ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮಕ್ಕಳ ರಕ್ಷಣಾ ಘಟಕ ಕಾರ್ಮಿಕ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಒಟ್ಟು 17 ಬಾಲ ಕಾರ್ಮಿಕರನ್ನು ರಕ್ಷಿಸಿದ್ದಾರೆ. ಮಲ್ಪೆ ಮೀನುಗಾರಿಕಾ ಬಂದರಲ್ಲಿ ಮೀನು ಹೆಕ್ಕುತ್ತಿದ್ದ 17 ಮಕ್ಕಳು ಇಲಾಖೆ ರಕ್ಷಿಸಿದೆ.
ರಕ್ಷಿಸಲ್ಪಟ್ಟ ಬಾಲಕಾರ್ಮಿಕರೆಲ್ಲ ಕೊಪ್ಪಳ, ಬಳ್ಳಾರಿ ಮೂಲದವರು. ಈ ಜಂಟಿ ಕಾರ್ಯಾಚರಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಸಾಥ್ ನೀಡಿದೆ. ಹಾಗೂ ಮಕ್ಕಳ ಸಹಾಯವಾಣಿ ನಾಗರಿಕ ಸೇವಾ ಟ್ರಸ್ಟ್ ಕಾರ್ಯಕರ್ತರು ರಕ್ಷಣೆಗೆ ಸಹಕಾರ ನೀಡಿದ್ದಾರೆ. ಸದ್ಯ ಮಕ್ಕಳ ಕಲ್ಯಾಣ ಸಮಿತಿ ಮುಂದೆ 17 ಬಾಲ ಕಾರ್ಮಿಕರನ್ನು ಹಾಜರು ಪಡಿಸಿದೆ.