Breaking News

ಅರಬಿ ಸಮುದ್ರದಲ್ಲಿ ಪತನಗೊಂಡ ಮಿಗ್‌ ಅವಶೇಷ ಪತ್ತೆ : ಪೈಲಟ್ ಸುಳಿವು ಇನ್ನೂ ಸಿಕ್ಕಿಲ್ಲ

Spread the love

ಹೊಸದಿಲ್ಲಿ: ಅರಬಿ ಸಮುದ್ರದಲ್ಲಿ ಗುರುವಾರ ಪತನಗೊಂಡಿದ್ದ ಭಾರತೀಯ ವಾಯುಸೇನೆಯ ಮಿಗ್‌-29 ಕೆ ಯುದ್ಧವಿಮಾನದ ಕೆಲವು ಭಾಗಗಳು ಪತ್ತೆಯಾಗಿವೆ. ಆದರೆ ನಾಪತ್ತೆಯಾಗಿರುವ ಪೈಲಟ್‌ನ ಸುಳಿವು ಸಿಕ್ಕಿಲ್ಲ.

ಗುರುವಾರ ಸಂಜೆ ಐಎನ್‌ಎಸ್‌ ವಿಕ್ರಮಾದಿತ್ಯ ಸಮರ ನೌಕೆಯಿಂದ ಹಾರಾಟ ನಡೆಸುವ ವೇಳೆ ಈ ಮಿಗ್‌ ವಿಮಾನ ಪತನಗೊಂಡಿತ್ತು. ರವಿವಾರ ಅದರ ಟರ್ಬೋ ಚಾರ್ಜರ್‌, ಇಂಧನ ಟ್ಯಾಂಕ್‌ ಮತ್ತು ಕೆಲವು ಭಾಗಗಳನ್ನು ನೌಕಾಪಡೆಯ ಶೋಧ ತಂಡ ಪತ್ತೆ ಹಚ್ಚಿದೆ.

ಇಬ್ಬರು ಪೈಲಟ್‌ಗಳ ಪೈಕಿ ಓರ್ವರನ್ನು ಗುರುವಾರವೇ ರಕ್ಷಿಸಲಾಗಿತ್ತು. ನಾಪತ್ತೆಯಾಗಿರುವ ಇನ್ನೋರ್ವ ಪೈಲಟ್‌ ಕ| ನಿಶಾಂತ್‌ ಸಿಂಗ್‌ ಅವರಿಗಾಗಿ ಶೋಧ ಮುಂದುವರಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ ಮಿಗ್‌ ಯುದ್ಧ ವಿಮಾನ ಪತನಗೊಂಡ ಮೂರನೇ ಪ್ರಕರಣ ಇದಾಗಿದೆ.


Spread the love

About Laxminews 24x7

Check Also

ಬೆಳಗಾವಿ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿದೆ.‌ ನಿರಂತರ ಮಳೆಯಿಂದ ಘಟಪ್ರಭಾ, ಕೃಷ್ಣಾ, ದೂಧಗಂಗಾ, ಹಿರಣ್ಯಕೇಶಿ, ಮಾರ್ಕಂಡೇಯ ಹಾಗೂ ಮಲಪ್ರಭಾ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ.

Spread the love ಭಾರತ ಹವಾಮಾನ ಇಲಾಖೆ ಆಗಸ್ಟ್ 19 ಮತ್ತು 20 ರಂದು ಬೆಳಗಾವಿ ಜಿಲ್ಲೆಗೆ ರೆಡ್ ಅಲರ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ