ನವದೆಹಲಿ: ಕೃಷಿ ಕಾನೂನುಗಳನ್ನು ವಿರೋಧಿಸಿ ಕೆಲ ವಾರಗಳಿಂದ ರೈತರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ಪಟ್ಟು ಬಿಡದೆ ಹೋರಾಟ ನಡೆಸುತ್ತಿದ್ದಾರೆ. ನಗರದ ಸಿಂಘು ಬಾರ್ಡರ್‍ನಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಹಲವರು ಹಲವು ರೀತಿಯ ಸಹಾಯ ಮಾಡಿದ್ದಾರೆ. ಅದೇ ರೀತಿ ಸಲೂನ್ ಮಾಲೀಕರೊಬ್ಬರು ತಮ್ಮ ಕೆನಡಾ ಪ್ರವಾಸ ರದ್ದುಗೊಳಿಸಿ ಉಚಿತ ಸೇವೆ ನೀಡಲು ಮುಂದಾಗಿದ್ದಾರೆ.
ಸುಮಾರು 20 ದಿನಗಳಿಂದ ರೈತರು ಸಿಂಘು ಬಾರ್ಡರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವೇಳೆ ಕಟಿಂಗ್, ಶೇವಿಂಗ್‍ಗಾಗಿ ಸಾಲಾಗಿ ನಿಲ್ಲುತ್ತಿದ್ದ ರೈತರಿಗೆ ಸಹಾಯ ಮಾಡಲು ಕ್ರೇಜಿ ಬ್ಯೂಟಿ ಸಲೂನ್‍ನ ಮಾಲೀಕ ಲಭ್ ಸಿಂಗ್ ಠಾಕೂರ್ ಅವರು ತಮ್ಮ ಕೆನಡಾ ಪ್ರವಾಸವನ್ನು ರದ್ದುಪಡಿಸಿದ್ದಾರೆ. ಅಲ್ಲದೆ ಉಚಿತವಾಗಿ ರೈತರ ಸೇವೆ ಸಲ್ಲಿಸುತ್ತಿದ್ದಾರೆ.
ಕುರುಕ್ಷೇತ್ರದ ಪೇಹವಾದಲ್ಲಿ ಇವರ ಅಂಗಡಿ ಇದ್ದು, ಇದೀಗ ಅವರು ಸಿಂಘು ಬಾರ್ಡರ್‍ಗೆ ಸ್ಥಳಾಂತರಗೊಂಡು ರೈತರಿಗೆ ಉಚಿತ ಕಟಿಂಗ್ ಶೇವಿಂಗ್ ಮಾಡುತ್ತಿದ್ದಾರೆ. ಹೈ ವೇಯಲ್ಲಿಯೇ ಕಟಿಂಗ್ ಶಾಪ್ ಇಟ್ಟುಕೊಂಡಿದ್ದು, ಟ್ರ್ಯಾಕ್ಟರ್ ಟ್ರೇಲಿಗೆ ಕನ್ನಡಿ ನೇತು ಹಾಕಿ , ಮೂರು ಚೇರ್‍ಗಳನ್ನು ಹಾಕಿ ಕಟಿಂಗ್ ಮಾಡುತ್ತಿದ್ದಾರೆ. ರೈತರಿಗೆ ಸಂಪೂರ್ಣ ಉಚಿತ ಸೇವೆ ಒದಗಿಸುತ್ತಿದ್ದಾರೆ.
ನನ್ನ ಪತ್ನಿಯೊಂದಿಗೆ ಕುರುಕ್ಷೇತ್ರದಲ್ಲಿ ಪಾರ್ಲರ್ ನಡೆಸುತ್ತಿದ್ದೇನೆ. ನಮ್ಮ ಬಹುತೇಕ ಗ್ರಾಹಕರು ರೈತರೇ ಆಗಿದ್ದಾರೆ. ಇದೀಗ ಪ್ರತಿಭಟನೆ ನಡೆಸುತ್ತಿರುವುದರಿಂದ ಅಂಗಡಿಯನ್ನು ಸಿಂಘು ಬಾರ್ಡರ್ ಗೆ ಸ್ಥಳಾಂತರಿಸುವಂತೆ ಕೇಳಿಕೊಂಡರು. ಹೀಗಾಗಿ ನಮ್ಮ ತಂಡದೊಂದಿಗೆ ನಾನು ಇಲ್ಲಿಗೆ ಬಂದೆ. ನಾವು ಪ್ರತಿ ದಿನ 100-150 ಜನರಿಗೆ ಕಟಿಂಗ್ ಮಾಡುತ್ತೇವೆ. ಯಾವುದೇ ರೀತಿಯ ಶುಲ್ಕ ಪಡೆಯುವುದಿಲ್ಲ. ಯಾರಾದರೂ ಹಣ ನಿಡಲು ಬಂದರೆ ನಾವು ತಿರಸ್ಕರಿಸುತ್ತೇವೆ ಎಂದು ಅಂಗಡಿ ಮಾಲೀಕ ಲಭ್ ಸಿಂಗ್ ಠಾಕೂರ್ ತಿಳಿಸಿದ್ದಾರೆ.