Breaking News

ಬಸವಣ್ಣನವರ ವಚನಗಳನ್ನು ವಿಶ್ವಕ್ಕೆ ತಲುಪಿಸಿದ ಡಿವೈಎಸ್ಪಿ ಬಸವರಾಜ ಯಲಿಗಾರ

Spread the love

ಬಸವಣ್ಣನವರ ವಚನಗಳನ್ನು ವಿಶ್ವಕ್ಕೆ ತಲುಪಿಸಿದ ಡಿವೈಎಸ್ಪಿ ಬಸವರಾಜ ಯಲಿಗಾರ
ಗುಮ್ಮಟನಗರಿ ವಿಜಯಪುರ ಜಿಲ್ಲೆಯ ಭೀಮಾತೀರದ ಕುಖ್ಯಾತಿ ಹೊಂದಿರುವ ಜಿಲ್ಲೆ. ಇಲ್ಲಿನ ಪೊಲೀಸರಿಗೆ ಅಪರಾಧ ತಡೆಯೋದೆ ದೊಡ್ಡ ಕೆಲಸ. ರಾತ್ರಿ ಹಗಲು ಎನ್ನದೆ ಕೆಲಸ ಮಾಡಬೇಕು.
ಅಂತಹ ಜಿಲ್ಲೆಯ ಪೊಲೀಸ್ ಅಧಿಕಾರಿ ಸದ್ದಿಲ್ಲದೆ ಬಸವಣ್ಣನ ವಚನಗಳು ವಿಶ್ವಕ್ಕೆ ತಲುಪಿಸುವ ಕೆಲಸ ಮಾಡಿದ್ದಾರೆ. ಆ ಅಧಿಕಾರಿಗೆ ವಿಜಯಪುರ ಜಿಲ್ಲೆಯಲ್ಲಿ ಅಭಿನಂದನಾ ಸಮಾರಂಭ ಅಭೂತಪೂರ್ವವಾಗಿ ನಡೆಯಿತು. ‌
ವಿಜಯಪುರ ಜಿಲ್ಲೆ ಅಂದ್ರೆ ಸಾಕು ಕ್ರೈಂ ಜಿಲ್ಲೆ ಅನ್ನುವಂತಹ ಪರಿಸ್ಥಿತಿಯಲ್ಲಿದೆ. ಇಲ್ಲಿನ ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಕಾಪಾಡೋದು ದೊಡ್ಡ ಸವಾಲು.
ಅಂತಹ ಸವಾಲಿನ ಕೆಲಸದ ನಡುವೇಯೆ ಜಿಲ್ಲೆಯ ಪೊಲೀಸ್ ಅಧಿಕಾರಿ ಮಾಡಿರುವ ಕಾರ್ಯ ವಿಶ್ವಗುರು ಬಸವಣ್ಣನ ಭಕ್ತರಿಗೆ ಸಂತಸ ತರಿಸಿದೆ. 12 ನೇ ಶತಮಾನದಲ್ಲಿ ಬಸವಣ್ಣ ಜನಸಾಮಾನ್ಯರಿಗೆ ಅರ್ಥವಾಗುವಂತೆ ವಚನಗಳನ್ನ ರಚಿಸಿದ್ದರು. ಅಂತಹ ವಚನಗಳನ್ನ ವಿಜಯಪುರ ವಿಭಾಗದ ಡಿವೈಎಸ್ಪಿ ಬಸವರಾಜ್ ಯಲಿಗಾರ್ ಇಂಗ್ಲಿಷ್ ಗೆ ಭಾಷಾಂತರ ಮಾಡಿದ್ದಾರೆ. 808 ಪುಟಗಳ ಈ ಪುಸ್ತಕದಲ್ಲಿ ಬಸವಣ್ಣನವರ 959 ಷಟಸ್ಥಲ ವಚನಗಳು ಹಾಗೂ ಅಷ್ಣಾವರ್ಣ ಕೂಡಾ ಬರೆಯಲಾಗಿದೆ. ದೇಶದಲ್ಲಿ ಈವರೆಗೆ ಹಲವರು ಆಯ್ದೆ ಕೆಲ ವಚನಗಳನ್ನ ಮಾತ್ರ ಇಂಗ್ಲಿಷ್ ಸೇರಿದಂತೆ ‌ವಿವಿಧ ಭಾಷೆಗಳಿಗೆ ಭಾಷಾಂತರ ಮಾಡಿದ್ದರು. ಆದರೆ ಇದೇ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯೊಬ್ಬರು 959 ಷಟಸ್ಥಲ ವಚನಗಳನ್ನು ಇಂಗ್ಲಿಷ್ ಗೆ ಅನುವಾಧಿಸಿದ್ದಾರೆ. ಇದು ಬಸವಣ್ಣವರ ಅನುಯಾಯಿಗಳಿಗೆ ಸಂತಸ ತಂದಿದೆ.
ವಿಜಯಪುರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಕೃತಿ ಬಿಡುಗಡೆ ಸಮಾರಂಭ ನಡೆಯಿತು. ಸಚಿವ ಎಂಬಿ ಪಾಟೀಲ್ ಸೇರಿದಂತೆ ನಾಡಿನ ವಿವಿಧ ಮಠಾಧಿಶರು, ಬಸವ ಭಕ್ತರು ಸೇರಿದಂತೆ ಸಾವಿರಾರು ಜ‌ನ ಇದಕ್ಕೆ ಸಾಕ್ಷಿಯಾದರು. ಸತತ ನಾಲ್ಕು ವರ್ಷಗಳ ಕಾಲ ನಿರಂತರ ಅಧ್ಯಯನ ನಡೆಸಿ ವಚನಗಳನ್ನ ಅನುವಾಧಿಸಿದಕ್ಕೆ ಜಿಲ್ಲೆಯ ಜನ ಅಭಿನಂದನೆ ಸಲ್ಲಿಸಿದರು. ಬಸವಣ್ಣನವರ ವಚನ ಕೇವಲ ಕರ್ನಾಟಕಕ್ಕೆ, ಭಾರತಕ್ಕೆ,
ಸಿಮಿತವಾಗಿರದೆ ಜಗತ್ತಿಗೆ ತಲುಪಲು ಇಂಗ್ಲಿಷ್ ಭಾಷೆಯಲ್ಲಿ ಪ್ರಕಟ ಮಾಡುವುದು ಅಗತ್ಯವಾಗಿತ್ತು. ಇದನ್ನ ಸಾಕಾರಾ ಮಾಡಿದ ಪೊಲೀಸ್ ಅಧಿಕಾರಿಗೆ ಸ್ವಾಮೀಜಿಗಳು ಹಾಗೂ ಸಚಿವರು ಧನ್ಯವಾದ ಸಲ್ಲಿಸಿದರು.

Spread the love

About Laxminews 24x7

Check Also

ವಿಜಯಪುರ ಡಿಸಿಯಾಗಿ ಡಾ. ಆನಂದ.ಕೆ ವರ್ಗಾವಣೆ

Spread the love ವಿಜಯಪುರ ಡಿಸಿಯಾಗಿ ಡಾ. ಆನಂದ.ಕೆ ವರ್ಗಾವಣೆ ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರನ್ನು ರಾಜ್ಯ ಸರ್ಕಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ