Breaking News

ಜನ್ ಧನ್ ಖಾತೆ ಹೊಂದಿ: ಪಡೆಯಿರಿ 2 ಲಕ್ಷ ರೂ. ಅಪಘಾತ ವಿಮೆ

Spread the love

ನವದೆಹಲಿ: ಅಪಘಾತ ವಿಮೆ ಮಾಡಿಸಬೇಕೆಂದರೆ ನೂರೆಂಟು ತಾಪತ್ರಯ. ವಯಸ್ಸು, ದಾಖಲೆ, ಕಂತು ಹೀಗೆ ಹಲವು ಹಂತಗಳಿರುತ್ತವೆ. ಆದರೆ, ಜನಧನ್ ಖಾತೆ ಹೊಂದಿದ್ದರೆ ಇನ್ನು ಸುಲಭ. ಅದೂ 2 ಲಕ್ಷ ರೂಪಾಯಿ ವಿಮಾ ಸೌಲಭ್ಯ ಸಿಗಲಿದೆ.

ಒಂದು ವೇಳೆ ನಿಮ್ಮ ಎಸ್ ಬಿ ಐ ಸಾಮಾನ್ಯ ಖಾತೆಯನ್ನು ಜನ್ ಧನ್ ಖಾತೆಯನ್ನಾಗಿ ಪರಿವರ್ತಿಸಿಕೊಂಡರೂ ಈ ಸೇವೆ ಲಭ್ಯ ಎಂದು ಎಸ್ ಬಿ ಐ ಹೇಳಿದೆ.

ಇದಕ್ಕಾಗಿ ನೀವು ಮಾಡಬೇಕಾಗಿದ್ದು ಇಷ್ಟೇ. ಜನ್ ಧನ್ ಖಾತೆಯಿಂದ ಎಸ್ ಬಿ ಐ ರೂಪೇ ಜನ್ ಧನ್ ಕಾರ್ಡ್ ಗೆ ಅರ್ಜಿ ಹಾಕಿದರೆ ಸಾಕು. ಒಮ್ಮೆ ಈ ಕಾರ್ಡ್ ಬಂದ ಮೇಲೆ 90 ದಿನಗಳಿಗೆ ಒಮ್ಮೆಯಾದರೂ ನಿಮ್ಮ ರೂಪೇ ಜನ್ ಧನ್ ಕಾರ್ಡ್ ಅನ್ನು ಸ್ವೈಪ್ ಮಾಡಬೇಕು. ಹೀಗೆ ಮಾಡಿದರೆ ನಿಮ್ಮ ಅಪಘಾತ ವಿಮೆ ಚಾಲ್ತಿಯಲ್ಲಿರುತ್ತದೆ.

10 ವರ್ಷಕ್ಕಿಂತ ಮೇಲ್ಪಟ್ಟ ಯಾರೇ ಆದರೂ ಜನ್ ಧನ್ ಖಾತೆಯನ್ನು ಪಡೆಯಲು ಅರ್ಹರಿದ್ದಾರೆ. ಆಧಾರ್ ಕಾರ್ಡ್ ಒಂದಿದ್ದರೆ ಸಾಕು ಯಾರು ಬೇಕಾದರೂ ಖಾತೆಯನ್ನು ತೆರೆಯಬಹುದಾಗಿದೆ.


Spread the love

About Laxminews 24x7

Check Also

‘ಅಂಬರೀಶ್ ಆಶೀರ್ವಾದದಿಂದ ಮಗನ ಸಿನಿಮಾ ಬಿಡುಗಡೆ’: ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ

Spread the love ಮಂಡ್ಯ: ಇಂದು ಕನ್ನಡಿಗರ ಮೆಚ್ಚಿನ ನಟ ಅಂಬರೀಶ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ, ಮಂಡ್ಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ