Breaking News

ಬೆಂಗಳೂರಿನಿಂದ ಹೊರಡುವ ವಿಶೇಷ ಎಕ್ಸ್​​ಪ್ರೆಸ್ ರೈಲು ಸೇವೆ ವಿಸ್ತರಣೆ

Spread the love

ಹುಬ್ಬಳ್ಳಿ: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು, ನೈಋತ್ಯ ರೈಲ್ವೆಯು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಬೀದರ್, ನಾರಂಗಿ ಹಾಗೂ ಮಾಲ್ಡಾ ಟೌನ್ ನಡುವೆ ಈ ಹಿಂದೆ ಚಲಿಸುತ್ತಿದ್ದ ವಿಶೇಷ ರೈಲು ಸೇವೆಗಳನ್ನು ಈಗಿರುವ ಸಮಯ, ನಿಲುಗಡೆಗಳು ಮತ್ತು ಬೋಗಿಗಳ ಸಂಯೋಜನೆಯೊಂದಿಗೆ ಮುಂದುವರಿಸಲು ನಿರ್ಧರಿಸಿದೆ. ವಿವರ ಕೆಳಕಂಡಂತಿದೆ..

ಎಸ್ಎಂವಿಟಿ ಬೆಂಗಳೂರು – ಬೀದರ್ – ಎಸ್ಎಂವಿಟಿ ಬೆಂಗಳೂರು ಎಕ್ಸ್ ಪ್ರೆಸ್ ವಿಶೇಷ:

1. ರೈಲು ಸಂಖ್ಯೆ 06539 ಎಸ್ಎಂವಿಟಿ ಬೆಂಗಳೂರು – ಬೀದರ್ ಎಕ್ಸ್ ಪ್ರೆಸ್ ವಿಶೇಷ ರೈಲು ಶುಕ್ರವಾರ ಮತ್ತು ಭಾನುವಾರಗಳಂದು ಮುಂದುವರಿಯಲಿದೆ. ಈ ಹಿಂದೆ 29.06.2025ರ ವರೆಗೆ ಕಾರ್ಯನಿರ್ವಹಿಸಲು ತಿಳಿಸಲಾಗಿತ್ತು. ಈಗ ಈ ಸೇವೆಯನ್ನು 04.07.2025 ರಿಂದ 31.08.2025ರ ವರೆಗೆ ವಿಸ್ತರಿಸಲಾಗಿದೆ.

2. ರೈಲು ಸಂಖ್ಯೆ 06540 ಬೀದರ್ – ಎಸ್ಎಂವಿಟಿ ಬೆಂಗಳೂರು ಎಕ್ಸ್ ಪ್ರೆಸ್ ವಿಶೇಷ ರೈಲು ಶನಿವಾರ ಮತ್ತು ಸೋಮವಾರಗಳಂದು ಮುಂದುವರಿಯಲಿದೆ. ಈ ಹಿಂದೆ 30.06.2025ರ ವರೆಗೆ ಕಾರ್ಯನಿರ್ವಹಿಸಲು ತಿಳಿಸಲಾಗಿತ್ತು. ಈಗ ಈ ಸೇವೆಯನ್ನು 05.07.2025 ರಿಂದ 01.09.2025ರ ವರೆಗೆ ವಿಸ್ತರಿಸಲಾಗಿದೆ.

ವಿಸ್ತರಿಸಿದ ಅವಧಿಯಲ್ಲಿ ಈ ರೈಲುಗಳು ಪ್ರತಿ ದಿಕ್ಕಿನಲ್ಲಿ 18 ಟ್ರಿಪ್ ಸಂಚರಿಸಲಿವೆ.

ಎಸ್ಎಂವಿಟಿ ಬೆಂಗಳೂರು – ನಾರಂಗಿ – ಎಸ್ಎಂವಿಟಿ ಬೆಂಗಳೂರು ಎಕ್ಸ್ ಪ್ರೆಸ್ ವಿಶೇಷ:

1. ರೈಲು ಸಂಖ್ಯೆ 06559 ಎಸ್ಎಂವಿಟಿ ಬೆಂಗಳೂರು – ನಾರಂಗಿ ಎಕ್ಸ್ ಪ್ರೆಸ್ ವಿಶೇಷ ರೈಲು ಮಂಗಳವಾರಗಳಂದು ಸಂಚಾರ ಮುಂದುವರಿಸಲಿದೆ. ಈ ಹಿಂದೆ 10.06.2025ರ ವರೆಗೆ ಸಂಚಾರ ನಡೆಸುವುದಾಗಿ ತಿಳಿಸಲಾಗಿತ್ತು. ಆದರೆ ಈಗ 08.07.2025 ಮತ್ತು 15.07.2025 ರಂದು ಸಂಚರಿಸಲಿದೆ.

2. ರೈಲು ಸಂಖ್ಯೆ 06560 ನಾರಂಗಿ – ಎಸ್ಎಂವಿಟಿ ಬೆಂಗಳೂರು ಎಕ್ಸ್ ಪ್ರೆಸ್ ವಿಶೇಷ ರೈಲು ಶನಿವಾರದಂದು ಸಂಚಾರ ಮುಂದುವರಿಸಲಿದೆ. ಈ ಹಿಂದೆ 14.06.2025ರ ವರೆಗೆ ತಿಳಿಸಲಾಗಿತ್ತು. ಆದರೆ ಈಗ 12.07.2025 ಮತ್ತು 19.07.2025 ರಂದು ಸಂಚಾರ ಮುಂದುವರಿಸಲಿದೆ ರಂದು ಸಂಚರಿಸಲಿದೆ.

ರೈಲು ಸಂಖ್ಯೆ 06559/06560 ವಿಸ್ತರಿಸಿದ ಅವಧಿಯಲ್ಲಿ ಪ್ರತಿ ದಿಕ್ಕಿನಲ್ಲಿ 2 ಟ್ರಿಪ್ ಸಂಚರಿಸಲಿದೆ.

ಎಸ್ಎಂವಿಟಿ ಬೆಂಗಳೂರು – ಮಾಲ್ಡಾ ಟೌನ್ – ಎಸ್ಎಂವಿಟಿ ಬೆಂಗಳೂರು ಎಕ್ಸ್ ಪ್ರೆಸ್ ವಿಶೇಷ:

1. ರೈಲು ಸಂಖ್ಯೆ 06565 ಎಸ್ಎಂವಿಟಿ ಬೆಂಗಳೂರು – ಮಾಲ್ಡಾ ಟೌನ್ ಎಕ್ಸ್ ಪ್ರೆಸ್ ವಿಶೇಷ, ಈ ಹಿಂದೆ 15.06.2025ರ ವರೆಗೆ ತಿಳಿಸಲಾಗಿತ್ತು. ಈಗ ಭಾನುವಾರ, 13.07.2025 ರಂದು ಸಂಚರಿಸಲಿವೆ.

2. ರೈಲು ಸಂಖ್ಯೆ 06566 ಮಾಲ್ಡಾ ಟೌನ್ – ಎಸ್ಎಂವಿಟಿ ಬೆಂಗಳೂರು ಎಕ್ಸ್ ಪ್ರೆಸ್ ವಿಶೇಷ, ಈ ಹಿಂದೆ 18.06.2025ರ ವರೆಗೆ ತಿಳಿಸಲಾಗಿತ್ತು. ಈಗ ಬುಧವಾರ, 16.07.2025 ರಂದು ಸಂಚರಿಸಲಿದೆ.

ರೈಲು ಸಂಖ್ಯೆ 06565/06566 ವಿಸ್ತರಿಸಿದ ಅವಧಿಯಲ್ಲಿ ಪ್ರತಿ ದಿಕ್ಕಿನಲ್ಲಿ 1 ಟ್ರಿಪ್ ಸಂಚರಿಸಲಿದೆ.


Spread the love

About Laxminews 24x7

Check Also

ಅವಮಾನಕ್ಕೀಡಾಗಿದ್ದ ಧಾರವಾಡದ ಎಎಸ್‌ಪಿ ನಾರಾಯಣ.ವಿ.ಭರಮನಿ ರಾಜೀನಾಮೆಗೆ ಮುಂದಾಗಿದ್ದಾರೆ.

Spread the love ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕ್ರಮದ ವೇಳೆ ಸಿಎಂ ಸಿದ್ದರಾಮಯ್ಯ ಅವರಿಂದ ಅವಮಾನಕ್ಕೀಡಾಗಿದ್ದ ಧಾರವಾಡದ ಎಎಸ್‌ಪಿ ನಾರಾಯಣ.ವಿ.ಭರಮನಿ ರಾಜೀನಾಮೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ