Breaking News

Yearly Archives: 2021

SSLC ಸೇರಿ ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ ಸಿಹಿ ಸುದ್ದಿ

ಬೀದರ: ಫೆ.17 ರಂದು ಬೆಳಿಗ್ಗೆ 10 ರಿಂದ 3 ಗಂಟೆಯವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಈ ಉದ್ಯೋಗ ಮೇಳದಲ್ಲಿ ರಾಜ್ಯದ 10 ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿವೆ. ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ ಫೇಲ್, ಎಸ್‌ಎಸ್‌ಎಲ್‌ಸಿ, ಪಿಯುಸಿ, ಐ.ಟಿ.ಐ ಹಾಗೂ ಸ್ನಾತಕೋತ್ತರ ಪದವಿಧರರು ಅಭ್ಯರ್ಥಿಗಳು ಈ ಉದ್ಯೋಗಮೇಳದ ಸದುಪಯೋಗವನ್ನು ಪಡೆದುಕೊಳ್ಳಲು ಕೋರಲಾಗಿದೆ. ಈ ಉದ್ಯೋಗ ಮೇಳದಲ್ಲಿ ಹಾಜರಾದ ಅಭ್ಯರ್ಥಿಗಳಿಗೆ …

Read More »

EPFO ಚಂದಾದಾರರಿಗೊಂದು ಮಹತ್ವದ ಮಾಹಿತಿ: ಇನ್ಮುಂದೆ ಆನ್ಲೈನ್ ನಲ್ಲಿ ಸಿಗಲ್ಲ ಈ ಸೇವೆ

ನೌಕರರ ಭವಿಷ್ಯ ನಿಧಿ ಸಂಸ್ಥೆ, ಆನ್ಲೈನ್ ಸೇವೆ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದೆ. ಸದಸ್ಯರಿಗೆ ಆನ್‌ಲೈನ್ ಮಾಧ್ಯಮದ ಮೂಲಕ ಪ್ರೊಫೈಲ್‌ನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಅನುಮತಿ ನೀಡುವುದಿಲ್ಲ. ಆನ್‌ಲೈನ್ ಮೂಲಕ ಪ್ರೊಫೈಲ್‌ ತಿದ್ದುಪಡಿ ಮಾಡಿದ್ರೆ ದಾಖಲೆಗಳು ಹೊಂದಿಕೆಯಾಗದಿರುವ ಸಾಧ್ಯತೆಯಿದೆ. ಇದು ವಂಚನೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಈ ಸಂಬಂಧ ಇಪಿಎಫ್‌ಒ ಪ್ರಾದೇಶಿಕ ಕಚೇರಿಗಳು ಮತ್ತು ಸದಸ್ಯ ಸಂಸ್ಥೆಗಳಿಗೆ ಈಗಾಗಲೇ ಸುತ್ತೋಲೆ ಹೊರಡಿಸಿದೆ. ಯಾವುದೇ ಕಾಗದದ ಪುರಾವೆ ಇಲ್ಲದೆ, ಯಾವುದೇ ನೌಕರ ದಾಖಲೆಯನ್ನು …

Read More »

ಗ್ಯಾಸ್ ಸಿಲಿಂಡರ್ ಗೆ ಸಿಕ್ತಿದೆಯಾ ಸಬ್ಸಿಡಿ…? ಹೀಗೆ ಚೆಕ್ ಮಾಡಿ

ಬಹುತೇಕ ಎಲ್ಲರ ಮನೆಯಲ್ಲೂ ಅಡುಗೆ ಅನಿಲವಿದೆ. ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗುತ್ತದೆ. ಸಾರ್ವಜನಿಕರಿಗೆ ನೆಮ್ಮದಿ ನೀಡಲು ಗ್ಯಾಸ್ ಸಿಲಿಂಡರ್ ಗೆ ಸರ್ಕಾರ ಸಬ್ಸಿಡಿ ನೀಡುತ್ತದೆ. ವಿವಿಧ ರಾಜ್ಯಗಳಲ್ಲಿ ಸಬ್ಸಿಡಿ ಬೇರೆ ಬೇರೆಯಿದೆ. ವಾರ್ಷಿಕ ಆದಾಯ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿರುವ ಜನರಿಗೆ ಈ ಸಬ್ಸಿಡಿ ಸೌಲಭ್ಯ ಸಿಗುವುದಿಲ್ಲ. ಅನೇಕರ ಖಾತೆಗೆ ಸಬ್ಸಿಡಿ ಬರುತ್ತದೆ. ಆದ್ರೆ ಜನರಿಗೆ ಖಾತೆಗೆ ಹಣ ಬಂದಿರುವುದು ಗೊತ್ತಾಗುವುದಿಲ್ಲ. ನಿಮ್ಮ ಖಾತೆಗೆ ಸಬ್ಸಿಡಿ ಬಂದಿದೆಯಾ …

Read More »

ವಿವಿಧ ಆಸ್ಪತ್ರೆ, ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ

ಮಂಗಳೂರು: ಮಂಗಳೂರಿನ ಉದ್ಯಮಿಗಳಿಗೆ ಸೇರಿದ ವಿವಿಧ ಆಸ್ಪತ್ರೆ, ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಜ್ಯದ ಖ್ಯಾತ ಉದ್ಯಮಿ ಎ.ಜೆ.ಶೆಟ್ಟಿ ಅವರ ಎ.ಜೆ.ಆಸ್ಪತ್ರೆ, ವೈ.ಅಬ್ದುಲ್ಲಾ ಅವರ ಯನಪೋವಾ ಆಸ್ಪತ್ರೆ ಸೇರಿದಂತೆ ಮಂಗಳೂರು ಹಾಗೂ ಬೆಂಗಳೂರಿನ ನಿವಾಸ, ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಜೆಪಿ ಮುಖಂಡ ಹುಲಿನಾಯ್ಕರ್ ಅವರಿಗೆ ಸೇರಿದ ತುಮಕೂರಿನ ಶ್ರೀದೇವಿ ಮೆಡಿಕಲ್ ಕಾಲೇಜಿನ ಮೇಲೆ ಕೂಡ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, …

Read More »

ಎಫ್ ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಗೋಕಾಕ್ ತಾಲೂಕಿನ ಸಂಗನಕೇರಿ ಗ್ರಾಮದ ನಿವಾಸಿ ಬಂಧನ

ಬೆಳಗಾವಿ: ಕರ್ನಾಟಕ ಲೋಕಸೇವಾ ಆಯೋಗದ ಎಫ್ ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬೆಳಗಾವಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಶಿವಲಿಂಗ ಪಾಟೀಲ್ ಎಂದು ಗುರುತಿಸಲಾಗಿದೆ. ಈತ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸಂಗನಕೇರಿ ಗ್ರಾಮದ ನಿವಾಸಿಯಗೈದ್ದು, ದಾರಿದೀಪ ಹೆಸರಿನ ಕೋಚಿಂಗ್ ಸೆಂಟರ್ ನಡೆಸುತ್ತಿದ್ದ. ಆದರೆ ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎನಲಾಗಿದೆ. ಪರೀಕ್ಷೆ ಬರೆಯುವ ಅಭ್ಯರ್ಥಿಗಳನ್ನು ಸಂಪರ್ಕಿಸುತ್ತಿದ್ದ ಆರೋಪಿ, ಮತ್ತೋರ್ವ ಆರೋಪಿ ರಾಚಪ್ಪನಿಂದ ಪ್ರಶ್ನೆ …

Read More »

ಚೇತನ್ ಹೊಸ ಚಿತ್ರ ‘100 ಕ್ರೋರ್ಸ್’ ಫಸ್ಟ್ ಲುಕ್ ರಿಲೀಸ್

ನಟ ಚೇತನ್ ಟಾಲಿವುಡ್ ಕಡೆಗೆ ಹೊರಟಿದ್ದು ಇವರ “100 ಕ್ರೋರ್ಸ್’ ಶೀರ್ಷಿಕೆಯ ನೂತನ ಚಿತ್ರ ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗಲಿದೆ. ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿದ್ದು, ಚಿತ್ರದ ಫಸ್ಟ್ ಲುಕ್ ಅನ್ನು ನಿರ್ದೇಶಕ ಸುನಿ ಬಿಡುಗಡೆಗೊಳಿಸಿದ್ದಾರೆ. ಆಕ್ಷನ್-ಪ್ಯಾಕ್ಡ್ ಕಮರ್ಷಿಯಲ್ ಡ್ರಾಮಾದಲ್ಲಿ ಚೇತನ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಏಕಕಾಲದಲ್ಲಿ ಎರಡು ಭಾಷೆಗಳಲ್ಲಿ ತಯಾರಾದ ಚಿತ್ರಕ್ಕೆ ಸಂಭಾಷಣಾಗಾರ ವಿರಾಟ್ ಚಕ್ರವರ್ತಿ ಆಕ್ಷನ್ ಕಟ್ ಹೇಳಿದ್ದಾರೆ. “100 ಕ್ರೋರ್ಸ್’ ಚಿತ್ರಕ್ಕೆ ಸಾಯಿ ಕಾರ್ತೀಕ್ ಸಂಗೀತ ನೀಡುತ್ತಿದ್ದು …

Read More »

ವಿಟಮಿನ್ ಎಫ್ ಕೊರತೆ ನಿಮ್ಮನ್ನು ಕಾಡುತ್ತಿದೆಯಾ.?

ದೇಹದ ಅಂಗಾಂಶಗಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ವಿಟಮಿನ್ ಎಫ್ ತುಂಬಾ ಅಗತ್ಯ. ಒಂದು ವೇಳೆ ಇದು ಕಡಿಮೆಯಾದರೆ ಒಣಚರ್ಮ, ಕೂದಲುದುರುವ ಸಮಸ್ಯೆ, ಮೆದುಳು, ಕಣ್ಣಿನ ಸಮಸ್ಯೆ ಕಾಡುತ್ತದೆ. ಹಾಗಾಗಿ ವಿಟಮಿನ್ ಎಫ್ ಸಮೃದ್ಧವಾಗಿರುವಂತಹ ಈ ಆಹಾರಗಳನ್ನು ಸರಿಯಾಗಿ ಸೇವಿಸಿ. *ವೆಜಿಟಬಲ್ ಆಯಿಲ್ : ಇದನ್ನು ಸಸ್ಯ ಬೀಜದಿಂದ ಅಥವಾ ಹಣ್ಣುಗಳ ಬೀಜದಿಂದ ಹೊರತೆಗೆಯಲಾಗುತ್ತದೆ. ಕಡಲೆಕಾಯಿ, ಆಲಿವ್, ಸೋಯಾಬೀನ್, ಸೂರ್ಯ ಕಾಂತಿ ಎಣ್ಣೆಯಲ್ಲಿ ವಿಟಮಿನ್ ಎಫ್ ಸಮೃದ್ಧವಾಗಿದೆ. ಇದು ಆರೋಗ್ಯಕ್ಕೆ ತುಂಬಾ …

Read More »

ಸದೃಢ ಆರೋಗ್ಯ ಇದ್ದರಷ್ಟೇ ಬಡ್ತಿ: ಎಡಿಜಿಪಿ ಅಲೋಕ್‌ ಕುಮಾರ್

ಕಲಬುರ್ಗಿ: ‘ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ (ಕೆಎಸ್‌ಆರ್‌ಪಿ) ಪಡೆಯ ಸಿಬ್ಬಂದಿಯಲ್ಲಿ ಈಗ ಸದೃಢ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಬಡ್ತಿ, ವರ್ಗಾವಣೆ, ನಿಯೋಜನೆ, ಪದಕ ಪ್ರದಾನ… ಹೀಗೆ ಎಲ್ಲ ಹಂತದಲ್ಲೂ ಸಿಬ್ಬಂದಿ ದೈಹಿಕ ಕಾರ್ಯಕ್ಷಮತೆ ದೃಢಪಡಿಸುವುದು ಅನಿವಾರ್ಯ’ ಎಂದು ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ ಕುಮಾರ್ ತಿಳಿಸಿದರು. ‌ನಗರದಲ್ಲಿ ಮಂಗಳವಾರ ‘ಪ‍್ರಜಾವಾಣಿ’ ಜತೆಗೆ ಮಾತನಾಡಿದ ಅವರು, ‘ಪೊಲೀಸ್‌ ಸಿಬ್ಬಂದಿಗೆ ಇಲಾಖೆಯು ಈಗ ಸಾಕಷ್ಟು ಸೌಕರ್ಯ, ಸಂಬಳ ನೀಡುತ್ತಿದೆ. ಇನ್ನು ಮುಂದೆ ಸೌಕರ್ಯಕ್ಕೆ …

Read More »

ಈ ಬಾರಿಯ ಬಜೆಟ್ ನಿಂದ ಆರೋಗ್ಯ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ : ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು, ಫೆಬ್ರವರಿ 16 : ವೈದ್ಯರು ಪ್ರತಿ ರೋಗಿಯನ್ನು ತಮ್ಮ ಕುಟುಂಬ ಸದಸ್ಯರಂತೆ ಕಂಡು ಸೇವೆ ನೀಡಿದರೆ ಸರ್ಕಾರಿ ಆರೋಗ್ಯ ಕ್ಷೇತ್ರದಲ್ಲಿ ನಿರೀಕ್ಷಿತ ಸೇವೆ ನೀಡಲು ಸಾಧ್ಯ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಸರ್ಕಾರಿ ಆರೋಗ್ಯ ಕ್ಷೇತ್ರದಲ್ಲಿ 3 ಲಕ್ಷ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಸರ್ಕಾರಿ ಆರೋಗ್ಯ ಕೇಂದ್ರಗಳು ನಿರೀಕ್ಷೆಗೆ ತಕ್ಕಂತೆ …

Read More »

ನಟ ರಾಘವೇಂದ್ರ ರಾಜ್ ಕುಮಾರ್ ಗೆ ಹೃದಯ ಶಸ್ತ್ರಚಿಕಿತ್ಸೆಗೆ ಸಿದ್ಧತೆ

ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಅನಾರೋಗ್ಯದಿಂದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ. ಮೂಲಗಳ ಪ್ರಕಾರ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಗೆ ಸಿದ್ಧತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಅಭಿಮಾನಿಗಳು ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಭದ್ರತೆಗಾಗಿ ಆಸ್ಪತ್ರೆ ಸುತ್ತ ಕೆ.ಎಸ್.ಆರ್.ಪಿ. ತುಕಡಿ ನಿಯೋಜನೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇನ್ನು …

Read More »