ಧಾರವಾಡ ಸಂಚಾರಿ ನಿಯಮ ಉಲ್ಲಂಘನೆ ಫೈನ್ 50% ಡಿಸ್ಕೌಂಟ್… 35 ಕೇಸ್ 9000 ಸಾವಿರ ದಂಡ ತುಂಬಿದ ನರೇಂದ್ರ ಗ್ರಾಮ ವ್ಯಕ್ತಿ.
– ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವಾಹನಗಳಿಗೆ ದಂಡದಲ್ಲಿ 50% ರಿಯಾಯಿತಿ ನೀಡಲಾಗಿದ್ದು, ಧಾರವಾಡ ತಾಲ್ಲೂಕಿನ ನರೇಂದ್ರ ಗ್ರಾಮದ ವ್ಯಕ್ತಿಯೊಬ್ಬ ಬರೊಬ್ಬರಿ 9,000 ರೂಪಾಯಿ ದಂಡ ಪಾವತಿ ಮಾಡಿಕೊಂಡು ಬಿಟ್ಟುಸಿರು ಬಿಟ್ಟಿದ್ದಾರೆ.
ವೈ- ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ನ ಸಂಚಾರಿ ವಿಭಾಗದಿಂದ ಸಂಚಾರಿ ನಿಯಮ ಉಲ್ಲಂಘಿಸಿದ ದಂಡದಲ್ಲಿ 50% ಡಿಸ್ಕೌಂಟ್ ನೀಡಲಾಗಿತ್ತು. ಈ 50% ಡಿಸ್ಕೌಂಟ್ ಜಾರಿಯಲ್ಲಿರುವಾಗ್ಲೇ ಧಾರವಾಡ ತಾಲ್ಲೂಕಿನ ನರೇಂದ್ರ ಗ್ರಾಮದ ಮೂಲದ ವ್ಯಕ್ತಿ ಮಾರುಕಟ್ಟೆಗೆ ಬಂದಿದ್ದಾನೆ.
ಈ ವೇಳೆ ಧಾರವಾಡ ಸಂಚಾರಿ ಠಾಣೆ ಎಎಸ್‌ಐ ಸೀತಾ ಕಟಗಿ ಹಾಗೂ ಸಿಬ್ಬಂದಿ ವಾಹನ ತಡೆದು ದಂಡ ಪರಿಶೀಲನೆ ಮಾಡಿದ್ದಾರೆ.
ಈ ವೇಳೆ ವ್ಯಕ್ತಿಗೆ 34 ಕೇಸ್‌ಗಳ ಕುರಿತು ಮಾಹಿತಿ ನೀಡಿ ದಂಡ ಪಾವತಿಸಲು ಕೇಳಿದ್ದಾರೆ. ಒಟ್ಟು ದಂಡ 18000 ರೂಪಾಯಿ ಇದ್ದು, 50% ಡಿಸ್ಕೌಂಟ್ ನೀಡಿದ ಬೆನ್ನಲ್ಲೇ 9000 ಸಾವಿರ ಪಾವತಿಸಲು ತಿಳಿಸಿದ್ದಾರೆ. ಕೂಡಲೇ ವಾಹನ ಮಾಲೀಕ ದಂಡ ಪಾವತಿಸಿ ಈಗ ನಿರಾಳನಾಗಿದ್ದಾನೆ.