Breaking News

Daily Archives: ಜನವರಿ 28, 2022

ಅರಭಾವಿ ಕ್ಷೇತ್ರದ ರಸ್ತೆಗಳು ಹಾಗೂ ದೇವಸ್ಥಾನಗಳ ಅಭಿವೃದ್ಧಿಗೆ 52 ಕೋಟಿ ರೂ. ಅನುದಾನ ಬಿಡುಗಡೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

  ಗೋಕಾಕ : ಅರಭಾವಿ ಮತಕ್ಷೇತ್ರದ ರಸ್ತೆಗಳ ಅಭಿವೃದ್ಧಿಗಾಗಿ 50 ಕೋಟಿ ರೂ. ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ 2 ಕೋಟಿ ರೂ.ಗಳು ಸೇರಿ ಒಟ್ಟು 52 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಕ್ಷೇತ್ರದಲ್ಲಿರುವ ರಸ್ತೆಗಳ ಸುಧಾರಣೆಗಾಗಿ ಲೋಕೋಪಯೋಗಿ ಇಲಾಖೆಯ ಒಟ್ಟು 34.53 ಕಿ.ಮೀ ರಸ್ತೆಗಳ ಸುಧಾರಣೆಗಾಗಿ 32 ಕೋಟಿ ರೂ. ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ …

Read More »

ಅಂಬೇಡ್ಕರ ಪೊಟೊ ತೆಗೆಸಿದ ನ್ಯಾಯಾದೀಶರ ವಿರುದ್ದ ಮೋದಿಗೆ ಪತ್ರ,,

ಅಂಬೇಡ್ಕರ ಪೊಟೊ ತೆಗೆಸಿದ ನ್ಯಾಯಾದೀಶರ ವಿರುದ್ದ ಮೋದಿಗೆ ಪತ್ರ,,   ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ ಬಾವ ಚಿತ್ರ ತೆಗೆಸಿ ಪೂಜೆ ಮಾಡಿ ಅವಮಾನ ಮಾಡಿದ ಮಲ್ಲಿಕಾರ್ಜುನಗೌಡ ಅವರನ್ನು ಸೇವೆಯಿಂದ ವಜಾಗೊಳಿಸಲು ಗೋಕಾಕದಲ್ಲಿ ಬಸವೇಶ್ವರ ವೃತ್ತದಲ್ಲಿ ಗೋಕಾಕದ ಶೂನ್ಯ ಸಂಪಾದನಮಠದ ಶ್ರೀ ಮುರುಘರಾಜೆಂದ್ರ ಮಹಾಸ್ವಾಮಿಗಳ ಮುಖಂಡತ್ವದಲ್ಲಿ ಹಾಗೂ ಯುವ ದಲಿತ ಸಮಿತಿ ನೇತೃತ್ವದಲ್ಲಿ ವಿವಿದ ಸಂಘಟನೆಗಳಿಂದ ಪ್ರದಾನ ಮಂತ್ರಿಯವರಿಗೆ ಸಾವಿರಾರು ಪತ್ರ ಬರೆದು ಪತ್ರ ಚಳುವಳಿ ಮಾಡಲಾಯಿತು. ಈ ಸಮಯದಲ್ಲಿ ಮಾತನಾಡಿದ …

Read More »

ನೂತನವಾಗಿ ಆಯ್ಕೆಯಾದ ತಾಲೂಕಿನ ಪಿಎಸ್‌ಐ ಗಳಿಗೆ ಸನ್ಮಾನ ಶಾಸಕರಾದ ಶ್ರೀ ರಮೇಶ ಜಾರಕಿಹೊಳಿ ಅವರಿಂದ

ಗೋಕಾಕ  ನಗರದ ಸಾಹುಕಾರ ಗೃಹ ಕಛೇರಿಯಲ್ಲಿ ಇಂದು 2021. 22ನೇ ಸಾಲಿನ ಪಿಎಸ್‌ಐ ಹುದ್ದೆಗೆ ಆಯ್ಕೆಯಾದ ಗೋಕಾಕ ತಾಲೂಕಿನ ಶಿವಾಪೂರ.ಕೊ ಗ್ರಾಮದ ಕು.ಕಿರಣ ಬಸಗೌಡ ಪಾಟೀಲಘಟಪ್ರಭಾ ಪಟ್ಟಣದ ಕು.ಚೈತ್ರಾ ಹಣಮಂತ ಗಿಡುರಮಮದಾಪೂರ ಗ್ರಾಮದ ಕು.ಕೀರ್ತಿ ನಿಂಗಪ್ಪ ಕಮತ ಇವರಿಗೆ ಶಾಸಕರಾದ ಶ್ರೀ ರಮೇಶ ಜಾರಕಿಹೊಳಿ ಅವರು ಸನ್ಮಾನಿಸಿ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದರು, ಈ ಸಂದರ್ಭದಲ್ಲಿ ಭೀಮನಗೌಡ ಪೋಲೀಸಗೌಡರ,ಟಿ.ಆರ್ ಕಾಗಲ್,ಮಡ್ಡೆಪ್ಪ ತೋಳಿನವರ,ಬಿಇಓ ಜಿ.ಬಿ ಬಳಗಾರ,ಸುರೇಶ ಸನದಿ, ಲಕ್ಷ್ಮೀಕಾಂತ ಎತ್ತಿನಮನಿ …

Read More »

“ತುಪ್ಪ” ಖರೀದಿಸುವವರೇ ಎಚ್ಚರ .! ರಾಜಧಾನಿ ಬೆಂಗಳೂರಿನಲ್ಲಿ “ನಕಲಿ ನಂದಿನಿ ತುಪ್ಪ” ಪತ್ತೆ..!

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಕಲಿ ನಂದಿನಿ ತುಪ್ಪ ಮಾರಾಟ ದಂಧೆ ಬೆಳಕಿಗೆ ಬಂದಿದೆ. ಈ ಸಂಬಂಧ ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಗಳೂರಿನ ಜಯನಗರ, ಹನುಮಂತನಗರ ಮತ್ತು ಇತರ ಪ್ರದೇಶದಲ್ಲಿ ಸ್ಯಾಂಪಲ್‌ ಸಂಗ್ರಹಿಸಿದ ಬಳಿಕ ನಡೆಸಲಾದ ಪರೀಕ್ಷೆಯ ವೇಳೆ ನಕಲಿ ತುಪ್ಪ ಎಂದು ಬೆಳಕಿಗೆ ಬಂದಿದೆ. ನಂದಿನಿ ಮಾರ್ಕೇಟಿಂಗ್‌ ವಿಭಾದ ಹಿರಿಯ ಅಧಿಕಾರಿ ಸುರೇಶ್‌ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿಂದೆ ಮೈಸೂರಿನಲ್ಲಿ ನಕಲಿ …

Read More »

ಮಾಜಿ ಸಿಎಂ ʻಬಿಎಸ್‌ ಯಡಿಯೂರಪ್ಪʼನವರ ಮೊಮ್ಮಗಳು ಸೌಂದರ್ಯ ನೇಣಿಗೆ ಶರಣು

ಬೆಂಗಳೂರು: ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ 2 ನೇ ಪುತ್ರಿ ಪದ್ಮಾವತಿ ಅವರ ಮಗಳು ಸೌಂದರ್ಯ(30 ) ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.   30 ವರ್ಷದ ಸೌಂದರ್ಯ ಎಂಎಸ್‌ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. 2018 ರಲ್ಲಿ ಸೌಂದರ್ಯ ಡಾ. ನೀರಜ್‌ರನ್ನು ಮದುವೆಯಾಗಿದ್ದರು. ಇವರಿಗೆ ಒಂದು ಮಗುವಿದೆ. ಇಂದು ಪತಿ ಬೆಳಗ್ಗೆ 8 ಗಂಟೆಗೆ …

Read More »

ನಿಯೋಕೋವ್ ಎಂಬ ಮತ್ತೊಂದು ಕೊವಿಡ್ ರೂಪಾಂತರಿ ವಿಶ್ವಾದ್ಯಂತ ಆತಂಕ, :

ನವದೆಹಲಿ : ಭಾರತದಲ್ಲಿ ಈಗಾಗಲೇ ಕೊರೊನಾ ರೂಪಾಂತರಿಯಾದ (Covid-19 Variant) ಡೆಲ್ಟಾ ವೈರಸ್ (Delta Virus), ಒಮಿಕ್ರಾನ್ (Omicron) ವೈರಸ್​ಗಳ ಆತಂಕ ಹೆಚ್ಚಾಗಿದ್ದು, ಇದರ ನಡುವೆ ನಿಯೋಕೋವ್ ಎಂಬ ಮತ್ತೊಂದು ಕೊವಿಡ್ ರೂಪಾಂತರಿ ವಿಶ್ವಾದ್ಯಂತ ಆತಂಕ ಹೆಚ್ಚಿಸಿದೆ. ವುಹಾನ್‌ನ ಚೀನೀ ವಿಜ್ಞಾನಿಗಳ ತಂಡ ನಿಯೋಕೋವ್ ಎಂಬ ಈ ಹೊಸ ಕೊರೊನಾವೈರಸ್ ಬಗ್ಗೆ ಎಚ್ಚರಿಕೆ ನೀಡಿದೆ. ನಿಯೋಕೋವ್ (NeoCov) ರೂಪಾಂತರಿಯಿಂದ ಹೆಚ್ಚಿನ ಸಾವು ಸಂಭವಿಸುತ್ತದೆ ಮತ್ತು ಸೋಂಕಿನ ಪ್ರಮಾಣವೂ ಹೆಚ್ಚಾಗಿರುತ್ತದೆ ಎಂದು …

Read More »

ತೆರಿಗೆದಾರರಿಗೆ ಕೇಂದ್ರ ಸರ್ಕಾರದಿಂದ ಬಿಗ್‌ ಗಿಫ್ಟ್‌ : ತೆರಿಗೆ ವಿನಾಯಿತಿ ಮಿತಿ ಹೆಚ್ಚಳ

ನವದೆಹಲಿ : ಕೇಂದ್ರ ಸರ್ಕಾರವು ವೇತನದಾರರು(Wage earners) ಮತ್ತು ಪಿಂಚಣಿದಾರರಿಗೆ(pensioners) ಆಶ್ರಯ ನೀಡುವ ಸಾಧ್ಯತೆಯಿದೆ. ಸದ್ಯದಲ್ಲೇ ಮಂಡಿಸಲಿರುವ ಬಜೆಟ್ ಮೂಲಕ ಏರುತ್ತಿರುವ ಹಣದುಬ್ಬರ(Inflation) ಹೊರೆ ತಗ್ಗಿಸುವತ್ತ ಚಿತ್ತ ಹರಿಸಿದ್ದು, ತೆರಿಗೆ ಹೊರೆ ತಗ್ಗಿಸಲು ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ(Standard deduction limit)ಯನ್ನ ಹೆಚ್ಚಿಸಲಾಗುವುದು ಎನ್ನಲಾಗ್ತಿದೆ. ಅದ್ರಂತೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಫೆಬ್ರವರಿ 1, 2022 ರಂದು ಮಂಡಿಸಲಿರುವ ಬಜೆಟ್ ಮೂಲಕ ಒಳ್ಳೆಯ ಸುದ್ದಿ ನೀಡುವ ನಿರೀಕ್ಷೆಯಿದೆ. ತೆರಿಗೆ …

Read More »

ರಾಯಚೂರು: ಅಂಬೇಡ್ಕರ್ ಭಾವಚಿತ್ರ ತೆರವು- ವ್ಯಾಪಕ ಆಕ್ರೋಶ

ರಾಯಚೂರು: ‘ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಗಣರಾಜ್ಯೋತ್ಸವ ದಿನದಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ತೆಗೆಸಿ ಧ್ವಜಾರೋಹಣ ನೆರವೇರಿಸಲಾಗಿದೆ’ ಎಂದು ಆರೋಪಿಸಿ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳಿಂದ ಜಿಲ್ಲೆಯಾದ್ಯಂತ ಗುರುವಾರ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.   ರಾಯಚೂರು ನಗರದಲ್ಲಿ ಮಧ್ಯಾಹ್ನ 2 ಗಂಟೆವರೆಗೂ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾಕಾರರು ಧರಣಿ ನಡೆಸಿದ್ದರಿಂದ ವಾಹನ ಸಂಚಾರ ಸ್ಥಗಿತವಾಗಿತ್ತು. ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ಗಡೀಪಾರು ಮಾಡುವಂತೆ ಆಗ್ರಹಪಡಿಸಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

Read More »

ರಾಷ್ಟ್ರೀಯ ಪಕ್ಷಗಳತ್ತ ಹೋಗಿಲ್ಲ, ಮುಂದೆಯೂ ಹೋಗಲ್ಲ:H.D.K.

ಬೆಂಗಳೂರು: ‘ಅಧಿಕಾರಕ್ಕಾಗಿ ರಾಷ್ಟ್ರೀಯ ಪಕ್ಷಗಳ ಮನೆಬಾಗಿಲಿಗೆ ನಾನು ಈವರೆಗೆ ಹೋಗಿಲ್ಲ. ಮುಂದೆಯೂ ಹೋಗುವುದಿಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಗುರುವಾರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಅವರು, ‘ಬೇರೆ ಪಕ್ಷಗಳು ಅತಂತ್ರವಾದಾಗ ಜೆಡಿಎಸ್ ಸ್ವತಂತ್ರವಾಗುತ್ತದೆ. ಅದು ಕುಮಾರಸ್ವಾಮಿ ಸದಾಶಯ ಆಗಿರಬಹುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಮ್ಮ ಪಕ್ಷ ಅತಂತ್ರವಾಗಿಲ್ಲ. ಅತಂತ್ರ ವಿಧಾನಸಭೆ ನಿರ್ಮಾಣವಾದಾಗ ರಾಷ್ಟ್ರೀಯ ಪಕ್ಷಗಳೇ ನಮ್ಮ ಮನೆ ಬಾಗಿಲಿಗೆ ಬಂದಿವೆ’ ಎಂದು ಹೇಳಿದರು. ಸಿ.ಎಂ ಪ್ರತಿನಿಧಿಸುವ ಪಕ್ಷದ …

Read More »

ಕಲಬುರಗಿ-ಮೇಯರ್, ಉಪಮೇಯರ್ ಚುನಾವಣೆ ಫೆ 5ಕ್ಕೆ:

ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್‌ ಚುನಾವಣೆಯ ಮೀಸಲಾತಿಯನ್ನು ಬದಲಾಯಿಸಿ ಹೊಸ ಆದೇಶ ಹೊರಡಿಸಿದ ಬೆನ್ನಲ್ಲೇ ಗುರುವಾರ ಪ್ರಾದೇಶಿಕ ಆಯುಕ್ತರು ಫೆಬ್ರುವರಿ 5ರಂದು ಮೇಯರ್, ಉಪಮೇಯರ್ ಹಾಗೂ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಿದ್ದಾರೆ.   ಫೆ 5ರಂದು ಬೆಳಿಗ್ಗೆ 10.30ಕ್ಕೆ ನಾಮಪತ್ರವನ್ನು ಉಪ ವಿಭಾಗಾಧಿಕಾರಿಗೆ ಸಲ್ಲಿಸಬೇಕು. ಮಧ್ಯಾಹ್ನ 12ರ ಮತದಾನ ನಡೆಯಲಿದೆ ಎಂದು ಪ್ರಾದೇಶಿಕ ಆಯುಕ್ತ ಡಾ. ಎನ್.ವಿ. ಪ್ರಸಾದ್‌ ತಿಳಿಸಿದ್ದಾರೆ. …

Read More »