್ಗೆ, ಬೆಲೆ ಏರಿಕೆ, ನಿರುದ್ಯೋಗಿಗಳ ಸಮಸ್ಯೆಗಳ ಬಗ್ಗೆ …

Read More »

ಬಿರಿಯಾನಿ ತಿನ್ನಿಸಿ ಗೆಲ್ಲೋ ವ್ಯಕ್ತಿತ್ವ ನನ್ನದಲ್ಲ:ಎಸ್‌ಆರ್‌ ವಿಶ್ವನಾಥ್‌

ಬೆಂಗಳೂರು: ‌ಸುಧಾಕರ್‌ ಅವರು ಹತಾಶ ಮನೋಭಾವದಿಂದ ಕ್ಷುಲ್ಲಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಬಿರಿಯಾನಿ ತಿನ್ನಿಸಿ ಗೆಲ್ಲೋ ವ್ಯಕ್ತಿತ್ವ ನನ್ನದಲ್ಲ ಎಂದು ಎಸ್‌ಆರ್‌ ವಿಶ್ವನಾಥ್‌ (SR Vishwanth) ಟಾಂಗ್ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್‌ಆರ್‌ ವಿಶ್ವನಾಥ್‌, ಬಿರಿಯಾನಿ ಕೊಟ್ಟ ವಿಚಾರದ ಬಗ್ಗೆ ಸುಧಾಕರ್‌ ಬಹುಶಃ ತಪ್ಪು ತಿಳಿದುಕೊಂಡಿದ್ದಾರೆ. ನನ್ನ ಸ್ನೇಹಿತ ಭೈರೇಗೌಡ ಅವರ ಹುಟ್ಟು ಹಬ್ಬ ಜೋರಾಗಿ ಮಾಡುತ್ತಿದ್ದೆವು. ಅವರು ಆಗ ಎಲ್ಲಾ ಪಕ್ಷದವರನ್ನೂ ಕರೆಯುತ್ತಿದ್ದರು. ಆ ಸಂದರ್ಭ ನಾನೂ ಹೋಗಿದ್ದೀನಿ. ಆದರೆ …

Read More »

ಹಿಂದೂಗಳ ತೆರಿಗೆ ಹಿಂದೂಗಳ ಹಕ್ಕು: ಧ್ವನಿ ಎತ್ತಿದ ಬಿಜೆಪಿ ಶಾಸಕ ಹರೀಶ್ ಪೂಂಜಾ

ಮಂಗಳೂರು, : ಕೇಂದ್ರ ಸರ್ಕಾರ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ತೆರಿಗೆ ಹಂಚಿಕೆಯಲ್ಲಿ ತಾರತಮ್ಯ ಮಾಡಿತ್ತಿದೆ ಅಂತಾ ಕಾಂಗ್ರೆಸ್ ಆರೋಪಿಸಿದೆ. ಇದು ಕಾಂಗ್ರೆಸ್​ ಮತ್ತು ಬಿಜೆಪಿ ಮಧ್ಯೆ ತಿಕ್ಕಾಟಕ್ಕೂ ಕಾರಣವಾಗಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ(Harish Poonja)ಹಿಂದೂಗಳ ತೆರಿಗೆ ಹಿಂದೂಗಳ ಹಕ್ಕು ಎಂದು ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದ್ದಾರೆ. “ಈ ಆರ್ಥಿಕ ವರ್ಷದಿಂದ ಹಿಂದೂಗಳು ಕಟ್ಟಿರುವ …

Read More »

ಈ-ಮೇಲ್ ಮೂಲಕವೂ ವಿವಾಹ ನೋಂದಣಿ ಸೇರಿದಂತೆ ಇಂದಿನ ಸಚಿವ ಸಂಪುಟದ ತೀರ್ಮಾನಗಳು

ಬೆಂಗಳೂರು,: ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah)ನೇತೃತ್ವದಲ್ಲಿ ನಡೆದ ಸಂಪುಟ ಸಭೆ ಮುಕ್ತಾಯವಾಗಿದೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಚ್​ಕೆ ಪಾಟೀಲ್​, ವಿಶೇಷ ವಿವಾಹ ಕರ್ನಾಟಕ ತಿದ್ದುಪಡಿ ನಿಯಮಗಳು 2024ಕ್ಕೆ ಅನುಮೋದನೆ ನೀಡಿದ್ದು, ಈ-ಮೇಲ್ ಮೂಲಕವೂ ಕೂಡ ವಿವಾಹ ನೊಂದಣಿ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ. 45% ನಷ್ಟು ಮೇಲ್ಮಟ್ಟದ ಹುದ್ದೆಗಳು ಇನ್ನೂ ಖಾಲಿ ಇವೆ. ಅದನ್ನು ಭರ್ತಿ ಮಾಡಲು ಕ್ಯಾಬಿನೆಟ್​ನಿಂದ ತೀರ್ಮಾನ ಮಾಡಲಾಗಿದೆ. ಕೆಎಎಸ್​ (ಸೂಪರ್ ಟೈಮ್ ಸ್ಕೇಲ್) ಮತ್ತು ಕೆಎಎಸ್ (ಆಯ್ಕೆ ಶ್ರೇಣಿ) …

Read More »