ಮೈಸೂರು: ಕತ್ತು ಕೊಯ್ದುಕೊಂಡು ಯುವ ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಂಜನಗೂಡು ತಾಲೂಕಿನ ದುಗ್ಗಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇವರಿಬ್ಬರು ಜುಲೈ 9 ರಂದು ಆತ್ಮತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರಿ ಪದವಿ ಪೂರ್ವ ಕಾಲೇಜೊಂದರಲ್ಲಿ ಇಬ್ಬರು ವ್ಯಾಸಂಗ ಮಾಡುತ್ತಿದ್ದು, ಕಾಮರ್ಸ್ ವಿಭಾಗದಲ್ಲಿ ಕ್ಲಾಸ್‍ಮೇಟ್ಸ್ ಆಗಿದ್ದರು.

ಕಾಲೇಜಿನಲ್ಲೇ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ. ಆದರೆ ಇಬ್ಬರ ಮದುವೆಗೆ ಜಾತಿ ಅಡ್ಡಿಯಾಗಿತ್ತು. ಅಲ್ಲದೆ ಇವರಿಬ್ಬರು ಅಪ್ರಾಪ್ತರು ಅನ್ನೋ ಹಿನ್ನೆಲೆ ಕೂಡ ಇತ್ತು. ಒಟ್ಟಿನಲ್ಲಿ ಇದೀಗ ಇಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆಯ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Laxmi News 24×7