ಹುಕ್ಕೇರಿ : ತಂಬಾಕು ಉತ್ಪನ್ನಗಳನ್ನು ತ್ಯಜಿಸಿದರೆ ಉತ್ತಮ ಆರೋಗ್ಯ ಪಡೆಯಬಹುದು – ಡಾ, ಉದಯ ಕುಡಚಿ
ಹುಕ್ಕೇರಿ ನಗರದಲ್ಲಿ ವಿಶ್ವತಂಬಾಕು ಮತ್ತು ಅಧಿಕ ರಕ್ತದೊತ್ತಡ ದಿನಾಚಾರಣೆ ಅಂಗವಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಾಗ್ರತಾ ಜಾಥಾ ಹಮ್ಮಿಕೊಂಡು ಜನರಲ್ಲಿ ಜಾಗ್ರತೆ ಮೂಡಿಸಲಾಯಿತು.
ಹುಕ್ಕೇರಿ ಸಾರ್ವಜನಿಕ ಆಸ್ಪತ್ರೆ , ಜಿಲ್ಲಾ ಮತ್ತು ತಾಲೂಕಾ ಪಂಚಾಯತ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಜಾಥಾ ವನ್ನು ತಾಲೂಕಾ ಆರೋಗ್ಯ ಅಧಿಕಾರಿ ಡಾ, ಉದಯ ಕುಡಚಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ವಿವಿಧ ಶಾಲಾ, ಕಾಲೇಜ ವಿದ್ಯಾರ್ಥಿಗಳು ,ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ನಗರದ ಮುಖ್ಯ ರಸ್ತೆಗಳ ಮೂಲಕ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಜನರಲ್ಲಿ ಜಾಗ್ರತೆ ಮೂಡಿಸಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ಡಾ, ಉದಯ ಕುಡಚಿ ವಿಶ್ವ ತಂಬಾಕು ವಿರೋಧಿ ದಿನ ಅಂಗವಾಗಿ ಇಂದು ಹುಕ್ಕೇರಿ ನಗರದಲ್ಲಿ ಅರಿವು ಜಾಥಾವನ್ನು ಹಮ್ಮಿಕೊಂಡು ಜನರಲ್ಲಿ ತಂಬಾಕು ಮತ್ತು ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳು ಹಾಗೂ ಅಧಿಕ ರಕ್ತದೊತ್ತಡದಿಂದ ಆಗುವ ಆರೋಗ್ಯ ತೊಂದರೆ ಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ನಮ್ಮ ಜೀವನ ಶೈಲಿಗಳನ್ನು ಬದಲಾಯಿಸಿದರೆ ಮಾತ್ರ ಆರೋಗ್ಯವಂತ ರಾಗ ಬಹುದು ಎಂದು ಹೇಳಿದರು
ಈ ಸಂದರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿ ಮಹಾಂತೇಶ ನರಸನ್ನವರ, ಡಾ, ವಿನೋದ ಕುಮಾರ,ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ನವೀನಕುಮಾರ ಭಾಯಿನಾಯ್ಕ, ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ,ಎಂ.ಬಿ. ಜಕಮತಿ ಹಾಗೂ .ವಿಜಯಕುಮಾರ ಹತ್ತರಗಿ , ಪ್ರೋ ಡಿ ಶ್ರೀಕಾಂತ ಮತ್ತು ಆಶಾ ಕಾರ್ಯಕರ್ತರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.