ಬೆಂಗಳೂರು, ಜ.17: ಪ್ರಧಾನಿಯ ಗಾಢ ನಿದ್ರೆ, ಕರ್ನಾಟಕದ ಅಭಿವೃದ್ಧಿಗದೇ ಪ್ರಮುಖ ತೊಂದ್ರೆ ಎಂದು ಬರೆದು ನಿನ್ನೆ ಸಿಎಂ ಸಿದ್ದರಾಮಯ್ಯನವರು ಪ್ರಧಾನಿ ನರೇಂದ್ರ ಮೋದಿ (Narendra Modi) ನಿದ್ದೆ ಮಾಡುವ ರೀತಿಯ ಫೋಟೋ ಟ್ವೀಟ್ ಮಾಡಿದ್ದರು. ಇದಕ್ಕೆ ಬಿಜೆಪಿ ಕೂಡ ಟ್ವೀಟ್ ಮೂಲಕ ತಿರುಗೇಟು ನೀಡಿತ್ತು. ಸುಳ್ಳು ಹೇಳುವುದು, ಜನರನ್ನು ವಂಚಿಸುವುದು, ಫೇಕ್ ಸುದ್ದಿ ಸೃಷ್ಟಿಸುವುದು, ಇದೆಲ್ಲವೂ ಮುಖ್ಯಮಂತ್ರಿ ಸಿದ್ದರಾಮಯ್ಯಗೆ (Siddaramaiah) ಚೆನ್ನಾಗಿಯೇ ‘ಸಿದ್ದಿ’ಸಿದೆ ಎಂದು ಬಿಜೆಪಿ (BJP) ವ್ಯಂಗ್ಯವಾಡಿತ್ತು. ಸದ್ಯ ಈಗ …
Read More »Daily Archives: ಜನವರಿ 17, 2024
ಧಾರವಾಡ ಕರ್ನಾಟಕ ವಿವಿಯಲ್ಲಿ 10 ವರ್ಷ ಹಿಂದಿನ ಅಕ್ರಮಗಳ ತನಿಖೆಗೆ ಮರುಜೀವ ನೀಡಿದ ರಾಜ್ಯಪಾಲ, ಆರೋಪಿಗಳ ಎದೆಯಲ್ಲಿ ಢವಢವ
ರಾಜ್ಯಪಾಲರು ಕರ್ನಾಟಕ ವಿಶ್ವವಿದ್ಯಾಲಯದ ಪ್ರಕರಣಗಳಿಗೆ ಸಂಬಂಧಿಸಿ ಕಾರ್ಯನಿರ್ವಹಣಾ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದಾರೆ. ಆದರೆ, ಅದೇ ಕಾಲಘಟ್ಟದಲ್ಲಿ ಜರುಗಿದ್ದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 14 ಗಂಭೀರ ಹಗರಣಗಳ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ. ಭಕ್ತವತ್ಸಲ ನೇತೃತ್ವದ ಆಯೋಗ ಸಲ್ಲಿಸಿದ್ದ ವರದಿಗಳ ಕುರಿತು ವರದಿ ಕೇಳದಿರುವುದು ಕುತೂಹಲ ಮೂಡಿಸಿದೆ.ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹತ್ತು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಅಕ್ರಮ ನೇಮಕಾತಿ, ಅಂಕಪಟ್ಟಿ, ಕಾಮಗಾರಿ ಹಾಗೂ …
Read More »ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಮೈಸೂರಿನ ರೈತ 19 ಲಕ್ಷದ ಸಾಲ ತೀರಿಸಿದ್ದರೂ ಮನೆ ಹರಾಜಿಗೆ ಹಾಕಿದ ಗ್ರಾಮೀಣ ಬ್ಯಾಂಕ್?
ಮೈಸೂರಿನ ರೈತ ದೊರೆಸ್ವಾಮಿ ಹೇಳುವಂತೆ ಇದುವರೆಗೂ ಬಡ್ಡಿ ಸೇರಿ 18, 98,000 ರೂಪಾಯಿ ಸಾಲ ಮರು ಪಾವತಿ ಮಾಡಿದರಂತೆ. ಆದರೂ ಬ್ಯಾಂಕ್‌ನವರು ದೊರೆಸ್ವಾಮಿ ಅವರ ಮನೆಯನ್ನು ಏಕ ವ್ಯಕ್ತಿಗೆ ಹರಾಜು ಹಾಕಿದ್ದಾರಂತೆ.ರೈತ ದೇಶದ ಬೆನ್ನೆಲುಬು, ಅನ್ನದಾತ ಅನ್ನೋದು ಕೇವಲ ಘೋಷಣೆಗಷ್ಟೇ ಸೀಮಿತವಾಗಿದೆ. ಇದಕ್ಕೆ ಸಾಕ್ಷಿ ರೈತರಿಗೆ ಆಗುತ್ತಿರುವ ಮೋಸ. ಮೈಸೂರಿನಲ್ಲಿ ಬ್ಯಾಂಕೊಂದು ಸಾಲ ಪಡೆದ ರೈತ ಸಾಲ ತೀರಿಸಿದ್ದರೂ ಸಹ ಮನೆ ಹರಾಜು ಹಾಕಿದ ಆರೋಪ ಕೇಳಿ ಬಂದಿದೆ. ಬ್ಯಾಂಕ್ …
Read More »ಮುಂಜಾನೆಯೇ ಎರಡೂವರೆ ಗಂಟೆ ನೀರಿನಲ್ಲಿ ತೇಲಿದ ಬಾಲಕ – ನೋಬಲ್ ವರ್ಲ್ಡ್ ರೆಕಾರ್ಡ್ಸ್‌ಗೆ ಎಂಟ್ರಿ
ಕಲಿಕೆಯ ಹಂತದಲ್ಲಿ ಶಫಿನ್‌ನಲ್ಲಿದ್ದ ಈಜು ಪ್ರತಿಭೆಯನ್ನು ಅನಿರೀಕ್ಷಿತವಾಗಿ ಕಂಡುಕೊಂಡೆ. ಗಮನಾರ್ಹವಾದ ಪ್ರಾವೀಣ್ಯತೆಯನ್ನು ಪ್ರದರ್ಶಿಸುತ್ತಿದ್ದ. ತರಬೇತಿ ನಂತರ ಈಗ ದಾಖಲೆ ಮಾಡಿರೋದು ಸಂತೋಷ ತಂದಿದೆ ಅಂತಾ ಕೋಚ್ ಆರೋಮಲ್ ಹೇಳಿದ್ದಾರೆ.ಕರಾವಳಿಯಲ್ಲಿ ಸಮುದ್ರವಿದೆ. ಇಲ್ಲಿನ ಬಹುತೇಕರಿಗೆ ಈಜು ಹುಟ್ಟುತ್ತಾನೆ ಬಂದಿರುತ್ತೆ. ಆದ್ರೆ ಇಲ್ಲೊಬ್ಬ ಬಾಲಕ ಈಜನ್ನು ಶಾಲೆಯಲ್ಲಿ ಕಲಿತು ಕೇವಲ ಈಜೋದು ಮಾತ್ರವಲ್ಲದೇ ನೀರಿನಲ್ಲಿ ತೇಲುವ ವಿದ್ಯೆಯನ್ನೂ ಕರಗತ ಮಾಡಿಕೊಂಡಿದ್ದಾನೆ. ಅಷ್ಟೆ ಅಲ್ಲ. ಬರೋಬ್ಬರಿ ಎರಡೂವರೆ ಗಂಟೆ ನೀರಿನಲ್ಲಿ ತೇಲೊ ಮೂಲಕ ನೊಬೆಲ್ …
Read More »ಶ್ರೀರಾಮನ ಕಟೌಟ್, ಪ್ಲೆಕ್ಸ್ನ್ನು ಬ್ಲೇಡ್ನಿಂದ ಹರಿದ ದುಷ್ಕರ್ಮಿಗಳು
ಜನವರಿ 17: ಶ್ರೀರಾಮನ (Sri ram) ಕಟೌಟ್ ಹಾಗೂ ಪ್ಲೆಕ್ಸ್ ಅನ್ನು ದುಷ್ಕರ್ಮಿಗಳು ಬ್ಲೇಡ್ನಿಂದ ಹರಿದಿರುವ ಘಟನೆ ಮುಳಬಾಗಿಲು (Mulabagilu) ನಗರದ ಗುಣಗಂಟೆಪಾಳ್ಯದಲ್ಲಿ ನಡೆದಿದೆ. ಜನವರಿ 22 ರಂದುಅಯೋಧ್ಯೆ(Ayodhya) ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಲವಕುಶ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮತ್ತು ಪುತ್ರ ಅಯೋಧ್ಯೆ ಧ್ರುವ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದಲ್ಲಿ ರಾಮನ ಶೋಭಾಯಾತ್ರೆ, ಸೀತರಾಮ ಕಲ್ಯಾಣೋತ್ಸವ ಮತ್ತು ಮಹಾಸಾಮ್ರಾಜ್ಯ ಪಟ್ಟಾಭಿಷೇಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ದಿನಾಂಕ …
Read More »ಅಯೋಧ್ಯೆಯಲ್ಲಿ ರಾಮನ ಸಾಕ್ಷಾತ್ಕಾರಕ್ಕೆ ಹಾರೋಹಳ್ಳಿಯ ಕಲ್ಲು ಅಷ್ಟೇ ಅಲ್ಲ; ಮಣ್ಣು ಸಹ ಬಳಕೆ
ರಾಮ ಮೂರ್ತಿ ಕೆತ್ತನೆಗೆ ಬಳಸಿರುವ ಕೃಷ್ಣ ಶಿಲೆ ಕರಗಲ್ಲ, ಸಿಡಿಯಲ್ಲ, ಆಸಿಡ್ ಹಾಕಿದ್ರು ಏನೂ ಆಗಲ್ಲ. ಯಾವಾಗ ಇಲ್ಲಿನ ಕಲ್ಲು ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠಾಪನೆಯಾಗುತ್ತಿರುವ ಮೂರ್ತಿ ಅಂತ ಅಂತಿಮವಾಯಿತೋ.. ಇದೀಗಾ ಆ ಸ್ಥಳದ ಮಣ್ಣನ್ನು ಸಹ ಅಯೋಧ್ಯೆಯ ಗುರುಗಳು ಬಂದು ತೆಗೆದುಕೊಂಡು ಹೋಗಿದ್ದಾರಂತೆ. ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ಮೂವರು ಶಿಲ್ಪಿಗಳಿಂದ ಬಾಲ ರಾಮನ ಮೂರ್ತಿ ಕೂಡ ಕೆತ್ತನೆಯಾಗಿದೆ. ಈ ಬಾಲ ರಾಮನ ಮೂರ್ತಿಗೆ ಕಲ್ಲು ಹೋಗಿದ್ದು …
Read More »ದೇಶಪ್ರೇಮ, ದೇಶ ಭಕ್ತಿ ಬರೀ ಭಾಷಣಕ್ಕೆ ಸೀಮಿತವಾಗಿದೆ, ಅಧಿಕಾರದಲ್ಲಿರುವವರು ಸ್ವಾತಂತ್ರ್ಯಕ್ಕೆ ಹೋರಾಡಿದ್ರಾ? ಬಿಜೆಪಿಗೆ ಸಿಎಂ ಟಾಗ್
ಬೆಳಗಾವಿ, ಜನವರಿ 17: ದೇಶಪ್ರೇಮ, ದೇಶ ಭಕ್ತಿ ಬರೀ ಭಾಷಣಕ್ಕೆ ಸೀಮಿತವಾಗಿದೆ. ಇಂದು ಅಧಿಕಾರದಲ್ಲಿರುವವರು ಸ್ವಾತಂತ್ರ್ಯಕ್ಕೆ ಹೋರಾಡಿದ್ರಾ? ಅವರು ಎಂದಾದರೂ ತ್ಯಾಗ, ಬಲಿದಾನ ಮಾಡಿದ್ದಾರೆಯೇ ಎಂದು ಸಿಎಂ ಸಿದ್ದರಾಮಯ್ಯ(Siddaramaiah)ಬಿಜೆಪಿಗೆ ಟಾಂಗ್ ನೀಡಿದ್ದಾರೆ. ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಉತ್ಸವದಲ್ಲಿ ಮಾತನಾಡಿದ ಅವರು, ಸಿಪಾಯಿ ದಂಗೆಗೂ ಮೊದಲು ಟಿಪ್ಪು ಸುಲ್ತಾನ್, ವೆಂಕಟಪ್ಪ ನಾಯಕ, ಕಿತ್ತೂರು ಚೆನ್ನಮ್ಮ, ರಾಯಣ್ಣ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಇದನ್ನು ನಾವು ಯಾರೂ ಮರೆಯಲು ಸಾಧ್ಯವಿಲ್ಲ …
Read More »ಮೈಸೂರು ಸ್ಯಾಂಡಲ್ ನಕಲಿ ಸೋಪ್ ತಯಾರಿಕೆ: ಪ್ರಕರಣದ ಇಬ್ಬರು ಆರೋಪಿಗಳು ಬಿಜೆಪಿ ನಾಯಕರು-ಪ್ರಿಯಾಂಕ್ ಖರ್ಗೆ
ಬೆಂಗಳೂರು, ಜನವರಿ 17: ಹೈದರಾಬಾದ್ನಲ್ಲಿಮೈಸೂರು ಸ್ಯಾಂಡಲ್(Mysore Sandal Soap) ನಕಲಿ ಸೋಪ್ ತಯಾರಿಕೆ ಘಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಾರ್ಖಾನೆ ನಡೆಸುತ್ತಿದ್ದ ರಾಕೇಶ್ ಜೈನ್, ಮಹಾವೀರ್ ಜೈನ್ ಎಂಬುವವರ ಮೇಲೆ ಎಫ್‌ಐಆರ್ ದಾಖಲಾಗಿದೆ. ಆರೋಪಿತ ಜೈನ್ಗಳಿಬ್ಬರೂ ಕೂಡ ಬಿಜೆಪಿಯ ಸಕ್ರಿಯ ನಾಯಕರು, ಕಾರ್ಯಕರ್ತರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಬಿಜೆಪಿಯ ರಾಜಾ ಸಿಂಗ್ ಜೊತೆಗೆ ನಿಕಟ ಸಂಪರ್ಕದಲ್ಲಿ ಇದ್ದಾರೆ ಎಂದು ಐಟಿಬಿಟಿ ಸಚಿವ …
Read More »ಸಂತರ ಶಾಪದಿಂದ ಗೋಪಾಷ್ಟಮಿ ದಿನವೇ ಇಂದಿರಾ ಕುಟುಂಬ ಬಲಿಯಾಯಿತು: ಅನಂತಕುಮಾರ್ ಹೆಗಡೆ
ಬೆಳಗಾವಿ, ಜನವರಿ 17: ಲೋಕಸಭೆ ಚುನಾವಣೆ ( Lok Sabha Elections) ಸಮೀಪಿಸುತ್ತಿರುವಂತೆಯೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿರುವ ಉತ್ತರ ಕನ್ನಡ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ (Anantkumar Hegde) ಇದೀಗ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ. ಬೆಳಗಾವಿ (Belagavi) ಜಿಲ್ಲೆಯ ಕಿತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಲ್ಲಿ ಮಾತನಾಡಿದ ಅವರು, 1966 ನವೆಂಬರ್ 7 ರಂದು ಸಂತರ, ಗೋವುಗಳ ಮೇಲೆ ಗೋಲಿಬಾರ್ ಆಗಿತ್ತು. ಗೋಹತ್ಯಾ ನಿಷೇಧಕ್ಕಾಗಿ ಸಂತರು ಪಾರ್ಲಿಮೆಂಟ್‌ಗೆ ಮುತ್ತಿಗೆ ಹಾಕಿದ್ದರು. ಆಗ ಇಂದಿರಾಗಾಂಧಿ …
Read More »ಕಲ್ಲಡ್ಕ ಪ್ರಭಾಕರ್‌ಗೆ ಜಾಮೀನು ಮಂಜೂರು
ಮಂಡ್ಯ: ಮುಸ್ಲಿಮ್ ಮಹಿಳೆಯರ ವಿರುದ್ಧ ಅವಹೇಳನಕಾರಿ (Defamatory Statement) ಹೇಳಿಕೆ ನೀಡಿದ ಆರೋಪ ಹೊತ್ತಿರುವ RSS ಮುಖಂಡ ಕಲ್ಲಡ್ಕ ಪ್ರಭಾಕರ್‌ಗೆ (Kalladka Prabhakar Bhat) ಶ್ರೀರಂಗಪಟ್ಟಣ ಕೋರ್ಟ್‌ನಿಂದ ಜಾಮೀನು ಮಂಜೂರಾಗಿದೆ. ಹನುಮ ಜಯಂತ್ಯುತ್ಸವದ ಅಂಗವಾಗಿ ಡಿಸೆಂಬರ್ 24ರಂದು ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆಯು ಆಯೋಜಿಸಿದ್ದ ಸಂಕೀರ್ತನಾ ಯಾತ್ರೆಯಲ್ಲಿ ಪ್ರಭಾಕರ್ ಭಟ್ ಮುಸ್ಲಿಮರ ವಿರುದ್ಧ ಧಾರ್ಮಿಕ ದ್ವೇಷಕಾರಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಜೀರ್ ನೀಡಿದ್ದರು. ಶ್ರೀರಂಗಪಟ್ಟಣ ಟೌನ್ ಪೊಲೀಸ್ …
Read More »