ಚಿಕ್ಕೋಡಿ : ಶ್ರಾವಣ ಮಾಸದ ನಿಮಿತ್ತ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ಶಕ್ತಿದೇವತೆ ಮಾಯಕ್ಕ ದೇವಿಯ ದರ್ಶನಕ್ಕೆ ಹೊರಟ ಭಕ್ತಾದಿಗಳ ಟ್ರ್ಯಾಕ್ಟರ್ ಪಲ್ಟಿಯಾಗಿ, ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಳ್ಯಾಳ್ ಬ್ಯಾರೇಜ್ ಮೇಲೆ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಮೃತರನ್ನು ಅಥಣಿ ತಾಲೂಕಿನ ಕಕಮರಿ ಗ್ರಾಮದ ಅಕ್ಷತಾ ಕನಮಡಿ (20) ಎಂದು ಗುರುತಿಸಲಾಗಿದೆ. ಹತ್ತಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ …
Read More »Yearly Archives: 2023
ವಿದ್ಯುತ್ ತಂತಿ ತಗುಲಿ ತಂದೆ – ಮಗ ದುರ್ಮರಣ
ಬೆಳಗಾವಿ: ವಿದ್ಯುತ್ ಕಂಬಕ್ಕೆ ಸಪೋರ್ಟಿವ್ ಆಗಿ ಕಟ್ಟಿದ್ದ ಅರ್ಥಿಂಗ್ ವೈಯರ್ ಸ್ಪರ್ಶಿಸಿದ ಪರಿಣಾಮ ತಂದೆ ಹಾಗೂ ಮಗ ಮೃತಪಟ್ಟಿರುವ ದಾರುಣ ಘಟನೆ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ. ಪ್ರಭು ಹುಂಬಿ (68), ಮಂಜುನಾಥ ಹುಂಬಿ (29) ಮೃತ ದುರ್ದೈವಿಗಳು. ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ: ಮನೆ ಮುಂದಿನ ಕಸ ತೆಗೆಯುವಾಗ ನೆಲಕ್ಕೆ ಬಿಗಿದಿದ್ದ ವೈಯರ್ ತಂದೆ ಹಿಡಿದುಕೊಂಡಿದ್ದಾರೆ. ಈ ವೇಳೆ ವಿದ್ಯುತ್ ಪ್ರವಹಿಸಿದ್ದರಿಂದ ತಂದೆ ಕೆಳಗೆ ಬಿದ್ದು ಒದ್ದಾಡುತ್ತಿದ್ದರು. ಅದನ್ನು …
Read More »ಪೌರ ಕಾರ್ಮಿಕ ಮನೆಯಲ್ಲೇ ಆತ್ಮಹತ್ಯೆ ಗುತ್ತಿಗೆದಾರನ ಕಿರುಕುಳವೇ ಕಾರಣ ಎಂದು ಕುಟುಂಬಸ್ಥರ ಆರೋಪ
ಬೆಳಗಾವಿ : ಪೌರ ಕಾರ್ಮಿಕ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯ ಗಣೇಶಪುರದಲ್ಲಿ ಇಂದು ನಡೆದಿದೆ. ಜ್ಯೋತಿ ನಗರದ ನಿವಾಸಿ ಶಶಿಕಾಂತ ಸುಭಾಷ ದವಾಳೆ (26) ಸಾವಿಗೀಡಾದವರು. ಪತ್ನಿ, ನಾಲ್ವರು ಮಕ್ಕಳ ಆಕ್ರಂದನ ಮುಗಿಲುಮುಟ್ಟಿದೆ. “ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಶಶಿಕಾಂತ, ಗುತ್ತಿಗೆದಾರ ಎನ್.ಡಿ.ಪಾಟೀಲ್ ಅವರಿಂದ 80 ಸಾವಿರ ರೂ. ಸಾಲ ಪಡೆದಿದ್ದರು. ಐವತ್ತು ಸಾವಿರ ರೂ. ಸಾಲ ಮರುಪಾವತಿಸಿ 30 ಸಾವಿರ ರೂಪಾಯಿಯನ್ನು ಶೀಘ್ರದಲ್ಲೇ ಹಿಂತಿರುಗಿಸುವುದಾಗಿ …
Read More »ಪಿ ಲಂಕೇಶ್ ಮೊಮ್ಮಗ, ಚಿತ್ರರಂಗಕ್ಕೆ
Samarjit Lankesh: ಪಿ ಲಂಕೇಶ್ ಮೊಮ್ಮಗ, ಇಂದ್ರಜಿತ್ ಲಂಕೇಶ್ ಮಗ ಸಮರ್ಜಿತ್ ಲಂಕೇಶ್ ಚಿತ್ರರಂಗಕ್ಕೆ ಬರಲು ರೆಡಿಯಾಗಿದ್ದು, ಅವರ ನಟನೆಯ ಮೊದಲ ಸಿನಿಮಾ ‘ಗೌರಿ’ಯ ಮುಹೂರ್ತ ಇಂದು (ಆಗಸ್ಟ್ 31) ನಡೆದಿದೆ ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajit Lankesh) ಪುತ್ರ ಸಮರ್ಜಿತ್ ಲಂಕೇಶ್, ನಾಯನ ನಟನಾಗಿ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಟನಾಗಲು ಅವಶ್ಯಕವಿರುವ ಕೆಲವು ಕಲೆಗಳನ್ನು ಕಲಿತು ಬಂದಿರುವ ಸಮರ್ಜಿತ್ ಇದೀಗ ಚಿತ್ರರಂಗಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದು, ಮಗನ ಮೊದಲ …
Read More »ಭಾರತೀಯರು ಎಲ್ಲಿ ಬೇಕಾದ್ರೂ ಜಯಿಸ್ತಾರೆ ಅನ್ನೋದಕ್ಕೆ ನೀವು ಮಾದರಿ – ಪ್ರಜ್ಞಾನಂದ ಕುಟುಂಬ ಭೇಟಿ ಮಾಡಿದ
ನವದೆಹಲಿ: ಅಜರ್ಬೈಜಾನ್ನ ಬಾಕುವಿನಲ್ಲಿ ನಡೆದ ಚೆಸ್ ವಿಶ್ವಕಪ್-2023 ಫೈನಲ್‌ನ (Chess World Cup Final 2023) ಟೈ ಬ್ರೇಕರ್ನಲ್ಲಿ ಅಮೋಘ ಪ್ರದರ್ಶನದ ಹೊರತಾಗಿಯೂ ವಿರೋಚಿತ ಸೋಲನುಭವಿಸಿದ ಚೆಸ್ ಯುವ ಗ್ರ್ಯಾಂಡ್ ಮಾಸ್ಟರ್ ಭಾರತದ ಆರ್.ಪ್ರಜ್ಞಾನಂದ (Praggnanandhaa) ಅವರನ್ನ ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿನಂದಿಸಿದ್ದಾರೆ. ಪ್ರಜ್ಞಾನಂದಗೆ ವಿಶೇಷ ಸಂದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈ ವೇಳೆ ಪ್ರಜ್ಞಾನಂದ ಕುಟುಂಬವನ್ನ ಭೇಟಿ ಮಾಡಿದ ಪ್ರಧಾನಿ ಮೋದಿ, ಕುಟುಂಬದೊಂದಿಗೆ ನಿಮ್ಮನ್ನ ಭೇಟಿಯಾಗಿದ್ದು ತುಂಬಾ …
Read More »ಶಿವಮೊಗ್ಗದಲ್ಲಿ ಇಂದಿನಿಂದ ಲೋಹದ ಹಕ್ಕಿಗಳ ಹಾರಾಟ
ಶಿವಮೊಗ್ಗ: ಮಲೆನಾಡಿಗರ ಬಹುದಿನದ ಕನಸು ಇಂದು ನನಸಾಗುತ್ತಿದೆ. ಇಂದಿನಿಂದ ಶಿವಮೊಗ್ಗದಲ್ಲಿ ಲೋಹದ ಹಕ್ಕಿಗಳ ಹಾರಾಟ ಪ್ರಾರಂಭವಾಗಲಿದೆ. ಇಂದು (ಗುರುವಾರ) ಬೆಳಗ್ಗೆ ಬೆಂಗಳೂರಿನಿಂದ ಇಂಡಿಗೋ ವಿಮಾನ ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಬೆಳಗ್ಗೆ 9:50ಕ್ಕೆ ಇಂಡಿಗೋ 6E 7731 ವಿಮಾನವು ಕುವೆಂಪು ವಿಮಾನ ನಿಲ್ದಾಣಕ್ಕೆ ಸುಮಾರು 11:05ಕ್ಕೆ ಆಗಮಿಸಲಿದೆ. ಈ ಮೂಲಕ ನಾಗರಿಕ ವಿಮಾನ ಹಾರಾಟ ಪ್ರಥಮವಾಗಿ ಪ್ರಾರಂಭವಾಗಲಿದೆ. ಇಂಡಿಗೋ ವಿಮಾನ …
Read More »ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಈ ಭಾರಿ ಮಳೆ ಕೊರತೆಯಿಂದ ಬೆಳೆದ ಬೆಳೆಗಳೆಲ್ಲ ನೀರಿಲ್ಲದೇ ನಾಶ
ಶಿರಸಿ(ಉತ್ತರ ಕನ್ನಡ): ಮಳೆಯ ಕೊರತೆಯಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಪೂರ್ವ ಭಾಗದಲ್ಲಿ ಭತ್ತ, ಮೆಕ್ಕೆ ಜೋಳ ಬೆಳೆಗಳು ಒಣಗಿ ಹಾಳಾಗಿದ್ದು, ಹಸಿರಿನಿಂದ ಕಂಗೊಳಿಸಬೇಕಾಗಿದ್ದ ಹೊಲಗಳು ಬರಿದಾಗಿದೆ. ಇದು ರೈತರನ್ನು ಮಮ್ಮಲ ಮರುವಂತೆ ಮಾಡಿದ್ದು, ಬರಗಾಲ ಘೋಷಣೆ ಮಾಡುವಂತೆ ಆಗ್ರಹ ಹೆಚ್ಚಾಗಿದೆ. ಬನವಾಸಿ, ಬದನಗೋಡ, ಸಂತೊಳ್ಳಿ ವ್ಯಾಪ್ತಿಯು ಮಳೆಯಾಶ್ರಿತ ಭತ್ತದ ಬೆಳೆಯ ಪ್ರದೇಶವಾಗಿದ್ದು, ಪ್ರಸಕ್ತ ಸಾಲಿನಲ್ಲಿ 2,480 ಹೆಕ್ಟೇರ್ ಭತ್ತ, 1,550 ಹೆಕ್ಟೇರ್ ಅಡಿಕೆ, ನೂರಾರು ಎಕರೆ ಮೆಕ್ಕೆ ಜೋಳ, …
Read More »ತಮಿಳು ನೆಲದಲ್ಲಿ ಕಿಂಗ್ ಖಾನ್ ಶಾರುಖ್ ಹವಾ
ಚೆನ್ನೈನ ಶ್ರೀ ಸಾಯಿರಾಮ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜವಾನ್ ಪ್ರೀ ರಿಲೀಸ್ ಈವೆಂಟ್ ನಡೆಯಲಿದ್ದು, ಶಾರುಖ್ ಖಾನ್ ಆಗಮಿಸಿದ್ದಾರೆ. ಬಾಲಿವುಡ್ ಕಿಂಗ್ ಖಾನ್ ಶಾರುಖ್ ಮತ್ತೊಮ್ಮೆ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲು ಸಜ್ಜಾಗಿದ್ದಾರೆ. ಪಠಾಣ್ ಬಳಿಕ ಮತ್ತೊಂದು ಆಯಕ್ಷನ್ ಪ್ಯಾಕ್ಡ್ ಸಿನಿಮಾದೊಂದಿಗೆ ಗಲ್ಲಾಪೆಟ್ಟಿಗೆ ದಾಖಲೆಗಳನ್ನು ಮುರಿಯಲು ಬರುತ್ತಿದ್ದಾರೆ. ನಟನ ಮುಂದಿನ ಬಹುನಿರೀಕ್ಷಿತ ಸಿನಿಮಾ ‘ಜವಾನ್’. ಸೆಪ್ಟೆಂಬರ್ 7 ರಂದು ವಿಶ್ವಾದ್ಯಂತ ಚಿತ್ರಮಂದಿಗಳಲ್ಲಿ ಜವಾನ್ ಬಿಡುಗಡೆ ಆಗಲಿದ್ದು, ಪ್ರಮೋಶನ್ ವರ್ಕ್ ಜೋರಾಗೇ ನಡೆಯುತ್ತಿದೆ. …
Read More »ಮಂಗಳೂರು: ಸಂಚರಿಸುತ್ತಿದ್ದ ಬಸ್ನಿಂದ ಹೊರಗೆ ಬಿದ್ದು ಕಂಡಕ್ಟರ್ ಸಾವು- ಘಟನೆಯ ವಿಡಿಯೋ ವೈರಲ್
ಮಂಗಳೂರು: ಸಂಚಾರದಲ್ಲಿದ್ದ ನಗರ ಸಾರಿಗೆ ಬಸ್ನಿಂದ ಕಂಡಕ್ಟರ್ ಹೊರಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿ ಮೃತಪಟ್ಟಿರುವ ಘಟನೆ ನಂತೂರಿನಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ ನಿವಾಸಿ, ಪ್ರಸ್ತುತ ಸುರತ್ಕಲ್ ತಡಂಬೈಲ್ನಲ್ಲಿ ನೆಲೆಸಿರುವ ಈರಯ್ಯ (23) ಮೃತಪಟ್ಟವರು. ಇವರು 15 ಸಂಖ್ಯೆಯ ಖಾಸಗಿ ಸಿಟಿ ಬಸ್ ನಿರ್ವಾಹಕರಾಗಿದ್ದರು. ಮಂಗಳವಾರ ಮಧ್ಯಾಹ್ನದ ಸುಮಾರಿಗೆ ಘಟನೆ ನಡೆದಿದೆ. ಬಸ್ ಕೆಪಿಟಿಯಿಂದ ಆಗಮಿಸಿ ನಂತೂರು ವೃತ್ತದಲ್ಲಿ ವೇಗವಾಗಿ ತಿರುವು ಪಡೆಯುತ್ತಿದ್ದಾಗ, ಮುಂಭಾಗದ ಬಾಗಿಲಲ್ಲಿ ನಿಂತಿದ್ದ ಕಂಡಕ್ಟರ್ ಕೆಳಕ್ಕೆ ಬಿದ್ದಿದ್ದಾರೆ. …
Read More »ದೆಹಲಿಯಲ್ಲಿ ಖಾಸಗಿ ಕಂಪನಿಯ ಹಿರಿಯ ಮ್ಯಾನೇಜರ್ಗೆ ಗುಂಡಿಕ್ಕಿ ಹತ್ಯೆ
ನವದೆಹಲಿ: ಖಾಸಗಿ ಆನ್ಲೈನ್ ಶಾಪಿಂಗ್ ವೆಬ್ಸೈಟ್ವೊಂದರ ಕಂಪನಿಯಲ್ಲಿ ಹಿರಿಯ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಹರ್ಪ್ರೀತ್ ಗಿಲ್ (36) ಕೊಲೆಯಾದ ವ್ಯಕ್ತಿಯಾಗಿದ್ದು, ಇವರ ಸಂಬಂಧಿ ಗೋವಿಂದ್ ಸಿಂಗ್ ಎಂಬುವವರು ಕೂಡ ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಲ್ಲಿನ ಭಜನಪುರ ಪ್ರದೇಶದ ಸುಭಾಷ್ ವಿಹಾರ ಪ್ರದೇಶದಲ್ಲಿ ಕಳೆದ ರಾತ್ರಿ 11.20ರ ಸುಮಾರಿಗೆ ಐವರು ದುಷ್ಕರ್ಮಿಗಳ ತಂಡ …
Read More »