ಧಾರವಾಡದಲ್ಲಿ ನೀರಿನ ಟ್ಯಾಂಕರ್ ಸ್ಕೂಟಿ ಚಾಲಕನ ಮೇಲೆ ಪಲ್ಟಿ, ಸ್ಕೂಟಿ ಚಾಲಕ ಸಾವು….ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಬ್ರೇಕ್ ಫೇಲ್ ಆಗಿದ್ದ ನೀರಿನ ಟ್ಯಾಂಕರ್ ತೆಗೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಮೊದಲು ಟಿಪ್ಪರ್‌ಗೆ ಡಿಕ್ಕಿ ಹೊಡೆದು ಆನಂತರ ಸ್ಕೂಟಿ ಮೇಲೆ ಪಲ್ಟಿಯಾದ ಪರಿಣಾಮ, ಸ್ಕೂಟಿ ಚಾಲಕ ಸಾವನ್ನಪ್ಪಿರುವ ಘಟನೆ ಧಾರವಾಡದ ತೇಜಸ್ವಿನಗರ ಬ್ರಿಡ್ಜ್ ಮೇಲೆ ಬುಧವಾರ ಸಂಜೆ ಸಂಭವಿಸಿದೆ. ಹುಬ್ಬಳ್ಳಿ ಆನಂದನಗರದ ನಿವಾಸಿ ಹನುಮಂತ (50) ಎಂಬ ವ್ಯಕ್ತಿಯೇ ಈ ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿ ಎಂದು ತಿಳಿದು ಬಂದಿದೆ.
ನೀರಿನ ಟ್ಯಾಂಕರ್ ತೆಗೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‌ನ ಬ್ರೇಕ್ ಫೇಲ್ ಆಗಿತ್ತು. ಅದು ಎದುರಿಗೆ ಬರುತ್ತಿದ್ದ ಟಿಪ್ಪರ್‌ಗೆ ಡಿಕ್ಕಿ ಹೊಡೆದಿದೆ. ಇದೇ ವೇಳೆ ಪಕ್ಕದಲ್ಲೇ ಸ್ಕೂಟಿ ತೆಗೆದುಕೊಂಡು ಬರುತ್ತಿದ್ದ ಚಾಲಕನ ಮೇಲೆ ನೀರಿನ ಟ್ಯಾಂಕರ್ ಪಲ್ಟಿಯಾಗಿದೆ. ಪರಿಣಾಮ ಸ್ಕೂಟಿ ಚಾಲಕನ ತಲೆಗೆ ಬಲವಾದ ಪೆಟ್ಟಾಗಿತ್ತು.
ಅಲ್ಲದೇ ಹೊಟ್ಟೆಯಲ್ಲಿನ ಕರಳು ಹೊರ ಬಂದಿದ್ದವು. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಬದುಕುಳಿಯಲಿಲ್ಲ. ಘಟನಾ ಸ್ಥಳಕ್ಕೆ ಧಾರವಾಡ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.