ಮಂಗಳೂರು : ಛಲವೊಂದಿದ್ದರೆ ಎನನ್ನೂ ಸಾಧಿಸಬಹುದು ಎಂಬುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮೈ ಮಹಾಲಿಂಗ ನಾಯ್ಕ ಅವರೇ ಸಾಕ್ಷಿ. ಬೋಳುಗುಡ್ಡೆಯಲ್ಲಿ ಸುರಂಗ ನಿರ್ಮಿಸಿ, ನೀರು ಹರಿಸಿ ಬಂಗಾರ ಬೆಳೆದ ಭಗೀರಥ.
ಶಾಲೆ, ಕಾಲೇಜುಗಳಿಗೆ ಹೋಗದಿದ್ದರೂ, ನೀರನೆಮ್ಮದಿಯನ್ನು ಕಂಡು ಪ್ರಗತಿಪರ ಕೃಷಿಕರೆನಿಸಿಕೊಂಡವರು. ಮಹಾಲಿಂಗ ನಾಯ್ಕರ ಸಾಧನೆ ಮನ್ನಿಸಿ ಅವರನ್ನು ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಅರಸಿ ಬಂದಿದೆ.
‘ದೇಶದ ದೊಡ್ಡ ಪ್ರಶಸ್ತಿ ಬಂದಿರುವುದು ನಮಗೆ ಖುಷಿ ಕೊಟ್ಟಿದೆ. ಪ್ರಶಸ್ತಿ ಬರುತ್ತದೆ ಎಂದು ನಾವು ಕೆಲಸ ಮಾಡಲಿಲ್ಲ. ನಮ್ಮ ಕೆಲಸ ನಾವು ಮಾಡಿದೆವು. ನಮ್ಮ ಮನೆಯಲ್ಲಿ, ಊರಿನಲ್ಲಿ ಎಲ್ಲರೂ ಖುಷಿಪಟ್ಟರು. ದೆಹಲಿಗೆ ಇನ್ನೂ ಕರೆದಿಲ್ಲ, ಕರೆದಾಗ ಹೋಗುತ್ತೇನೆ’ ಎಂದು ಮಹಾಲಿಂಗ ನಾಯ್ಕರು ಹೇಳಿದರು .
Laxmi News 24×7