ಉಡುಪಿ: ವಿಧಾನ ಪರಿಷತ್ ಕಲಾಪದಲ್ಲಿ ನಡೆದ ಗದ್ದಲವನ್ನು ಕುರಿತು ಮಾತನಾಡಿರುವ ಉಡುಪಿ ಶಾಸಕ ಕೋಟ ಶ್ರಿನಿವಾಸ್ ಪೂಜಾರಿ ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರನ್ನು ಕಾಂಗ್ರೆಸ್ ನಿಯಂತ್ರಣ ಮಾಡುವುದು ಬಿಟ್ಟಿದ್ದರೆ ಗೊಂದಲ ಇರುತ್ತಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಗದ್ದಲದ ಕುರಿತು ಪ್ರತಿಕ್ರಿಯಿಸಿರುವ ಸಚಿವರು ಕಾಂಗ್ರೆಸ್ ನಾಯಕರು ಸಭಾಪತಿ ತಾನು ಹೇಳಿದಂತೆ ಕೇಳಬೇಕು ಎಂದು ಸಿದ್ದರಾಮಯ್ಯ ಸಹಿತ ಎಲ್ಲರೂ ಕಾಂಗ್ರೆಸ್ಸೀಕರಣ ಮಾಡುತ್ತಿದ್ದಾರೆ. ಕಾಂಗ್ರೆಸ್ಸೀಕರಣ ಮಾಡಿದ್ದರ ಫಲವೇ ವಿಧಾನಪರಿಷತ್ ಗದ್ದಲಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ. ಎಲ್ಲ ಗೊಂದಲಕ್ಕೆ ಕಾಂಗ್ರೆಸ್ ನೇರ ಕಾರಣ. ಸಭಾಪತಿ ಮೇಲೆ ಅವಿಶ್ವಾಸ ನಿರ್ಣಯ ಮಾಡಲಾಗಿತ್ತು. ಆದರೆ ಕಾಂಗ್ರಸ್ ಸಭಾಪತಿ ಮೇಲೆ ಒತ್ತಡ ತಂದು ಗೊಂದಲ ಸೃಷ್ಟಿ ಮಾಡುತ್ತಿದೆ. ರಾಜ ಧರ್ಮ ಪಾಲನೆ ಮಾಡಬೇಕಾದ ಕಾಂಗ್ರೆಸ್‍ನವರು ಸಭಾಪತಿ ಕೈ ಕಟ್ಟಿಹಾಕಿದ್ದಾರೆ ಈ ಮೂಲಕ ಅವಿಶ್ವಾಸ ಗೊತ್ತುವಳಿ ಆಗದಂತೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಗೊಂದಲ ನಿವಾರಣೆಯ ಬಳಿಕ ಸಭಾಪತಿ ಯಾರಗಬೇಕೆಂದು ನಿರ್ಣಯಿಸಲಾಗುತ್ತದೆ ಎಂದು ಹೇಳಿದರು.