ಅಂಕೋಲಾ : ಬೈಕ್ ಮತ್ತು ಟಿಪ್ಪರ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟು ಸಹಸವಾರ ಗಂಭೀರ ಗಾಯಗೊಂಡ ಘಟನೆ ಹಾರವಾಡ ಕ್ರಾಸ್ ಬಳಿ ಶುಕ್ರವಾರ ನಡೆದಿದೆ.
ತಾಲೂಕಿನ ಹೊನ್ನಳ್ಳಿ ನಿವಾಸಿ ರವಿ ಲೋಕು ಗೌಡ( 29) ಮೃತಪಟ್ಟ ವ್ಯಕ್ತಿ. ಬೇಲೇಕೇರಿ ಸಿಬರ್ಡ್ ಕಾಲೊನಿ ನಿವಾಸಿ ಹರೀಶ ಒಮು ಗೌಡ (28) ಗಂಭೀರ ಗಾಯಗೊಂಡು ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಟಿಪ್ಪರ್ ಚಾಲಕ ಅನಿಸ್ ಅಲಿ ಮೊಹಮ್ಮದ್ ಅಲಿ ಇತನ ಅಜಾಗರೂಕತೆ ಚಾಲನೆಯೆ ದುರ್ಘಟನೆಗೆ ಕಾರಣ ಎನ್ನಲಾಗಿದೆ. ಎರಡು ವಾಹನಗಳು ಕಾರವಾರದಿಂದ ಅಂಕೋಲಾ ಕಡೆ ಬರುತ್ತಿದ್ದು ಟಿಪ್ಪರ್ ಚಾಲಕ ಏಕಾಏಕಿ ಬಲಗಡೆ ತಿರುಗಿಸಿದ ಪರಿಣಾಮ ಪಕ್ಕದಲ್ಲಿಯೇ ಸಾಗುತ್ತಿದ್ದ ಬೈಕ್ ಟಿಪ್ಪರ್ ಗೆ ಡಿಕ್ಕಿ ಹೊಡೆದಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7