ಬೀದರ್: ಗಡಿ ಜಿಲ್ಲೆ ಬೀದರ್ ನಲ್ಲಿ ಇಂದು ಸಂಸದರು ಸೇರಿದಂತೆ 35 ಜನರಿಗೆ ಕೊರೊನಾ ಪಾಸಿಟಿವ್ ಧೃಡವಾಗಿದೆ.
ಸಂಸದ ಭಗವಂತ್ ಖೂಬಾಗೆ ಇಂದು ಪಾಸಿಟಿವ್ ಧೃಡವಾಗಿದ್ದು, ತಮ್ಮ ನಿವಾಸದಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೀದರ್ ನಲ್ಲಿ 11, ಬಾಲ್ಕಿಯಲ್ಲಿ 11, ಹುಮ್ನಬಾದ್ ನಲ್ಲಿ 10 ಬಸವಕಲ್ಯಾಣದಲ್ಲಿ 3 ಜಿಲ್ಲೆಯಾದ್ಯಂತ ಒಟ್ಟು 35 ಕೊರೊನಾ ಪಾಸಿಟಿವ್ ಪ್ರಕರಣಗಳು ಇಂದು ದೃಢಪಟ್ಟಿವೆ. ಸಂಸದರಿಗೆ ಹೇಗೆ ಕೊರೊನಾ ವಕ್ಕಿಸಿತು ಎಂಬುದೇ ಆಶ್ಚರ್ಯವಾಗಿದ್ದು, ಸಂಪರ್ಕವನ್ನು ಪತ್ತೆಹಚ್ಚಲಾಗುತ್ತಿದೆ.
ಉಳಿದಂತೆ ಎಲ್ಲರಿಗೂ ಪ್ರಾಥಮಿಕ ಹಾಗೂ ಕಂಟೈನ್ಮೆಂಟ್ ಝೋನ್ ಸಂಪರ್ಕದಿಂದಾಗಿ ಸೋಂಕು ಧೃಡವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1138ಕ್ಕೆ ಏರಿಕೆಯಾಗಿದೆ. ಇದರಲ್ಲಿ 667 ಜನ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 418 ಸಕ್ರಿಯ ಪ್ರಕರಣಗಳಿದ್ದು, 53 ಜನರನ್ನು ಮಹಾಮಾರಿ ಬಲಿ ಪಡೆದಿದೆ. ದಿನೇ ದಿನೇ ಜಿಲ್ಲೆಯಲ್ಲಿ ಮಹಾಮಾರಿ ಅಟ್ಟಹಾಸ ಮೇರೆಯುತ್ತಿದ್ದು, ಜಿಲ್ಲೆಯ ಜನ ತೀವ್ರ ಆತಂಕಗೊಂಡಿದ್ದಾರೆ.