Breaking News

ಬಿ.ವೈ. ವಿಜಯೇಂದ್ರ ಮೇಲಿನ ಆರೋಪಕ್ಕೆ ದೆಹಲಿಯಿಂದ ಪ್ರತಿಕ್ರಿಯೆ ಬಂತು

Spread the love

ನವದೆಹಲಿ: ಸಿಎಂ ಬಿಎಸ್‌ ಯಡಿಯೂರಪ್ಪ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಮಾಡಿರುವ ಆರೋಪಕ್ಕೆ ಸಚಿವ ಸೋಮಣ್ಣ ಅವರು ತಿರುಗೇಟು ನೀಡಿದ್ದಾರೆ.

ನವದೆಹಲಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ಮುಖ್ಯಮಂತ್ರಿಗಳ ಮಕ್ಕಳ ಮೇಲೆ ಆರೋಪ ಮಾಡೋದು ದೇವರಾಜು ಅರಸು ಕಾಲದಿಂದ ಬಂದಿದೆ. ಎಲ್ಲಾ ಮುಖ್ಯಮಂತ್ರಿಗಳ ಮಕ್ಕಳ ಮೇಲೂ ಆರೋಪಗಳು ಬಂದಿವೆ. ಇದೇನು ಹೊಸದಲ್ಲ. ಆರೋಪಗಳು ನಿರಾಧಾರ ಎಂದು ಹೇಳಿದರು.

ವಿಜಯೇಂದ್ರ ಬಿಎಸ್ ವೈಗೆ ಅರ್ಜಿ ಹಾಕಿಕೊಂಡು ಜನ್ಮ ಪಡೆದಿಲ್ಲ. ಆ ಯುವಕ ಪಕ್ಷ, ಸಂಘಟನೆ ಅಂತಾ ಓಡಾಡಿಕೊಂಡು ಕೆಲಸ ಮಾಮಾಡುತ್ತಿದ್ದಾನೆ.

ಇಂಥ ಹೊತ್ತಲ್ಲಿ ಆರೋಪಗಳು ಬರೋದು ಸಹಜ ಎಂದರು.

ಇನ್ನು ವಿವಿಧ ಇಲಾಖೆಗಳಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಅವರು ಕೈಹಾಕುತ್ತಾರೆ ಎನ್ನುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಸೋಮಣ್ಣ ಅವರು, ನನ್ನ ಇಲಾಖೆಯಲ್ಲಿ ವಿಜಯೇಂದ್ರ ಯಾವತ್ತು ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.


Spread the love

About Laxminews 24x7

Check Also

ಕೋರ್ಟ್​​ನ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನ: ಚಿಕಿತ್ಸೆ ಫಲಿಸದೆ ಆರೋಪಿ ಸಾವು

Spread the loveಬೆಂಗಳೂರು, ಅಕ್ಟೋಬರ್​ 09: ವಿಚಾರಣೆಗೆ ಕರೆತಂದಿದ್ದ ವೇಳೆ ನ್ಯಾಯಾಲಯದ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಪೋಕ್ಸೋ ಪ್ರಕರಣದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ