Breaking News

ರಾಗಿಣಿ ಬೇಲ್​ಗಾಗಿ ಹೈಕೋರ್ಟ್ ಮೊರೆ ಹೋಗಲು ಹಣವಿಲ್ಲದೇ, ಪೋಷಕರು ಪರದಾಟ

Spread the love

ಬೆಂಗಳೂರು : ಸ್ಯಾಂಡಲ್​ವುಡ್​ ಡ್ರಗ್​ ಲಿಂಕ್​ ಆರೋಪದಲ್ಲಿ ಜೈಲು ಸೇರಿರುವ ರಾಗಿಣಿ ದ್ವಿವೇದಿ ಬೇಲ್​ಗಾಗಿ ಹಣವಿಲ್ಲದೇ ರಾಗಿಣಿ ಪೋಷಕರು ಪರದಾಡುತ್ತಿದ್ದಾರೆ ಅನ್ನೋ ಮಾಹಿತಿ ಅವರ ಆಪ್ತವಲಯದಿಂದ ಲಭ್ಯವಾಗಿದೆ. ಈ ಹಿಂದೆಯೇ ರಾಗಿಣಿ ಪೋಷಕರು, ವಕೀಲರಿಗೆ ಫೀಸ್​ ಕೊಡುವ ಸಲುವಾಗಿ, ಹಣವಿಲ್ಲದೇ ತಾವು ವಾಸವಿದ್ದ ಫ್ಲಾಟ್​ ಮಾರಲು ಮುಂದಾಗಿದ್ದರು. ಆದ್ರೆ, ಫ್ಲಾಟ್​ ಮಾರಟಕ್ಕಿಟ್ಟು ಒಂದು ತಿಂಗಳಾದ್ರು, ಇನ್ನೂ ಸೇಲ್​ ಆಗಿಲ್ಲ ಎನ್ನಲಾಗಿದೆ.

ಸದ್ಯ ಪರಪ್ಪನ ಅಗ್ರಹಾರ ಸೇರಿರೋ ರಾಗಿಣಿ ಬೇಲ್​ಗಾಗಿ ಹೈಕೋರ್ಟ್ ಮೊರೆ ಹೋಗಲು ಹಣವಿಲ್ಲದೇ, ಪೋಷಕರು ಪರದಾಟ ನಡೆಸುತ್ತಿದ್ದಾರೆ. ಫ್ಲಾಟ್​ ಸೇಲಾಗದ ಹಿನ್ನಲೆ ಮನೆಯಲ್ಲಿರುವ ರಾಗಿಣಿ ಒಡವೆಗಳನ್ನ ಮಾರಲು ಅವರ ತಾಯಿ ಮುಂದಾಗಿದ್ದಾರೆ ಎನ್ನಲಾಗ್ತಿದೆ.


Spread the love

About Laxminews 24x7

Check Also

ಸ್ನೇಹಿತರೊಂದಿಗೆ ಪಾನಿಪುರಿ ತಿನ್ನಲು ಹೋದವನ ಮೇಲೆ ಹಲ್ಲೆ ; ಚಿಕಿತ್ಸೆ ಫಲಿಸದೇ ಸಾವು

Spread the loveಬೆಂಗಳೂರು : ಪಾನಿಪುರಿ ತಿನ್ನಲು ಹೋದಾಗ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ನಂದಿನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ