ನವದೆಹಲಿ: ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳಗುಣಮುಖರಾಗುತ್ತಿರುವ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲದ ವಿಶೇಷ ಅಧಿಕಾರಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.
ದೇಶದ 10 ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವ ರೋಗಿಗಳ ಪ್ರಮಾಣ ಶೇ.86 ರಷ್ಟಿದೆ. ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಇದರ ಶೇ.50 ರಷ್ಟಿದ್ದರೆ ಉಳಿದ 8 ರಾಜ್ಯಗಳಲ್ಲಿ 36ರಷ್ಟಿದೆ ಎಂದು ಸುದ್ದಿಗೋಷ್ಠಿಯಲ್ಲಿ ಭೂಷಣ್ ಅವರು ಮಾಹಿತಿ ನೀಡಿದ್ದಾರೆ.
20 ರಾಜ್ಯದಲ್ಲಿ ಚೇತರಿಸಿಕೊಳ್ಳುತ್ತಿವವರ ಸರಾಸರಿ ದೇಶದ ಸರಾಸರಿಗಿಂತ ಹೆಚ್ಚಾಗಿದೆ. ಗುಜರಾತ್ನಲ್ಲಿ ಶೇ.70, ಒಡಿಶಾದಲ್ಲಿ ಶೇ.67, ಅಸ್ಸಾಂನಲ್ಲಿ ಶೇ.65, ಉತ್ತರ ಪ್ರದೇಶದಲ್ಲಿ ಶೇ.64 ರಷ್ಟಿದೆ.
ದೇಶದಲ್ಲಿ ಕೊರೊನಾ ಪ್ರಭಾವ ಮಾರ್ಚ್ ನಿಂದ ಆರಂಭವಾಗಿದ್ದು, ಮೇ ಪ್ರಾರಂಭದಲ್ಲಿ ಶೇ.26 ರಷ್ಟು ಮಂದಿ ರೋಗಿಗಳು ಮಾತ್ರ ಚೇತರಿಸಿಕೊಂಡಿದ್ದರು. ಆದರೆ ಮೇ ಅಂತ್ಯದ ವೇಳೆಗೆ ಈ ಪ್ರಮಾಣ ಶೇ.48ಕ್ಕೇರಿತ್ತು. ಜುಲೈ 12ರ ವೇಳೆಗೆ ಶೇ.63ರನ್ನು ತಲುಪಿತ್ತು. ಮೇ 2 ರಿಂದ 30ರ ವರೆಗೂ ದೇಶದಲ್ಲಿ ಚೇತರಿಕೆಯ ಪ್ರಮಾಣಕ್ಕಿಂತ ಹೊಸ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತು. ಆ ಬಳಿಕ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ. ಸದ್ಯ ಆ್ಯಕ್ಟಿವ್ ಸೋಂಕಿತ ಪ್ರಕರಣಗಳಿಂದ ಚೇತರಿಕೆ ಪ್ರಮಾಣ ಶೇ.1.8 ರಷ್ಟು ಅಧಿಕವಾಗಿದೆ ಎಂದು ಭೂಷಣ್ ವಿವರಿಸಿದ್ದಾರೆ.