ಹಟ್ಟಿಚಿನ್ನದಗಣಿ: ಮಾರುಕಟ್ಟೆಯಲ್ಲಿ ಒಣಮೆಣಸಿಕಾಯಿ ದರ ಏರಿಕೆ ಆಗಿರುವುದರಿಂದ ಮೆಣಸಿನಕಾಯಿ ಬೆಳೆ ಬೆಳದ ರೈತರು ಸಂತಸದಲ್ಲಿದ್ದಾರೆ. ರೈತರು ಒಣಮೆಣಸಿನಕಾಯಿ ಮಾರಾಟ ಮಾಡಲು ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಅಲ್ಲಿ, ಹತ್ತಿಗಿರಿ ತಳಿಯ ಒಣ ಮೆಣಸಿನಕಾಯಿ, ಪ್ರತಿ ಕ್ವಿಂಟಲ್‌ಗೆ ₹25 ಸಾವಿರ ಇದೆ. ₹38 ಸಾವಿರ ಬ್ಯಾಡಗಿ ಹಾಗೂ ಗುಂಟೂರು ತಳಿ ತಲಾ 16 ರಿಂದ 18 ಸಾವಿರದಿಂದ ಧಾರಣೆ ಸಿಗುತ್ತಿರುವುದರಿಂದ ಬೆಳೆಗಾರರ ಮೊಗದಲ್ಲಿ ಹರ್ಷ ಮೂಡಿದೆ.
Read More »Monthly Archives: ಜನವರಿ 2024
ಅಜ್ಜನ ಜಾತ್ರೆ: ನಾಲ್ಕೂವರೆ ಲಕ್ಷ ಭಕ್ತರಿಗೆ ದಾಸೋಹದಲ್ಲಿ ಮಿರ್ಚಿ ಸೇವೆ
ಕೊಪ್ಪಳ: ಇಲ್ಲಿನ ಗವಿಮಠದ ಜಾತ್ರೆಯ ಮಹಾದಾಸೋಹದಲ್ಲಿ ಎರಡನೇ ದಿನವಾದ ಭಾನುವಾರ ಉತ್ತರ ಕರ್ನಾಟಕದ ಪ್ರಸಿದ್ಧ ಖಾದ್ಯ ಮಿರ್ಚಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಮಿರ್ಚಿ ತಯಾರಿಕೆಗೆ ಕೊಪ್ಪಳದ ಸಮಾನ ಮನಸ್ಕ ಸ್ನೇಹಿತರು ಮಿರ್ಚಿ ಸೇವಾ ಬಳಗ ಆರಂಭಿಸಿದ್ದು ಈ ಬಾರಿ ಸೇವಾ ಕಾರ್ಯದಲ್ಲಿ ಗಣ್ಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ದಾಸೋಹಕ್ಕಾಗಿ ಬರುವ ಲಕ್ಷಾಂತರ ಭಕ್ತರಿಗೆ ಮಿರ್ಚಿ ಉಣಬಡಿಸಿದರು. ಬೆಳಗಿನ ಜಾವವೇ ಆರಂಭವಾಗಿದ್ದು 400 ಬಾಣಸಿಗರು ಈ ಕಾರ್ಯದಲ್ಲಿ ಭಾಗಿಯಸದರು. ಮಿರ್ಚಿ ರುಚಿಗೆ ಮನಸೋತ …
Read More »ಪಟಾಕಿ ಗೋಡೌನ್‌ನಲ್ಲಿ ಬ್ಲಾಸ್ಟ್; 3 ಸಾವು,
ಮಂಗಳೂರು: ಪಟಾಕಿ ಗೋಡೌನ್ ಬ್ಲಾಸ್ಟ್ ಆಗಿ ಮೂವರು ಮೃತಪಟ್ಟಿದ್ದಾರೆ. ಮಂಗಳೂರಿನ ಬೆಳ್ತಂಗಡಿ ತಾಲೂಕಿನ ವೇಣೂರಿನ ಗೋಳಿಯಂಗಡಿಯಲ್ಲಿ ಎಂಬಲ್ಲಿ ಈ ಘಟನೆ ನಡೆದಿದೆ. ಸಾಲಿಡ್ ಫೈರ್‌ವರ್ಕ್ ಎಂಬ ಗೋಡೌನ್‌ನಲ್ಲಿ ಈ ಅನಾಹುತ ಸಂಭವಿಸಿದ್ದು, ಸ್ಥಳಕ್ಕೆ ವೇಣೂರು ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಮೃತಪಟ್ಟವರನ್ನು ಕೇರಳದ ಸ್ವಾಮಿ (55) , ಕೇರಳದ ವರ್ಗಿಸ್ (68), ಹಾಸದ ಅರಸಿಕೆರೆ ನಿವಾಸಿ ಚೇತನ್ (25) ಎಂದು ಗುರುತಿಸಲಾಗಿದೆ. ಸ್ಪೋಟದ ತೀವ್ರತೆಗೆ ಕಾರ್ಮಿಕರ ಮೃತದೇಹಗಳು ಛಿದ್ರ …
Read More »ಅವಕಾಶವಾದಿ ರಾಜಕೀಯ ಮಾಡುವವರ ಬಗ್ಗೆ ನಾವೇನೂ ಮಾಡಲಾಗದು: ಎಂ.ಬಿ.ಪಾಟೀಲ
ವಿಜಯಪುರ: ಅವಕಾಶವಾದಿ ರಾಜಕೀಯ ಮಾಡುವವರ ಬಗ್ಗೆ ನಾವೇನೂ ಮಾಡಲಾಗದು, ಇದೆಲ್ಲ ಜಗತ್ತಿನ ನಿಯಮ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಬಿಹಾರ ರಾಜಕೀಯ ಬೆಳವಣಿಗೆ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹೋಗುವವರು ಹೋಗುತ್ತಾರೆ, ನಾವು ನಮ್ಮ ಸಿದ್ಧಾಂತದೊಂದಿಗೆ ಮುಂದುವರೆಯುತ್ತೇವೆ. ಇದರಿಂದ ನಾವು ಮತ್ತಷ್ಡು ಹೆಚ್ಚಿನ ರೀತಿಯಲ್ಲಿ ನಮ್ಮ ಬದ್ಧತೆಯಿಂದ ಸಿದ್ದಾಪುಗಳೊಂಡಿದೆ ಕೆಲಸ ಮಾಡಲು ಸಹಕಾರಿ ಆಗಲಿದೆ ಎಂದರು. ಆಗಾಗ ಕಾಲಕಾಲಕ್ಕೆ ಇಂಥದ್ದನ್ನೆಲ್ಲ ನೋಡುತ್ತಿದ್ದೇವೆ. ಇಂಥದ್ದೆಲ್ಲ ಶುದ್ಧವಾಗಬೇಕಿದೆ …
Read More »ಭಾರತ ಧ್ವಜ ಹಾರಿಸುವ ಬದಲು ಭಗವಾಧ್ವಜ ಹಾರಿಸಿದ್ದು ತಪ್ಪು:C.M.
ಚಿತ್ರದುರ್ಗ: ಭಾರತ ದೇಶದ ಧ್ವಜ ಹಾರಿಸುವುದು ಬಿಟ್ಟು ಭಗವಾಧ್ವಜ ಹಾರಿಸಿದ್ದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಚಿತ್ರದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಹನುಮಧ್ವಜ ಕಿತ್ತುಹಾಕಿರುವುದಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಭೇಟಿ ನೀಡುತ್ತಿರುವ ಬಗ್ಗೆ ಮಾತನಾಡಿ ನಮ್ಮ ದೇಶದ ಬಾವುಟ ಹಾರಿಸಬೇಕು ಎಂದರು. ಶ್ಯಾಮನೂರು ಶಿವಶಂಕರಪ್ಪನವರು ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ಅವರೇ ಗೆಲ್ಲಲಿ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ನನಗೆ …
Read More »ಕೇಂದ್ರದತ್ತ ಬೆರಳು ತೋರದೆ ಪರಿಹಾರ ಬಿಡುಗಡೆ ಮಾಡಲಿ: ಬಿ.ವೈ.ವಿಜಯೇಂದ್ರ
ರಾಯಚೂರು: ರಾಜ್ಯ ಸರ್ಕಾರ ಕೇಂದ್ರ ಸರ್ಕಾರದತ್ತ ಬೆರಳು ಮಾಡದೆ ಮೊದಲು ರೈತರಿಗೆ ಬರ ಪರಿಹಾರ ನೀಡಲಿ. ಹಿಂದೆ ಬಿ.ಎಸ್.ಯಡಿಯೂರಪ್ಪ ಕೆಂದ್ರದ ಅನುದಾನಕ್ಕೆ ಕಾಯದೆ ಬರಪರಿಹಾರ ಕೊಟ್ಟಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ನಗರದಲ್ಲಿ ರವಿವಾರ ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್ ನವರು ಯಾಕೆ ಕೇಂದ್ರದ ಕಡೆ ಬೆಟ್ಟು ಮಾಡಿ ತೋರಿಸುತ್ತಾರೆ. ನೀವು ಕೊಡಬೇಕಾದ ಪರಿಹಾರವನ್ನು ಮೊದಲು ಕೊಡಿ. ದೇಶದಲ್ಲಿ ಅನೇಕ ರಾಜ್ಯಗಳಿವೆ. ಕೇಂದ್ರ ಸರ್ಕಾರ ಸೂಕ್ತ ತೀರ್ಮಾನ ಮಾಡಿ …
Read More »ನಿತೀಶ್ ಕುಮಾರ್ ಮೈತ್ರಿ ತೊರೆಯುತ್ತಾರೆಂದು 5 ದಿನಗಳ ಹಿಂದೆಯೇ ಗೊತ್ತಾಗಿತ್ತು: ಖರ್ಗೆ
ಕಲಬುರಗಿ: ಬಿಹಾರದಲ್ಲಿ ಐದು ದಿನಗಳ ಹಿಂದೆಯೇ ನಿತೀಶ್ ಕುಮಾರ್ ಅವರು ಇಂಡಿಯಾ ಒಕ್ಕೂಟದಿಂದ ಹೊರ ಬಂದು ಮೈತ್ರಿ ತೊರೆಯುತ್ತಾರೆಂದು ತಿಳಿದಿತ್ತು ಎಂದು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. ಇಲ್ಲಿಂದ ಡೆಹ್ರಾಡೂನ್ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ ಯಾದವ್ ಅವರೇ ತಮಗೆ ಫೋನ್ ಮಾಡಿ ಮೈತ್ರಿ ತೊರೆಯುವ ಬಗ್ಗೆ ಮಾಹಿತಿ ತಿಳಿಸಿದ್ದರು. ಆಗ ಪಕ್ಷಗಳ ಬಲಾಬಲ ಬಗ್ಗೆ ಸ್ಪಷ್ಟ ಮಾಹಿತಿ …
Read More »ಆಸ್ತಿಗಾಗಿ ಅಪ್ಪನನ್ನೇ ಕೊಲೆ ಮಾಡಿಸಿದ್ದ ಮಗ, ಸೊಸೆ ಅರೆಸ್ಟ್
ಬಾಗಲಕೋಟೆ, ಜನವರಿ : ಆಸ್ತಿಗಾಗಿ (Property) ಸುಪಾರಿ ಕೊಟ್ಟು ಅಪ್ಪನನ್ನೇ ಮಗಕೊಲೆಮಾಡಿಸಿದ್ದಾನೆ. ಚೆನ್ನಪ್ಪ (66) ಕೊಲೆಯಾದ ತಂದೆ. ಚನ್ನಬಸಪ್ಪ ಕೊಲೆ ಮಾಡಿಸಿದ ಮಗ. ಮಾಂತೇಶ್ ಮರಡಿಮಠ ಕೊಲೆ ಮಾಡಿದ ಆರೋಪಿ. ಚೆನ್ನಪ್ಪನ ಕುಟುಂಬ ಬಾಗಲಕೋಟೆ (Bagalkot) ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ವಾಸಿಸುತ್ತಿತ್ತು. 37 ಎಕರೆ ಜಮೀನನ್ನು ಭಾಗ ಮಾಡುವ ವಿಚಾರಕ್ಕೆ ತಂದೆ ಮತ್ತು ಮಗನ ನಡುವೆ ಪದೆ ಪದೆ ಗಲಾಟೆ ನಡೆಯುತ್ತಿತ್ತು. ಹೀಗಾಗಿ ಚನ್ನಬಸಪ್ಪ, ಪತ್ನಿ ಶಿವಬಸವ್ವ ಮತ್ತು ಚನ್ನಬಸಪ್ಪನ ಆಪ್ತ …
Read More »ಬಾರ್ನಲ್ಲಿ ಶುರುವಾದ ಗೆಳೆಯರ ಗಲಾಟೆ ಮನೆ ಮುಂದೆ ಕೊಲೆಯಲ್ಲಿ ಅಂತ್ಯ
ಬೆಂಗಳೂರು, ಜನವರಿ 28: ಸ್ನೇಹಿತರ ಮಧ್ಯೆ ಶುರುವಾದ ಗಲಾಟೆಕೊಲೆಯಲ್ಲಿ ಅಂತ್ಯ ಕಂಡಿದೆ. ದರ್ಶನ್ ಕೊಲೆಯಾದ ದುರ್ದೈವಿ. ಚಂದ್ರಶೇಖರ್ ಅಲಿಯಾಸ್ ಪ್ರೀತಂ, ಯಶವಂತ, ಪ್ರಶಾಂತ್, ಲಂಕೇಶ್ ಮತ್ತು ದರ್ಶನ್ ಕೊಲೆ ಮಾಡಿದ ಆರೋಪಿಗಳು. ಸುಬ್ರಹ್ಮಣ್ಯಪುರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಹಾಗದರೆ ದರ್ಶನ್ ಕೊಲೆಗೆ ಕಾರಣ ಏನು? ಜನವರಿ 24 ರಂದು ಕೊಲೆಯಾದ ದರ್ಶನ್ ದೊಡ್ಡಮ್ಮ ತನ್ನ ತಾಯಿಗೆ ಕೊಡಲು 3 ಸಾವಿರ ಹಣವನ್ನು ದರ್ಶನಗೆ ನೀಡಿದ್ದಳು. ಇದೇ ಹಣವನ್ನು ತೆಗೊಂಡು …
Read More »108 ಆಂಬುಲೆನ್ಸ್ ನಲ್ಲಿಯೇ ಗಂಡು ಮಗುವಿಗೆ ಜನ್ಮ್ ನೀಡಿದ ಮಹಿಳೆ
ಘಟಪ್ರಭಾ :108 ಆಂಬುಲೆನ್ಸ್ ನಲ್ಲಿಯೇ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಸಮೀಪದ ಸಂಗನಕೇರಿ ಗ್ರಾಮದಲ್ಲಿ ನಡೆದಿದೆ. ಆಸ್ಪತ್ರೆಗೆಂದು ಕರೆದುಕೊಂಡು ಹೋಗುತ್ತಿದ್ದಾಗ ಹೆರಿಗೆ ನೋವು ಹೆಚ್ಚಾಗಿದ್ದರಿಂದ 108 ಆಂಬುಲೆನ್ಸ್ ಇ ಎಂ ಟಿ ಪರಮಾನಂದ ಅವರು ಆಂಬುಲೆನ್ಸ್ ನಲ್ಲಿಯೇ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ಅಶ್ವಿನಿ ಬಾಗೋಜಿ ಎಂಬ ಮಹಿಳೆಗೆ ಗಂಡು ಮಗು ಜನಿಸಿದ್ದು, ತಾಯಿ ಮತ್ತು ಮಗು ಅರೋಗ್ಯ ವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. 108ಸಿಬ್ಬಂದಿಗಳಾದ ಜಂಗ್ಲಿಸಾಬ …
Read More »