ಹುಕ್ಕೇರಿ : ಸಮಾನತೆಯ ಕನಸು ಕಂಡ ಸಮಾಜ ಸುಧಾರಕ ದೇವರಾಜ ಅರಸು – ಮಲ್ಲಿಕಾರ್ಜುನ ಹೋಳಿಮಠ.
ಸಮಾನತೆಯ ಕನಸು ಕಾಣುವ ಸಮಾಜ ಸುಧಾರಕ ದಿವಂಗತ ಡಿ ದೇವರಾಜ ಅರಸರಾಗಿದ್ದರು ಎಂದು ಪ್ರಾಚಾರ್ಯ ಮಲ್ಲಿಕಾರ್ಜುನ ಹೋಳಿಮಠ ಹೇಳಿದರು.
ಹುಕ್ಕೇರಿ ನಗರದ ಅರಸು ಭವನದಲ್ಲಿ ಜರುಗಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಹುಕ್ಕೇರಿ ತಾಲೂಕಾ ಆಡಳಿತ ಮತ್ತು ಪುರಸಭೆ ಸಂಕೇಶ್ವರ,ಹುಕ್ಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ದಿವಂಗತ ಡಿ, ದೇವರಾಜು ಅರಸರ 110 ನೇ ಜನ್ಮ ದಿನಾಚಾರಣೆ ಕಾರ್ಯಕ್ರಮ ವನ್ನು ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಟಿ ಆರ್ ಮಲ್ಲಾಡದ ಅರಸರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ವೇದಿಕೆ ಮೇಲೆ ಪುರಸಭೆ ಅದ್ಯಕ್ಷ ಇಮ್ರಾನ್ ಮೋಮಿನ, ಗ್ಯಾರಂಟಿ ಯೋಜನೆಗಳ ಅದ್ಯಕ್ಷ ಶಾನೂಲ ತಹಸಿಲ್ದಾರ, ಮಾಜಿ ಪುರಸಭೆ ಅದ್ಯಕ್ಷ ಉದಯ ಹುಕ್ಕೇರಿ, ಜಿಲ್ಲಾ ಪಂಚಾಯತ ಅಭಿಯಂತರ ವಿನಾಯಕ ಪೂಜಾರ, ಸಂಕೇಶ್ವರ ಪೋಲಿಸ್ ಇನ್ಸಪೇಕ್ಟರ ಶಿವ ಶರಣ ಅವುಜಿ ಉಪಸ್ಥಿತರಿದ್ದರು.
ಹುಕ್ಕೇರಿ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಕೆ ಬಿ ದೇವಪ್ಪಗೋಳ ಅಥಿತಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿ ಗಣ್ಯರಿಗೆ ಸತ್ಕರಿಸಿದರು.
ಪ್ರಾಚಾರ್ಯ ಉಪನ್ಯಾಸಕ ಮಲ್ಲಿಕಾರ್ಜುನ ಹೋಳಿಮಠ ಮಾತನಾಡಿ ಕರ್ನಾಟಕದಲ್ಲಿ ಭೂ ಸುಧಾರಣೆ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ, ಜೀತ ಪದ್ದತಿ ನಿರ್ಮೂಲನೆ, ಮಲಹೊರುವ ಪದ್ದತಿ ನಿಷೇಧ, ನಿರುದ್ಯೋಗಿಗಳಿಗೆ ಸ್ಟೈಪಂಡರಿ ಯೋಜನೆ, ವೃದ್ಯಾಪ ವೇತನ, ಕನಿಷ್ಟ ಕೂಲಿ ನಿಗದಿ,ಭಾಗ್ಯಜ್ಯೋತಿ ಯೋಜನೆ ಸೇರಿದಂತೆ ಹತ್ತು ಹಲವಾರು ಯೋಜನೆಗಳ ರೂವಾರಿ ದಿವಂಗತ ಮಾಜಿ ಮುಖ್ಯಮಂತ್ರಿ ದೇವರಾಜು ಅರಸರ ಯೋಜನೆಗಳು ಇಂದು ಅಜರಾಮರವಾಗಿವೆ ಎಂದರು
ನಂತರ ಉತ್ತಮ ವಸತಿ ನಿಲಯದ ಮೆಲ್ವಿಚಾರಕಿ ಮತ್ತು ಅಡುಗೆ ಸಿಬ್ಬಂದಿಗಳನ್ನು ಸತ್ಕರಿಸಲಾಯಿತು.
ಮಾದ್ಯಮಗಳೊಂದಿಗೆ ಮಾತನಾಡಿದ ಕೆ ಬಿ ದೆವಪ್ಪಗೋಳ ಹುಕ್ಕೇರಿ ತಾಲೂಕಾ ಆಡಳಿತ ಮತ್ತು ವಿವಿಧ ಇಲಾಖೆ ಅಧಿಕಾರಿಗಳ ಸಹ ಭಾಗಿತ್ವದಲ್ಲಿ ದಿವಂಗತ ದೇವರಾಜ ಅರಸರ ಜಯಂತಿಯನ್ನು ಅರ್ಥಪೂರ್ಣ ವಾಗಿ ಆಚರಿಸಲಾಗಿದೆ ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳ ಬಯಸುತ್ತೆನೆ ಎಂದರು
ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎ ಎಸ್ ಪದ್ಮನ್ನವರ, ಪರಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಭಜಂತ್ರಿ, ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಅವಿನಾಶ ಹೋಳೆಪ್ಪಗೋಳ, ಸಿ ಡಿ ಪಿ ಓ ಎಚ್ ಹೋಳೆಪ್ಪಾ, ಹಿಂದೂಳಿದ ವರ್ಗಗಳ ಇಲಾಖೆ ಸಿಬ್ಬಂದಿಗಳಾದ ಸಿದ್ದಪ್ಪಾ ನಾಯಿಕ, ಲಕ್ಕಪ್ಪ ಹವೇಲಿ, ತುಕಾರಾಮ ಮಾದರ, ಅಜೀಮ ನಾಯಿಕವಾಡಿ, ಬಿ ಎಸ್ ಶಿರಗಾಂವಿ, ಜಿ ಎಸ್ ಯಾದವಾಡ ಎನ್ ಎಂ ಕೋಟೆ, ಎಸ್ ಬಿ ಮುಲ್ಲಾ , ಬಿ ಎ ಹುಡೆದ, ಶ್ರೀದೇವಿ ಸೊಂಡಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು .