ಧಾರವಾಡ: ಮತ ಕಳ್ಳತನ ವಿರುದ್ಧ ಅಭಿಯಾನ ಆರಂಭಿಸಿದ ಧಾರವಾಡ ಯೂಥ್ ಕಾಂಗ್ರೆಸ್
ಹಲವೆಡೆ ಮತ ಕಳ್ಳತನ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಇದರ ಮುಂದುವರೆದ ಭಾಗವಾಗಿ ಧಾರವಾಡದಲ್ಲೂ ಯೂಥ್ ಕಾಂಗ್ರೆಸ್ ಮತಗಳ್ಳತ ಅಭಿಯಾನ ಆರಂಭಿಸಿದೆ.
ಧಾರವಾಡದ ರೈಲ್ವೆ ನಿಲ್ದಾಣದಿಂದ ವಾಹನಗಳಿಗೆ STOP ಮತ ಕಳ್ಳತನ ಎಂಬ ಪೋಸ್ಟರ್ ಹಚ್ಚುವ ಮೂಲಕ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ಆಕ್ರೋಶ ಹೊರಹಾಕಿದರು. ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಚುನಾವಣಾ ಆಯೋಗವು ಈ ರೀತಿಯ ಮತ ಕಳ್ಳತನ ನಡೆಸಿದೆ.
ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಧಾರವಾಡ ಯೂಥ್ ಕಾಂಗ್ರೆಸ್ ಕಾರ್ಯಕರ್ತರು ಧಾರವಾಡದಲ್ಲಿ ಈ ರೀತಿಯ ಪೋಸ್ಟರ್ ಅಭಿಯಾನ ಆರಂಭಿಸಿದೆ.