ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರ ಜನವರಿ 22 ರಂದು ಉದ್ಘಾಟನೆಗೊಳ್ಳಲಿದೆ. ಈ ಸಮಾರಂಭದ ಬಳಿಕ ತಾವು ಕುಟುಂಬ ಸಮೇತರಾಗಿ ರಾಮಮಂದಿರಕ್ಕೆ ಭೇಟಿ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ತಿಳಿಸಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ನಾನು ನನ್ನ ಹೆಂಡತಿ, ಮಕ್ಕಳು ಮತ್ತು ಪೋಷಕರೊಂದಿಗೆ ರಾಮಮಂದಿರಕ್ಕೆ ಹೋಗಲು ಬಯಸುತ್ತೇನೆ. ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ ನಾವು ಹೋಗುತ್ತೇವೆ ಎಂದು ಹೇಳಿದರು. ಆಹ್ವಾನದ ಬಗ್ಗೆ ಕೇಳಿದಾಗ, ನನಗೆ ಸರ್ಕಾರದಿಂದ …
Read More »Daily Archives: ಜನವರಿ 17, 2024
ಅಯೋಧ್ಯೆಗೆ ಹೆಲಿಕಾಪ್ಟರ್ ಸೇವೆಗಳನ್ನು ಪ್ರಾರಂಭಿಸಲಿದೆ ಯುಪಿ ಸರ್ಕಾರ
ಲಕ್ನೋ: ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವು ಕೆಲವೇ ದಿನಗಳಲ್ಲಿ ನಡೆಯಲಿದ್ದು ಉತ್ತರ ಪ್ರದೇಶ ಸರ್ಕಾರ ಲಕ್ನೋ, ಗೋರಖ್‌ಪುರ, ಪ್ರಯಾಗರಾಜ್, ವಾರಣಾಸಿ, ಆಗ್ರಾ ಮತ್ತು ಮಥುರಾದಿಂದ ಅಯೋಧ್ಯೆಗೆ ಹೆಲಿಕಾಪ್ಟರ್ ಸೇವೆಗಳನ್ನು ನೀಡಲು ನಿರ್ಧರಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಜನವರಿ 19 ರಂದು ಲಕ್ನೋದಿಂದ ಹೆಲಿಕಾಪ್ಟರ್ ಸೇವೆಯನ್ನು ಉದ್ಘಾಟಿಸಲಿದ್ದಾರೆ. ಹೆಲಿಕಾಪ್ಟರ್ ಸೇವೆಗಳ ದರವನ್ನೂ ಸರ್ಕಾರ ನಿಗದಿಪಡಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಇತರ ಜಿಲ್ಲೆಗಳಿಗೂ ಇದನ್ನು ವಿಸ್ತರಿಸುವ ಯೋಜನೆ ಜಾರಿಯಲ್ಲಿದೆ. ಇದರ ಜೊತೆಗೆ …
Read More »ಜ. 23ರಂದು ಪಿಎಸ್‌ಐ ಮರುಪರೀಕ್ಷೆ
ಬೆಂಗಳೂರು: ರಾಜ್ಯದಲ್ಲಿ ಜನವರಿ 23ರಂದು ಪಿಎಸ್‌ಐ ಹುದ್ದೆಗಳ ನೇಮಕಾತಿ ಮರುಪರೀಕ್ಷೆ ನಡೆಯಲಿದೆ. ಒಟ್ಟು 545 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಮರುಪರೀಕ್ಷೆ ನಡೆಯುತ್ತಿದ್ದು, ಇದೀಗ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಪ್ರವೇಶ ಪತ್ರವನ್ನು ಪಡೆಯಲು ಅಭ್ಯರ್ಥಿಗಳು https://kea.kar.nic.inಗೆ ಭೇಟಿ ನೀಡಿ ಸೂಚಿಸಿದ ಮಾಹಿತಿಯನ್ನು ಭರ್ತಿ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರಸಂಹಿತೆಯನ್ನು ಬಿಡುಗಡೆ ಮಾಡಲಾಗಿದ್ದು, ಮಾಂಗಲ್ಯ ಸರ …
Read More »ಶಿವರಾಮ ಕಾರಂತ ಬಡಾವಣೆ ನಿವೇಶನಗಳಿಗೆ ಅರ್ಜಿ ಆಹ್ವಾನ: ಡಿಕೆಶಿ
ಬೆಂಗಳೂರು: ಇದೇ ತಿಂಗಳು 25 ರಿಂದ ಶಿವರಾಮ ಕಾರಂತ ಬಡಾವಣೆ ನಿವೇಶನಗಳ ಹಂಚಿಕೆಗೆ ಅರ್ಜಿ ಆಹ್ವಾನಿಸಲಾಗುವುದು. ಮೊದಲ ಆದ್ಯತೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದರು. ಬಿಡಿಎ ಪ್ರಧಾನ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಡಿಕೆಶಿ, ಶಿವರಾಮ ಕಾರಂತ ಬಡಾವಣೆ ಹಾಗೂ ನಾಡಪ್ರಭು ಕೆಂಪೇಗೌಡ ಬಡಾವಣೆ ಕಾಮಗಾರಿಗಳ ಪರಿಶೀಲನೆ ಮಾಡಿದ್ದೇವೆ. ಶಿವರಾಮ್ ಕಾರಂತ ಬಡಾವಣೆ ನಿವೇಶನಕ್ಕೆ ಆನ್ ಲೈನ್ ಮೂಲಕ …
Read More »ಹೆಚ್‌ಡಿಕೆ-ಅಮಿತ್ ಶಾ ಭೇಟಿ: ಮಹತ್ವದ ಮಾತುಕತೆ
ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ಸಿದ್ದತೆ ನಡೆಸುತ್ತಿವೆ. ಈ ನಿಮಿತ್ತ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೆ ಮಾತುಕತೆ ನಡೆಸಿದ್ದಾರೆ. ದೆಹಲಿಯಲ್ಲಿರುವ ಅಮಿತ್ ಶಾ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಜೊತೆಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಸಂಸದ ಕುಪೇಂದ್ರ ರೆಡ್ಡಿ ಅವರೂ ಭಾಗಿಯಾಗಿದ್ದರು. …
Read More »ಭ್ರೂಣಲಿಂಗ ಪತ್ತೆ ಹಾಗೂ ನಕಲಿ ವೈದ್ಯರ ಜಾಲ ಪತ್ತೆಗೆ ಸಂತ್ರಸ್ತರ ರೂಪದಲ್ಲಿ ಡಿಕಾಯ್ ಆಪರೇಶನ್ -ಆರೋಗ್ಯ ಇಲಾಖೆ ಪ್ಲಾನ್
ಬೆಂಗಳೂರು, : ಕೊವಿಡ್ (Coronavirus) ಬಳಿಕ ಕೆಲಸವಿಲ್ಲದೆ ಜೀವನ ನಡೆಸಲು ಕಷ್ಟ ಅಂತಾ ಕೆಲವರು ಅಡ್ಡ ಹಾದಿ ಹಿಡಿದಿದ್ರೆ ಇನ್ನೂ ಹಲವರು ಅನಾರೋಗ್ಯವನ್ನೆ ದಾಳ ಮಾಡಿಕೊಂಡು ಎಂಬಿಬಿಎಸ್ (MBBS) ಪದವಿ ಪಡೆಯದೆ ತರಬೇತಿ ಇಲ್ಲದೆ ಕ್ಲಿನಿಕ್ ಹಾಗೂ ಮೆಡಿಕಲ್ ಕ್ಲಿನಿಕ್ ಓಪನ್ ಮಾಡಿ ಜನರ ಜೀವದ ಜೊತೆ ಚೆಲ್ಲಾಟಕ್ಕೆ ಮುಂದಾಗಿದ್ದಾರೆ. ರಾಜ್ಯದಲ್ಲಿ ಕೊವಿಡ್ ಬಳಿಕ ನಕಲಿ ವೈದ್ಯರ ಹಾಗೂ ಭ್ರೂಣಲಿಂಗ ಪತ್ತೆ ಜಾಲಗಳ ಹಾವಳಿ ಹೆಚ್ಚಾಗಿದ್ದು ಆರೋಗ್ಯ ಇಲಾಖೆ (Health Department) …
Read More »ರಾಮನ ಬಂಟ ಹನುಮಂತನ ಜನ್ಮಸ್ಥಳ ಗಂಗಾವತಿಯ ಅಂಜನಾದ್ರಿಯಲ್ಲಿ ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ? ವಿವರ ಇಲ್ಲಿದೆ
ಅಯೋಧ್ಯೆಗೂ ಅಂಜನಾದ್ರಿಗೂ ಹತ್ತಿರದ ನಂಟಿದೆ. ಅಯೋಧ್ಯೆಯಲ್ಲಿ ರಾಮ ಜನಿಸಿದ್ರೆ ಕಿಷ್ಕಿಂದೆಯ ಅಂಜನಾದ್ರಿ ಹನುಮನ ಜನ್ಮಸ್ಥಳವಾಗಿದೆ. ಹೀಗಾಗಿ ರಾಮ ಮಂದಿರ ಉದ್ಘಾಟನೆ ಸಮಯದಲ್ಲಿ ಹನುಮನ ಜನ್ಮಸ್ಥಳದಲ್ಲಿ ಕೂಡಾ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗೌರವ ಸೂಚಿಸುವ ಕೆಲಸಕ್ಕೆ ಟ್ರಸ್ಟ್ ಸಿದ್ದತೆ ಮಾಡಿಕೊಂಡಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಾಗಿ ರಾಮ ಭಕ್ತರಲ್ಲಿ ಸಂಭ್ರಮ ಹೆಚ್ಚಾಗುತ್ತಿದೆ. ಇನ್ನು ರಾಮ ಮಂದಿರ ಉದ್ಘಾಟನೆ, ರಾಮನ ಬಂಟ ಹನುಮಂತನ ಜನ್ಮಸ್ಥಳದಲ್ಲಿ …
Read More »ಅರಬ್ಬಿ ಸಮುದ್ರದಲ್ಲಿ ಮುಳಗುವ ಹಂತದಲ್ಲಿದ್ದ ಯಾಂತ್ರಿಕ ದೋಣಿ ರಕ್ಷಣೆ: 7 ಮೀನುಗಾರರು ಸುರಕ್ಷಿತ
ಕಾರವಾರ, ಜನವರಿ 17: ಗೋವಾದ ಕಾಣಕೋಣ ಸಮೀಪದಲ್ಲಿ ಮೀನುಗಾರಿಕಾ ಬೋಟ್ ಅವಘಡ ಸಂಭವಿಸಿದ್ದು, ಮುಳಗುವ ಹಂತದಲ್ಲಿದ್ದ ಯಾಂತ್ರಿಕ ದೋಣಿ(boat)ಯನ್ನು ಮೀನುಗಾರರು ರಕ್ಷಣೆ ಮಾಡಿದ್ದಾರೆ. 25 ನಾಟಿಕಲ್ ಮೈಲು ದೂರದ ಅರಬ್ಬಿ ಸಮುದ್ರದಲ್ಲಿ ಘಟನೆ ನಡೆದಿದೆ. ಮಂಗಳೂರು ಮೂಲದ ರಾಯಲ್ ಬ್ಲೂ ಹೆಸರಿನ ಬೋಟ್ ಮುಳುಗುವ ಹಂತದಲ್ಲಿದ್ದು, ಬೋಟ್ನಲ್ಲಿದ್ದ ಎಲ್ಲ 7 ಮೀನುಗಾರರು ಸುರಕ್ಷಿತರಾಗಿದ್ದಾರೆ. ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ ಸಹಾಯ ಮೂಲಕ 6 ಬೋಟ್‌ಗಳ ಸಹಾಯದಿಂದ ಸುರಕ್ಷಿತವಾಗಿ ಮೀನುಗಾರರು ಕಾರವಾರ …
Read More »ವಿಮೆ ಕಂಪನಿಗಳು ಎಸ್ಕೇಪ್, ಏಜೆಂಟ್‌ಗಳು ಕಂಗಾಲು: ನೂರಾರು ಕೋಟಿ ವಿಮೆ ಮಾಡಿಸಿದ ಬಡ ಜನರು ಕಣ್ಣೀರು
ಗದಗ ಜಿಲ್ಲೆಯಲ್ಲಿಯೇ 150 ಕೋಟಿಗೂ ಹೆಚ್ಚು ವಿಮೆ ಮಾಡಲಾಗಿದೆಯಂತೆ. ಬಡ ಜನ್ರು, ರೈತರು, ವ್ಯಾಪಾರಸ್ಥರು ಪಾಲಿಸಿ ಮಾಡಿಸಿದ್ದಾರೆ. ಅತ್ತ ಪಿಎಸಿಎಲ್, ಸಹನಾ, ಗರಿಮಾ, ಅಗ್ರೀಗೊಲ್ಡ್, ಸಾಯಿ ಪ್ರಸಾದ್ ಗ್ರೂಪ್ ಸಾಯಿ, ಸಮೃದ್ಧ ಜೀವನ, ಕಲ್ಪತರು, ಸಂಜೀವಿನಿ, ನವಜೀವನ, ಸೇರಿದಂತೆ 30 ಕ್ಕೂ ಹೆಚ್ಚು ಕಂಪನಿಗಳು ಬಾಗಿಲು ಹಾಕಿಕೊಂಡು ನಾಪತ್ತೆಯಾಗಿವೆ. ಅವರೆಲ್ಲರೂ ವಿಮೆ ಮಾಡಿಸಿದ ಏಜೆಂಟ್‌ಗಳು. ಹಣದಾಸೆಗೆ ಅಮಾಯಕ ಜನ್ರಿಗೆ ಸ್ವರ್ಗಕ್ಕೆ ಏಣಿ ತೋರಿಸಿ ಕೋಟ್ಯಾಂತರ ರೂಪಾಯಿ ವಿಮೆ ಮಾಡಿಸಿಬಿಟ್ಟಿದ್ದಾರೆ. ಆದರೆ …
Read More »Karnataka SSLC Exam Time Table 2024: ಎಸ್ಎಸ್ಎಲ್ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ
ಬೆಂಗಳೂರು: ಎಸ್ಎಸ್ಎಲ್ಸಿ (10ನೇ ತರಗತಿ) ಪರೀಕ್ಷೆಯ ಅಂತಿಮ ವೇಳಾಪಟ್ಟಿ(Karnataka SSLC Exam Time Table) ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಿದ ಬೆನ್ನಲ್ಲೇ ಎಸ್ಎಸ್ಎಲ್ಸಿ ಟೈಮ್ ಟೇಬಲ್ ಸಹ ಬಿಡುಗಡೆ ಮಾಡಿದೆ. ಮಾರ್ಚ್ 25ರಿಂದ ಏಪ್ರಿಲ್ 6ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯಲಿವೆ. ಇನ್ನು ಪರೀಕ್ಷೆಗಳು ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿವೆ. ಪರೀಕ್ಷಾ ವೇಳಾಪಟ್ಟಿ ಹೀಗಿದೆ 25-03-2024: ಪ್ರಥಮ …
Read More »